ವ್ಯಾಪಾರೋದ್ಯಮ ಸಂಶೋಧನೆ

ಉತ್ಪನ್ನಗಳನ್ನು ಮಾರಾಟ ಮಾಡುವ ಅಥವಾ ಯಾವುದಾದರೂ ಸೇವೆಯನ್ನು ಒದಗಿಸುವ ಸಂಬಂಧದ ಬಗ್ಗೆ ವಿಷಯಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸುವುದು, ಅವುಗಳ ಸೂಕ್ತ ದಾಖಲಾತಿ ಮಾಡುವುದು ಮತ್ತು ಸಂಗ್ರಹಿಸಿದ ದತ್ತಾಂಶಗಳನ್ನು ವಿಶ್ಲೇಷಣೆ ಮಾಡುವುದೇ ವ್ಯಾಪಾರೋದ್ಯಮ ಸಂಶೋಧನೆ . ಈ ಪದವನ್ನು ಸಾಮಾನ್ಯವಾಗಿ ಮಾರುಕಟ್ಟೆ ಸಂಶೋಧನೆ ಎಂಬುದಾಗಿಯ‌ೂ ಹೇಳಬಹುದು; ಆದರೆ ವೃತ್ತಿನಿರತ ತಜ್ಞರು ಇದರಲ್ಲಿ ವ್ಯತ್ಯಾಸದ ಗೆರೆ ಎಳೆಯುತ್ತಾರೆ.ಮಾರುಕಟ್ಟೆ ಸಂಶೋಧನೆಯು ಸ್ಪಷ್ಟವಾಗಿ ಮಾರುಕಟ್ಟೆಗಳಿಗೆ ಮಾತ್ರ ಸಂಬಂಧಿಸಿದರೆ, ವ್ಯಾಪಾರೋದ್ಯಮ ಸಂಶೋಧನೆಯು ನಿರ್ದಿಷ್ಟವಾಗಿ ಮಾರಾಟ ಪ್ರಕ್ರಿಯೆಯ ಬಗ್ಗೆಯಾಗಿರುತ್ತದೆ.[೧]

ವ್ಯಾಪಾರೋದ್ಯಮ ಸಂಶೋಧನೆಯನ್ನು ದರ್ಜೆಗನುಗುಣವಾಗಿ ಎರಡು ಜೋಡಿ ವಿಭಾಗಗಳಾಗಿ ವಿಂಗಡಿಸಬಹುದು, ಉದ್ಧೇಶಿತ ಮಾರುಕಟ್ಟೆಯ ಆಧಾರದಲ್ಲಿ:

 • ಗ್ರಾಹಕ ಸಂಬಂಧೀ ವ್ಯಾಪಾರೋದ್ಯಮ ಸಂಶೋಧನೆ, ಮತ್ತು
 • ಬ್ಯುಸಿನೆಸ್-ಟು-ಬ್ಯುಸಿನೆಸ್ (B2B) ವ್ಯಾಪಾರೋದ್ಯಮ ಸಂಶೋಧನೆ

ಅಥವಾ ಕ್ರಮಬದ್ಧ ವಿಧಾನಗಳ ಆಧಾರದಲ್ಲಿ:

 • ಗುಣಾತ್ಮಕ ವ್ಯಾಪಾರೋದ್ಯಮ ಸಂಶೋಧನೆ, ಮತ್ತು
 • ಪರಿಮಾಣಾತ್ಮಕ ವ್ಯಾಪಾಪಾರೋದ್ಯಮ ಸಂಶೋಧನೆ

ಗ್ರಾಹಕ ವ್ಯಾಪಾರೋದ್ಯಮ ಸಂಶೋಧನೆಯು ಅನ್ವಯಿಕ ಸಮಾಜಶಾಸ್ತ್ರದ ಒಂದು ರೂಪ, ಇದು ಮಾರುಕಟ್ಟೆ-ಆಧಾರಿತ ಅರ್ಥವ್ಯವಸ್ಥೆಯಲ್ಲಿನ ಗ್ರಾಹಕರ ಒಲವು, ವರ್ತನೆ ಮತ್ತು ನಡವಳಿಕೆಗಳ ಅರ್ಥೈಸುವಿಕೆಯನ್ನು ಕೇಂದ್ರೀಕರಿಸಿರುತ್ತದೆ ಹಾಗೂ ಇದು ವ್ಯಾಪಾರೋದ್ಯಮ ಕಾರ್ಯಾಚರಣೆಯ ಪರಿಣಾಮ ಮತ್ತು ತುಲನಾತ್ಮಕ ಯಶಸ್ಸನ್ನು ತಿಳಿಯುವ ಗುರಿಯನ್ನು ಹೊಂದಿರುತ್ತದೆ. ಅಂಕಿಅಂಶಗಳ ವಿಜ್ಞಾನವಾಗಿ ಆರ್ತುರ್ ನೈಲ್ಸನ್ 1923ರಲ್ಲಿ ACನೈಲ್ಸನ್ ಕಂಪೆನಿಯನ್ನು ಸ್ಥಾಪಿಸುವುದರೊಂದಿಗೆ ಗ್ರಾಹಕ ವ್ಯಾಪಾರೋದ್ಯಮ ಸಂಶೋಧನೆಯನ್ನು ಆರಂಭಿಸಿದನು.[೨]

