ಶೇಷಗಿರಿರಾವ್ ಚುರಮುರಿ
ಶೇಷಗಿರಿರಾವ್ ಚುರಮುರಿ ( ಜ.೧೮೨೭)
ಶೇಷಗಿರಿರಾಯರ ತಂದೆ ರಾಮಚಂದ್ರರಾಯರು ಆಗಿನ ಕಲಾದಗಿ (ಬಿಜಾಪುರ) ಜಿಲ್ಲೆಯಲ್ಲಿ ಪೋಲೀಸ್ ಇನ್ಸಪೆಕ್ಟರ್ ಆಗಿದ್ದರು. ಸಂಸ್ಕ್ರತ ಭಾಷೆಯಲ್ಲಿ ಪರಿಣಿತರು. ಮಗ ಶೇಷಗಿರಿರಾಯರಿಗೆ ಬಾಲ್ಯದಿಂದಲೇ ಸಂಸ್ಕೃತ ವಿದ್ಯಾಭ್ಯಾಸ ಮಾಡಿಸಿದರು. ಶೇಷಗಿರಿರಾಯರು ಬಾಲ್ಯದಲ್ಲಿ ಕಲಾದಗಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಪುಣೆಗೆ ಹೋಗಿ ಎಂಜಿನಿಯರಿಂಗ್ ಆಭ್ಯಾಸ ಮಾಡಿದರು. ನಂತರ ಮುಂಬಯಿ ಪ್ರಾಂತದ ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು.[೧]
ಶೇಷಗಿರಿರಾಯರ ಹಿರಿಯುರು ಹಿಂದೆ ಚುರುಮುರಿ ಅಂಗಡಿ ಇಟ್ಟಿದ್ದರಿಂದ ಇವರ ಮನೆತನಕ್ಕೆ ಚುರುಮುರಿ ಎಂಬ ಹೆಸರು ಬೆಳೆದು ಬಂದಿತು. ಶೇಷಗಿರಿರಾಯರು ವ್ರತ್ತಿಯಲ್ಲಿ ಇಂಜಿನಿಯರಾದರು. ಪ್ರವ್ರತ್ತಿಯಲ್ಲಿ ಹಲವು ಕಲೆಗಳ ಆರಾಧಕರಾಗಿದ್ದರು. ಸಂಗೀತವನ್ನು ಆಳವಾಗಿ ಆಭ್ಯಾಸ ಮಾಡಿದರು. ಕನ್ನಡ ಭಾಷೆಯ ಬಗೆಗೆ ವಿಶೇಷವಾದ ಒಲವಿದ್ದ ಇವರು ಆಗ ಡೆಪ್ಯುಟಿ ಚೆನ್ನಬಸಪ್ಪನವರೊಂದಿಗೆ ಸೇರಿ ಕನ್ನಡಕ್ಕಾಗಿ ದುಡಿದರು. ಮುಂಬಯಿಯಲ್ಲಿ ಇದ್ದಾಗಲೇ ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದರು. ೧೮೭೦ರಲ್ಲಿ ಈ ನಾಟಕ ಅಚ್ಚಾಯಿತು. ಈ ನಾಟಕ ಎಷ್ಟು ಜನಪ್ರಿಯವಾಯಿತೆಂದರೆ ನಾಲ್ಕ್ಯೆದು ಮರುಮುದ್ರಣವನ್ನು ಕಂಡಿತು. ಬಡಗಿತನ, ಕಮ್ಮಾರಿಕೆ ಮುಂತಾದ ಕೆಲಸಗಳನ್ನು ಅರಿತಿದ್ದ ಇವರು ರಾಸಾಯನಿಕ ಶಾಸ್ತ್ರದಲ್ಲಿ ಪರಿಣತಿ ಪಡೆದಿದ್ದರು. ಪ್ರಯೋಗಾಲಯದಲ್ಲಿ ನಡೆದ ಆಕಸ್ಮಿಕದಲ್ಲಿ ಮರಣ ಹೊಂದಿದರು.
ಉಲ್ಲೇಖ
ಬದಲಾಯಿಸಿ- ↑ ಹೊಂಬಿದಿರು, ಸಂಪಾದಕರು ಡಾ.ನಾ. ದಾಮೋದರ ಶೆಟ್ಟಿ ಸ್ವಾಗತ ಸಮಿತಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮೂಢಬಿದಿರೆ.