ಶ್ರವಣಬೆಳಗೊಳದ ಪ್ರಾಚೀನ ಶಾಸನಗಳು

ಶ್ರವಣಬೆಳಗೊಳದ ಪ್ರಾಚೀನ ಶಾಸನಗಳು ಕ್ರಿ.ಶ ಸುಮಾರು ೬೫೦ ರಿಂದ ೭೦೦. ಈ ಶಾಸನಗಳು ವಿವಿಧ ವೃತ್ತಗಳಲ್ಲಿವೆ. ಶ್ರವಣಬೆಳಗೊಳದ ಸುತ್ತುಮುತ್ತಲೂ ಸುಮಾರು ೮೦೦ ಶಾಸನಗಳನ್ನು ಪತ್ತೆಹಚ್ಚಲಾಗಿದೆ. ಇದರಲ್ಲಿ ೮೦ ಶಾಸನಗಳು ಹೊಯ್ಸಳರ ಆಳ್ವಿಕೆಯ ಕಾಲ ೬೦೦ - ೧೮೩೦ ಸಿಇ ಗೆ ಸಂಬಂಧ ಪಟ್ಟಿವೆ. ಇವುಗಳಲ್ಲಿ ಕಾವ್ಯಶಕ್ತಿ, ಅಲಂಕಾರ, ವ್ಯಾಕರಣ ವಿಚಾರ, ಭಾಷಿಕ ವಿವರ, ಜೀವನ ವಿವರ ಮುಂತಾದುವುಗಳಿವೆ. ಹಾಗಾಗಿ ಕನ್ನಡ ಶಾಸನ ಪರಂಪರೆಯಲ್ಲಿ ಈ ಶಾಸನಗಳು ಉನ್ನತ ಸ್ಥಾನ ಗಳಿಸಿವೆ. ಕೆಲವು ವಿದ್ವಾಂಸರ ಪ್ರಕಾರ ಇವು ಹಲ್ಮಿಡಿ ಶಾಸನಕ್ಕಿಂತಲೂ ಮುಂಚಿನವಾಗಿವೆ.

ಇತಿವೃತ್ತ ಬದಲಾಯಿಸಿ

ಗಂಗರ ಆಳ್ವಿಕೆಯ ಸಮಯದಲ್ಲಿ, ಶ್ರವಣಬೆಳಗೊಳ ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು. ಇಂದು ಇದು ದೊಡ್ಡ ಪುರಾತತ್ವ ಪ್ರಾಮುಖ್ಯತೆಯ ಒಂದು ಸ್ಥಳವಾಗಿದೆ. ಪಟ್ಟಣದ ಹೆಸರು "ಶ್ರವಣ ಅಥವಾ ಶ್ರಮಣ" ಎಂಬ ಪದದಿಂದ ಪಡೆಯಲಾಗಿದೆ. ಶ್ರವಣ ಅಥವಾ ಶ್ರಮಣ ಎಂದರೆ ಜೈನ ಸಂನ್ಯಾಸಿ ಎಂದರ್ಥ ಮತ್ತು ಬೆಳಗೊಳ ಅಥವಾ 'ಬಿಳಿಯ ಕೊಳ' ಎಂದರೆ ಕನ್ನಡದಲ್ಲಿ ಶುಭ್ರ ಬಿಳಿಯ ಬಣ್ಣದ ಕೊಳ ಎಂದರ್ಥ. ಶ್ರವಣಬೆಳಗೊಳದ ಸುತ್ತುಮುತ್ತಲೂ ಸುಮಾರು ೮೦೦ ಶಾಸನಗಳನ್ನು ಪತ್ತೆಹಚ್ಚಲಾಗಿದೆ. ಇದರಲ್ಲಿ ೮೦ ಶಾಸನಗಳು ಹೊಯ್ಸಳರ ಆಳ್ವಿಕೆಯ ಕಾಲ ೬೦೦ - ೧೮೩೦ ಸಿಇ ಗೆ ಸಂಬಂಧ ಪಟ್ಟಿವೆ. ಈ ಶಾಸನಗಳು ಇತಿಹಾಸವನ್ನು ತಿಳಿಯಲು ಬಹಳ ಸಹಾಯಕವಾಗಿದೆ. ಇದರಿಂದ ಬರಿಯ ಹಾಸನ ಜಿಲ್ಲೆಯ ಇತಿಹಾಸ ಮಾತ್ರವಲ್ಲದೇ ನಮ್ಮ ಕರ್ನಾಟಕವನ್ನು ಆಳಿದ ಎಲ್ಲಾ ಸಾಮ್ರಾಜ್ಯಗಳ ಇತಿಹಾಸವನ್ನೂ ಅರ್ಥಮಾಡಿಕೊಳ್ಳುವಲ್ಲಿ ಸಹಾ ಯಕವಾಗಿದೆ. ಶಿಲಾಶಾಸನಗಳು ಕನ್ನಡ, ಸಂಸ್ಕೃತ, ತಮಿಳು, ಮರಾಠಿ, ಮಾರ್ವಾಡಿ ಮತ್ತು ಮಹಾಜನಿ ಭಾಷೆಗಳಲ್ಲಿವೆ ಮತ್ತು ಕರ್ನಾಟಕವನ್ನು ಆಳಿದ ಎಲ್ಲ ಪ್ರಮುಖ ಸಾಮ್ರಾಜ್ಯಗಳ ವಿಶೇಷತೆಯನ್ನು ತಿಳಿಸುತ್ತಾ ಜೈನ ಧರ್ಮದ ಆಶ್ರಯವು ಮಧ್ಯಯುಗದ ಇತಿಹಾಸದಲ್ಲಿ ಸಂಪೂರ್ಣ ಸಕ್ರಿಯವಾಗಿತ್ತು ಎಂಬ ಅಂಶದ ಮೇಲೆ ಬೆಳಕು ಚೆಲ್ಲುತ್ತದೆ.

