ವ್ಯೋನಿಕ್ ಹಸ್ತಪ್ರತಿ


ವ್ಯೋನಿಕ್ ಹಸ್ತಪ್ರತಿ, ಇದೊಂದು ೨೪೦ ಪುಟಗಳ ಪುಸ್ತಕವಾಗಿದೆ. ಈ ಪುಸ್ತಕದ ವಿಶೇಷತೆ ಆಂದರೆ ಇದನ್ನು ಇಲ್ಲಿಯವರೆಗೆ ಯಾರೂ ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.[]

ಹಸ್ತಪ್ರತಿಯ ಒಂದು ಬಾಗ
ಹಸ್ತಪ್ರತಿಯ ೧೩೧ನೇ ಪುಟದಲ್ಲಿರುವ ಚಿತ್ರ

ಇತಿಹಾಸ

ಬದಲಾಯಿಸಿ

ವ್ಯೋನಿಕ್ ಹಸ್ತಪ್ರತಿಯು ಇತಿಹಾಸಕಾರರ ಪ್ರಕಾರ ೬೦೦ ವರ್ಷಗಳಷ್ಟು ಹಳೆಯದು. ಈ ನಿಗೂಡ ಪುಸ್ತಕವನ್ನು ೧೪೦೪ರಿಂದ ೧೪೩೮ ರ ನಡುವೆ, ಅಂದರೆ ೧೫ ನೇ ಶತಮಾನದಲ್ಲಿ ಬರೆಯಲಾಗಿದೆ ಎಂದು ಕಾರ್ಬನ್‌ ಡೇಟಿಂಗ್ ಮೂಲಕ ಕಂಡುಹಿಡಿಯಲಾಗಿದೆ. ಈ ಪುಸ್ತಕವನ್ನು ಕೈಯಿಂದ ಬರೆಯಲಾಗಿದೆ, ಆದರೆ ಏನು ಬರೆಯಲಾಗಿದೆ ಮತ್ತು ಯಾವ ಭಾಷೆಯಲ್ಲಿ ಬರೆಯಲಾಗಿದೆ ಎಂದು ಯಾರಿಗೂ ಅರ್ಥವಾಗಿಲ್ಲ.[] ಈ ನಿಗೂಡ ಪುಸ್ತಕವನ್ನು ೧೯೧೨ ರಲ್ಲಿ ವಿಲ್ಫ್ರೈಡ್ ವ್ಯೋನಿಕ್ ಎಂಬ ಇಟಾಲಿಯನ್‌ ಪುಸ್ತಕ ವ್ಯಾಪಾರಿ ಎಲ್ಲಿಂದಲೋ ಖರೀದಿಸಿದರು. ಆದ್ದರಿಂದ ಈ ಪುಸ್ತಕಕ್ಕೆ ' ವ್ಯೋನಿಕ್ ಹಸ್ತಪ್ರತಿ' ಎಂದು ಕರೆಯಲಾಗಿದೆ. ಪ್ರಥಮ ಮಹಾಯುದ್ಧ ಹಾಗೂ ದ್ವಿತೀಯ ಮಹಾಯುದ್ದದ ಸಂದರ್ಭದಲ್ಲೂ ಇದರ ನಿಗೂಢತೆಯನ್ನು ಒಡೆಯಲು ಆ ಕಾಲದ ತಜ್ಞರು ಸಾಕಷ್ಟು ಪ್ರಯತ್ನಗಳನ್ನು ಪಟ್ಟಿದ್ದರೂ, ಅರ್ಥೈಸುವಲ್ಲಿ ವಿಫಲರಾದರು. ಈ ಪುಸ್ತಕವು ೧೯೬೯ರಿಂದ ಅಮೇರಿಕದ ಯೇಲ್‌ ಯುನಿವರ್ಸಿಟಿಯ ಬೀನೆಕ್‌ ಹಸ್ತಪ್ರತಿಗಳ ಗ್ರಂಥಾಲಯದಲ್ಲಿದೆ.

