ಶಿವಾಜಿ ನಗರ, ಬೆಂಗಳೂರು

ಶಿವಾಜಿ ನಗರ ಬೆಂಗಳೂರಿನ ಉತ್ತರ ಪೂರ್ವ ದಿಕ್ಕಿನಲ್ಲಿರುವ ಬಸ್-ನಿಲ್ದಾಣಕ್ಕೆ(BMTC)ಸಮೀಪವಾಗಿದೆ. ಒಳ್ಳೆಯ ವ್ಯಾಪಾರ ಸ್ಥಳ. 'ಮಹಾತ್ಮಾ ಗಾಂಧಿ ರಸ್ತೆ'ಗೆ ಹತ್ತಿರ. 'ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ'ಕ್ಕೂ ಸಹಿತ. ಶಿವಾಜಿನಗರದ ಹತ್ತಿರ ಹಲವಾರು 'ಸರ್ಕಾರಿ ಆಫೀಸ್' ಗಳಿವೆ. ಶಿವಾಜಿನಗರಕ್ಕೆ ಕೆಲವು ಹಿರಿಯರು, 'ಲಷ್ಕರ್' (ದಂಡು) ಎಂದು, ಕರೆಯುತ್ತಾರೆ. ಈ ಪ್ರದೇಶವನ್ನು "ಬೈದವಾಡಿ".[೧] ಎಂದು ಕರೆಯುತ್ತಿದ್ದರು. ಶಿವಾಜಿನಗರದಲ್ಲಿ, ಮೊಘಲರ ಕಾಲದ, ಸುಮಾರು ೩೦೦ ವರ್ಷಗಳಷ್ಟು ಪುರಾತನ ಮಸೀದಿಗಳಿವೆ. ಉದಾಹರಣೆಗೆ,'ಲಾಲ್ ಮಸ್ಜಿದ್', 'ಮಸ್ಜಿದ್-ಎ-ಬೇದ್', 'ಮಸ್ಜಿದ್-ಎ-ಲಬ್ಬೀನ್' ಗಳು, 'ಕಮರ್ಶಿಯಲ್ ರಸ್ತೆ'ಗೆ ತಗುಲಿದಂತೆ ಇವೆ. 'ಹಝರತ್ ಶ ಸುಲ್ತಾನ್ ಗುಂಬಜ್', ಬಸ್ ನಿಲ್ದಾಣದ ಹಿಂದೆ, 'ತಾಬ್ಲಿಗ್ ಕಾರ್ಯ ಚಟುವಟಿಕೆಗಳ ಕೇಂದ್ರ'ವಾಗಿದೆ.

ಶಿವಾಜಿ ನಗರ,ಬೆಂಗಳೂರು
ಉಪನಗರ
ಕಮರ್ಶಿಯಲ್ ಸ್ಟ್ರೀಟ್‍ನ ರಾತ್ರಿಯ ದೃಶ್ಯ.
ಕಮರ್ಶಿಯಲ್ ಸ್ಟ್ರೀಟ್‍ನ ರಾತ್ರಿಯ ದೃಶ್ಯ.
ದೇಶಭಾರತ
ರಾಜ್ಯಕರ್ನಾಟಕ
ಮಹಾನಗರಬೆಂಗಲೂರು
Government
 • BodyBBMP
ಭಾಷೆಗಳು
 • ಅಧಿಕೃತಕನ್ನಡ
 • SpokenKannada, Tamil, Urdu, English, Telugu, Marathi
Time zoneUTC+5:30 (IST)
Postal Index Number
560051
Lok Sabha ConstituencyBangalore Central
Vidhan Sabha ConstituencyShivajinagar
Original Planning AgencyBangalore Civil & Military Station Municipality

'ತಾಬ್ಲಿಗ್'ಚಟುವಟಿಕೆಗಳು ಬದಲಾಯಿಸಿ

'ತಾಬ್ಲಿಗ್' ನಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಅನುಸಾರವಾಗಿ ರಾಜ್ಯದಲ್ಲಿ ಆಗುಹೋಗುಗಳು, ಆಗುತ್ತವೆ. ಶಿವಾಜಿನಗರದಲ್ಲಿ ಒಂದು ಅತ್ಯುತ್ತಮ ಮಾರ್ಕೆಟ್ ಇದೆ. ಅದೇ ರಸಲ್ ಮಾರ್ಕೆಟ್.ಇದನ್ನು ೧೯೨೭ ಕಂಟೋನ್ಮೆಂಟ್ ನ ಬ್ರಿಟಿಷ್ ಸೈನಿಕರಿಗೆ ಬೇಕಾದ ವಸ್ತುಗಳನ್ನು ಸರಬರಾಜುಮಾಡುವ ದಿಶೆಯಿಂದ ಸ್ಥಾಪಿಸಲಾಗಿತ್ತು. ಈಗಲೂ ಅದು ಚಾಲ್ತಿಯಲ್ಲಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಮುಸಲ್ಮಾನರು ಇರುವ ಸ್ಥಳವಾಗಿದೆ. 'ಪಾಶ್ ಶಾಪಿಂಗ್' ಸ್ಥಳ. ಹಲವಾರು ರೆಸ್ಟಾರೆಂಟ್ ಗಳಲ್ಲಿ ಕಬಾಬ್ ಒಂದು ಪ್ರಮುಖ ವ್ಯಂಜನವಾಗಿದೆ.

ಸೇಂಟ್ ಮೇರಿಯಮ್ಮನವರ ಜಾತ್ರೆ ಬದಲಾಯಿಸಿ

ಶಿವಾಜಿನಗರದಲ್ಲಿ ಅತಿ ಹಳೆಯ ಹಾಗೂ ಸುಪ್ರಸಿದ್ಧ, 'ಸೇಂಟ್ ಮೇರಿಯವರ ಬೆಸಿಲಿಕ' ಇದೆ. ಶಿವಾಜಿನಗರದಲ್ಲಿ ಪ್ರತಿವರ್ಷವೂ 'ಸೇಂಟ್ ಮೇರಿಯವರ ವಾರ್ಷಿಕ ಮೇಲ, ಸೆಪ್ಟೆಂಬರ್, ೮ ರಿಂದ ೯ ದಿನ, ಜರುಗುವುದು. ಸೆಪ್ಟೆಂಬರ್ ೮ ರಂದು ಮುಗಿಯುತ್ತದೆ. ಮೇರಿಯವರ ವಿಗ್ರಹದ, ರಥೋತ್ಸವದೊಂದಿಗೆ, ಅದು ಮುಕ್ತಾಯವಾಗುತ್ತದೆ. ಸಾವಿರಾರು 'ಕ್ರೈಸ್ತ ಮತಾವಲಂಬಿಗಳು' ಕಾವಿಬಣ್ಣದ ಉಡುಪನ್ನು ಧರಿಸಿ, ಉತ್ಸವದಲ್ಲಿ ಭಾಗವಹಿಸಿ, 'ಮೇರಿಯಮ್ಮನವರ,ದರ್ಶನ' ಪಡೆಯುತ್ತಾರೆ.

  1. https://www.prajavani.net/stories/stateregional/aero-india-2019-616168.html