ಶ್ರವಣಾತೀತ (ಅಲ್ಟ್ರಾಸೌಂಡ್)


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಶ್ರವಣಾತೀತ (ಅಲ್ಟ್ರಾಸೌಂಡ್) ಬದಲಾಯಿಸಿ

ಶಬ್ದತರಂಗಗಳಲ್ಲಿ ಎರಡು ವಿಧ. ಒಂದು ಕೇಳಿಸುವಂತಹದ್ದು. ಇನ್ನೊಂದು ಕೇಳಿಸಲಾರದಂತಹದ್ದು. 20,000 ಹಟ್ರ್ಜ್ (ಪ್ರತಿಸೆಕೆಂಡಿನ ಆವರ್ತಸಂಖ್ಯೆ) ಕ್ಕಿಂತ ಹೆಚ್ಚಿನ ಶಬ್ದ ತರಂಗಗಳು ಮಾನವನ ಕಿವಿಗೆ ಗ್ರಹಣವಾಗುವುದಿಲ್ಲವಾದುದರಿಂದ ಅವುಗಳಿಗೆ ಶ್ರವಣಾತೀತವೆನ್ನುತ್ತಾರೆ. ಶ್ರವಣಾತೀತ ತರಂಗಗಳನ್ನು ಬಹಳ ಹಿಂದೆಯೇ ಗುರುತಿಸಿದ್ದಾರೆ. 1912ರಲ್ಲಿ ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಮುಳುಗಿದ ‘ಟೈಟಾನಿಕ ಹಡಗನ್ನು ಪತ್ತೆ ಹಚ್ಚಲು ಶ್ರವಣಾತೀತ ಪದ್ಧತಿಯಲ್ಲಿ ಮಾಡಿದ ಪ್ರಯತ್ನ ಸಫಲವಾಗಲಿಲ್ಲ. 1980ರ ಎರಡನೇ ಮಹಾಯುದ್ಧದಲ್ಲಿ ಸಮುದ್ರದಾಳದ ಸಬ್ಮರೀನ್ಗಳನ್ನು ಹುಡುಕಲು ಶ್ರವಣಾತೀತ ತರಂಗಗಳಿಂ ಸಹಾಯಕವಾಯಿತು. ಶ್ರವಣಾತೀತ ತರಂಗಗಳಿಂದ ಮಾನವದೇಹದ ಒಳಾಂಗಗಳ ಚಿತ್ರವಿನ್ಯಾಸ ಪಡೆದು ವೈದ್ಯಕ್ಷೇತ್ರದಲ್ಲಿ 1960ರಿಂದ ರೋಗ ನಿದಾನ ಮತ್ತು ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ ಪ್ರಾರಂಭವಾಯಿತು.

ಶರೀರದೊಳಗಿನ ಅಂಗಾಂಗಗಳ ಚಿತ್ರವಿನ್ಯಾಸ ಶ್ರವಣಾತೀತದಿಂದ ಪಡೆಯಲು 1 ರಿಂದ 20 ಮೆಗಾಹಟ್ರ್್ಜ ಆವರ್ತನ ತರಂಗಗಳನ್ನು ಬಳಸುತ್ತಾರೆ. ಪಿಜೋವಿದ್ಯುತ್ ಹರಳುಗಳಿಂದ ಶ್ರವಣಾತೀತ ತರಂಗಗಳನ್ನು ರಚಿಸಲು ಸಾಧ್ಯವಿದೆ. ವಿದ್ಯುತ್ ತರಂಗದಿಂದಾಗಿ ಪಿಜೋ ಹರಳುಗಳು ತಮ್ಮ ರೂಪ ಬದಲಾಯಿಸಿ ತರಂಗಗಳನ್ನು ನಿರ್ಮಿಸುತ್ತವೆ. ದೇಹದೊಳಾಂಗಗಳಲ್ಲಿರುವ ದ್ರವದ ಮೂಲಕ ಈ ತರಂಗಗಳು ಹಾದುಹೋಗುತ್ತವೆ. ದ್ರವದ ಹಿನ್ನೆಲೆಯಲ್ಲಿ ಅಂಗಾಂಗಗಳ ವಿನ್ಯಾಸವನ್ನು ಕಂಪ್ಯುಟರ್ ಪರದೆಯ ಮೇಲೆ ಮೂಡಿಸುತ್ತಾರೆ. ಹೃದಯ, ರಕ್ತನಾಳ, ಮೂತ್ರಪಿಂಡ, ಮೂತ್ರನಾಳ, ಮೂತ್ರಕೋಶ, ಗರ್ಭ, ಗರ್ಭದೊಳಗಿನ ಪಿಂಡ, ಯಕೃತ್ತು, ಗುಲ್ಮಗಳ ಅಧ್ಯಯನದಲ್ಲಿ ಶ್ರವಣಾತೀತ ಅತ್ಯಂತ ಸಹಾಯಕಾರಿಯಾಗಿದೆ. ಶ್ರವಣಾತೀತ ತರಂಗಗಳು ಗಾಳಿಯಮೂಲಕ ಹಾದುಹೋಗುವುದಿಲ್ಲವಾದುದರಿಂದ ಪುಪ್ಪುಸಗಳ ವಿನ್ಯಾಸಪಡೆಯಲು ಆಗುವುದಿಲ್ಲ. ಆದರೆ ಮೊಲೆಗಳೊಳಗಿನದ್ದನ್ನು ಶ್ರವಣಾತೀತದಿಂದ ತಿಳಿದುಕೊಳ್ಳಲು ಸಾಧ್ಯವಾಗಿದೆ. ಶ್ರವಣಾತೀತ ತರಂಗಗಳಿಂದ ಯಾವ ವಿಕರಣತೆಯ ಅಥವಾ ಇನ್ನಾವುದೇ ಅಡ್ಡಪರಿಣಾಮಗಳ ಭಯವಿಲ್ಲ, ಮೂತ್ರಾಂಗದೊಳಗಿರುವ ಹರಳು, ಗರ್ಭದ, ಗರ್ಭಪಿಂಡದ ನ್ಯೂನತೆಗಳು, ಯಕೃತ್ತಿನಲ್ಲಿರುವ ಕೀವು, ಗಂಟು ಹೀಗೆ ಒಳಾಂಗಗಳ ರೋಗ ನಿದಾನದಲ್ಲಿ ಶ್ರವಣಾತೀತ ತರಂಗಗಳು ಮಹತ್ವದ ಪಾತ್ರವಹಿಸುತ್ತಿವೆ. ಇದು ವೈದ್ಯವಿಜ್ಞಾನಕ್ಕೊಂದು ಅನುಪಮವಾದ ಸಾಧನವಾಗಿದೆ. ಕಾಂತೀಯ ಅನುರಣನ ಚಿತ್ರ (ಮ್ಯಾಗ್ನೆಟಿಕ್ ರೆಸೂನೆನ್್ಸ ಇಮೇಜಿಂಗ್ ) 1952ರಲ್ಲಿ ಬ್ಲೋಲ್ಜ್ ಮತ್ತು ಪುರ್ಸೆಲ್ರು ಕಾಂತೀಯ ಅನುರಣನ ಗುಣಲಕ್ಷಣಗಳನ್ನು ಕಂಡುಹಿಡಿದದ್ದಕ್ಕಾಗಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದರು. 1977ರಲ್ಲಿ ಮಾಸ್ಸಫೇಲ್ದ್ ಮತ್ತು ವಾಟರ್ಬರ್ ಈರ್ವರೂ ಕಾಂತೀಯ ಅನುರಣನೆಯಿಂದ ದೇಹದ ಒಳಾಂಗಗಳ, ಮೂಳೆಗಳ, ಎಲ್ಲ ಊತಕಗಳ ಚಿತ್ರ ತೆಗೆಯುವುದನ್ನು ಕಂಡುಹಿಡಿದು 2002ರ ವೈದ್ಯಕೀಯ ಸಂಶೋಧನೆಯ ನೊಬೆಲ್ ಪ್ರಶಸ್ತಿಗೆ ಭಾಜನರಾದರು. ಅತ್ಯಂತ ಶ್ರದ್ಧೆಯಿಂದ ನಿಯಂತ್ರಣಕ್ಕೊಳಪಡಿಸಿದ ಕಾಂತೀಯ ಕ್ಷೇತ್ರದ ಪರಿಸರದಲ್ಲಿ ವಿಕಿರಣ-ಆವರ್ತನೆಯ ವಿಕಿರಣತೆ (ರೇಡಿಯೋ ಫ್ರೀಕ್ವೆನ್ಸಿ ರೇಡಿಯೇಷನ್) ಯಿಂದ ಒಳಾಂಗಗಳ ಸೂಕ್ಷ್ಮತೆ ತಿಳಿಸುವ ಚಿತ್ರಗಳನ್ನು ಯಾವುದೇ ಸಮತಲ (ಪ್ಲೇನ್) ದಲ್ಲಿ ಪಡೆಯಬಹುದು. ದೇಹಕ್ಕೆ ವಿಕಿರಣತೆಯ ಅನಿಷ್ಟ ಭಯವಿಲ್ಲದೆ ಒಳಾಂಗಗಳ ಚಿತ್ರ ಪಡೆಯುವುದು ಕಾಂತೀಯ ಅನುರಣನೆಯ ವಿಶಿಷ್ಟತೆಯಾಗಿದೆ.

