"ಭತ್ತದ ಕಣಜ" ಎಂದೇ ಪ್ರಸಿದ್ಧವಾಗಿರುವ ಸಿರುಗುಪ್ಪವು ಗಡಿನಾಡು ಬಳ್ಳಾರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ತೆಕ್ಕಲಕೋಟೆ

ಶಿರಗುಪ್ಪ
ಸಿರುಗುಪ್ಪ
ಪಟ್ಟಣ
Government
 • ಶಾಸಕಎಂ ಎಸ್ ಸೋಮಲಿಂಗಪ್ಪ
Population
 (2001)
 • Total
೪೨,೮೬೨

ವ್ಯುತ್ಪತ್ತಿ

ಬದಲಾಯಿಸಿ

"ಸಿರುಗುಪ್ಪ" ಎಂಬ ಹೆಸರು ಕನ್ನಡದ ಸಿರಿ ಮತ್ತು ಕುಪ್ಪೆ ಪದಗಳಿಂದ ಜಾತವಾಗಿದೆ.

ಸಿರಿ + ಕುಪ್ಪೆ --> ಸಿರಿಗುಪ್ಪೆ --> ಸಿರಿಗುಪ್ಪ --> ಸಿರುಗುಪ್ಪ

ವಿಜಯನಗರ ಅರಸರ ಕಾಲದಲ್ಲಿ ಐಶ್ವರ್ಯ-ಸಂಪತ್ತಿಗೆ ಹೆಸರುವಾಸಿಯಾಗಿದ್ದರಿಂದ ಈ ಹೆಸರು ಅನ್ವರ್ಥವಾಗಿ ಒದಗಿ ಬಂದಿದೆ ಎಂದು ನಂಬಲಾಗಿದೆ.

ಸಿರುಗುಪ್ಪದ ಸಮುದ್ರ ಮಟ್ಟಕ್ಕಿಂತ ಮೇಲಿರುವ ಸರಾಸರಿ ಎತ್ತರ ಸುಮಾರು ೩೭೩ ಮೀಟರ್ ಆಗಿದೆ. ಇಲ್ಲಿ ತುಂಗಭದ್ರ ನದಿ ಹರಿಯುತ್ತಿದ್ದು ಕೃಷಿಗೆ ಸಹಕಾರಿಯಾಗಿದೆ. ಸಿರುಗುಪ್ಪ ಬಳ್ಳಾರಿ ಜಿಲ್ಲೆಯ 'ಭತ್ತದ ಕಣಜ' ಎಂದು ಹೆಸರುವಾಸಿಯಾಗಿದೆ. ಇಲ್ಲಿನ ಭತ್ತದ ಅಕ್ಕಿ ತನ್ನ ಶುದ್ಧತೆ ಹಾಗೂ ಗುಣಮಟ್ಟಕ್ಕೆ ಪ್ರಸಿದ್ಧವಾಗಿದ್ದು ದೇಶಾದ್ಯಂತ ಸರಬರಾಜಾಗುತ್ತದೆ.ಇದು ಕಲಾವಿದರ ಬೀಡು ಎಂದು ಹೆಸರಾಗಿದೆ.