ಸಮಸ್ಯೆಗಳ ಕ್ರಮಬದ್ಧ ಗುರುತಿಸುವಿಕೆ ಮತ್ತು ಪರಿಹಾರ,ಹಾಗೂ ವ್ಯಾಪಾರೋದ್ಯಮದಲ್ಲಿರುವ ಅವಕಾಶಗಳಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಆಡಳಿತ ನಿರ್ವಹಣೆಗೆ ಸಹಾಯ ಹಸ್ತ ಚಾಚುವುದು, ವ್ಯಾಪಾರೋದ್ಯಮ ಸಂಶೋಧನೆಯನ್ನು ಮಾಹಿತಿಯ ವ್ಯವಸ್ಥಿತ ಮತ್ತು ಉದ್ಧೇಶಿತ ಗುರುತಿಸುವಿಕೆ, ಸಂಗ್ರಹಿಸುವಿಕೆ, ವಿಶ್ಲೇಷಣೆ ಮಾಡುವಿಕೆ ಹಾಗೂ ಪ್ರಸರಿಸುವಿಕೆ ಎಂಬುದಾಗಿಯ‌ೂ ವಿವರಿಸಬಹುದು.[೩] ಉದ್ಯಮದ ಮಿಶ್ರಣಾಂಶಗಳು ಗ್ರಾಹಕರ ನಡವಳಿಕೆ ಬದಲಾಗುವುದರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಗುರುತಿಸುವುದು, ನಿರ್ಣಯಿಸುವುದು ಮತ್ತು ಮೌಲ್ಯಮಾಪನ ಮಾಡುವುದು ಈ ಸಂಶೋಧನೆಯ ಮುಖ್ಯ ಗುರಿ.

ವ್ಯಾಪಾರೋದ್ಯಮ ಸಂಶೋಧನೆಯ ಪಾತ್ರ ಬದಲಾಯಿಸಿ

ಆಡಳಿತ ನಿರ್ವಹಣಾ ವ್ಯವಸ್ಥೆಗೆ ಪ್ರಸ್ತುತವೂ, ನಿಖರವೂ, ವಿಶ್ವಾಸಾರ್ಹವೂ ಮತ್ತು ನ್ಯಾಯ ಸಮ್ಮತವೂ ಆದ ಮಾಹಿತಿಯನ್ನು ಒದಗಿಸುವುದು ವ್ಯಾಪಾರೋದ್ಯಮ ಸಂಶೋಧನೆಯ ಪ್ರಮುಖ ಕೆಲಸ. ಸೂಕ್ತವಲ್ಲದ ನಿರ್ಣಯ ಕೈಗೊಳ್ಳುವುದರಿಂದಾಗಿ, ಸ್ಪರ್ಧಾತ್ಮಕ ಮಾರಾಟಗಾರಿಕೆ ಪರಿಸ್ಥಿತಿಯಲ್ಲಿ ಉತ್ಪಾದನಾ ವೆಚ್ಚ ಏರುಗತಿಯಲ್ಲೇ ಸಾಗುವುದರಿಂದ ಯುಕ್ತ ಮಾಹಿತಿಗಳನ್ನು ವ್ಯಾಪಾರೋದ್ಯಮ ಸಂಶೋಧನೆಯು ಅಗತ್ಯವಾಗಿ ಒದಗಿಸಬೇಕಿದೆ. ಕಚ್ಚೆದೆಯ ಭಾವನೆ, ಅಂತಃಪ್ರಜ್ಞೆ ಅಥವಾ ಕೇವಲ ಪ್ರಾಮಾಣಿಕ ನಿರ್ಧಾರಗಳ ಮೇಲಷ್ಟೇ ಯುಕ್ತ ನಿರ್ಣಯಗಳು ಆಧರಿಸಿರುವುದಿಲ್ಲ.