ನಮ್ಮ ದೇಹದಲ್ಲಿ ಹೈಡ್ರೋಜನ್ ಅಣುಗಳು ಹೇರಳವಾಗಿವೆ. ಹೈಡ್ರೋಜನ್ ಅಣುಗಳು ಕಾಂತೀಯ ಅನುರಣನೆಯ ಚಿತ್ರ ತೆಗೆಯುವಾಗ ಸಣ್ಣ ಸಣ್ಣ ಆಯಸ್ಕಾಂತದಂತೆ ವರ್ತಿಸುತ್ತವೆ. 0.2 ರಿಂದ 2 ತೇತ್ಸಾ ಯಂತ್ರಗಳನ್ನು ಒಳಾಂಗಗಳ ಚಿತ್ರ ಪಡೆಯಲು ಉಪಯೋಗಿಸುತ್ತಾರೆ. ನೇರ, ಮಗ್ಗುಲ, ವಕ್ರ ಹೀಗೆ ಯಾವುದೇ ಸಮತಲದ ಚಿತ್ರಗಳನ್ನು ಯಾವುದೇ ನಿರ್ದಿಷ್ಟ ಆಳದಲ್ಲಿ ಪಡೆಯಬಹುದು. ಮಿದುಳಿನೊಳಗಣ ಅತೀ ಸಣ್ಣ ಅಳಿಗೊಳಪ (ಇನ್ಫ್ರಾಕ್ಟ್) ಬೆನ್ನು ಮೂಳೆ, ಮೂಳೆಗಳ ನಡುವಿನ ತಟ್ಟೆ, ಬೆನ್ನುಹುರಿ, ನರಗಳ, ಹೃದಯದ ಒಳಾಂಗಗಳ ಸ್ಪಷ್ಟ ಚಿತ್ರ ಎಂ.ಆರ್.ಐದಿಂದ ಪಡೆಯಬಹುದು. ಎಕ್್ಸರೇ ಚಿತ್ರದಲ್ಲಾಗಲಿ, ಸಿ.ಟಿ. ಸ್ಕ್ಯಾನ್ ಚಿತ್ರದಲ್ಲಾಗಲಿ, ಶ್ರವಣಾತೀತದಿಂದಾಗಲಿ ಕಂಡುಹಿಡಿಯಲು ಸಾಧ್ಯವಾಗದುದನ್ನು ಕಾಂತೀಯ ಅನುರಣಿಯ ಚಿತ್ರದಲ್ಲಿ ಪಡೆಯಬಹುದು. 1980ರಲ್ಲಿ ಪ್ರಾರಂಭವಾದ ಇದರ ಬಳಕೆ 2002ರಷ್ಟರಲ್ಲಿ ಸುಮಾರು ಆರುಕೋಟಿ ಚಿತ್ರಗಳನ್ನು ತೆಗೆದು ಪರೀಕ್ಷಿಸಿರುವುದು ಇದರ ಉಪಯುಕ್ತತೆಗೆ ನಿದರ್ಶನವಾಗಿದೆ.