ಶನಿಪೂಜೆ ತಾಳಮದ್ದಳೆ
ಶನಿಪೂಜೆ ತಾಳಮದ್ದಳೆ
ವೈದಿಕರು ನಡೆಸುವ ನವಗ್ರಹ ಶಾಂತಿ ಅಥವಾ ಶನಿಶಾಂತಿ ಪೂಜೆಗೆ ಈ ತುಳುನಾಡಿನ ಶನಿಪೂಜೆಯ ರೂಪದಲ್ಲಿ ನಡೆಯುವ ತಾಳಮದ್ದಳೆಗೂ ಏನೂ ಸಂಬಂಧವಿಲ್ಲ. ಇದರಲ್ಲಿ ಶನಿದೇವರ ಛಾಯಾಚಿತ್ರವನ್ನು ಇಟ್ಟುಕೊಂಡು ಸರಳವಾಗಿ ಪೂಜಾ ವಿಧಿಗಳನ್ನು ಮಾಡುವುದು. ಆ ಬಳಿಕ ತಾಳಮದ್ದಲೆ ನಡೆಯುತ್ತದೆ. ಕೊನೆಗೆ, ಮಂಗಳವಾಗಿ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಗಿಯುತ್ತದೆ. ಈ ಕಾರ್ಯಕ್ರಮವನ್ನು ಇಡೀ ಶನಿವಾರದ ರಾತ್ರಿ ನಡೆಸಲಾಗುತ್ತದೆ.
ಶನಿದೇವನ ಪ್ರಭಾವ
ಬದಲಾಯಿಸಿಶನಿದೇವನ ಪ್ರಭಾವ ಬಹುಮಂದಿಗೆ ಪರಿಚಿತವಾಗಿದೆ, ಮತ್ತು ಇದು ಅವರ ಹೆಸರಿನಲ್ಲಿಯೇ ಸ್ಪಷ್ಟವಾಗಿ ಕಾಣಿಸುತ್ತದೆ. ಶನಿವಾರವು ಶನಿದೇವನ ಪೂಜೆ ಹಾಗೂ ಭಕ್ತಿಗೆ ವಿಶೇಷವಾದ ದಿನವಾಗಿದೆ. ಶನಿದೇವನ ಕೋಪ ಮತ್ತು ಅವರಿಂದಾಗುವ ಶಿಕ್ಷೆಗೆ ಹಲವರು ಭಯಪಡುತ್ತಾರೆ, ಏಕೆಂದರೆ ಶನಿದೇವನು ಶೀಘ್ರ ಕೋಪಗೊಳ್ಳುವ ಹಾಗೂ ದಂಡ ವಿಧಿಸುವ ದೇವತೆ ಎಂಬ ನಂಬಿಕೆ ವಿದೆಯ. ಆದರೆ, ಇದು ಸಂಪೂರ್ಣ ಸತ್ಯವಲ್ಲ. ಶನಿದೇವನು ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಾ, ನಿಮ್ಮ ಇಚ್ಛೆಗಳನ್ನು ತೃಪ್ತಿಪಡಿಸುತ್ತಾನೆ, ಆದರೆ ಅದನ್ನು ಅತ್ಯುತ್ತಮ ರೀತಿಯಲ್ಲಿ ನೆರವೇರಿಸುತ್ತಾನೆ. ಶನಿದೇವನನ್ನು ಸಾಮಾನ್ಯವಾಗಿ ದುಃಖ ನೀಡುವ ದೇವತೆ ಎಂದು ಕರೆಯಲಾಗುತ್ತದೆ, ಆದರೆ ವಾಸ್ತವದಲ್ಲಿ, ಶನಿದೇವನು ನ್ಯಾಯದಾತೆ. ತಿದ್ದಿ ಶಿಕ್ಷೆ ಮಾಡುವುದು ಅವರ ಕರ್ತವ್ಯವಲ್ಲದೇ, ಅದು ಅವರ ಧರ್ಮವೂ ಆಗಿದೆ.[೧]
ಶನಿಪೂಜೆ ತಾಳಮದ್ದಳೆಯಲ್ಲಿ ಬರುವ ಪಾತ್ರಗಳು
ಬದಲಾಯಿಸಿ- ವಿಕ್ರಮಾದಿತ್ಯ
- ಮಂತ್ರಿಗಳು
- ಶನಿ
