ಶೀಲಾ ಗೌಡ (ಜನನ 1957 ರಲ್ಲಿ ಭದ್ರಾವತಿ, ಭಾರತ) ಒಬ್ಬ ಸಮಕಾಲೀನ ಕಲಾವಿದೆ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. [] ವರ್ಣಚಿತ್ರಕಾರಳಾಗಿ ತರಬೇತಿ ಪಡೆದ ಶೀಲಾ ತನ್ನ ಅಭ್ಯಾಸವನ್ನು ಶಿಲ್ಪಕಲೆ, ಹಸುವಿನ-ಸಗಣಿ, ಧೂಪದ್ರವ್ಯ ಮತ್ತು ಕುಂಕುಮದ ಪುಡಿ (ಅದ್ಭುತ ಕೆಂಪು ಬಣ್ಣದಲ್ಲಿ ಹೆಚ್ಚಾಗಿ ಲಭ್ಯವಿರುವ ನೈಸರ್ಗಿಕ ವರ್ಣದ್ರವ್ಯ) ಮುಂತಾದ ವಸ್ತುವಿನ ವೈವಿಧ್ಯತೆಯನ್ನು ಬಳಸಿಕೊಳ್ಳುವ ಶಿಲ್ಪ ಮತ್ತು ಅನುಸ್ಥಾಪನೆಗೆ ವಿಸ್ತರಿಸಿದರು. ಭಾರತದಲ್ಲಿನ ಅಂಚಿನಲ್ಲಿರುವ ಜನರ ದೈನಂದಿನ ಕಾರ್ಮಿಕ ಅನುಭವಗಳಿಂದ ಸ್ಫೂರ್ತಿ ಪಡೆದ ಅವರು ತಮ್ಮ ಪ್ರಕ್ರಿಯೆ-ಪ್ರಧಾನವಾದ[] ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಆಕೆಯ ಕೆಲಸವು ಆಗಾಗ್ಗೆ ಧಾರ್ಮಿಕ ಸಂಘಗಳ ಮೂಲಕ ಕನಿಷ್ಟ ಅಗತ್ಯಗಳನ್ನು ಮೀರಿದ ಚಿತ್ರಗಳಿಗೆ ಸಂಬಂಧಿಸಿದೆ. ಆಕೆಯ ಆರಂಭಿಕ ತೈಲಚಿತ್ರಗಳು ಪ್ರಕೃತಿಯಲ್ಲಿ ಚಿಂತಾಕ್ರಾಂತ ಹುಡುಗಿಯರನ್ನುಳ್ಳದ್ದಾಗಿ ಅವರ ಮಾರ್ಗದರ್ಶಿ ಕೆ.ಜಿ. ಸುಬ್ರಹ್ಮಣ್ಯನ್ ರವರ ಪ್ರಭಾವಕ್ಕೆ ಒಳಗಾಗಿದೆ. ಅನಂತರದ ಚಿತ್ರಗಳು ನಲಿನಿ ಮಾಲಿನಿ ಅವರ ಪ್ರಭಾವವನ್ನು ಪಡೆದು ಸ್ವಲ್ಪಮಟ್ಟಿಗೆ ಅಭಿವ್ಯಕ್ತಿಯತ್ತ ತಿರುಗಿದವು. ಅವುಗಳಲ್ಲಿ ಮಧ್ಯಮ ವರ್ಗದ ಅವ್ಯವಸ್ಥೆ ಮತ್ತು ಉದ್ವಿಗ್ನತೆಯನ್ನು ಒರಟಾದ ಶೃಂಗಾರದೊಂದಿಗೆ ಚಿತ್ರಿಸಲಾಗಿದೆ.[]

ಶೀಲಾ ಗೌಡ ಅವರ ಅನುಸ್ಥಾಪನೆ
Sheela Gowda
ರಾಷ್ಟ್ರೀಯತೆ Indian
ಕ್ಷೇತ್ರ Painting, Sculpture, Installation
ತರಬೇತಿ MA, Royal College of Art in ಲಂಡನ್, UK
ಪುರಸ್ಕಾರಗಳು Finalist for the 2014 Hugo Boss Prize, Rajyotsava Award (2013), Shortlisted for Artes Mundi 5, Cardiff (2012), Sotheby's Prize for Contemporary Indian Art (1998), G.S. Shenoy Award (1998), Senior Fellowship, Government of India (1994-1996), Karnataka Lalith Kala Academy Award (1985), Inlaks Foundation Scholarship for postgraduate studies at the RCA, London (1984-1986), Karnataka Lalith Kala Academy scholarship for higher studies (1979-1982)

