ಶಿವಾಜಿರಾವ್ ಜಾಧವ್
ತಮ್ಮ ವಿಶಿಷ್ಠವಾದ ಹಾವಭಾವಗಳ ಜೊತೆಗೆ ಅಸ್ಖಲಿತ ಆಡುಭಾಷೆಯನ್ನು ತಮಗಾಗಿ ದುಡಿಸಿಕೊಂಡಕಾರಣಕ್ಕಾಗಿ,'ಕನ್ನಡ ಕಿರುತೆರೆ'ಯ ಅತ್ಯಂತ ಜನಪ್ರಿಯ ನಟರಲ್ಲೊಬ್ಬರಾದ,ಶಿವಾಜಿ ರಾವ್ ಜಾಧವ್ ಸುದ್ದಿಯಲ್ಲಿದ್ದಾರೆ. ಆದರೆ ಅಭಿನಯದಲ್ಲಿ ಅತ್ಯಂತ ಆಸಕ್ತಿ ಬಂದಿದ್ದು ನಿರಂತರವಾಗಿ ಮಾಸ್ಟರ್ ಹಿರಣ್ಣಯ್ಯನವರ ನಾಟಕಗಳನ್ನು ವೀಕ್ಷಿಸಿದ್ದರಿಂದ. ಮನೆಗೆ ಬಂದಮೇಲೂ ಆ ಪಾತ್ರಗಳ ಮಾತುಕತೆಗಳನ್ನು ನೆನೆಸಿಕೊಂಡು ಅಭಿನಯಿಸುವ ಪರಿಪಾಠವಿಟ್ಟುಕೊಂಡಿದ್ದರು. ಬೀದಿನಾಟಕಗಳು, ಅವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿದವು. 'ಮಂಥನದ ಶಿವಶಂಕರ ರೆಡ್ಡಿ', 'ಅನಾವರಣದ ಆರೋಗ್ಯ ಸಚಿವ','ಚಿ.ಸೌ.ಸಾವಿತ್ರಿಯ ನಾಣಿ' ಅವರ ಕಿರುತೆರೆಯ ಮರೆಯಲಾರದ ಪಾತ್ರಗಳು.
ಜನನ ಹಾಗೂ ಮನೆಯ ವಾತಾವರಣ
ಬದಲಾಯಿಸಿಶಿವಾಜಿ ರಾವ್ ಜಾಧವ್, ಹುಟ್ಟಿಬೆಳೆದದ್ದು ಮೈಸೂರಿನಲ್ಲಿ ; ಮನೆಯ ಕಸುಬು 'ಬೇಕ್ರಿ ಉದ್ಯಮ'. ಇದನ್ನು ಸನ್ ೧೯೫೩ ರಲ್ಲಿ ರವರ ಅಜ್ಜ ಶುರುಮಾಡಿದ್ದರು. ನಿರ್ಮಲಾ ಬೇಕರಿಯ ಒಡೆಯ ತಂದೆಯವರ ಹೆಸರು, ಗಣೇಶ ರಾವ್, ತಾಯಿ, ಸರಸ್ವತಿ ಬಾಯಿ. ಗಣೇಶ ರಾವ್ ರವರು, ೧೯೭೦ ರಲ್ಲಿ 'ಮೈಸೂರು ನಗರಸಭೆಗೆ ಉಪಾಧ್ಯಕ್ಷ'ರಾಗಿದ್ದರು. 'ಶಿವಾಜಿರಾವ್ ಜಾಧವ್', 'ಬಿ.ಎ.ಪದವಿ'ಯನ್ನು ಗಳಿಸಿದ ಬಳಿಕ 'ನಾಟಕದ ಡಿಪ್ಲೊಮ'ಮಾಡಿಕೊಂಡಿದ್ದಾರೆ. ಅವರ ದೊಡ್ಡ ಕುಟುಂಬದಲ್ಲಿ ಅತ್ತೆ ಮಾವನವರೂ ಇದ್ದಾರೆ. ೧೯೮೦ ರ ದಶಕದಲ್ಲಿ ಮೈಸುರಿನ ನಾಟಕ ತಂಡಗಳಲ್ಲಿ ತೀವ್ರವಾಗಿ ಆಸಕ್ತಿವಹಿಸಿದ್ದರು. ಆಗ ಹೆಚ್ಚು ಚಾಲನೆಯಲ್ಲಿದ್ದ ದೇವನೂರು ಮಹಾದೇವರ ಕುಸುಮಬಾಲ, ದ್ಯಾವನೂರು, ಒಡಲಾಳ ನಾಟಕ ಗಳಲ್ಲಿ ಅಭಿನಯಿಸಿದ್ದರು. ಆಡುಭಾಷೆಯ ಚೌಕಟ್ಟಿನಲ್ಲಿ ಹೆಣೆದ ಆ ನಾಟಕಗಳ ಜೀವಂತ ಪಾತ್ರಗಳು ಅವರಿಗೆ ಭಾಷೆಯ ಮೇಲೆ ಹಿಡಿತವನ್ನು ಎಡೆಮಾಡಿಕೊಟ್ಟವು.
ಧಾರಾವಾಹಿಗಳ ಶೂಟಿಂಗ್ ಬೆಂಗಳೂರಿನಲ್ಲಿ
ಬದಲಾಯಿಸಿ'ಶಿವಾಜಿರಾವ್' ರವರಿಗೆ, ತಮ್ಮ ದೊಡ್ಡ ಪರಿವಾರದಿಂದಾಗಿ ಮೈಸೂರು ಬಿಟ್ಟುಬರಲು ಸಾಧ್ಯವಾಗಿಲ್ಲ. ಕೆಲವು ಸಮಯ, ಅಥವಾ ಒಂದು ವಾರದ ಅಥವ ಹೆಚ್ಚಿನ ಸಮಯದ ಶೂಟಿಂಗ್ ಇದ್ದಾಗ ಬೆಂಗಳೂರಿನ ಅವರ ಭಾವಮೈದುನರ ಮನೆಯಲ್ಲಿ ಉಳಿದುಕೊಳ್ಳುವ ಏರ್ಪಡುಮಾಡಿಕೊಂಡಿದ್ದಾರೆ.