ವೈಶಿಷ್ಟ್ಯ

ಬದಲಾಯಿಸಿ

ಗುಪ್ತಲಿಪಿ ಶಾಸ್ತ್ರಜ್ಞರು ಹಾಗೂ ಗುಪ್ತ ಲಿಪಿ ಶಾಸ್ತ್ರದ ವಿದ್ಯಾರ್ಥಿಗಳಿಗೆ ಇಂದಿಗೂ ಇದು ಅಧ್ಯಯನದ ವಿಷಯವಾಗಿದೆ.ಇಂಥಹ ನಿಗೂಢ ಪುಸ್ತಕದಲ್ಲಿ ಸಾಕಷ್ಟು ಪುಟಗಳಿದ್ದವು, ಆದರೆ ಕಾಲಾನಂತರದಲ್ಲಿ ಅದರ ಹಲವು ಪುಟಗಳು ಹಾಳಾದವು. ಪ್ರಸ್ತುತ ಅದರಲ್ಲಿ ೨೪೦ ಪುಟಗಳು ಮಾತ್ರ ಉಳಿದಿವೆ.ಇದರಲ್ಲಿ ಮನುಷ್ಯರಿಂದ ಹಿಡಿದು ಸಸ್ಯಗಳವರೆಗೆ ಅನೇಕ ಚಿತ್ರಗಳನ್ನು ಬಿಡಿಸಲಾಗಿದೆ,ಇಲ್ಲಿ ಬಿಡಿಸಲಾದ ಗಿಡ ಮರಗಳ ಚಿತ್ರಗಳಲ್ಲಿ ಕೆಲವು ಈ ಭೂಮಿ ಮೇಲಿರುವ ಯಾವುದೇ ಗಿಡ ಮರಗಳನ್ನು ಸ್ವಲ್ಪ ಕೂಡ ಹೋಲುವುದಿಲ್ಲ.ಈ ಪುಸ್ತಕದ ಬಗ್ಗೆ ನಿರ್ದಿಷ್ಟವಾಗಿ ಏನೂ ತಿಳಿದಿಲ್ಲ, ಆದರೆ ಪುಸ್ತಕದಲ್ಲಿ ಬರೆದ ಕೆಲವು ಪದಗಳು ಲ್ಯಾಟಿನ್ ಮತ್ತು ಜರ್ಮನ್ ಭಾಷೆಗಳಲ್ಲಿವೆ ಎಂದು ತಿಳಿದುಬಂದಿದೆ.[] ಈ ಪುಸ್ತಕವನ್ನು ಅದರ ರಹಸ್ಯವನ್ನು ಮರೆಮಾಚುವ ರೀತಿಯಲ್ಲಿ ಬರೆಯಲಾಗಿದೆ ಎಂದು ಹಲವರು ನಂಬುತ್ತಾರೆ.[] ವ್ಯೋನಿಕ್ ಹಸ್ತಪ್ರತಿಯನ್ನು ೬ ವಿಭಿನ್ನ ಭಾಗಗಳಾಗಿ ವಿಂಗಡಿಸಲಾಗಿದೆ ಮತ್ತು ಪ್ರತಿ ಭಾಗವು ಒಂದು ವಿಷಯವನ್ನು ವಿವರಿಸುತ್ತದೆ. ಪ್ರತಿಯೊಂದು ಭಾಗವೂ ವಿಭಿನ್ನ ವಿಷಯವನ್ನು ಹೊಂದಿದೆ. ಮೊದಲ ಭಾಗವು ಖಗೋಳಶಾಸ್ತ್ರಕ್ಕೆ ಸಂಬಂಧಿಸಿದೆ ಮತ್ತು ಎರಡನೇ ಭಾಗವು ಜೀವಶಾಸ್ತ್ರಕ್ಕೆ ಸಂಬಂಧಿಸಿದೆ. ಮೂರನೆಯ ಭಾಗವು ವಿಶ್ವವಿಜ್ಞಾನಕ್ಕೆ ಸಂಬಂಧಿಸಿದರೆ, ನಾಲ್ಕನೆಯ ಭಾಗವು ಮರಗಳು ಮತ್ತು ಸಸ್ಯಗಳಿಗೆ ಸಂಬಂಧಿಸಿದೆ. ಐದನೇ ಭಾಗವು ಗಿಡಮೂಲಿಕೆಗಳಿಗೆ ಸಂಬಂಧಿಸಿದೆ ಮತ್ತು ಆರನೇ ಭಾಗವು ಬಹುಶಃ ಪಾಕಪದ್ಧತಿಗೆ ಸಂಬಂಧಿಸಿದೆ. ಆದರೆ ಇದು ಕೇವಲ ಊಹೆ ಮಾತ್ರ, ಇದಕ್ಕೆ ಯಾವುದೇ ದೃಢವಾದ ಪುರಾವೆಗಳು ಇನ್ನೂ ಬಹಿರಂಗಗೊಂಡಿಲ್ಲ.ಇನ್ನೂ ಕೆಲವು ತಜ್ಞರು ಈ ಪುಸ್ತಕವನ್ನು ಖಗೋಳವಿಜ್ಞಾನ, ಕೃಷಿ ಮತ್ತು ವೈದ್ಯಕೀಯ ಉದ್ದೇಶಗಳಿಗಾಗಿ ತಯಾರಿಸಲಾಗಿದೆ ಎಂದು ಹೇಳುತ್ತಾರೆ. ಅದರ ಪ್ರತಿಯೊಂದು ಪುಟವು ವಿಭಿನ್ನ ಚಿತ್ರವನ್ನು ಹೊಂದಿದೆ ಮತ್ತು ಅರ್ಥವಾಗದ ರೀತಿ ಬರೆಯಲಾಗಿದೆ.