ಮುಂಚಿನ ಜೀವನ

ಬದಲಾಯಿಸಿ

ಶೀಲಾ ಗೌಡ ಸಣ್ಣ ಪಟ್ಟಣಗಳಲ್ಲಿ ತನ್ನ ಬಾಲ್ಯವನ್ನು ಕಳೆದರು. ಆಕೆಯ ಪೋಷಕರು ಹಳ್ಳಿಯಲ್ಲಿ ಜನಿಸಿದವರು. ಆದರೆ ಅವರ ತಂದೆಯ ಸರ್ಕಾರಿ ಕೆಲಸದ ಕಾರಣ, ಅವರು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. ಅವರ ತಂದೆ ಕೂಡ ಬರಹಗಾರ ಮತ್ತು ಜಾನಪದ ಸಾಹಿತಿ ಹಾಗೂ ಜಾನಪದ ಸಂಗೀತವನ್ನು ದಾಖಲಿಸಿದ ಮತ್ತು ಜಾನಪದ ವಸ್ತುಗಳನ್ನು ಸಂಗ್ರಹಿಸಿದವರು. ಶೀಲಾ ಗೌಡ ಅವರ ಕಲಾ ಶಾಲೆ ಆರ್. ಎಮ್. ಹಡಪದ್ ಸ್ಥಾಪಿಸಿದ ಸಣ್ಣ ಕಾಲೇಜಾದ ಬೆಂಗಳೂರಿನ ಕೆನ್ ಸ್ಕೂಲ್ ಆಫ್ ಆರ್ಟ್ನಲ್ಲಿ ಪ್ರಾರಂಭವಾಯಿತು. ಅನಂತರ ಪ್ರೊಫೆಸರ್ ಕೆ. ಜಿ. ಸುಬ್ರಹ್ಮಣ್ಯಂ ಅವರ ಅಡಿಯಲ್ಲಿ ಅಧ್ಯಯನ ಮಾಡಲು ಅವರು ಬರೋಡಾಗೆ ತೆರಳಿದರು. []

ಕೃತಿಗಳು

ಬದಲಾಯಿಸಿ

ಭಾರತದಲ್ಲಿ ಬದಲಾಗುತ್ತಿರುವ ರಾಜಕೀಯ ವಿದ್ಯಮಾನಕ್ಕೆ ಪ್ರತಿಕ್ರಿಯೆಯಾಗಿ 1990 ರ ದಶಕದಲ್ಲಿ ಗೌಡ ಅನುಸ್ಥಾಪನೆ ಮತ್ತು ಶಿಲ್ಪಕಲೆಗೆ ಬದಲಾದರು. ಲಂಡನ್ನಲ್ಲಿರುವ ಇನಿವಾದಲ್ಲಿ ಅವರು ತಮ್ಮ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಮಾಡಿದರು ಮತ್ತು 2011 ರಲ್ಲಿ[] ಮತ್ತೆ ಪ್ರದರ್ಶನದಲ್ಲಿ ತೊಡಗಿಕೊಂಡರು. 2014 ರಲ್ಲಿ ಹ್ಯೂಗೊ ಬಾಸ್ ಅವಾರ್ಡ್ಗೆ ಅವರು ಅಂತಿಮ ಸ್ಪರ್ಧಿಯಾಗಿದ್ದರು.[] ಧೂಪದ್ರವ್ಯ ಉದ್ಯಮದ ಕಾರ್ಮಿಕ ಪದ್ಧತಿಗಳು ಮತ್ತು ಅದರ ಮಹಿಳೆಯರ ವರ್ತನೆಗಳ ನಡುವಿನ ನೇರ ಸಂಬಂಧವನ್ನು ಧೂಪದ್ರವ್ಯ ಮತ್ತು ಕುಂಕುಮದಂತಹ ವಸ್ತುಗಳನ್ನು ಬಳಸಿ ಅಪೋಕ್ಯಾಲಿಪ್ಸ್ ಲ್ಯಾಂಡ್ ಸ್ಕೇಪ್ ಗಳನ್ನು ಸೃಷ್ಟಿಸಿದರು.[] ಅವರ ಕೃತಿಗಳು ಸಾಮಾನ್ಯವಾಗಿ ಮಹಿಳೆಯರ ಕೆಲಸದ ಹೊರೆ, ಮಾನಸಿಕ ಅಡೆತಡೆಗಳು ಮತ್ತು ಲೈಂಗಿಕ ಉಲ್ಲಂಘನೆ ಮುಂತಾದವುಗಳಿಂದ ವ್ಯಾಖ್ಯಾನಿಸಲ್ಪಟ್ಟಿರುವ ಮಹಿಳೆಯರ ಸ್ಥಿತಿಯನ್ನು ಚಿತ್ರಿಸುತ್ತವೆ.[]

