ಶ್ರೀನಿವಾಸರಂಗಾಚಾರ್ಯ
ಶ್ರೀನಿವಾಸರಂಗಾಚಾರ್ಯರು ಮೈಸೂರು ಟ್ರೇನಿಂಗ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದವರು. ಇವರು 'ಮೈಸೂರ ಮೈಸಿರಿ', 'ಕರ್ಣಾಟಕ ಮೂಲಾದರ್ಶ ಅಥವಾ ಕನ್ನಡದ ಕನ್ನಡಿ' ಮುಂತಾದ ಕೃತಿಗಳನ್ನು ರಚಿಸಿದ್ದರು. ಜಯಚಾಮರಾಜೇಂದ್ರ ಒಡೆಯರ ಕಾಲದ ಮೈಸೂರಿನ ಚಿತ್ರಣವನ್ನು 'ಮೈಸೂರ ಮೈಸಿರಿ' ಕಟ್ಟಿಕೊಡುತ್ತದೆ. ಇನ್ನು ಕರ್ಣಾಟಕ ಮೂಲಾದರ್ಶ, ಕನ್ನಡವು ಸಂಸ್ಕೃತಜನ್ಯ ಭಾಷೆ ಎಂಬ ವಾದವನ್ನು ಮುಂದಿಡುವ ಕೃತಿ.
ಇವರ ಪುತ್ರ ತಿರು ಶ್ರೀನಿವಾಸಾಚಾರ್ಯರು ಕೂಡ ಕನ್ನಡ ಪಂಡಿತರಾಗಿದ್ದವರು. ಅವರು ಕೂಡ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.