ಶರಭಂಗನನ್ನು ರಾಮಾಯಣಅರಣ್ಯ ಕಾಂಡದಲ್ಲಿ ಉಲ್ಲೇಖಿಸಲಾಗಿದೆ. ಈತ ಒಬ್ಬ ಋಷಿ ಮತ್ತು ಏಕಾಂತವಾಸಿ. ರಾಮನು ದಂಡಕ ಕಾಡಿನ ಮೂಲಕ ಪ್ರಯಾಣಿಸುವ ಸಮಯದಲ್ಲಿ ಶರಭಂಗನನ್ನು ಭೇಟಿ ಮಾಡುತ್ತಾನೆ. ರಾಮನ ಭೇಟಿಯ ಮೊದಲು, ಇಂದ್ರನು ಋಷಿಯನ್ನು ಬ್ರಹ್ಮಲೋಕದ ನಿವಾಸಕ್ಕೆ ಕರೆದೊಯ್ಯುವ ಸಲುವಾಗಿ ಅವನ ಆಶ್ರಮಕ್ಕೆ ಬಂದಿರುತ್ತಾನೆ. [] ಮರ್ತ್ಯಲೋಕವನ್ನು ತೊರೆಯುವ ಮೊದಲು ರಾಮನನ್ನು ನೋಡಬೇಕೆಂಬುದು ಶರಭಂಗನ ಕೊನೆಯ ಆಸೆಯಾಗಿತ್ತು. ರಾಮನನ್ನು ನೋಡಿದ ನಂತರ ಮತ್ತು ಅಗತ್ಯವಾದ ವಿಧಿಗಳನ್ನು ಮಾಡಿದ ನಂತರ, ಋಷಿಯು ಚಿತೆಗೆ ಹಾರುವ ಮೂಲಕ ಆತ್ಮಾಹುತಿ ಮಾಡಿಕೊಳ್ಳುತ್ತಾನೆ ಮತ್ತು ಯೌವನದ ಲೌಕಿಕ ರೂಪವು ಅಲೌಕಿಕವಾಗಿ ಸ್ವರ್ಗದ ಕಡೆಗೆ ಪಯಣಿಸುತ್ತದೆ. []

ಶರಭಂಗ
ಶರಭಂಗ ಅಗ್ನಿಯಿಂದ ಸ್ವ‍ರ್ಗದ ಕಡೆಗೆ ಪಯಣಿಸುತ್ತಿರುವುದು
ಗ್ರಂಥಗಳುರಾಮಾಯಣ

ಉಲ್ಲೇಖಗಳು

ಬದಲಾಯಿಸಿ
  1. "Paratva of Rama". The Hindu (in Indian English). 2014-10-26. ISSN 0971-751X. Retrieved 2019-10-08.
  2. Keshavadas, Sadguru Sant (1988). Ramayana at a Glance. Motilal Banarsidass. pp. 95–96. ISBN 978-81-208-0545-3.


"https://kn.wikipedia.org/w/index.php?title=ಶರಭಂಗ&oldid=1229570" ಇಂದ ಪಡೆಯಲ್ಪಟ್ಟಿದೆ