ಗ್ರಾಹಕರ ಬೇಡಿಕೆಗಳನ್ನು ಗುರುತಿಸುವ ಮತ್ತು ಪೂರೈಸುವ ಪ್ರಕ್ರಿಯೆಯಲ್ಲಿ ಮಾರಾಟ ನಿರ್ವಾಹಕರು ಹಲವಾರು ಭವಿಷ್ಯೋದ್ದೇಶದ ಮತ್ತು ತಂತ್ರೋಪಾಯದ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಅವರು ಪ್ರಬಲ ಅವಕಾಶಗಳು, ಉದ್ಧೇಶಿತ ಮಾರುಕಟ್ಟೆ ಅವಕಾಶ, ಮಾರುಕಟ್ಟೆ ವಿಭಜನೆ, ಮಾರಾಟಗಾರಿಕೆ ಆಯ್ಕೆ, ಯೋಜನೆಗಳ ರೂಪಿಸುವುದು ಮತ್ತು ಅವುಗಳನ್ನು ಕಾರ್ಯಾನುಷ್ಠಾನಕ್ಕೆ ಇಳಿಸುವುದು, ಮಾರಾಟಗಾರಿಕೆ ನಿರ್ವಹಣೆ ಮತ್ತು ನಿಯಂತ್ರಣ ಮೊದಲಾದವುಗಳ ಬಗ್ಗೆ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಈ ನಿರ್ಣಯಗಳು ಉತ್ಪಾದನೆ, ಬೆಲೆ ನಿರ್ಧಾರ, ಪ್ರಚಾರ ಮತ್ತು ವಿತರಣೆಯ ನಿಯಂತ್ರಿತ ಮಾರುಕಟ್ಟೆ ಅಂಶಗಳ ನಡುವಿನ ಪರಸ್ಪರ ಕ್ರಿಯೆಗಳ ಸಂಕೀರ್ಣವಾಗಿದೆ. ಇನ್ನಷ್ಟು ಜಟಿಲತೆಗಳು ಸಾಮಾನ್ಯ ಅರ್ಥವ್ಯವಸ್ಥೆ, ತಾಂತ್ರಿಕತೆ, ಸಾರ್ವಜನಿಕ ನಿಯಮ ಮತ್ತು ಕಾನೂನುಗಳು, ರಾಜಕೀಯ ಪರಿಸ್ಥಿತಿ, ಸ್ಪರ್ಧೆ ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳಂತಹ ನಿಯಂತ್ರಿಸಲಾಗದ ಅಂಶಗಳಿಂದ ಸೇರಿಸಲ್ಪಡುತ್ತವೆ. ಈ ಮಿಶ್ರಣದಲ್ಲಿನ ಮತ್ತೊಂದು ಅಂಶವೆಂದರೆ ಗ್ರಾಹಕರ ಸಂಕೀರ್ಣತೆ. ವ್ಯಾಪಾರೋದ್ಯಮ ಸಂಶೋಧನೆಯು ಮಾರಾಟಗಾರಿಕೆಯ ಅಂಶಗಳನ್ನು ಪರಿಸ್ಥಿತಿ ಮತ್ತು ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಮಾರಾಟಗಾರಿಕೆ ನಿರ್ವಾಹಕರಿಗೆ ಸಹಾಯ ಮಾಡುತ್ತದೆ. ನಿಖರವಾದ ಮಾರಾಟಗಾರಿಕೆಯ ಅಸ್ಥಿರ ಅಂಶಗಳು, ಪರಿಸ್ಥಿತಿ ಮತ್ತು ಗ್ರಾಹಕರ ಬಗೆಗಿನ ಪ್ರಸಕ್ತ ಮಾಹಿತಿಯನ್ನು ಒದಗಿಸುವುದರ ಮ‌ೂಲಕ ಕೆಲವು ಅನಿಶ್ಚಿತತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮಾರಾಟಗಾರಿಕೆ ಕ್ಷೇತ್ರದಲ್ಲಿ, ಯೋಜನೆಗಳ ಬಗೆಗಿನ ಗ್ರಾಹಕರ ಪ್ರತಿಕ್ರಿಯೆಯನ್ನು ಖಾತರಿಯಾಗಿ ಅಥವಾ ನಿಖರವಾಗಿ ಊಹಿಸುವುದು ಪ್ರಸಕ್ತ ಮಾಹಿತಿಯಿಲ್ಲದೆ ಸಾಧ್ಯವಾಗುವುದಿಲ್ಲ. ಕಾರ್ಯಾಚರಣೆಯಲ್ಲಿರುವ ವ್ಯಾಪಾರೋದ್ಯಮ ಸಂಶೋಧನಾ ಯೋಜನಗೆಳು ನಿಯಂತ್ರಿಸಬಹುದಾದ ಮತ್ತು ನಿಯಂತ್ರಿಸಲಾಗದ ಅಂಶಗಳು ಹಾಗೂ ಗ್ರಾಹಕರ ಬಗೆಗಿನ ಮಾಹಿತಿಯನ್ನು ಒದಗಿಸುತ್ತವೆ; ಈ ಮಾಹಿತಿಯು ಉದ್ಯಮದ ನಿರ್ವಾಹಕರು ತೆಗೆದುಕೊಂಡ ನಿರ್ಧಾರಗಳ ಪರಿಣಾಮವನ್ನು ಹೆಚ್ಚಿಸುತ್ತದೆ.[೪]

ಮೊದಲಿನಿಂದಲೂ ವ್ಯಾಪಾರೋದ್ಯಮದ ಸಂಶೋಧಕರು ಪ್ರಸಕ್ತ ವಿಷಯದ ಮಾಹಿತಿಯನ್ನು ಒದಗಿಸುತ್ತಿದ್ದರು ಹಾಗೂ ನಿರ್ವಾಹಕರು ಉದ್ಯಮದ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದರು. ಆದರೆ ಈಗ ಈ ಇಬ್ಬರ ಜವಾಬ್ದಾರಿಯಲ್ಲಿ ಪರಿವರ್ತನೆಯಾಗಿದೆ; ಉದ್ಯಮದ ಸಂಶೋಧಕರು ನಿರ್ಧಾರ ಮಾಡುವುದರಲ್ಲಿ ಹೆಚ್ಚು ತೊಡಗಿಕೊಂಡರೆ ಮಾರಾಟದಲ್ಲಿ ತೊಡಗಿರುವ ನಿರ್ವಾಹಕರು ಹೆಚ್ಚಾಗಿ ಸಂಶೋಧನೆಯಲ್ಲಿ ಭಾಗವಹಿಸುತ್ತಾರೆ. ಆಡಳಿತಾತ್ಮಕ ನಿರ್ಣಯ ಕೈಗೊಳ್ಳುವಲ್ಲಿ ವ್ಯಾಪಾರೋದ್ಯಮ ಸಂಶೋಧನೆಯ ಪಾತ್ರವನ್ನು "DECIDE" ಮಾದರಿಯ ಚೌಕಟ್ಟನ್ನು ಬಳಸಿಕೊಂಡು ಈ ರೀತಿ ವಿವರಿಸಬಹುದು:

D
ವ್ಯಾಪಾರೋದ್ಯಮದಲ್ಲಿರುವ ಸಮಸ್ಯೆಯನ್ನು ಅರ್ಥೈಸಿಕೊಳ್ಳಿ
E
ನಿಯಂತ್ರಿಸಲಾಗುವ ಮತ್ತು ನಿಯಂತ್ರಿಸಲಾಗದ ನಿರ್ಣಯಾಂಶಗಳನ್ನು ಒಂದೊಂದಾಗಿ ಪಟ್ಟಿ ಮಾಡಿ
C
ಪ್ರಸಕ್ತ ವಿಷಯದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ
I
ಪ್ರಶಸ್ತ ಪರ್ಯಾಯವನ್ನು ಗುರುತಿಸಿ
D
ಮಾರಾಟಗಾರಿಕೆ ಯೋಜನೆಯನ್ನು ಅಭಿವೃದ್ಧಿಪಡಿಸಿ ಮತ್ತು ಕಾರ್ಯಗತಗೊಳಿಸಿ
E
ನಿರ್ಣಯ ಮತ್ತು ನಿರ್ಣಯ ಪ್ರಕ್ರಿಯೆಯ ಮೌಲ್ಯಮಾಪನ ಮಾಡಿ

DECIDE ಮಾದರಿಯು ನಿರ್ವಹಣಾ ನಿರ್ಣಯ ಮಾಡಬೇಕೆಂದರೆ ಈ ಆರು ಹಂತಗಳನ್ನು ದಾಟಿ ಬರಬೇಕು. ಉದ್ಧೇಶ ಮತ್ತು ಇತಿಮಿತಿಗಳೊಂದಿಗೆ ಸಮಸ್ಯೆ ಅಥವಾ ಅವಕಾಶವನ್ನು ಖಚಿತವಾಗಿ ನಿರೂಪಿಸುವ ಮ‌ೂಲಕ ನಿರ್ಣಯ ಕ್ರಿಯೆ ಆರಂಭವಾಗುತ್ತದೆ.[೪] ಮುಂದಿನ ಕ್ರಮಗಳು (ನಿಯಂತ್ರಿಸಲಾಗುವ ಅಂಶಗಳು) ಮತ್ತು ಅನಿಶ್ಚಿತತೆ (ನಿಯಂತ್ರಿಸಲಾಗದ ಅಂಶಗಳು) ಬದಲಿ ಮಾರ್ಗಗಳನ್ನು ತುಂಬುವ ಸಂಭಾವ್ಯ ನಿರ್ಣಯಾಂಶಗಳನ್ನು ನಮ‌ೂದಿಸಲಾಗುತ್ತದೆ. ನಂತರ, ಬದಲಿಗಳು ಮತ್ತು ಸಂಭಾವ್ಯ ಫಲಿತಾಂಶಗಳ ಬಗೆಗಿನ ಪ್ರಸಕ್ತ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಆಯ್ಕೆ ಮಾಡಲಾದ ನಿರ್ಣಾಯಕ ಅಂಶ ಅಥವಾ ಯಶಸ್ಸಿನ ಮಾನದಂಡದ ಆಧಾರದ ಮೇಲೆ ಉತ್ತಮ ಬದಲಿಯನ್ನು ಆಯ್ಕೆ ಮಾಡಲಾಗುವುದು ಮುಂದಿನ ಹಂತ. ನಂತರ, ಆಯ್ಕೆಗೊಂಡ ಬದಲಿಯನ್ನು ಕಾರ್ಯಗತಗೊಳಿಸಲು ಒಂದು ಸಮಗ್ರ ಯೋಜನೆಯನ್ನು ರೂಪಿಸಿ ಅಭಿವೃದ್ಧಿಗೊಳಿಸಲಾಗುತ್ತದೆ ಮತ್ತು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತದೆ. ಕೊನೆಯಲ್ಲಿ, ನಿರ್ಣಯ ಮತ್ತು ನಿರ್ಣಯ ಪ್ರಕ್ರಿಯೆಯ ಫಲಿತಾಂಶವನ್ನೇ ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ.

ವ್ಯಾಪಾರೋದ್ಯಮ ಸಂಶೋಧನೆಯ ವೈಶಿಷ್ಟ್ಯಗಳು ಬದಲಾಯಿಸಿ

ಮೊದಲನೆಯದಾಗಿ ವ್ಯಾಪಾರೋದ್ಯಮ ಸಂಶೋಧನೆಯು ಸುವ್ಯವಸ್ಥಿತವಾದದ್ದು . ಆದ್ದರಿಂದ ವ್ಯಾಪಾರೋದ್ಯಮ ಸಂಶೋಧನಾ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲೂ ವ್ಯವಸ್ಥಿತ ಯೋಜನೆ ಬೇಕಾಗುತ್ತದೆ. ಸುಸ್ಥಿತಿಯಲ್ಲಿಡುವ, ಉತ್ತಮ ರೀತಿಯಲ್ಲಿ ದಾಖಲಿಸಿಕೊಳ್ಳವ ಮತ್ತು ಸಾಧ್ಯವಾದಷ್ಟು ಮುಂಚಿತವಾಗಿ ಯೋಜನೆ ಮಾಡುವ ವಿಧಾನಗಳನ್ನು ಪ್ರತೀ ಹಂತದಲ್ಲೂ ಕ್ರಮಬದ್ಧವಾಗಿ ಅನುಸರಿಸಲಾಗುತ್ತದೆ. ಮಾರಾಟಗಾರಿಕೆ ಸಂಶೋಧನೆಯು ವೈಜ್ಞಾನಿಕ ವಿಧಾನವನ್ನು ಬಳಸಿಕೊಳ್ಳುತ್ತದೆ, ಇದರಲ್ಲಿ ಮಾಹಿತಿಯನ್ನು ಹಿಂದಿನ ಕಲ್ಪನೆ ಅಥವಾ ಊಹೆಗಳನ್ನು ಪರಿಶೀಲಿಸುವುದಕ್ಕಾಗಿ ಸಂಗ್ರಹಿಸಲಾಗುತ್ತದೆ ಮತ್ತು ವಿಶ್ಲೇಷಿಸಲಾಗುತ್ತದೆ.

