ಶಿವಾಜಿ ಗಣೇಶನ್

(ಶಿವಾಜಿಗಣೇಶನ್ ಇಂದ ಪುನರ್ನಿರ್ದೇಶಿತ)

ದಕ್ಷಿಣ ಭಾರತದ ನಟರಲ್ಲೊಬ್ಬರಾದ ಶಿವಾಜಿಗಣೇಶನ್ರವರು, 'ವಿಳುಪ್ಪುರಂ ಚಿನ್ನಯ್ಯ ಪಿಳ್ಳೈ ಗಣೇಶನ್' ಎಂಬ ಬಾಲ್ಯದ ಹೆಸರಿನ ವ್ಯಕ್ತಿ. ಶಿವಾಜಿಗಣೇಶನ್, ತಮ್ಮ ೭ ನೇ ವಯಸ್ಸಿನಲ್ಲೇ ಮನೆಬಿಟ್ಟು 'ಮಧುರೈನ ಬಾಲಗಂಗ ಸಭಾ ನಾಟಕ ಮಂಡಳಿ ' ಗೆ ಸೇರಿದರು. ಅಭಿನಯದ ಜೊತೆಗೆ ಭರತನಾಟ್ಯ, ಕಥಕ್, ಮಣಿಪುರಿ,ನೃತ್ಯಗಳನ್ನು ಕಲಿತರು. ಪರಾಶಕ್ತಿ ,ಎಂಬ ಅವರ ಪ್ರಥಮ ಚಿತ್ರದಲ್ಲಿ ಮಾಡಿದ ಅಭಿನಯ ಅವರ ೨೦ ನೆಯ ವಯಸ್ಸಿನಲ್ಲಿಯೇ ಆಯಿತು. 'ಛತ್ರಪತಿ ಶಿವಾಜಿ' ಚಿತ್ರದಿಂದ ಅವರ ಹೆಸರು ಹೆಸರು ಶಿವಾಜಿಗಣೇಶನ್ ಎಂದು ಹೆಸರಾಯಿತು. ಅವರ 'ಶಿವಾಜಿಯ ಪಾತ್ರ' ಅವರ ರಸಿಕವೃಂದವನ್ನು ತಣಿಸಿತ್ತು. ಸುಮಾರು ೩೦೦ ಸಿನಿಮಾಕ್ಕೂ ಮೀರಿ ಅಭಿನಯಿಸಿದ ಶಿವಾಜಿ ಗಣೇಶನ್, ಮೂಲತಃ ತಮಿಳು ನಟ. ತೆಲುಗು, ಕನ್ನಡ, ಹಿಂದಿ ಚಿತ್ರಗಳಲ್ಲೂ ಅಭಿನಯಿಸಿದಾರೆ. ಕನ್ನಡದಲ್ಲಿ ತಯಾರಾದ ಬಿ. ಆರ್. ಪಂತಲುರವರ, 'ಸ್ಕೂಲ್ ಮಾಸ್ಟರ್ 'ಚಿತ್ರದಲ್ಲಿ ಅವರ ಅಭಿನಯ ಮನೋಜ್ಞವಾಗಿತ್ತು.

Chevalier
"Sivaji Ganesan"
ವಿಲ್ಲುಪುರಂ ಚಿನ್ನಯ್ಯ ಗಣೇಸನ್
சிவாஜி கணேசன்
Sivaji Ganesan 1.jpg
ಜನನ
ವಿಲ್ಲುಪುರಂ ಚಿನ್ನಯ್ಯ ಗಣೇಸನ್

(೧೯೨೮-೧೦-೦೧)೧ ಅಕ್ಟೋಬರ್ ೧೯೨೮
ಸಿರ್ಕಾಲಿ ಸೀರ್ಕಾಳಿ, ಭಾರತ, ತಂಜಾವೂರು ಜಿಲ್ಲೆ (ಮದ್ರಾಸ್ ಪ್ರೆಸಿಡೆನ್ಸಿ) (ಈಗ ತಮಿಳುನಾಡು)
ಮರಣ21 July 2001(2001-07-21) (aged 72)
ಚೆನ್ನೈ, ತಮಿಳುನಾಡು, ಭಾರತ
ಇತರೆ ಹೆಸರುಗಳುನಡಿಗರ್ ತಿಲಕಮ್[೧]
ಸಕ್ರಿಯ ವರ್ಷಗಳು1952–1999
ಜೀವನ ಸಂಗಾತಿಕಮಲಾ ಗಣೇಶನ್
ಮಕ್ಕಳುರಾಮ್ಕುಮಾರ್ ಗಣೇಶನ್
ಪ್ರಭು ಗಣೇಶನ್
ಪ್ರಶಸ್ತಿಗಳು
  • ಪದ್ಮ ಶ್ರೀ (1966)
  • ಪದ್ಮಭೂಷಣ (1984)
  • ಶಿವಾಲಿಯರ್ (1995)
  • ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (1996)
  • ಕಲೈಮಾಮಣಿ (1997)
  • ಎನ್ಟಿಆರ್ ರಾಷ್ಟ್ರೀಯ ಪ್ರಶಸ್ತಿ (1998)

ಪ್ರಶಸ್ತಿಗಳುಸಂಪಾದಿಸಿ

  • ಪದ್ಮಶ್ರೀ
  • ಪದ್ಮಭೂಷಣ
  • ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಉಲ್ಲೇಖಗಳುಸಂಪಾದಿಸಿ

  1. S. Muthiah (1987). Madras discovered: a historical guide to looking around, supplemented with tales of "Once upon a city". Affiliated East-West Press. p. 269. Retrieved 12 July 2012.