ಶಾಸನಗಳ ವೈಶಿಷ್ಟ್ಯ ಬದಲಾಯಿಸಿ

ಶ್ರವಣಬೆಳಗೊಳದ ಪ್ರಾಚೀನ ಶಾಸನಗಳಕಾಲ ಕ್ರಿ.ಶ ಸುಮಾರು ೬೫೦ ರಿಂದ ೭೦೦. ಈ ಶಾಸನಗಳು ವಿವಿಧ ವೃತ್ತಗಳಲ್ಲಿವೆ. ಇವು ಪ್ರಮುಖವಾಗಿ ಜೈನಧರ್ಮಕ್ಕೆ ಸಂಬಂಧಿಸಿವೆ. ಶ್ರವಣಬೆಳಗೊಳದ ಬೆಟ್ಟವೊಂದು ಶಾಸನ ಚಿತ್ರಕಾವ್ಯ ಕೂಟದಂತಿದೆ. ಒಂದೊಂದು ಶಾಸನವೂ ಒಂದೊಂದು ಭಾವಗೀತೆಯಂತೆ ಸೊಗಸಾದ ಉಪಮೆ, ರೂಪಕಗಳಿಂದ ಕೂಡಿವೆ. ಕಾವ್ಯ ಸ್ವಾರಸ್ಯದ ೫೦ಕ್ಕೂ ಹೆಚ್ಚು ಪದ್ಯಗಳು ಈ ಶಾಸನಗಳಲ್ಲಿ ದೊರೆಯುತ್ತವೆ. ಪಂಚೇಂದ್ರೀಯಗಳನ್ನು ಗೆದ್ದು ಕಣ್ವಪ್ಪಿನ ವ್ರತ ಸ್ವೀಕರಿಸಿದ ಚರಿತ್ರಶ್ರೀ, ಕೊಳತ್ತೂರು ಸಂಘದ ಮುನಿ ಸುರಲೋಕದ ಮಹಾವಿಭವವನ್ನು ಪಡೆದ ವಿವರ, ವೇಗೂರಿನ ಸರ್ವಜ್ಞ ಭಟ್ಟಾರರು ಸ್ವರ್ಗಾಗ್ರವನ್ನೇರಿದ್ದು, ಕಳಂತೂರ ಯತಿ ಕಟವಗ್ರಶೈಲ, ಬೆಂಕಿ, ಸರ್ಪದುಷ್ಟ್ರ ಮುಂತಾದ ನೂರೆಂಟು ಕಡೆ, ನೂರೆಂಟು ವರ್ಷ ಉಗ್ರತಪಸ್ಸನ್ನಾಚರಿಸಿ ಸಮಾಧಿಸ್ಥರಾದವರ ವಿವರ, ಮಹಾಸೇನ ಋಷಿಯ ನೋಂಪಿಯಿಂದಾದ ಸ್ವರ್ಗ ಪ್ರಾಪ್ತಿ, ಚಂದ್ರದೇವಾಚಾರ್ಯ ತಪಸ್ವಿಯ ವಿನಯಾಪರತೆ, ಅನಂತಮತಿ ಕಂತಿ ಎಂಬುವಳ ಸುರಲೋಕಸೌಖ್ಯ ಮುಂತಾದ ಶಾಸನಗಳಿವೆ.