ಶೀಲಾ ಗೌಡ ಅವರ ಕಲಾಕೃತಿಗಳಲ್ಲಿ ಎದ್ದು ಕಾಣುವುದು ಸಾಮಾಜಿಕ ಕಳಕಳಿ. ಇವರ ಕಲಾಕೃತಿಗಳಲ್ಲಿ ಭಾರತದ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆ, ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ಮೊದಲಾದ ವಿಷಯಗಳು ಅದ್ಭುತವಾಗಿ ಬಿಂಬಿತವಾಗಿವೆ.[] ಕಲಾಕೃತಿಗಳ ರಚನೆಗೆ ಅನುಸರಿಸಿರುವ ಮಾರ್ಗ ಕೂಡ ಬೆರಗು ಹುಟ್ಟಿಸುತ್ತದೆ. ಸಿದ್ಧ ಮಾದರಿಯನ್ನು ಬದಿಗಿಟ್ಟು ಸಾಂಪ್ರದಾಯಿಕವಲ್ಲದ ವಸ್ತುಗಳನ್ನು ಉಪಯೋಗಿಸಿಕೊಂಡು ಕಲಾಕೃತಿಗಳನ್ನು ನಿರ್ಮಿಸುವ ಇವರ ಕೌಶಲ್ಯ ನಿಬ್ಬೆರಗಾಗಿಸುವಂಥದ್ದು. ಬಣ್ಣಗಳ ಬದಲಿಗೆ ಹಸುವಿನ ಸಗಣಿ, ಬೂದಿ, ದಾರ ಹಾಗೂ ಕೂದಲುಗಳನ್ನು ಉಪಯೋಗಿಸಿಕೊಂಡು ಇವರು ಕಲಾಕೃತಿಗಳನ್ನು ರಚಿಸುತ್ತಾರೆ.

ಇವರು ರಚಿಸಿದ ಶಿಲ್ಪಕಲಾಕೃತಿಗಳಲ್ಲಿ ಮುಂಬೈ ನಗರವಾಸಿಗಳ ಸ್ವೇಚ್ಛೆ- ಭೋಗದ ಬದುಕು ಅಡಗಿದೆ. ಭಾರತದಲ್ಲಿ ಢಾಳಾಗಿರುವ ಅಸಮಾನತೆಗೂ ಅವು ಕನ್ನಡಿ. ಅವರ ಖ್ಯಾತ ಕಲಾಕೃತಿ `ಕೊಲ್ಯಾಟರಲ್~ ಬೂದಿಯಿಂದ ತಯಾರಿಸಿದ್ದು. ಇದು ಯುದ್ಧಭೂಮಿಯ ಪರಿಕಲ್ಪನೆಯನ್ನು ಕಟ್ಟಿಕೊಡುತ್ತದೆ. ಬೂದಿಯನ್ನು ಜಾಲರಿ ಮೇಲೆ ಲೇಪಿಸಿ ಇವರು ಅದ್ಭುತ ಕಲಾಕೃತಿಯಾಗಿ ಪರಿವರ್ತಿಸಿದ್ದಾರೆ. ಈ ಕಲಾಕೃತಿ ಯುದ್ಧ ಮುಗಿದ ನಂತರ ಅಲ್ಲಿ ಕಾಣುವ ಮನ ಕಲಕುವ ದೃಶ್ಯವನ್ನು ಸಮರ್ಥವಾಗಿ ಕಟ್ಟಿಕೊಡುತ್ತದೆ.

ಗಮನಾರ್ಹವಾದ ಪ್ರದರ್ಶನಗಳು

ಬದಲಾಯಿಸಿ

ಶೀಲಾ ಗೌಡ ಅವರ ಕೃತಿಗಳನ್ನು ಅನೇಕ ಸೋಲೋ ಪ್ರದರ್ಶನಗಳು ಮತ್ತು ಉತ್ಸವಗಳಲ್ಲಿ ಪ್ರದರ್ಶಿಸಲಾಗಿದೆ: ಉದಾಹರಣೆಗೆ:

