ಡಿ. ಎಚ್. ಶಂಕರ ಮೂರ್ತಿ

(ಶಂಕರ ಮೂರ್ತಿ ಡಿ. ಎಚ್. ಇಂದ ಪುನರ್ನಿರ್ದೇಶಿತ)

ಡಿ ಎಚ್ ಶಂಕರ ಮೂರ್ತಿಯವರು, [೧] ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. ಮೊದಲು ಭಾರತೀಯ ಜನಸಂಘ ನಂತರ ಜನಸಂಘದ ಈಗಿನ ರೂಪಾಂತರವಾದ ಬಿಜೆಪಿ ಪಕ್ಷದ ಹಿರಿಯ ನಾಯಕರು. ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ ನ 'ಸ್ಪೀಕರ್' ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಡಿ.ಎಚ್. ಶಂಕರ ಮೂರ್ತಿ
ರಾಜ ಕಾರಣಿ
ವೈಯಕ್ತಿಕ ಮಾಹಿತಿ
ಸಂಗಾತಿ(ಗಳು) ಸತ್ಯವತಿ
ಮಕ್ಕಳು ೨ ಗಂಡು ಮಕ್ಕಳು:
ಕಿರಣ್ ಹಾಗೂ ಅರುಣ್.
ತಂದೆ/ತಾಯಿ ಹನುಮಂತಪ್ಪ, ಕಾಮಾಕ್ಷಮ್ಮ.
ವೃತ್ತಿ ರಾಜಕಾರಣಿ

ಜೀವನ ಚರಿತ್ರೆ ಬದಲಾಯಿಸಿ

ಶಂಕರರು, ಶಿವಮೊಗ್ಗದ ಪ್ರತಿಷ್ಟಿತ ವೈಶ್ಯ ಕುಟುಂಬವೊಂದರಲ್ಲಿ ೩೦ ಏಪ್ರಿಲ್ ೧೯೪೦ ರಂದು ಜನಿಸಿದರು. ಇವರ ತಂದೆ ಹನುಮಂತಪ್ಪ ಹಾಗೂ ತಾಯಿ ಕಾಮಾಕ್ಷಮ್ಮ. ಇವರ[೨] ಪತ್ನಿ, ಸತ್ಯವತಿ. ಈ ದಂಪತಿಗಳಿಗೆ ಕಿರಣ್ ಹಾಗೂ ಅರುಣ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಪ್ರಸ್ತುತ ಕಿರಿಯ ಮಗ ಅರುಣ್ ಬಿಜೆಪಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಶಿವಮೊಗ್ಗ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. .

ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಬಲಿಗರು ಬದಲಾಯಿಸಿ

ಇವರ ಕುಟುಂಬದವರು ಮೊದಲಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘ ದ ಬೆಂಬಲಿಗರು. ಅದರಂತೆ ಸಂಘದ ಜೊತೆಗೆ ಇವರ ಒಡೆನಾಟ ೧೯೬೬ ರಲ್ಲೆ ಪ್ರಾರಂಭವಾಯಿತು. ನಂತರ ಸಂಘದ ರಾಜಕೀಯ ಘಟಕವಾದ ಭಾರತೀಯ ಜನಸಂಘ ಸೇರಿದರು.

  1. ಜಿಲ್ಲೆಯ ಹಾಗು ರಾಜ್ಯದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು.
  2. ೧೯೭೧ ರ ಬಾಂಗ್ಲಾ ಚಳುವಳಿಯಲ್ಲಿ ಹೋರಾಡಿದರು. ಆಸಮಯದಲ್ಲಿ ಮೂರ್ತಿಯವರು ಕೆಲಕಾಲ 'ತಿಹಾರ್ ಜೈಲಿ'ನಲ್ಲಿ ಬಂಧಿಯಾಗಿದ್ದರು.
  3. ೧೯೭೫ ರ ಎಮರ್ಜೆನ್ಸಿ ಸಮಯದಲ್ಲಿ ಮೀಸಾ ಕಾಯಿದೆಯಡಿ ಇವರನ್ನು ಬಂಧಿಸಲಾಯಿತು. ೧೭ ತಿಂಗಳುಗಳ ಕಾಲ ಬೆಳಗಾವಿ ಜೈಲಿನಲ್ಲಿ ಬಂಧಿಯಾಗಿದ್ದರು.
  4. ೧೯೮೦ ರಲ್ಲಿ ಭಾರತೀಯ ಜನಸಂಘದ ಹೊಸ ರೂಪ ಬಿಜೆಪಿ ಯ ರಾಜ್ಯ ಘಟಕದ ಮೊದಲ ಪ್ರಧಾನ ಕಾರ್ಯದರ್ಶಿಯಾದರು.
  5. ೧೯೭೮ ಹಾಗು ೧೯೮೦ ರ ಮಹಾ ಚುನಾವಣೆಯಲ್ಲಿ ಶಿವಮೊಗ್ಗ ದಿಂದ ಸ್ಪರ್ಧಿಸಿ ವಿಫಲರಾದರು.

