ಶಿಕ್ಷಾ ಬಚಾವೋ ಆಂದೋಲನ ಸಮಿತಿ

 

ಶಿಕ್ಷಾ ಬಚಾವೋ ಆಂದೋಲನ ಸಮಿತಿ (SBAS) ಭಾರತದಲ್ಲಿ ೨೦೦೦ ರ ದಶಕದ ಆರಂಭದಲ್ಲಿ ಸ್ಥಾಪನೆಯಾಯಿತು. SBAS ಭಾರತ ಮೂಲದ ಸಾಮಾಜಿಕ-ಧಾರ್ಮಿಕ ಸಂಸ್ಥೆಯಾಗಿದೆ. ಇದು ಭಾರತೀಯ ಶಿಕ್ಷಣದ ದೃಷ್ಟಿಯನ್ನ ಬದಲಿಸುವ ಅಭಿಲಾಷೆ ಹೊಂದಿದೆ, ಸಂಸ್ಥೆಯು " ರಾಷ್ಟ್ರ ವಿರೋಧಿ "ಅಥವಾ "ಹಿಂದೂಗಳ ಭಾವನೆಗಳಿಗೆ" ನೋವುಂಟುಮಾಡುವ ವಿಷಯವನ್ನು ಶಿಕ್ಷಣದಿಂದ ತೆಗೆದುಹಾಕುವ ಉದ್ದೇಶ ಹೊಂದಿದೆ[೧]. ಸಮಿತಿ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತದೆ. ಭಾರತೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಇದು ಶಿಕ್ಷಾ ಸಂಸ್ಕೃತಿ ಉತ್ಥಾನ್ ನ್ಯಾಸ್ ಎಂಬ ಸಹೋದರಿ ಸಂಸ್ಥೆಯನ್ನು ಹೊಂದಿದೆ. ಸಂಸ್ಥೆಯು ಭಾರತದಾದ್ಯಂತ ಸಕ್ರಿಯವಾಗಿದ್ದು ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕರೊಂದಿಗೆ ತನ್ನ ಗುರಿಗಳನ್ನು ಮುಟ್ಟಲು ತೊಡಗಿಸಿಕೊಂಡಿದೆ. ಇದು ಪ್ರತಿಭಟನೆಗಳನ್ನು ಆಯೋಜಿಸುತ್ತದೆ, ಮೊಕದ್ದಮೆಗಳನ್ನು ಹೂಡುತ್ತದೆ ಮತ್ತು ತನ್ನ ಉದ್ದೇಶಕ್ಕಾಗಿ ಬೆಂಬಲವನ್ನು ಪಡೆಯಲು ಜಾಗೃತಿ ಅಭಿಯಾನಗಳನ್ನು ನಡೆಸಿದೆ.

ಇತಿಹಾಸ ಬದಲಾಯಿಸಿ

ಸಮಿತಿಯು ದೀನಾನಾಥ್ ಬಾತ್ರಾ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಭಾರತದಲ್ಲಿ ಶಾಲಾ ಪಠ್ಯಪುಸ್ತಕಗಳ ಮೇಲೆ ವ್ಯಚಾರಿಕ ಪ್ರಭಾವ ಬೀರಿದ ಕಾರಣಕ್ಕೆ SBAS ಹೆಸರುವಾಸಿಯಗಿದೆ. ಪಠ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಉತ್ತೇಜಿಸುವ ಅಗತ್ಯತೆಯ ಬಗ್ಗೆ ಸಂಸ್ಥೆಯು ನಿರ್ದಿಷ್ಟವಾಗಿದೆ. ಹಿಂದೂ ಧರ್ಮ ಮತ್ತು ಭಾರತೀಯ ಪರಂಪರೆಯಲ್ಲಿ ಬೇರೂರಿರುವ ಹೆಚ್ಚಿನ ವಿಷಯವನ್ನು ಸೇರಿಸಲು ಅಗಿಂದಾಗ ಪ್ರಯತ್ನಿಸುತ್ತಲೇ ಇರುತ್ತದೆ.