  • ವೆಂಕಟಪ್ಪ ಆರ್ಟ್ ಗ್ಯಾಲರಿ, ಬೆಂಗಳೂರು (1987 ಮತ್ತು 1993);
  • ಗ್ಯಾಲರಿ 7, ಮುಂಬೈ (1989);
  • ಗ್ಯಾಲರಿ ಚೆಮೌಲ್ಡ್, ಮುಂಬೈ (1993);
  • ಗ್ಯಾಲರೀಸ್ಕೆ, ಬೆಂಗಳೂರು (2004, 2008, 2011 ಮತ್ತು 2015);
  • ಬೋಸ್ ಪ್ಯಾಸಿಯ ಗ್ಯಾಲರಿ, ನ್ಯೂಯಾರ್ಕ್ (2006);
  • ಮ್ಯೂಸಿಯಂ ಗೌಡಾ, ನೆದರ್ಲೆಂಡ್ಸ್ (2008);
  • ಆಫೀಸ್ ಫಾರ್ ಕಾಂಟೆಂಪರರಿ ಆರ್ಟ್, ಓಸ್ಲೋ (2010);
  • ಇನಿವಾ, ಲಂಡನ್ (2011);
  • ಓಪನ್ ಐ ಪಾಲಿಸಿ, ವ್ಯಾನ್ ಅಬ್ಬೆಮುಸಿಯಂ, ಐಂಡ್ಹೋವನ್, ನೆದರ್ಲೆಂಡ್ಸ್ (2013);
  • ಸೆಂಟರ್ ಇಂಟರ್ನ್ಯಾಷನಲ್ ಡಿ ಆರ್ಟ್ ಮತ್ತು ಡು ಪಾಸೇಜ್ (2014);
  • ಐರಿಷ್ ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್, ಡಬ್ಲಿನ್ (2014);
  • ಡಾಕ್ಯುಮೆಂಟ 12 (2007);
  • ವೆನಿಸ್ ಬಿಯೆನ್ನೆಲ್ (2009);
  • ನಿಬಂಧನೆಗಳು, ಶಾರ್ಜಾ ದ್ವೈವಾರ್ಷಿಕ (2009);
  • ಕಲಿಕೆಯ ಉದ್ಯಾನ, ಬುಸನ್ ದ್ವೈವಾರ್ಷಿಕ (2012).

ಗಮನಾರ್ಹವಾದ ಗುಂಪು ಪ್ರದರ್ಶನಗಳು:

ಬದಲಾಯಿಸಿ
  • How Latitudes Become Form, Walker Art Center, Minneapolis (2003);
  • Indian Highway, Serpentine Gallery, London (2008);
  • Devi Art Foundation, New Delhi (2009);
  • Paris-Delhi-Bombay, Centre Pompidou, Paris (2011);
  • MAXXI - National Museum of the 21st Century Arts, Rome (2011);
  • Ullens Center for Contemporary Art, Beijing (2012);
  • Arken Museum, Copenhagen (2012);
  • Kiran Nadar Museum of Art, New Delhi (2013);
  • Museum Abteiberg, Monchengladbach (2014);
  • Para Site, Hong Kong (2015).

ಪ್ರಮುಖ ಸಂಗ್ರಹಗಳು

ಬದಲಾಯಿಸಿ
  • Walker Art Centre, Minneapolis, USA []
  • Solomon R. Guggenheim Museum, USA[೧೦]

ಉಲ್ಲೇಖಗಳು

ಬದಲಾಯಿಸಿ
  1. Gowda studied painting at Ken School of Art, Bangalore, India (1979) pursued a postgraduate diploma at Visva-Bharati University, Santiniketan, India (1982), and a MA in painting from the Royal College of Art, London, UK (1986)
  2. "Sheela Gowda". http://www.guggenheim.org/guggenheim-foundation/collaborations/map/sseasia/artist/sheela-gowda. Guggenheim Museum. {{cite web}}: |access-date= requires |url= (help); External link in |website= (help); Missing or empty |url= (help)
  3. ೩.೦ ೩.೧ Dalmia, Yashodhara. Indian Contemporary Art Post Independence. Vadehra Art Gallery, New Delhi.
  4. Rastogi & Karode, Akansha & Roobina (2013). Seven Contemporaries. New Delhi: Kiran Nadar Museum of Art. pp. 154–167. ISBN 978-81-928037-2-2.
  5. "Artist of the Week: Sheela Gowda". https://www.theguardian.com/artanddesign/2011/jan/26/artist-of-week-sheela-gowda. The Guardian. {{cite web}}: External link in |website= (help); Missing or empty |url= (help)
  6. "Sheela Gowda". www.guggenheim.org (in ಅಮೆರಿಕನ್ ಇಂಗ್ಲಿಷ್). Retrieved 2017-10-19. {{cite web}}: Cite has empty unknown parameter: |dead-url= (help)
  7. Sherwyn, Skye. "Artist of the Week: Sheela Gowda". The Guardian. The Guardian.
  8. http://www.prajavani.net/news/article/2012/02/03/116619.html[ಶಾಶ್ವತವಾಗಿ ಮಡಿದ ಕೊಂಡಿ]
  9. "And Tell Him of My Pain". walkerart.org (in ಅಮೆರಿಕನ್ ಇಂಗ್ಲಿಷ್). Retrieved 2017-10-19.
  10. "Loss". Guggenheim (in ಅಮೆರಿಕನ್ ಇಂಗ್ಲಿಷ್). 2008-01-01. Retrieved 2017-10-19.