ನಿರ್ವಹಿಸಿದ ಜವಾಬ್ದಾರಿಗಳು ಬದಲಾಯಿಸಿ

  1. ೧೯೮೪ ರಲ್ಲಿ ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷರಾಗಿ ನೇಮಿಸಲ್ಪಟ್ಟರು ಆ ಅವಧಿಯಲ್ಲಿ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯ.
  2. ೧೯೮೮ ರಲ್ಲಿ ರೂಪಗೊಂಡ ನೈಋತ್ಯ ಪದವೀಧರ ಕ್ಷೇತ್ರಕ್ಕೆ ೧೯೮೮ ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಜಯಗಳಿಸಿದರು. ಆಗ ಅವರು ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದರು. ಈ ಕ್ಷೇತ್ರದಿಂದ ಸತತವಾಗಿ ೧೯೯೪, ೨೦೦೦, ೨೦೦೬ ಹಾಗು ೨೦೧೨ ಹೀಗೆ ಒಟ್ಟು ೫ ಭಾರಿ ವಿಜಯಗಳಿಸಿದ್ದಾರೆ.
  3. ವಿಧಾನ ಪರಿಷತ್ ನಲ್ಲಿ ಇವರ ಸೇವೆ ಹಾಗು ಚಟುವಟಿಕೆ ಗುರುತರವಾದದ್ದು. ೨೦೦೨ ರಿಂದ ೨೦೦೬ ರ ವರೆಗೆ ವಿಧಾನ ಪರಿಷತ್ ನ ವಿರೋದ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದರು.
  4. ೨೦೦೬ ರಲ್ಲಿ ಅಧಿಕಾರಕ್ಕೆ ಬಂದ ಜೆಡಿಎಸ್ ಹಾಗು ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾದರು. ಈ ಅವಧಿಯಲ್ಲಿ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದರು. ಹಿಂದಿನ ೫೫ ವರ್ಷಗಳ ಅವಧಿಯಲ್ಲಿ ಪ್ರಾರಂಬವಾದ ಒಟ್ಟು ಸರ್ಕಾರಿ ಕಾಲೇಜುಗಳ ಸಂಖ್ಯೆ ೧೬೮. ಶಂಕರಮೂರ್ತಿಯವರು ಆಯ್ಕೆಯಾಗಿ ಬಂದ ವರ್ಷವೇ ೧೮೪ ಹೊಸ ಸರ್ಕಾರಿ ಕಾಲೇಜುಗಳನ್ನು ಪ್ರಾರಂಬಿಸಿದರು.
  5. ಮೊಟ್ಟಮೊದಲಿಗೆ, ಇಂಜಿನಿಯರಿಂಗ್ ಹಾಗು ಮೇಡಿಕಲ್ ಕಾಲೇಜುಗಳ ಪ್ರವೇಶ ಪರೀಕ್ಷೆಯಲ್ಲಿದ್ದ ತಪ್ಪುಗಳನ್ನು ಸರಿಪಡಿಸಿ, ಈ ಪರೀಕ್ಷೆ ನಡೆಸಲೆಂದೆ ಹೊಸ ಪ್ರಾಧಿಕಾರವನ್ನು ರಚಿಸಿದರು.
  6. ೨೦೦೮ ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಕಗೊಂಡರು.
  7. ಇವರ ಅಧಿಕಾರದ ಅವಧಿಯಲ್ಲಿ "ಕರ್ನಾಟಕ ವಿಷನ್ ೨೦೨೦""ನ್ನು ಸಿಧ್ಧಪಡಿಸಲಾಯಿತು. ಸಂಪೂರ್ಣ ರಾಜ್ಯದ ಸರ್ವತೋಮುಖ ಅಭಿವೃಧ್ಧಿಗೆ ಬೇಕಾದ ರೂಪರೇಶೆಗಳನ್ನು ಒಳಗೊಂಡ ಈ ವರದಿ, ಅತ್ಯಂತ ಉತ್ಕೃಷ್ಟವಾದುದೆಂದು ಹೊಗಳಲ್ಪಟ್ಟಿದೆ. ರಾಜ್ಯ ಯೋಜನಾ ಆಯೋಗ, ಇವರ ಸಧೃಡ ನಾಯಕತ್ವದಲ್ಲಿ, ರಾಜ್ಯ ಸರ್ಕಾರದ ಯೋಜನೆಗಳನ್ನು ರೂಪಿಸಲು, ಬೇಕಾದ ಮಾರ್ಗದರ್ಶನ ನೀಡುವ ಪ್ರಮುಖ ಸಂಸ್ಥೆಯಾಗಿ ಬೆಳೆಯಿತು. ಭಾರತ ಯೋಜನಾ ಆಯೋಗದಷ್ಟೇ ಪ್ರಮುಖ ಸಂಸ್ಥೆಯಾಗಿ ಬೆಳೆಯಿತು.
  8. ೨೦೧೦ರಲ್ಲಿ ವಿಧಾನ ಪರಿಷತ್ ನ ಸಭಾಪತಿಯಾಗಿ ನೇಮಕಗೊಂಡು,ತಮ್ಮ ಕಾರ್ಯ ವೈಖರಿ, ನಿಷ್ಪಕ್ಷಪಾತ ದೋರಣೆ, ನೇರ ನಡುವಳಿಕೆಗಳು ಎಲ್ಲಾ ಪಕ್ಷದವರ ಮನಸ್ಸನ್ನು ಗೆದ್ದಿದೆ.

ಉಲ್ಲೇಖಗಳು ಬದಲಾಯಿಸಿ

  1. "India school news, My ಕಿರschool days – Shri D. H. Shankaramurthy – Chairman of the Karnataka Legislative Council, November 16, 2015". Archived from the original on ಜುಲೈ 9, 2017. Retrieved ಮೇ 10, 2017.
  2. "Shri D. H. Shankaramurthy–Chairman of the Karnataka Legislative Council". Archived from the original on 2017-04-26. Retrieved 2017-05-10.