ವ್ಯಾಪಾರೋದ್ಯಮ ಸಂಶೋಧನೆಯು ಉದ್ಧೇಶ ಹೊಂದಿರುವಂತದ್ದು . ಇದು ವಾಸ್ತವ ಸಂಗತಿಗಳನ್ನು ಪ್ರತಿಬಿಂಬಿಸುವ ನಿಖರ ಮಾಹಿತಿಯನ್ನು ಒದಗಿಸಲು ಪ್ರಯತ್ನಿಸುತ್ತದೆ. ಇದು ಪಕ್ಷಪಾತವಿಲ್ಲದೆ ನಡೆಯಬೇಕು. ಸಂಶೋಧನೆ ಸಾಮಾನ್ಯವಾಗಿ ಸಂಶೋಧಕರ ಸಂಶೋಧನಾ ತತ್ವಗಳ ಪ್ರಭಾವಕ್ಕೆ ಒಳಗಾಗಿರುತ್ತದೆ,ಆದರೆ ಸಂಶೋಧಕರ ಅಥವಾ ಆಡಳಿತ ನಿರ್ವಹಣೆಯ ವೈಯಕ್ತಿಕ ಅಥವಾ ರಾಜಕೀಯ ಪಕ್ಷಪಾತ ಧೋರಣೆಯಿಂದ ಇದು ಮುಕ್ತವಾಗಿರಬೇಕು. ವೈಯಕ್ತಿಕ ಅಥವಾ ರಾಜಕೀಯ ಲಾಭದಿಂದ ಪ್ರೇರಿತವಾದ ಸಂಶೋಧನೆಯು ವೃತ್ತಿ ಧರ್ಮದ ಉಲ್ಲಂಘನೆ ಎನಿಸುತ್ತದೆ. ಅಂತಹ ಸಂಶೋಧನೆ ಕೇವಲ ಪೂರ್ವಗ್ರಹ ಪೀಡಿತ ಕಲ್ಪನೆಗಳ ಕಲಸುಮೇಲೋಗರವಾಗಿರುತ್ತದೆ. "ಕಂಡುಹಿಡಿ ಮತ್ತು ಅದು ಹೇಗಿದೆಯೋ ಹಾಗೆಯೇ ಹೇಳು" ಎಂಬುದು ಪ್ರತಿಯೊಬ್ಬ ಸಂಶೋಧಕನ ಧ್ಯೇಯ ಸೂತ್ರವಾಗಿರಬೇಕು. ವ್ಯಾಪಾರೋದ್ಯಮ ಸಂಶೋಧನೆಯ ಉದ್ಧೇಶವು ವೃತ್ತಿ ಸಂಬಂಧಿ ನೀತಿ ಸಂಹಿತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ, ಇದನ್ನು ಮುಂದಿನ ಅಧ್ಯಾಯದಲ್ಲಿ ವಿವರಿಸಲಾಗಿದೆ.

ಮಾಹಿತಿಯ ಗುರುತಿಸುವಿಕೆ , ಸಂಗ್ರಹಿಸುವಿಕೆ, ವಿಶ್ಲೇಷಣೆ ಮಾಡುವಿಕೆ ಮತ್ತು ಮಾಹಿತಿ ಪ್ರಸರಿಸುವಿಕೆ ಮೊದಲಾದವುಗಳನ್ನು ವ್ಯಾಪಾರೋದ್ಯಮ ಸಂಶೋಧನೆ ಯು ಒಳಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಪ್ರತಿಯೊಂದು ಹಂತವೂ ಮುಖ್ಯವಾದುದು. ನಾವು ವ್ಯಾಪಾರೋದ್ಯಮ ಸಂಶೋಧನೆಯ ಸಮಸ್ಯೆ ಅಥವಾ ಅವಕಾಶವನ್ನು ಗುರುತಿಸಿ, ಅದನ್ನು ಪತ್ತೆ ಮಾಡಲು ಯಾವ ಮಾಹಿತಿ ಬೇಕೆಂಬುದರ ಬೆನ್ನು ಹತ್ತುತ್ತೇವೆ, ನಂತರ ತಾರ್ಕಿಕ ಅನುಮಾನಗಳ ರೂಪುರೇಷೆ ಎಳೆಯುತ್ತೇವೆ. ಅಂತಿಮವಾಗಿ, ನಿರ್ಣಯ, ಸಲಹೆ ಮತ್ತು ಸೂಚನೆಗಳನ್ನು ಒಂದು ಕ್ರಮಬದ್ಧ ವ್ಯವಸ್ಥೆಯಲ್ಲಿ ನೀಡಲಾಗುತ್ತದೆ. ಆಡಳಿತ ನಿರ್ವಹಣೆ ಹೊತ್ತವರು ನಿರ್ಣಯ ಕೈಗೊಳ್ಳಲು ಇದು ಸಹಾಯಕವಾಗುತ್ತದೆ ಮತ್ತು ನೇರವಾಗಿ ಅದನ್ನು ಅವಲಂಬಿಸಿ ಕಾರ್ಯಾಚರಣೆ ಮುಂದುವರಿಯುತ್ತದೆ. ವ್ಯಾಪಾರೋದ್ಯಮ ಸಂಶೋಧನೆ ನಡೆಸುವುದು ನಿರ್ಧಾರ ಕೈಗೊಳ್ಳುವಲ್ಲಿ ಆಡಳಿತ ನಿರ್ವಹಣೆಗೆ ಸಹಾಯ ಮಾಡುವುದಕ್ಕಾಗಿಯೇ ಹೊರತು ಅಲ್ಲಿಗೇ ಅದು ಅಂತಿಮವಲ್ಲ ಎಂಬುದನ್ನು ಒತ್ತಿ ಹೇಳಬೇಕಿದೆ. ಈ ವ್ಯಾಖ್ಯಾನದ ವಿವರಣೆಯನ್ನು, ವಿವಿಧ ರೀತಿಯ ವ್ಯಾಪಾರೋದ್ಯಮ ಸಂಶೋಧನೆಯ ವರ್ಗೀಕರಣದ ಮ‌ೂಲಕ ಮುಂದಿನ ವಿಭಾಗವು ವಿವರಿಸುತ್ತದೆ.

