ವ್ಯಾಸರಾವ ನಿಂಜೂರ
ವ್ಯಾಸರಾವ ನಿಂಜೂರ ಇವರು ಮುಂಬಯಿಯಲ್ಲಿ ನೆಲೆಸಿದ ಕನ್ನಡ ಸಾಹಿತಿ. ವಿಜ್ಞಾನಿ, 'ವ್ಯಾಸರಾವ್ ನಿಂಜೂರ್',ರವರು, ಉಡುಪಿಜಿಲ್ಲೆಯ 'ತೆಂಕ ನಿಡಿಯೂರಿನಲ್ಲಿ ಜನಿಸಿದರು. ಅವರ ತಂದೆ, ಶ್ರೀನಿವಾಸ ನಿಂಜೂರ್, ತಾಯಿ ಸೀತಮ್ಮ. ವ್ಯಾಸರಾವ್ ರ. ಪ್ರಾರಂಭಿಕ ಶಿಕ್ಷಣ, ಗರಡಿ ಮಜಲು, ಕೊಡವೂರು, 'ಮಿಲಾಗ್ರಿಸ್ ಹೈಸ್ಕೂಲ್' ಮುಂತಾದೆಡೆಯಲ್ಲಿ ಜರುಗಿತು. ಬಿ.ಎಸ್.ಸಿ. ಪದವಿ, ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ, ಮೈಸೂರು ವಿಶ್ವವಿದ್ಯಾನಿಲಯದಿಂದ. ಮುಂಬಯಿ ವಿಶ್ವವಿದ್ಯಾಲಯದಿಂದ ಎಮ್.ಎಸ್.ಸಿ.ಪದವಿಯನ್ನೂ ಮುಂದೆ, ಪಿ.ಎಚ್.ಡಿ. ಪದವಿಯನ್ನು ಅಮೇರಿಕಾದ ಕ್ಯಾಲಿಫೊರ್ನಿಯ ವಿಶ್ವವಿದ್ಯಾಲಯದಿಂದ ಗಳಿಸಿದರು. ಮುಂದೆ, ಮಣಿಪಾಲದ ಕಸ್ತುರ್ ಬಾ ಮೆಡಿಕಲ್ ಕಾಲೇಜ್ ನಲ್ಲಿ, ಬಯೋ ಕೆಮಿಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕರಾಗಿ ಪಾದಾರ್ಪಣೆಮಾಡಿದರು. ನಂತರ ಮುಂಬಯಿನ ಭಾಭಾ ಪರಮಾಣು ಸಂಶೋಧನ ಕೆಂದ್ರದ ಬಯೋ ಕೆಮಿಸ್ಟ್ರಿ ಮತ್ತು ಪುಡ್ ಟೆಕ್ನೋಲೋಜಿ ವಿಭಾಗದಲ್ಲಿ, ಆಹಾರ ವಿಜ್ಞಾನ ಶಾಖೆಯ ಪ್ರಮುಖ ಹುದ್ದೆಯಲ್ಲಿದ್ದು, ಸ್ವಯಂ ಇಛ್ಛೆಯಿಂದ ನಿವ್ರುತ್ತರಾದರು. ಮುಂದೆ ಮುಂಬಯಿ ವಿಶ್ವವಿದ್ಯಾಲಯದ ಜೀವರಸಾಯನ ಶಾಸ್ತ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ದುಡಿದರು. ಇವರ ಮಾರ್ಗದರ್ಶನದಲ್ಲಿ ಹಲವಾರು ಪಿ.ಎಚ್.ಡಿ. ವಿದ್ಯಾರ್ಥಿಗಳು ತಯಾರಾಗಿದ್ದಾರೆ.