SBAS ತನ್ನ ಕಾರ್ಯಸಾಧನೆಗೆ ನ್ಯಾಯಾಂಗಕ್ಕೆ ಮೊರೆ ಹೋಗುವುದು, ಅಭಿಯಾನಗಳನ್ನು ಮಾಡುವುದು ಮತ್ತು ಶೈಕ್ಷಣಿಕ ನೀತಿ ಮತ್ತು ಪಠ್ಯಕ್ರಮದ ವಿಷಯದ ಮೇಲೆ ಪ್ರಭಾವ ಬೀರಲು ಕಾನೂನಿನ  ಮಧ್ಯಸ್ಥಿಕೆಗಳ ತರುವುದರ ಮೂಲಕ ಕೆಲಸಮಾಡುತ್ತಿದೆ . ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯ ಸ್ಥಳೀಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳುನ್ನು ಒಳಗೊಳಿಸುವುದು ಇದರ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಇದು ಶಾಲಾ ಪಠ್ಯಪುಸ್ತಕಗಳಲ್ಲಿ ಹಿಂದೂ ಧರ್ಮ ಮತ್ತು ಭಾರತೀಯ ಪರಂಪರೆಗೆ ಸಂಬಂಧಿಸಿದ ವಿಷಯವನ್ನು ಸೇರಿಸಲು ಪ್ರತಿಪಾದಿಸುತ್ತದೆ.

ಸಾಧನೆಗಳು ಬದಲಾಯಿಸಿ

ಪಠ್ಯಪುಸ್ತಕ ಪರಿಷ್ಕರಣೆಗಳು: SBAS ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಶಾಲಾ ಪಠ್ಯಪುಸ್ತಕಗಳಿಗೆ ಪರಿಷ್ಕರಣೆಗಳಲ್ಲಿ ಸೇರಿಸಲು ಯಶಸ್ವಿಯಾಗಿದೆ. ಇದು ಹಿಂದೂ ಧರ್ಮ ಮತ್ತು ಭಾರತೀಯ ಪರಂಪರೆಗೆ ಸಂಬಂಧಿಸಿದ ವಸ್ತುಗಳ ಸೇರ್ಪಡೆಯನ್ನು ಉತ್ತೇಜಿಸುತ್ತದೆ.

ಕಾನೂನು ಮಧ್ಯಸ್ಥಿಕೆಗಳು: ಸಂಸ್ಥೆಯು ತನ್ನ ಉದ್ದೇಶಗಳಿಗೆ ವಿರೋಧಾಭಾಸವೆಂದು ಪರಿಗಣಿಸುವ ಶೈಕ್ಷಣಿಕ ಸಾಮಗ್ರಿಗಳು ಮತ್ತು ಅಭ್ಯಾಸಗಳನ್ನು ಪ್ರಶ್ನಿಸಲು ಮೊಕದ್ದಮೆಗಳು ಮತ್ತು ಕಾನೂನು ಅರ್ಜಿಗಳನ್ನು ಸಲ್ಲಿಸಿದೆ. ಈ ಕಾನೂನು ಮಧ್ಯಸ್ಥಿಕೆಗಳು ಕೆಲವೊಮ್ಮೆ ಪಠ್ಯಕ್ರಮದ ವಿಷಯ ಅಥವಾ ಬೋಧನಾ ವಿಧಾನಗಳಲ್ಲಿ ಬದಲಾವಣೆಗಳಿಗೆ ಕಾರಣವಾಗಿವೆ.

ಜಾಗೃತಿ ಅಭಿಯಾನಗಳು: SBAS ತನ್ನ ಧ್ಯೇಯ ಮತ್ತು ಗುರಿಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಜಾಗೃತಿ ಅಭಿಯಾನಗಳನ್ನು ನಡೆಸುತ್ತದೆ. ಈ ಅಭಿಯಾನಗಳು ಸಾಮಾನ್ಯವಾಗಿ ಅದರ ಕಾರಣಕ್ಕಾಗಿ ಬೆಂಬಲವನ್ನು ಗಳಿಸುವ ಗುರಿಯನ್ನು ಹೊಂದಿವೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳೆಂದು ಅದು ಗ್ರಹಿಸುವ ಬಗ್ಗೆ ಜಾಗೃತಿ ಮೂಡಿಸುತ್ತದೆ [೨] [೩] [೪] .

