ಶ್ರೀಕಾಂತ್ ಕಿಡಂಬಿ
ಶ್ರೀಕಾಂತ್ ಕಿಡಂಬಿ ಭಾರತದ ಬ್ಯಾಡ್ಮಿಂಟನ್ ಕ್ರೀಡಾಪಟು ಹಾಗೂ ಮಾರ್ಚ್ ೧೨, ೨೦೧೫ರ ವಿಶ್ವ ರ‍್ಯಾಂಕಿಗ್ ಪ್ರಾಕರ ೪ನೇ ಸ್ಥಾನದಲ್ಲಿರುವ ಇವರು ಸದ್ಯದಲ್ಲಿ ಭಾರತದ ಅಗ್ರಮಾನ್ಯ ಆಟಗಾರರಾಗಿದ್ದಾರೆ.[೨] ಇವರು ೨೦೧೪ರ ಚೀನಾ ಒಪನ್ ಸೂಪರ್ ಸೀರಿಸ್ ನ ಅಂತಿಮ ಪಂದ್ಯದಲ್ಲಿ ಲಿನ್ ಡ್ಯಾನ್ ರವರನ್ನು ಸೋಲಿಸುವ ಮೂಲಕ ಸೂಪರ್ ಸೀರಿಸ್ ಪುರಷರ ಪ್ರಶಸ್ತಿಯನ್ನು ಗೆದ್ದುಕೊಂಡ ಭಾರತದ ಮೊದಲ ಆಟಗಾರರಾದರು.[೩] ಇವರು ಪ್ರಸ್ತುತವಾಗಿ ಹೈದರಾಬಾದಿನ ಗೋಪಿಚಂದ್ ಬ್ಯಾಡ್ಮಿಂಟನ್ ಆಕಾಡೆಮಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ ಮತ್ತು ಬೆಂಗಳೂರಿನ ಗೊಸ್ಪೊರ್ಟ್ಸ್ ಫೌಂಢೇಶನ್ ರವರು ಇವರಿಗೆ ನೆರವಾಗಿದ್ದಾರೆ.[೪]
ಶ್ರೀಕಾಂತ್ ಕಿಡಂಬಿ | |||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|
— ಬ್ಯಾಡ್ಮಿಂಟನ್ ಆಟಗಾರ — | |||||||||||||||||||||||
ವೈಯುಕ್ತಿಕ ಮಾಹಿತಿ | |||||||||||||||||||||||
ಹುಟ್ಟು ಹೆಸರು | ಶ್ರೀಕಾಂತ್ ನಮ್ಮಲ್ವರ್ ಕಿಡಂಬಿ | ||||||||||||||||||||||
ಹುಟ್ಟು | ಆಂದ್ರ ಪ್ರದೇಶದ ಗುಂಟೂರು | ೭ ಫೆಬ್ರವರಿ ೧೯೯೩||||||||||||||||||||||
ದೇಶ | ಭಾರತ | ||||||||||||||||||||||
ಆಡುವ ಕೈ | ಬಲ | ||||||||||||||||||||||
ಪುರುಷರ ಸಿಂಗಲ್ಸ್ | |||||||||||||||||||||||
ಅತಿಹೆಚ್ಚಿನ ಸ್ಥಾನ | ೪ (೨೫ ಡಿಸೆಂಬರ್ ೨೦೧೪) | ||||||||||||||||||||||
ಸದ್ಯದ ಸ್ಥಾನ | ೪[೧] (೨೩ ಏಪ್ರೀಲ್ ೨೦೧೫ (೬೭೨೩೭)[೧]) | ||||||||||||||||||||||