ಡಾ. ವ್ಯಾಸರಾವ್ ನಿಂಜೂರ | |
---|---|
ಜನನ | ವಾಸಣ್ಣ. 'ವ್ಯಾಸರಾವ್ ನಿಂಜೂರ',ರವರು, ಉಡುಪಿಜಿಲ್ಲೆಯ 'ತೆಂಕ ನಿಡಿಯೂರಿನಲ್ಲಿ ಜನಿಸಿದರು. ತಂದೆ, ಶ್ರೀನಿವಾಸ ನಿಂಜೂರ್, ತಾಯಿ ಸೀತಮ್ಮ. |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಪ್ರಾರಂಭಿಕ ಶಿಕ್ಷಣ, ಕೊಡವೂರು,'ಮಿಲಾಗ್ರಿಸ್ ಹೈಸ್ಕೂಲ್' ಮುಂತಾದೆಡೆಯಲ್ಲಿ ಜರುಗಿತು. ಬಿ.ಎಸ್.ಸಿ, ಉಡುಪಿಯ ಎಂ.ಜಿ.ಎಂ.ಕಾಲೇಜ್,(ಮೈಸೂರು ವಿಶ್ವವಿದ್ಯಾನಿಲಯ),ಎಮ್.ಎಸ್.ಸಿ.(ಮುಂಬಯಿ ವಿಶ್ವವಿದ್ಯಾಲಯ),ಪಿ.ಎಚ್.ಡಿ.ಪದವಿಯನ್ನು (ಅಮೇರಿಕಾದ ಕ್ಯಾಲಿಫೊರ್ನಿಯ ವಿಶ್ವವಿದ್ಯಾಲಯ) |
ವೃತ್ತಿ(ಗಳು) | ಮಣಿಪಾಲದ ಕಸ್ತುರ್ ಬಾ ಮೆಡಿಕಲ್ ಕಾಲೇಜ್ ನಲ್ಲಿ, ಬಯೋ ಕೆಮಿಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕ, ಮುಂಬಯಿನ ಭಾಭಾ ಪರಮಾಣು ಸಂಶೋಧನ ಕೆಂದ್ರದ ಬಯೋ ಕೆಮಿಸ್ಟ್ರಿ ಮತ್ತು ಪುಡ್ ಟೆಕ್ನೋಲೋಜಿ ವಿಭಾಗದಲ್ಲಿ, ಆಹಾರ ವಿಜ್ಞಾನ ಶಾಖೆಯ ಪ್ರಮುಖ ಹುದ್ದೆಯಲ್ಲಿದ್ದು, ಸ್ವಯಂ ಇಛ್ಛೆಯಿಂದ ನಿವೃತ್ತರಾದರು. ಮುಂದೆ ಮುಂಬಯಿ ವಿಶ್ವವಿದ್ಯಾಲಯದ ಜೀವರಸಾಯನ ಶಾಸ್ತ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ದುಡಿದರು. |
ಗಮನಾರ್ಹ ಕೆಲಸಗಳು | ಹಲವಾರು ಪಿ.ಎಚ್.ಡಿ.ವಿದ್ಯಾರ್ಥಿಗಳು ತಯಾರಾಗಿದ್ದಾರೆ.'ಬಿ.ಎ.ಆರ್.ಸಿ'. ಯಲ್ಲಿದ್ದಾಗ ವ್ಯಾಸರಾವ್ ನಿಂಜೂರ್ ರ ೮೭, ಸಂಶೋದನ ಪ್ರಬಂಧಗಳು ಪ್ರತಿಷ್ಥಿತ ಪತ್ರಿಕೆಗಲಲ್ಲಿ ಪ್ರಕಟಿತವಾಗಿವೆ.'ಅಂತರ ಕೊಶೀಯ ಲೈಸೋಸೊಮ್' ಮತ್ತು 'ಲೈಸೋಸೋಮ್ ಕಿಣ್ವಗಳ ಬಗ್ಗೆ ನಡೆಸಿದ ಸಂಶೋಧನೆ'. 'ಆಹಾರ ವಿಜ್ಞಾನ', 'ಆಹಾರ ಸಂಸ್ಕರಣೆ' ಮತ್ತು ಸಂರಕ್ಷಣೆ'.'