- ಕುದುರೆ ವ್ಯಾಪಾರಿ
- ನಂದಿ ಶ್ರೇಸ್ಟಿ
- ಆಲೋಲಿಕಾ
- ಕಟುಕರು
- ಸುಶೀಲೆ
- ಗಾಣಿಗ
- ಚಂದ್ರಸೇನ
- ಪದ್ಮಾವತೀ
- ಸಖಿಯರು
ತಾಳಮದ್ದಳೆ ಪ್ರಕ್ರಿಯೆಯ ಬದಲಾವಣೆ
ಬದಲಾಯಿಸಿತಾಳಮದ್ದಳೆಯಲ್ಲಿ ಸೀತಾ ನದಿ ಗಣಪಯ್ಯ ಶೆಟ್ಟಿ ಅವರಿಂದ ರಚಿತ ಪ್ರಸಂಗವನ್ನು ಬಳಸಲಾಗುತ್ತಿತ್ತು. ಈ ಪ್ರಸಂಗ ಚಿನ್ಮಯ ದಾಸರ ಕೃತಿಯ ಆಧಾರದ ಮೇಲೆ ರೂಪುಗೊಂಡಿದ್ದರೂ, ಯಕ್ಷಗಾನ ಬಯಲಾಟಕ್ಕೆ ಮತ್ತು ತಾಳಮದ್ದಲೆಗೆ ಸೂಕ್ತವಾಗುವಂತೆ ಇದನ್ನು ರೂಪಿಸಲಾಗಿದೆ. [೨]
ಶನಿಪೂಜೆ ಮತ್ತು ತಾಳಮದ್ದಳೆಯ ವಿಶೇಷತೆಗಳು
ಬದಲಾಯಿಸಿಶನಿಪೂಜೆಯ ವಿಷಯದಲ್ಲಿ ಹೇಳುವುದಾದರೆ, ಇದರ ಪೂಜಾ ವಿಧಾನಗಳು ಶ್ರೀ ಸತ್ಯನಾರಾಯಣ ಕಥಾ ಪೂಜೆಯನ್ನು ಹೋಲುತ್ತದೆ. ಈ ಪ್ರಸಂಗದಲ್ಲಿ ವಿಕ್ರಮಾದಿತ್ಯನ ಕಥೆಯನ್ನು ಅವನಿಗೆ ಶನಿ ಹಿಡಿದಾಗ ಆದ ತೊಂದರೆಗಳೂ, ಶನಿ ದೇವರ ಕೃಪೆಯಿಂದ ಆದ ಶನಿ ವಿಮೋಚನೆಯನ್ನೂ ತೋರಿಸುತ್ತದೆ. ಸಾಮಾನ್ಯವಾಗಿ ನಡೆಯುವ ತಾಳಮದ್ದಳೆಗೂ ಶನಿಪೂಜೆಯ ತಾಳಮದ್ದಳೆಗೂ ತುಂಬಾ ವಿಶೇಷತೆಗಳಿವೆ. ಸೇರಿದ ಸಭೆಗೆ ಬಾಳೆ ಹಣ್ಣು ವಿತರಣೆ ಮಾಡುವುದು, ಮತ್ತು ಕೂಷ್ಮಾಂಡ ಫಲದಾನ ಮಾಡುವುದು. ವೀಳ್ಯದೆಲೆಯಲ್ಲಿ ಹಸಿ ಅಡಿಕೆ ಮತ್ತು ನೂರು ರೂ. ದಕ್ಷಿಣೆ ಸಹಿತ ಎಲ್ಲ ಕಲಾವಿದರಿಗೆ ದಾನ ಮಾಡುವುದು, ದೀಪಕರಾಗ ಹಾಡಿದಾಗ ನೂರಾರು ದೀಪಗಳನ್ನು ಬೆಳಗಿಸುವುದು. ಇವೆಲ್ಲಾ ಶನಿಭಕ್ತರಿಗೆ ವಿಶೇಷ ಅನುಭವವನ್ನು ಕೊಡುತ್ತದೆ. [೨]
ಉಲ್ಲೇಖಗಳು
ಬದಲಾಯಿಸಿ- ↑ "ಶನಿವಾರ ಶನಿದೇವನನ್ನು ಒಲಿಸಿ ಯಶಸ್ಸು ನಿಮ್ಮದಾಗಿಸಲು ಹೀಗೆ ಪೂಜಿಸಿ". Zee News Kannada. 26 September 2020.
- ↑ ೨.೦ ೨.೧ "ನೂತನ ಅನುಭವ ನೀಡಿದ ಶ್ರೀ ಶನಿಪೂಜಾ ಸಹಿತ ತಾಳಮದ್ದಳೆ | Udayavani – ಉದಯವಾಣಿ".