ನೀತಿಯ ಮೇಲೆ ಪ್ರಭಾವ: ತನ್ನ ವಕಾಲತ್ತು ಪ್ರಯತ್ನಗಳನ್ನುಸಾರ್ವಜನಿಕ ಪ್ರಚಾರಗಳ ಮೂಲಕ SBAS ಭಾರತದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸೇರಿದಂತೆ ವಿವಿಧ ಹಂತಗಳಲ್ಲಿ ಶೈಕ್ಷಣಿಕ ನೀತಿಗಳ ಮೇಲೆ ಪ್ರಭಾವ ಬೀರಲು ಯಶಸ್ವಿಯಾಗಿದೆ. ಈ ಪ್ರಭಾವವು ಕೆಲವೊಮ್ಮೆ ಶೈಕ್ಷಣಿಕ ಮಾರ್ಗಸೂಚಿಗಳು ಮತ್ತು ಪಠ್ಯಕ್ರಮದ ಚೌಕಟ್ಟುಗಳಲ್ಲಿ ಬದಲಾವಣೆಗಳಿಗೆ ಕಾರಣವಾಗಿದೆ [೫] .

ಸಾಂಸ್ಕೃತಿಕ ಸಮರ್ಥನೆ: ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯ ಸಾಂಸ್ಕೃತಿಕ ಮೌಲ್ಯವರ್ಧನೆ ಯನ್ನು ಹೆಚ್ಛಿಸುವಲ್ಲಿ SBAS ಮಹತ್ತರ ಪಾತ್ರವನ್ನು ವಹಿಸಿದೆ. ಇದು ಭಾರತೀಯ ಹಬ್ಬಗಳ ಆಚರಣೆ, ಸಾಂಪ್ರದಾಯಿಕ ಕಲೆಗಳು ಮತ್ತು ಕರಕುಶಲ ಗಳನ್ನು ಉತ್ತೇಜಿಸುವುದು ಮತ್ತು ಪಠ್ಯಪುಸ್ತಕಗಳಲ್ಲಿ ಸಾಂಸ್ಕೃತಿಕ ಇತಿಹಾಸವನ್ನು ಸೇರಿಸುವುದನ್ನು ಒಳಗೊಂಡಿರುತ್ತದೆ [೬] .

ವಿವಾದಗಳು ಬದಲಾಯಿಸಿ

SBAS ವರ್ಷಗಳಲ್ಲಿ ಹಲವಾರು ವಿವಾದಗಳಲ್ಲಿ ತೊಡಗಿಸಿಕೊಂಡಿದೆ, ವಿಶೇಷವಾಗಿ ಶೈಕ್ಷಣಿಕ ನೀತಿ ಮತ್ತು ಪಠ್ಯಕ್ರಮದ ವಿಷಯದ ಮೇಲೆ ಅದರ ಪ್ರಭಾವದ ಬಗ್ಗೆ. ಸಂಘಟನೆಯ ಕಾರ್ಯಸೂಚಿಯು ಭಾರತದ ವೈವಿಧ್ಯಮಯ ಸಮಾಜದೊಳಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಅಲ್ಪಸಂಖ್ಯಾತರನ್ನು ಕಡೆಗಣಿಸಬಹುದಾದ ಸಾಂಸ್ಕೃತಿಕ ರಾಷ್ಟ್ರೀಯತೆಯ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ ಎಂದು ವಿಮರ್ಶಕರು ವಾದಿಸುತ್ತಾರೆ. ಮತ್ತೊಂದೆಡೆ, ಬೆಂಬಲಿಗರು SBAS ಅನ್ನು ಸಾಂಪ್ರದಾಯಿಕ ಮೌಲ್ಯಗಳನ್ನು ರಕ್ಷಿಸುತ್ತದೆ ಮತ್ತು ಶಿಕ್ಷಣವು ದೇಶದ ಸಾಂಸ್ಕೃತಿಕ ನೀತಿಯೊಂದಿಗೆ ಹೊಂದಿಕೊಳ್ಳುತ್ತಿದೆ ಎಂದು ವಾದಿಸುತ್ತಾರೆ.

ಉಲ್ಲೇಖಗಳು ಬದಲಾಯಿಸಿ

  1. "What is the Shiksha Bachao Andolan Samiti?".
  2. "Dinanath Batra's moral science and verse will enter Haryana textbooks". 25 September 2015.
  3. "Shiksha Bachao".
  4. "Dinanath Batra forces publisher to 'set aside' book on Ahmedabad riots". 3 June 2014.
  5. "Religion, culture and values". The Hindu. August 2014.
  6. "Religion, culture and values". The Hindu. August 2014.