ಆಹಾರ ಸಂರಕ್ಷಣೆಯಲ್ಲಿ ಗಾಮಾ ವಿಕರಣಗಳ ಬಳಕೆ', 'ಪ್ರೋಟೀನ್ ನ್ಯೂನತೆಯಿಂದಾಗುವ ಪ್ರಭಾವ', 'ಮಾನವ ಫಲೀಕರಣದಲ್ಲಿ ಕಿಣ್ವಗಳ ಪಾತ್ರ', ಮುಂತಾದ ವಿಷಯಗಳಲ್ಲಿ ನಡೆಸಿದ ಮಹತ್ವದ ಮತ್ತು ವಿಶ್ವಮಾನ್ಯ ಸಂಶೋಧನೆಗಳು. ಬರೆದ ಕಾದಂಬರಿಗಳು: ಉಸಿರು, ಚಾಮುಂಡೇಶ್ವರಿಭವನ. ಕೆಲವು ನಾಟಕಗಳನ್ನು ಬರೆದು ಅಭಿನಯಿಸಿದ್ದಾರೆ.ಹವ್ಯಾಸಗಳು: ಕನ್ನಡ ದಿನಪತ್ರಿಕೆಗಳಲ್ಲಿ ಅಂಕಣಗಳು, ಕಮ್ಮಟಗಳಲ್ಲಿ ಪಾಲ್ಗೊಳ್ಳುವುದು |
ಬಿ. ಎ. ಆರ್.ಸಿ.ಯಲ್ಲಿದ್ದಾಗ
ಬದಲಾಯಿಸಿ'ಬಿ.ಎ.ಆರ್.ಸಿ'. ಯಲ್ಲಿದ್ದಾಗ ವ್ಯಾಸರಾವ್ ನಿಂಜೂರ್ ರ,[೧] ೮೭, ಸಂಶೋದನ ಪ್ರಬಂಧಗಳು ಪ್ರತಿಷ್ಥಿತ ಪತ್ರಿಕೆಗಲಲ್ಲಿ ಪ್ರಕಟಿತವಾಗಿವೆ. 'ಅಂತರ ಕೊಶೀಯ ಲೈಸೋಸೊಮ್' ಮತ್ತು 'ಲೈಸೋಸೋಮ್ ಕಿಣ್ವಗಳ ಬಗ್ಗೆ ನಡೆಸಿದ ಸಂಶೋಧನೆ'. 'ಆಹಾರ ವಿಜ್ಞಾನ', 'ಆಹಾರ ಸಂಸ್ಕರಣೆ' ಮತ್ತು ಸಂರಕ್ಷಣೆ'. 'ಆಹಾರ ಸಂರಕ್ಷಣೆಯಲ್ಲಿ ಗಾಮಾ ವಿಕರಣಗಳ ಬಳಕೆ', 'ಪ್ರೋಟೀನ್ ನ್ಯೂನತೆಯಿಂದಾಗುವ ಪ್ರಭಾವ', 'ಮಾನವ ಫಲೀಕರಣದಲ್ಲಿ ಕಿಣ್ವಗಳ ಪಾತ್ರ', ಮುಂತಾದ ವಿಷಯಗಳಲ್ಲಿ ನಡೆಸಿದ ಮಹತ್ವದ ಮತ್ತು ವಿಶ್ವಮಾನ್ಯ ಸಂಶೋಧನೆಗಳು.[೨]
ಸಾಹಿತ್ಯದಲ್ಲೂ ಅಭಿರುಚಿ
ಬದಲಾಯಿಸಿಸಾಹಿತ್ಯದಲ್ಲಿ ವಿಶೇಷ ಅಭಿರುಚಿ ಹೊಂದಿದ್ದರು. ಅವರು ಬರೆದ ಕಾದಂಬರಿಗಳು : 'ಉಸಿರು', 'ಚಾಮುಂಡೇಶ್ವರಿ ಭವನ', 'ತೆಂಕನಿಡಿಯೂರಿನ ಕುಳುವಾರಿಗಳು'
ಕಥಾಸಂಕಲನ
ಬದಲಾಯಿಸಿ'ಕುಂಕುಮ', 'ಮಂಚ', 'ದೂಜ ಮಾಸ್ತರರ ಮಗಳು ಬಸಿರಾದುದು'.
ನಾಟಕ
ಬದಲಾಯಿಸಿ- 'ನಲ್ವತ್ತರ ನಲುಗು', ಹಲವಾರು ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ.
ಮಕ್ಕಳಿಗಾಗಿ
ಬದಲಾಯಿಸಿ- 'ಹೋಮಿ ಭಾಭಾ',
ಹಲವಾರು ಕವಿತೆಗಳು, ಕಥೆಗಳನ್ನು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸಿರುತ್ತಾರೆ. ಹಲವಾರು ಪತ್ರಿಕೆಗಳಿಗೆ ಸಂಪಾದಕರಾಗಿ ಕೆಲಸಮಾಡಿದ್ದಾರೆ.
