ಶೀಘ್ರಲಿಪಿಯು ಭಾಷೆಯನ್ನು ಬರೆಯುವ ಹೆಚ್ಚು ಸಾಮಾನ್ಯ ವಿಧಾನವಾದ ಸಾಮಾನ್ಯ ರೂಢಿಯ ಬರವಣಿಗೆಗೆ ಹೋಲಿಸಿದರೆ ಬರವಣಿಗೆಯ ವೇಗ ಮತ್ತು ಸಂಕ್ಷಿಪ್ತತೆಯನ್ನು ಹೆಚ್ಚಿಸುವ ಸಂಕ್ಷೇಪಿತ ಸಂಕೇತಗಳನ್ನು ಬಳಸುವ ಬರವಣಿಗೆ ವಿಧಾನವಾಗಿದೆ. ಸಂಕೋಚನ ಅಥವಾ ಬರವಣಿಗೆ ವೇಗ ಹೆಚ್ಚಿಸುವುದು ಇದನ್ನು ಬಳಸುವ ಗುರಿಯಾಗಿರಬಹುದು.

ಗ್ರೆಗ್ ಮತ್ತು ನಾನಾಬಗೆಯ ೧೯ನೇ ಶತಮಾನದ ಶೀಘ್ರಲಿಪಿ ಪದ್ಧತಿಗಳಲ್ಲಿ ಲಾರ್ಡ್ಸ್ ಪ್ರೇಯರ್

ಶೀಘ್ರಲಿಪಿಯ ಅನೇಕ ರೂಪಗಳು ಅಸ್ತಿತ್ವದಲ್ಲಿವೆ. ಒಂದು ಸಾಮಾನ್ಯ ಶೀಘ್ರಲಿಪಿ ಪದ್ಧತಿಯು ಶಬ್ದಗಳು ಮತ್ತು ಸಾಮಾನ್ಯ ಪದಸಮುಚ್ಚಯಗಳಿಗೆ ಸಂಕೇತಗಳು ಅಥವಾ ಸಂಕ್ಷಿಪ್ತ ಪದಗಳನ್ನು ಒದಗಿಸುತ್ತದೆ. ಇದು ಈ ಪದ್ಧತಿಯಲ್ಲಿ ಒಳ್ಳೆ ತರಬೇತಿ ಪಡೆದವರಿಗೆ ಜನರು ಮಾತಾನಾಡುವಷ್ಟು ಕ್ಷಿಪ್ರವಾಗಿ ಬರೆಯಲು ಅವಕಾಶ ನೀಡುತ್ತದೆ. ಸಂಕ್ಷೇಪಣ ವಿಧಾನಗಳು ವರ್ಣಮಾಲೆ ಆಧಾರಿತವಾಗಿದ್ದು ವಿಭಿನ್ನ ಸಂಕ್ಷೇಪಣ ವಿಧಾನಗಳನ್ನು ಬಳಸುತ್ತವೆ. ಪತ್ರಿಕಾಗೊಷ್ಠಿಗಳು ಅಥವಾ ಇತರ ಹೋಲುವ ಸನ್ನಿವೇಶಗಳಲ್ಲಿ ಟಿಪ್ಪಣಿಗಳನ್ನು ಶೀಘ್ರವಾಗಿ ಬರೆದುಕೊಳ್ಳಲು ಅನೇಕ ಪತ್ರಕರ್ತರು ಶೀಘ್ರಲಿಪಿಯನ್ನು ಬಳಸುತ್ತಾರೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