ಶೆಂಝೌ ೭
ಶೆಂಝೌ ೭ (ಪಾರಂಪರಿಕ ಚೀನಿ: 神舟七號 ; ಸರಳೀಕೃತ ಚೀನಿ: 神舟七号 ; ಶೇನ್‌ಜೌ ಖೀಹಾವ್) ಇದು ಚೀನಾ ದೇಶದ ಮಾನವರನ್ನು ಹೊತ್ತೊಯ್ದ ಮೂರನೆಯ ಅಂತರಿಕ್ಷ ನೌಕೆ. ಈ ಉಡಾವಣೆಯೊಂದಿಗೆ 'ಪ್ರೊಜೆಕ್ಟ್ ೯೨೧'ರ ಎರಡನೇಯ ಹಂತ ಪ್ರಾರಂಭವಾಯಿತು. ಶೆಂಝೌ ಅಂತರಿಕ್ಷ ನೌಕೆಯನ್ನು ಉಪಯೋಗಿಸುವ ಇದು ಸೆಪ್ಟೆಂಬರ್ ೨೫, ೨೦೦೮ರಂದು ಲಾಂಗ್ ಮಾರ್ಚ್ ೨ಎಫ್ (ಸಿಝಿ-೨ಎಫ್) ಉಡಾವಣಾ ನೌಕೆಯ ಮೂಲಕ ಹಾರಿಸಲಾಯಿತು.
ತಂಡ
ಬದಲಾಯಿಸಿ- ಝೈ ಝಿಗ್ಯಾಂಗ್ (ಕಮಾಂಡರ್)
- ಲಿಯು ಬೊಮಿಂಗ್
- ಜಿಂಗ್ ಹೈಪೆಂಗ್
ಹಿಂಪಡೆ ತಂಡ
ಬದಲಾಯಿಸಿ- ಚೆನ್ ಕುವಾನ್
- ಫೈ ಜುನ್ ಲಾಂಗ್
- ನೈ ಹೈಷೆಂಗ್
ಉಡಾವಣೆಯ ಮುಖ್ಯಾಂಶಗಳು
ಬದಲಾಯಿಸಿ- ಈ ಅಂತರಿಕ್ಷ ನೌಕೆಯಲ್ಲಿ ಮೂವರು ಗಗನಯಾತ್ರಿಗಳಿದ್ದಾರೆ, ಇಷ್ಟು ಚೈನಿ ಗಗನಯಾತ್ರಿಗಳು ಒಟ್ಟಿಗೆ ಹೊರಟಿರುವದು ಮೊದಲ ಬಾರಿ.
- ಇನ್ನೂ ಮೂವರು ಗಗನಯಾತ್ರಿಗಳು ಹಿಂಪಡೆ ತಂಡದಲ್ಲಿರುತ್ತಾರೆ.
- ಗಗನನೌಕೆಯ ಹೊರಗೆ ನಡೆಯುವ ಕಾರ್ಯಗಳಿಗಾಗಿ ಅತ್ಯಾಧುನಿಕ ಗಗನಕವಚವನ್ನು ನಿರ್ಮಿಸಲಾಗಿದೆ.