- 'ಬುಲೆಟಿನ್ ಆಫ್ ಸೈನ್ಸ್ ಅಂಡ್ ಟೆಕ್ನೋಲೋಜಿ', 'ಇರ್ರೇಡಿಯೇಶನ್ ನ್ಯೂಸ್', 'ಬೆಳಗು'[೩] 'ಗೋಕುಲವಾಣಿ',ಮುಂತಾದ ಪತ್ರಿಕೆಗಳ ಹೊಣೆಗಾರಿಕೆ.[೪]
- ಮೈಸೂರ್ ಅಸೋಸಿಯೇಷನ್, ಮುಂಬಯಿ, ಮುಂಬಯಿ ಕನ್ನಡ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಕರ್ನಾಟಕ ಸಂಘ, ಜಂಟಿಯಾಗಿ ಆಯೋಜಿಸಲಾದ ಯಶವಂತ ಚಿತ್ತಾಲರ ಸಂಸ್ಮರಣೆ ಕಾರ್ಯಕ್ರಮ',[೫]
ಪ್ರಶಸ್ತಿಗಳು
ಬದಲಾಯಿಸಿ- 'ಉಸಿರು' ಕಾದಂಬರಿಗೆ 'ತ್ರಿವೇಣಿ ಸ್ಮಾರಕ ಪ್ರಶಸ್ತಿ',
- 'ಚಾಮುಂಡೇಶ್ವರಿ ಭವನ,' ಕಾದಂಬರಿಗೆ, 'ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ',
- 'ವರ್ಧಮಾನ ಪ್ರಶಸ್ತಿ',
- 'ಕರ್ನಾಟಕ ನಾಟಕ ಅಕ್ಯಾಡೆಮಿ ಫೆಲೋಶಿಪ್',
- ಮೂಡುಬಿದರೆಯಲ್ಲಿ ಜರುಗಿದ ೭೧ ನೆಯ ಸಾಹಿತ್ಯ ಸಮ್ಮೇಳನದಲ್ಲಿ 'ಕರ್ನಾಟಕ ಶ್ರೀ ಪ್ರಶಸ್ತಿ'.
- ಮಹಾರಾಷ್ಟ್ರ ರಾಜ್ಯದ ೬ ನೆಯ ಸಾಂಸ್ಕೃತಿಕ ಸಮಾವೇಶದಲ್ಲಿ 'ಮಹಾರಾಷ್ಟ್ರದ ಶ್ರೇಷ್ಠ ಕನ್ನಡಿಗ ಪ್ರಶಸ್ತಿ', ಮುಂತಾದವುಗಳು.
ಉಲ್ಲೇಖಗಳು
ಬದಲಾಯಿಸಿ- ↑ "'ಅಮೆರಿಕನ್ನಡದ ಲೇಖನಗಳು'". Archived from the original on 2016-03-05. Retrieved 2014-04-10.
- ↑ https://kannada.yahoo.com/ಜ-ಹ-ರ-ತ-ಬ-ತ-ತ-ವ-012245692.html
- ↑ "'ಮುಂಬಯಿ ಅಣುಶಕ್ತಿ ಕೇಂದ್ರದಿಂದ ಕನ್ನಡದ "ಬೆಳಗು"-ಆರ್.ಜಿ.ಹಳ್ಳಿ ನಾಗರಾಜ್', 'ವಿಶ್ವಕನ್ನಡ,' 'ಗೋಕುಲವಾಣಿ',ಮುಂತಾದ ಪತ್ರಿಕೆಗಳ ಹೊಣೆಗಾರಿಕೆ". Archived from the original on 2013-10-25. Retrieved 2014-04-10.
- ↑ ಮುರಳೀದರ ಉಪಾಧ್ಯಾಯ ಹಿರಿಯಡ್ಕ',
- ↑ ಕರ್ನಾಟಕ ಮಲ್ಲ, ೮,ಜನವರಿ,೨೦೧೫, ಪುಟ-೨, 'ಮೈಸೂರು ಅಸೋಸಿಯೇಷನ್ ನಲ್ಲಿ ಯಶವಂತ ಚಿತ್ತಾಲ ಸಂಸ್ಮರಣೆ ಕಾರ್ಯಕ್ರಮ'-'ಯಶವಂತ ಚಿತ್ತಾಲರು ಚಳುವಳಿಗಳ ಸತ್ವಹೀರಿ ಅದನ್ನು ಮೀರಿ ಬೆಳೆದ ಅಶಾಂತ ಸಂತ',ಡಾ.ಎಚ್.ಎಸ್.ರಾಘವೇಂದ್ರ ರಾವ್,'
ಬಾಹ್ಯಸಂಪರ್ಕಗಳು
ಬದಲಾಯಿಸಿ- 'ಚಾಮುಂಡೇಶ್ವರಿ ಭವನದವ್ಯಾಸರಾಯ ನಿಂಜೂರು',ಸ್ನೇಹಸಂಬಂಧ,/೪,ಡಾ.ಬಿ.ಎ.ಸನದಿ,ಜೂನೆ,೨೦೧೬