ವಾಣಿಜ್ಯ ಸಂಶೋಧನೆಯ ಇತರ ಪ್ರಕಾರಗಳೊಂದಿಗೆ ಹೋಲಿಕೆ ಬದಲಾಯಿಸಿ

ವ್ಯವಹಾರ ಸಂಶೋಧನೆಯ ಇತರ ಪ್ರಕಾರಗಳೆಂದರೆ:

 • ಮಾರುಕಟ್ಟೆ ಸಂಶೋಧನೆ ಯು ವ್ಯಾಪ್ತಿಯಲ್ಲಿ ವಿಸ್ತಾರವಾಗಿದ್ದು, ವ್ಯವಹಾರದ ಎಲ್ಲಾ ಅಂಶಗಳನ್ನೂ ಪರಿಶೀಲಿಸುತ್ತದೆ. ಸ್ಪರ್ಧಿಸುವವರು, ಮಾರುಕಟ್ಟೆ ರಚನೆ, ಸರಕಾರದ ನಿರ್ಬಂಧನೆಗಳು, ಅರ್ಥ ವ್ಯವಸ್ಥೆಯ ಒಲವು, ತಾಂತ್ರಿಕ ಬೆಳವಣಿಗೆಗಳು ಮತ್ತು ಇತರ ಅನೇಕ ವ್ಯವಹಾರ ಸನ್ನಿವೇಶದ ಬಗ್ಗೆ (ನೋಡಿ: ವಾಣಿಜ್ಯ ಸನ್ನಿವೇಶ ವಿಂಗಡಣೆ) ಹಲವಾರು ಇತರ ಅಂಶಗಳ ಬಗ್ಗೆ ಇದು ಪ್ರಶ್ನಿಸುತ್ತದೆ. ಕೆಲವೊಮ್ಮೆ ಈ ಪದವು ಹೆಚ್ಚು ನಿರ್ದಿಷ್ಟವಾಗಿ ಕಂಪೆನಿ, ಉದ್ಯಮ ಅಥವಾ ವ್ಯವಹಾರ ಕ್ಷೇತ್ರಗಳ ಆರ್ಥಿಕ ವಿಶ್ಲೇಷಣೆಯನ್ನು ವಿಶೇಷವಾಗಿ ಉಲ್ಲೇಖಿಸುತ್ತದೆ. ಈ ಸಂದರ್ಭದಲ್ಲಿ, ಆರ್ಥಿಕ ವಿಶ್ಲೇಷಣೆಕಾರರು ಸಂಶೋಧನೆ ನಡೆಸಿ ಸಾಮಾನ್ಯವಾಗಿ ಬಂಡವಾಳಸಲಹೆಗಾರರಿಗೆ ಮತ್ತು ಪ್ರಬಲ ಬಂಡವಾಳ ಹೂಡಿಕೆದಾರರಿಗೆ ಸಂಶೋಧನಾ ಫಲಶೃತಿಯನ್ನು ನೀಡುತ್ತಾರೆ.
 • ಉತ್ಪನ್ನ ಸಂಶೋಧನೆ - ಲಭ್ಯವಿರುವ ತಾಂತ್ರಿಕತೆಯಿಂದ ಯಾವ ಉತ್ಪನ್ನವನ್ನು ತಯಾರಿಸಬಹುದು ಹಾಗೂ ಹೊಸ ತಂತ್ರಜ್ಞಾನದಿಂದ ಯಾವ ರೀತಿಯ ನವೀನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬಹುದು (ಹೊಸ ಉತ್ಪನ್ನ ಅಭಿವೃದ್ಧಿ ಗಮನಿಸಿ) ಎಂಬುದನ್ನು ಇದು ಅವಲೋಕಿಸುತ್ತದೆ.
 • ಜಾಹೀರಾತು ಸಂಶೋಧನೆ - ಇದೊಂದು ಮಾರಾಟಗಾರಿಕೆ ಸಂಶೋಧನೆಯ ವಿಶೇಷ ಪ್ರಕಾರವಾಗಿದೆ, ಜಾಹೀರಾತನ್ನು ಪರಿಣಾಮಕಾರಿಯಾಗಿ ಸುಧಾರಿಸುವುದಕ್ಕಾಗಿ ಇದನ್ನು ನಡೆಸಲಾಗುತ್ತದೆ. "ಪೂರ್ವ-ಪರಿಶೀಲನೆ" ಎಂದೂ ಹೇಳಲಾಗುವ ತದ್ರೂಪಿ ಪರಿಶೀಲನೆಯು ಗ್ರಾಹಕರ ಇಷ್ಟದಂತೆ ಮಾಡುವ ಸಂಶೋಧನೆಯಾಗಿದೆ, ಇದು ಜಾಹೀರಾತಿನ ಬಗ್ಗೆ ಕೇಳುಗ ವರ್ಗಕ್ಕಿರುವ ಲಕ್ಷ್ಯದ ಮಟ್ಟ, ಬ್ರ್ಯಾಂಡ್ ಸಂಯೋಜನೆ, ಪ್ರೇರಣೆ, ಮನರಂಜನೆ ಮತ್ತು ಸಂವಹನವನ್ನು ಪರಿಶೀಲಿಸುವುದರ ಮ‌ೂಲಕ ಹಾಗೂ ಜಾಹೀರಾತಿನ ಗಮನ ಮತ್ತು ಭಾವನೆಗಳನ್ನು ಭೇದಿಸುವುದರ ಮ‌ೂಲಕ ಮಾರುಕಟ್ಟೆಯಲ್ಲಿ ಜಾಹಿರಾತಿನ ನಿರ್ವಹಣೆಯ ಬಗ್ಗೆ ಅದು ಪ್ರಕಟಗೊಳ್ಳುವ ಮೊದಲೇ ಭವಿಷ್ಯ ನುಡಿಯುತ್ತದೆ. ಜಾಹಿರಾತನ್ನು ಮುಂಚಿತವಾಗಿ ಪರಿಶೀಲಿಸುವುದು ಇನ್ನೂ ಸೂಕ್ತ ರೂಪದಲ್ಲಿಲ್ಲ (ಆನಿಮ್ಯಾಟಿಕ್ ಅಥವಾ ರೈಪೊಮ್ಯಾಟಿಕ್). (ಯಂಗ್, ಪುಟ 213)