ಆಡಿದ ಪಂದ್ಯಾವಳಿಗಳು | ೧೪೭ (೧೦೦ - ೪೭) (ಸಿಂಗಲ್ಸ್) | ||||||||||||||||||||||
ಪ್ರಶಸ್ತಿ(ಗಳು) | ೪ | ||||||||||||||||||||||
ಪದಕ ದಾಖಲೆ
|
ವೈಯಕ್ತಿಕ ಜೀವನ
ಬದಲಾಯಿಸಿಶ್ರೀಕಾಂತ್ ನಮ್ಮಲ್ವರ್ ಕಿಡಂಬಿಯವರು ಆಂದ್ರ ಪ್ರದೇಶದ ಗುಂಟೂರಿನಲ್ಲಿ ೭ ಫೆಬ್ರವರಿ ೧೯೯೩ರಲ್ಲಿ ಜನಿಸಿದರು. ಇವರ ತಂದೆ ಕೆವಿಎಸ್ ಕೃಷ್ಣ ರವರು ರೈತರಾಗಿದ್ದು, ಮತ್ತು ತಾಯಿ ರಾಧ ಮನೆಹೆಂಡತಿಯಾಗಿದ್ದರೆ.[೫] ಶ್ರೀಕಾಂತನ ತಮ್ಮ ನಂದಗೋಪಲನು ಸಹ ಒಬ್ಬ ಬ್ಯಾಡ್ಮಿಂಟನ್ ಆಟಗಾರ.[೬]
ವೃತ್ತಿ ಜೀವನ
ಬದಲಾಯಿಸಿ
೨೦೧೧
ಬದಲಾಯಿಸಿ೨೦೧೧ರ ಯುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಮಿಶ್ರ ಡಬಲ್ಸ್ ನಲ್ಲಿ ಬೆಳ್ಳಿ ಹಾಗೂ ಡಬಲ್ಸ್ ನಲ್ಲಿ ಕಂಚನ್ನು ಗೆದ್ದುಕೊಂಡರು.[೭] ಇವರು ಪೂಣೆಯಲ್ಲಿ ನೆಡೆದ ಅಖಿಲ ಭಾರತ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲೂ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ವಿಜೇತರಾದರು.[೮]
೨೦೧೨
ಬದಲಾಯಿಸಿ೨೦೧೨ರಲ್ಲಿ ಶ್ರೀಕಾಂತ್ ರವರು ವಿಶ್ವ ಜೂನಿಯರ್ ಚಾಂಪಿಯನ್ ರಾದ ಮಲೇಷ್ಯಾದ ಜುಲ್ಫಾದಿ ಜುಲ್ಕಿಫ್ಲಿಯವರನ್ನು ಮಣಿಸಿ ಮಾಲ್ಡೀವೇಸ್ ಅಂತರಾಷ್ಟ್ರೀಯ ಸಿಂಗಲ್ಸ್ ಕಿರೀಟವನ್ನು ತಮ್ಮದಾಗಿಸಿಕೊಂಡರು.[೯]
೨೦೧೩
ಬದಲಾಯಿಸಿಥೈಲ್ಯಾಂಡ್ ಒಪನ್ ಗ್ರ್ಯಾಂಡ್ ಪ್ರಿಕ್ಸ್ ಗೊಲ್ಡ್ ಪಂದ್ಯಾವಳಿಯಲ್ಲಿ, ಶ್ರಿಕಾಂತ್ ರವರು ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಆಗಿನ ವಿಶ್ವದ ೮ನೇ ಶ್ರೆಯಾಂಕದ ಬೂನ್ಸಕ್ ಪೊನ್ಸಾನರವರನ್ನು ನೇರ ಸೆಟ್ ಗಳಿಂದ ಸೋಲಿಸುವ ಮೂಲಕ ಗೆದ್ದುಕೊಂಡರು.