ನಂದಿಸೇನ ಮುನಿಯನ್ನು ಕುರಿತ ಶಾಸನ ಬದಲಾಯಿಸಿ

ಸುರಚಾಪಂಬೋಲೆ ವಿದ್ಯುಲ್ಲತೆಗಳ ತೆರವೊಲ್ತೋರು ಬೇಗಂ
ಪಿರಿಗುಂ ಶ್ರೀ ರೂಪಲೀಲಾಧನವಿಭವಮಹಾರಾಸಿಗಳ್ ನಿಲ್ಲವಾರ್ಗ್ನಂ
ಪರಮಾರ್ತ್ಥಂ ಮೆಚ್ಚಿನಾನೀ ಧರಣಿಯೂಳಿರವಾನೆನ್ದು ಸನ್ಯಾಸನಂಗೆ
ಯ್ದುರುಸತ್ವನ್ನನ್ದಿಸೇನ ಪ್ರವರ ಮುನಿವರನ್ದೇವಲೋಕಕ್ಕೆ ಸನ್ದಾನ್||

ಬುಕ್ಕನ ಶ್ರವಣಬೆಳಗೊಳದ ಧರ್ಮ ಸಮನ್ವಯ ಶಾಸನ ಬದಲಾಯಿಸಿ

ಈ ಶಾಸನ ವಿಜಯನಗರ ಸಾಮ್ರಾಜ್ಯ ಆರಂಭವಾದ ಕೇವಲ ಹತ್ತಿಪ್ಪತ್ತು ವರ್ಷಗಳಲ್ಲಿ ಹುಟ್ಟಿದೆ. ಇದರ ಕಾಲ ಕ್ರಿ.ಶ.೧೩೬೮. ಒಮ್ಮೆ ವೈಷ್ಣವರಿಗೂ ಜೈನರಿಗೂ ಜಗಳವಾಗಿ ಜೈನರಿಗೆ ಹಲವು ತೊಂದರೆಗಳಾದುವು. ಜೈನರು ವೀರ ಬುಕ್ಕರಾಯನಲ್ಲಿಗೆ ದೂರನ್ನು ಕೊಂಡೊಯ್ಯಲು ಆತ ಎರಡು ಧರ್ಮಗಳಾದರೂ ಒಂದೇ ಭೇದವೆಣಿಸಲಾಗದು ಎಂದು ಹೇಳಿ ಎರಡು ಪಂಗಡದ ಧುರೀಣರನ್ನು ಕೈ ಕೈ ಹಿಡಿಸಿ ಸ್ನೇಹ ಉಂಟು ಮಾಡಿ, ಆ ಒಡಂಬಡಿಕೆಯನ್ನು ಶಾಸನ ಮಾಡಿ ನಿಲ್ಲಿಸಿದನು. ವಿಜಯನಗರದ ಬುಕ್ಕರಾಯನ ಸಮದೃಷ್ಠಿಗೆ ಈ ಶಾಸನ ಸಾಕ್ಷಿಯಾಗಿದೆ.