ಶಾಕ್‍ಶುಕಾ
ಶಾಕ್‍ಶುಕಾ (ಅರೇಬಿಕ್: شكشوكة) ಮೊಟ್ಟೆಗಳನ್ನು ಟೊಮೇಟೊಗಳು, ಆಲಿವ್ ಎಣ್ಣೆ, ಮೆಣಸು, ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಸಾಸ್‍ನಲ್ಲಿ ಬೇಯಿಸಿ ತಯಾರಿಸಿಲಾಗುವ ಖಾದ್ಯವಾಗಿದೆ. ಸಾಮಾನ್ಯವಾಗಿ ಸಂಬಾರ ಪದಾರ್ಥಗಳಾದ ಜೀರಿಗೆ, ಕೆಂಪು ಮೆಣಸು, ಕಾಯೆನ್ ಮೆಣಸು ಮತ್ತು ಜಾಪತ್ರೆಯನ್ನು ಸೇರಿಸಲಾಗುತ್ತದೆ. ಈ ಖಾದ್ಯವು ಮೆಡಿಟರೇನಿಯನ್ ಸಂಸ್ಕೃತಿಗಳಲ್ಲಿ ಶತಮಾನಗಳಿಂದ ಅಸ್ತಿತ್ವದಲ್ಲಿದೆ.[೧][೨][೩]
ಶಾಕ್‍ಶುಕಾದ ಕೆಲವು ರೂಪಗಳನ್ನು ಕೊಚ್ಚಿದ ಕುರಿಮರಿ ಮಾಂಸ, ಸುಟ್ಟ ಸಂಬಾರ ಪದಾರ್ಥಗಳು, ಮೊಸರು ಮತ್ತು ತಾಜಾ ಮೂಲಿಕೆಗಳಿಂದ ತಯಾರಿಸಬಹುದು.[೪] ಇತರ ರೂಪಗಳು ಫ಼ೆಟಾದಂತಹ ಉಪ್ಪುಪ್ಪಾದ ಗಿಣ್ಣುಗಳನ್ನು ಒಳಗೊಂಡಿರಬಹುದು.[೫] ಸಂಬಾರ ಪದಾರ್ಥಗಳಲ್ಲಿ ಪುಡಿಮಾಡಿದ ಹವೀಜ ಸೇರಿರಬಹುದು.[೬][೭] ಟ್ಯುನೀಷಿಯಾದ ಬಾಣಸಿಗರು ಖಾದ್ಯಕ್ಕೆ ಆಲೂಗಡ್ಡೆ, ಚಪ್ಪಟೆ ಹುರುಳಿಕಾಯಿ, ಆರ್ಟಿಚೋಕ್ ತಿರುಳು ಅಥವಾ ಕಾರ್ಜೆಟ್‌ನ್ನು ಸೇರಿಸಬಹುದು.[೮]
ಉಲ್ಲೇಖಗಳು
ಬದಲಾಯಿಸಿ- ↑ Roden, Claudia (2008). The New Book of Middle Eastern Food. Knopf Doubleday Publishing Group. p. 168. ISBN 9780307558565.
- ↑ Ly, Linda (2015-03-20). The CSA Cookbook: No-Waste Recipes for Cooking Your Way Through a Community Supported Agriculture Box, Farmers' Market, Or Backyard Bounty (in ಇಂಗ್ಲಿಷ್). Voyageur Press. ISBN 9780760347294. Archived from the original on 2017-11-16. Retrieved 2017-11-15.
- ↑ Stafford, Alexandra (2017-04-04). Bread Toast Crumbs: Recipes for No-Knead Loaves & Meals to Savor Every Slice (in ಇಂಗ್ಲಿಷ್). Potter/TenSpeed/Harmony. ISBN 9780553459845. Archived from the original on 2017-11-16. Retrieved 2017-11-15.
- ↑ Gordon, Peter (2018-06-03). "Peter Gordon's lamb shakshouka recipe". The Guardian. ISSN 0261-3077. Retrieved 2018-07-21.
- ↑ Clifford-smith, Stephanie (2011-06-07). "Three of a kind ... shakshouka". Sydney Morning Herald. Archived from the original on 2017-08-08. Retrieved 2017-08-07.
- ↑ "Shakshouka Recipe - Tunisian Recipes". PBS Food. 2015-03-12. Retrieved 2018-07-21.
- ↑ Clark, Melissa. "Shakshuka With Feta Recipe". NYT Cooking. Retrieved 2018-07-21.
- ↑ Claudia Roden (1996). The Book of Jewish Food: An Odyssey from Samarkand to New York. Knopf. p. 512. ISBN 9780394532585.