ವ್ಯಾಪಾರೋದ್ಯಮ ಸಂಶೋಧನೆಯ ವರ್ಗೀಕರಣ ಬದಲಾಯಿಸಿ

ಸಂಸ್ಥೆಗಳು ಎರಡು ಕಾರಣಗಳಿಗಾಗಿ ಮಾರಾಟಗಾರಿಕೆ ಸಂಶೋಧನೆ ಮಾಡುತ್ತವೆ: ಮಾರಾಟಗಾರಿಕೆ ಸಮಸ್ಯೆಗಳನ್ನು (1) ಗುರುತಿಸಲು ಮತ್ತು (2) ಪರಿಹರಿಸಲು. ಈ ವ್ಯತ್ಯಾಸಗಳ ಆಧಾರದ ಮೇಲೆ ಮಾರಾಟಗಾರಿಕೆ ಸಂಶೋಧನೆಯನ್ನು ಸಮಸ್ಯೆ ಗುರುತಿಸುವ ಸಂಶೋಧನೆ ಮತ್ತು ಸಮಸ್ಯೆ ಪರಿಹರಿಸುವ ಸಂಶೋಧನೆ ಎಂಬುದಾಗಿ ವರ್ಗೀಕರಿಸಲಾಗುತ್ತದೆ.

ಮೇಲ್ನೋಟಕ್ಕೆ ಗೋಚರವಾಗದ ಆದರೆ ಅಸ್ತಿತ್ವದಲ್ಲಿರುವ ಅಥವಾ ಮುಂದೊಮ್ಮೆ ಉದ್ಭವಿಸಬಹುದಾದ ತೊಂದರೆಗಳನ್ನು ಪತ್ತೆ ಹಚ್ಚಲು ಸಮಸ್ಯೆ ಗುರುತಿಸುವ ಸಂಶೋಧನೆಯನ್ನು ಕೈಗೊಳ್ಳಲಾಗುತ್ತದೆ. ಮಾರುಕಟ್ಟೆ ಪ್ರಬಲತೆ, ಮಾರುಕಟ್ಟೆ ಪಾಲು, ಬ್ರ್ಯಾಂಡ್ ಅಥವಾ ಕಂಪೆನಿ ಹೆಸರು, ಮಾರುಕಟ್ಟೆ ವೈಶಿಷ್ಟ್ಯಗಳು, ಮಾರಾಟ ವಿಶ್ಲೇಷಣೆಗಳು, ಸಮೀಪಗಾಮಿ ಮುಂದಾಲೋಚನೆ, ದೂರಗಾಮಿ ಮುಂದಾಲೋಚನೆ ಮತ್ತು ವ್ಯವಹಾರ ಪ್ರವೃತ್ತಿ ಹೊಂದಿರುವ ಸಂಶೋಧನೆ - ಇವು ಸಮಸ್ಯೆ ಗುರುತಿಸುವ ಸಂಶೋಧನೆಗೆ ಉದಾಹರಣೆಗಳಾಗಿವೆ. ಈ ರೀತಿಯ ಸಂಶೋಧನೆಯು ಮಾರಾಟಗಾರಿಕೆ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ ಹಾಗೂ ಸಮಸ್ಯೆಯನ್ನು ಪತ್ತೆ ಹಚ್ಚಲು ನೆರವಾಗುತ್ತವೆ. ಉದಾಹರಣೆಗಾಗಿ, ನಿರ್ದಿಷ್ಟ ಮಾರಾಟಗಾರಿಕೆ ತೊಂದರೆಗಳನ್ನು ಪರಿಹರಿಸುವ ನಿರ್ಣಯಗಳನ್ನು ಕೈಗೊಳ್ಳಲು ಸಮಸ್ಯೆ ಪರಿಹರಿಸುವ ಸಂಶೋಧನೆಯನ್ನು ಬಳಸಲಾಗುತ್ತದೆ.