೨೦೧೪
ಬದಲಾಯಿಸಿಚೀನಾ ಒಪನ್ ಸೂಪರ್ ಸೀರಿಸ್ ನ ಅಂತಿಮ ಪಂದ್ಯದಲ್ಲಿ ಲಿನ್ ಡ್ಯಾನ್ ರವರನ್ನು ಸೋಲಿಸುವ ಮೂಲಕ ಸೂಪರ್ ಸೀರಿಸ್ ಪುರಷರ ಪ್ರಶಸ್ತಿಯನ್ನು ಗೆದ್ದುಕೊಂಡ ಭಾರತದ ಮೊದಲ ಆಟಗಾರರಾಗಿ ಇತಿಹಾಸವನ್ನು ಸೃಷ್ಟಿಸಿದರು.[೩]
೨೬-ಆಗಸ್ಟ್-೨೦೧೬
ಬದಲಾಯಿಸಿಕಿದಂಬಿ ಶ್ರೀಕಾಂತ್ ಅವರು 11 ರಿಂದ 10ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.[೧೦]
ಸಾಧನೆಗಳು
ಬದಲಾಯಿಸಿಸಿಂಗಲ್ಸ್ ಪ್ರಶಸ್ತಿಗಳು (೪)
ಬದಲಾಯಿಸಿ- ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿ
- ಗ್ರ್ಯಾಂಡ್ ಪ್ರಿಕ್ಸ್ ಮತ್ತು ಗ್ರ್ಯಾಂಡ್ ಪ್ರಿಕ್ಸ್ ಗೊಲ್ಡ್ ಪಂದ್ಯಾವಳಿ
- ಸೂಪರ್ ಸೀರಿಸ್ ಪಂದ್ಯಾವಳಿ
- ಸೂಪರ್ ಸೀರಿಸ್ ಪ್ರಿಮಿಯರ್ ಪಂದ್ಯಾವಳಿ
- ಸೂಪರ್ ಸೀರಿಸ್ ಅಂತಿಮ ಪಂದ್ಯಾವಳಿ
ಉಪಾಂತ ವಿಜಯಿ (೨)
ಬದಲಾಯಿಸಿಕ್ರ.ಸಂ. | ವರ್ಷ | ಪಂದ್ಯಾವಳಿ | ಅಂತಿಮ ಪಂದ್ಯದ ಎದುರಾಳಿ | ಅಂಕಗಳು |
---|---|---|---|---|
೧ | ೨೦೧೪ | ಇಂಡಿಯನ್ ಒಪನ್ | ಕ್ಸುಯೆ ಸೊಂಗ್ | ೨೧-೧೬, ೧೯-೨೧, ೧೩-೨೧ |
೨ | ೨೦೧೫ | ಇಂಡಿಯನ್ ಒಪನ್ | ಕಶ್ಯಪ್ ಪಾರುಪಲ್ಲಿ | ೨೧-೨೩, ೨೧-೨೩ |
- ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿ
- ಗ್ರ್ಯಾಂಡ್ ಪ್ರಿಕ್ಸ್ ಮತ್ತು ಗ್ರ್ಯಾಂಡ್ ಪ್ರಿಕ್ಸ್ ಗೊಲ್ಡ್ ಪಂದ್ಯಾವಳಿ
- ಸೂಪರ್ ಸೀರಿಸ್ ಪಂದ್ಯಾವಳಿ
- ಸೂಪರ್ ಸೀರಿಸ್ ಪ್ರಿಮಿಯರ್ ಪಂದ್ಯಾವಳಿ
- ಸೂಪರ್ ಸೀರಿಸ್ ಅಂತಿಮ ಪಂದ್ಯಾವಳಿ
References
ಬದಲಾಯಿಸಿ- ↑ ೧.೦ ೧.೧ "ಆರ್ಕೈವ್ ನಕಲು". Archived from the original on 2016-03-03. Retrieved 2015-05-11.
- ↑ "BWF World Rankings". Archived from the original on 2016-03-03. Retrieved 2015-05-11.
- ↑ ೩.೦ ೩.೧ "Saina Nehwal, Kidambi Srikanth Win China Open Titles". Archived from the original on 2016-03-04. Retrieved 2015-05-11.
- ↑ "When brain fever almost got Kidambi Srikanth". The Times of India.
- ↑ Dev Sukumar (21 December 2012). "sportskeeda.com".
- ↑ "Brothers from Guntur create history". The Times of India.
- ↑ Commonwealth Youth Games, 2011
- ↑ "Junior International Championship results" (PDF). Archived from the original (PDF) on 2016-03-04. Retrieved 2015-05-11.
- ↑ "Maldives International Challenge 2012". Archived from the original on 2016-08-20. Retrieved 2015-05-11.
- ↑ ಕ್ರೀಡೆ:ಬ್ಯಾಡ್ಮಿಂಟನ್