ಮೈಸೂರಿನಿಂದ ಬೆಂಗಳೂರಿಗೆ
ಬದಲಾಯಿಸಿಮೈಸೂರಿನಿಂದ ಬೆಂಗಳೂರಿಗೆ ತಮ್ಮ ವೃತ್ತಿಗಾಗಿಯೇ ಬಂದು ಹೋಗುವ ಕಲಾವಿದರ ಪಟ್ಟಿಯಲ್ಲಿ 'ಶಿವಾಜಿ ರಾವ್ ಜಾಧವ್' ರೂ ಒಬ್ಬರು. ನಸುಬೆಳಕಿನಲ್ಲೇ ಮೂರು ಮುಕ್ಕಾಲಿಗೇ ಎದ್ದು ನಾಲ್ಕೂವರೆ ಬಸ್ಸಿನಲ್ಲಿ ಕುಳಿತು ಪ್ರಯಾಣಿಸುತ್ತಾರೆ. ಹೀಗೆ ಕೆಲಸಕ್ಕಾಗಿಯೇ ಬಂದು ವಾಪಸ್ಸಾಗುವ ಮಂಡ್ಯ ರಮೇಶ್,ಪ್ರಕಾಶ್ ಶೆಣೈ ಮುಂತಾದ ಕಲಾವಿದರ ಹೆಸರಿನ ದೊಡ್ಡ ಪಟ್ಟಿಯಿದೆ. ನಾಟಕದ ಪ್ರಭಾವದಿಂದಾಗಿ ದಲ್ಲಿ ಗಳಿಸಿದ ಭಾಷಾ ಪ್ರಭುತ್ವ, ಒಂದು ಹೊಸತನವನ್ನು ತರಲು ಸಹಾಯವಾಯಿತು. ಸಿನಿಮಾಗಳಲ್ಲಿ ಸಿಗದ ಜನಪ್ರಿಯತೆ ಅವರಿಗೆ ದೊರೆತಿದೆಯೆಂಬ ಭಾವನೆ ಅವರದು. ಇನ್ನೂ ಕೆಲವು ಧಾರಾವಾಹಿಗಳಲ್ಲೂ ಹಾಗೂ ಸಿನಿಮಾಗಳಲ್ಲೂ ಕರೆಬರುತ್ತಿದ್ದರೂ ಸದ್ಯಕ್ಕೆ ಯಾವುದನ್ನೂ ತಲೆಗೆ ಹಚ್ಚಿಕೊಂಡಿಲ್ಲ. 'ಸಾವಿತ್ರಿ ಧಾರವಾಹಿ'ಯಲ್ಲಿ 'ನಾಣಿಯ ಪಾತ್ರ'ದಲ್ಲಿ ಅವರು ಹೆಚ್ಚು ವ್ಯಸ್ತರಾಗಿದ್ದಾರೆ.
ನಾಟಕ ಮತ್ತು ಕಿರುತೆರೆಯ ಬಗ್ಗೆ
ಬದಲಾಯಿಸಿನಾಟಕಕ್ಕೆ ಹೋಲಿಸಿದರೆ, ಧಾರಾವಾಹಿಯಲ್ಲಿ ಅಭಿನಯದಲ್ಲಿ ಕೆಲವು ಸ್ವಾತಂತ್ರ್ಯಗಳಿಲ್ಲ. ಉದಾಹರಣೆಗೆ, 'ಚಾನೆಲ್ ಮಾಲೀಕ'ರ ಅನಿಸಿಕೆಗಳಿಗೆ ನಿರ್ದೇಶಕರು, ಮತ್ತು ಅವರ ಹಿಡಿತದಲ್ಲಿರುವ ನಟ-ನಟಿಯರು, ತಾಳಹಾಕಬೇಕಾದ ಪ್ರಸಂಗಗಳೇ ಹೆಚ್ಚು. ಕೆಲವು ವೇಳೆ ನಿರ್ದೇಶಕ ಅಥವಾ ಮಾಲೀಕನಿಗೆ ಸರಿತೋರದಿದ್ದರೆ, ಸಂಪೂರ್ಣವಾಗಿ ಎಲ್ಲವನ್ನೂ ಅಳಿಸಿ ಮತ್ತೆ ನಿರ್ಮಾಣಮಾಡುವ ಸಾಧ್ಯತೆಗಳೂ ಇವೆ. ಆದರೆ ಒಮ್ಮೆ ರಂಗಮಂಚದ ಮೇಲೆ ನಟ/ನಟಿಯರು ಪ್ರವೇಶಿಸಿದರೆ, ನಟನೆ ಮತ್ತು ಮಾತಿನ ಧಾಟಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲು ಅವರು ಸ್ವತಂತ್ರರು. ಸಭಿಕರಿಂದ ಯಾವ ತಕರಾರೂ ಬರದಿದ್ದರಾಯಿತು. ಇವು 'ಶಿವಾಜಿ ಜಾಧವ್' ರವರ ವೈಯಕ್ತಿಕ ಅನಿಸಿಕೆಗಳು.
ಹೊರ ಸಂಪರ್ಕ ಕೊಂಡಿ :
- [[೧]]