ಇತರ ವಿವರಗಳು

ಬದಲಾಯಿಸಿ

೨೦೦೯ರಲ್ಲಿ ಅರಿಝೋನಾ ಯುನಿವರ್ಸಿಟಿಯಲ್ಲಿ ಈ ಪುಸ್ತದ ಕಾರ್ಬನ್ ಡೇಟಿಂಗ್ ಪರೀಕ್ಷೆ ಮತ್ತು ಪ್ರೋಟಿನ್ ಪರೀಕ್ಷೆ ನಡೆಸಲಾಯ್ತು. ಅದರ ಪ್ರಕಾರ ಈ ಪುಸ್ತಕದ ಪುಟಗಳು ಕರುವಿನ ಚರ್ಮದ್ದಾಗಿದೆ ಮತ್ತು ಸುಮಾರು ೧೪೦೪ ಮತ್ತು ೧೪೩೨ರ ನಡುವೆ ಬರೆಯಲಾಗಿದೆ.[] ಬರವಣಿಗೆಗಾಗಿ ಹಲವು ಬಗೆಯ ಪ್ರಾಕೃತಿಕವಾಗಿ ಲಭ್ಯವಿರುವ ಸಸ್ಯ ಜನತ ಶಾಯಿಗಳು, ಜೊತೆಗೆ ಕ್ಯುಪ್ರೈಟ್ ನಂತಹ ಖನಿಜ, ಮೊಟ್ಟೆಯಲ್ಲಿರುವ ಬಿಳಿ ದ್ರವ ಇತ್ಯಾದಿಗಳನ್ನು ಬಳಸಲಾಗಿದೆ.[] ಹಾಗೇಯೆ ಈ ಪುಸ್ತಕದ ಕೆಲ ಪುಟಗಳು ಇತರ ಪುಟಗಳಿಗೆ ಹೋಲಿಸಿದರೆ ಸ್ವಲ್ಪ ದಪ್ಪವಿವೆ.

ಉಲ್ಲೇಖಗಳು

ಬದಲಾಯಿಸಿ
  1. D'Imperio, M.E. (1978). The Voynich Manuscript: An elegant enigma (PDF). U.S.National Security Agency. Archived from the original (PDF) on ಸೆಪ್ಟೆಂಬರ್ 27, 2020. Retrieved February 1, 2021.; Laguna Hills, CA: Aegean Park Press, 1978, Saffron Walden, UK: Books Express Publishing, 2011, ISBN 978-1-78039-009-3
  2. Palmer, Sean B. (2004). "Voynich Manuscript: Months". Inamidst.com. Retrieved June 8, 2016.
  3. Palmer, Sean B. (2004). "Notes on f116v's Michitonese". Inamidst.com. Retrieved June 8, 2016.
  4. Zandbergen, René. "Text Analysis – Transcription of the Text". Voynich.nu. Retrieved March 31, 2018.
  5. Reddy, Sravana; Knight, Kevin (2011). "What we know about the Voynich manuscript" (PDF). www.isi.edu: 1–9. Retrieved 11 June 2016.
  6. "ಹಸ್ತಪ್ರತಿಯ ವೈಜ್ಞಾನಿಕ ವಿಶ್ಲೇಷಣೆಯ ವರದಿ" (PDF).