ಸ್ಟ್ಯಾನ್ಫೋರ್ಡ್ ಸಂಶೋಧನೆ ಇನ್‌ಸ್ಟಿಟ್ಯೂಟ್ ಗ್ರಾಹಕರ ವಾರ್ಷಿಕ ಸಮೀಕ್ಷೆಯನ್ನು ನಡೆಸುತ್ತದೆ, ಇದು ಸಮಾನ ಮನಸ್ಕ ಗ್ರಾಹಕರನ್ನು ಒಂದೊಂದು ಗುಂಪುಗಳಾಗಿ ವಿಂಗಡಿಸುತ್ತದೆ. ದಿ ನ್ಯಾಷನಲ್ ಪರ್ಚೇಸ್ ಡೈರಿಯು (NPD) ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲೇ ಅತೀದೊಡ್ಡ ತಂಡವಾಗಿದೆ.

ಪ್ರಮಾಣಿತ ಸೇವೆಗಳು ಬೇರೆ ಬೇರೆ ಗ್ರಾಹಕ ವ್ಯವಹಾರ ಸಂಸ್ಥೆಗಳಿಗೆ ನಡೆಸಲಾಗುವ ಸಂಶೋಧನೆಯ ಅಧ್ಯಯನಗಳಾಗಿವೆ, ಆದರೆ ಇದೊಂದು ಪ್ರಮಾಣಿತ ಮಾರ್ಗದಲ್ಲಿ ಸಾಗುತ್ತದೆ. ಉದಾಹರಣೆಗಾಗಿ, ಜಾಹೀರಾತಿನ ಪರಿಣಾಮವನ್ನು ಅಳೆಯುವ ಕಾರ್ಯವಿಧಾನಗಳನ್ನು ಪ್ರಮಾಣಿತಗೊಳಿಸಲಾಗಿದೆ, ಇದರಿಂದ ಫಲಿತಾಂಶಗಳನ್ನು ಅಧ್ಯಯನಗಳೊಂದಿಗೆ ಹೋಲಿಸಬಹುದು ಮತ್ತು ಮೌಲ್ಯ ನಿರ್ಧಾರಕ ಉತ್ಪಾದನೆಯನ್ನು ಸ್ಥಾಪಿಸಬಹುದು. ಪ್ರಕಟವಾದ ಮುದ್ರಣ ಜಾಹೀರಾತಿನ ಯೋಗ್ಯತೆ ನಿರ್ಧರಿಸುವುದಕ್ಕೆ 'ಸ್ಟಾರ್ಚ್ ರೀಡರ್ಶಿಪ್ ಸರ್ವೆ' ಹೆಚ್ಚು ವ್ಯಾಪಕವಾಗಿ ಬಳಸುವ ಸೇವೆಯಾಗಿದೆ; ಮತ್ತೊಂದು ಬಹುಪ್ರಸಿದ್ಧ ಸೇವೆಯೆಂದರೆ - 'ಗ್ಯಾಲಪ್‌ ಆಂಡ್ ರಾಬಿನ್ಸನ್ ಮ್ಯಾಗಜಿನ್ ಇಂಪ್ಯಾಕ್ಟ್ ಸ್ಟಡೀಸ್'. ಈ ಸೇವೆಗಳೂ ಸಂಘಟನೆಗಳ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತವೆ.

 • ಗ್ರಾಹಕರ ಇಷ್ಟದಂತೆ ಮಾಡುವ ಸೇವೆಗಳು ಗ್ರಾಹಕರ ನಿರ್ದಿಷ್ಟ ಬೇಡಿಕೆಗಳನ್ನು ತೃಪ್ತಿಪಡಿಸುವ ವಿವಿಧ ರೀತಿಯ ವಿಸ್ತೃತ ವ್ಯಾಪಾರೋದ್ಯಮ ಸಂಶೋಧನೆ ಸೇವೆಗಳನ್ನು ಒದಗಿಸುತ್ತವೆ. ವ್ಯಾಪಾರೋದ್ಯಮ ಸಂಶೋಧನೆ ಪ್ರತಿಯೊಂದು ಯೋಜನೆಯನ್ನೂ ವಿಶಿಷ್ಟವಾದುದು ಎಂದೇ ಪರಿಗಣಿಸುತ್ತದೆ.
 • ನಿಯಮಿತ-ಸೇವೆ ಪೂರೈಕೆದಾರರು ವ್ಯಾಪಾರೋದ್ಯಮ ಸಂಶೋಧನೆ ಯೋಜನೆಯ ಒಂದು ಅಥವಾ ಕೆಲವು ಹಂತಗಳಿಗೆ ಮಾತ್ರ ