ಶಿಕಂಜಿ
ಶಿಕಂಜಿ ಪಾಕಿಸ್ತಾನದ ಪಂಜಾಬ್ ಪ್ರದೇಶದಲ್ಲಿ ಮತ್ತು ಭಾರತದ ಉತ್ತರದ ಭಾಗದಲ್ಲಿ ಹುಟ್ಟಿಕೊಂಡ ಸಾಂಪ್ರಾದಾಯಿಕ ಬಗೆಯ ಲೈಮೇಡ್ ಅಥವಾ ನಿಂಬೆ ಪಾನಕ.[೧] ಇದನ್ನು ಲಿಮುನ್ ಪಾನಿ ಅಥವಾ ನಿಂಬು ಪಾನಿ ಎಂದು ಕೂಡ ಕರೆಯಲಾಗುತ್ತದೆ. ಮೂಲ ಘಟಕಾಂಶಗಳಲ್ಲಿ ನಿಂಬೆ ಅಥವಾ ಲಿಂಬ್ಬೆ ರಸ, ಶುಂಠಿ ರಸ, ಐಸ್ ಮತ್ತು ನೀರು ಸೇರಿವೆ. ಇವುಗಳ ಜೊತೆಗೆ ಶಿಕಂಜಿಯು ಹಲವುವೇಳೆ ಉಪ್ಪು, ಕೇಸರಿ ಮತ್ತು ಜೀರಿಗೆಯಂತಹ ಇತರ ಘಟಕಾಂಶಗಳನ್ನು ಹೊಂದಿರುತ್ತದೆ.[೨]
ಮಾಡುವ ವಿಧಾನ
ಬದಲಾಯಿಸಿ- ಬೇಕಾಗುವ ಪದಾರ್ಥಗಳು: ಎರಡು ನಿಂಬೆಹಣ್ಣುಗಳು (ಇವುಗಳನ್ನು ಹಿಂಡಿ ನಿಂಬೆರಸವನ್ನು ತೆಗೆಯಬೇಕು), ಒಂದು ಸಣ್ಣ ಚೂರು ಶುಂಠಿ, ಒಂದು ಅಥವಾ ಎರಡು ಟೀ ಚಮಚ ಸಕ್ಕರೆ (ಸಾಧ್ಯವಾದರೆ ಕಚ್ಚಾ), ಅರ್ಧ ಟೀ ಚಮಚ ಉಪ್ಪು ಮತ್ತು ಅರ್ಧ ಟೀ ಚಮಚ ಮೆಣಸು.
- ಪ್ರಕ್ರಿಯೆ: ಒಂದು ಗ್ಲಾಸಿನಲ್ಲಿ ತಂಪಾದ ಕುಡಿಯುವ ನೀರು ಹಾಕಿ ಅದಕ್ಕೆ ನಿಂಬೆ ರಸ, ಶುಂಠಿ, ಸಕ್ಕರೆ, ಉಪ್ಪು ಮತ್ತು ಮೆಣಸನ್ನು ಸೇರಿಸಬೇಕು. ನಂತರ ಅದನ್ನು ಜೋರಾಗಿ ಕಲಕಬೇಕು. ಇದು ಸಾಂಪ್ರದಾಯಿಕ ಪಾಕವಿಧಾನವಾದರೂ ಜನರು ಪುದೀನಾ ಎಲೆಗಳು, ಗುಲಾಬಿ ಜಲ ಇತ್ಯಾದಿಗಳನ್ನು ಬಳಸಿ ಪ್ರಯೋಗ ಮಾಡಬಹುದು.
ಉಲ್ಲೇಖಗಳು
ಬದಲಾಯಿಸಿ- ↑ Jiggs Kalra, Pushpesh Pant, Classic cooking of Punjab, Allied Publishers, 2004, ISBN 978-81-7764-566-8
- ↑ Julie Sahni, Indian regional classics: fast, fresh, and healthy home cooking, Ten Speed Press, 2001, ISBN 9781580083454,
... Ginger Limeade (Shikanji) ...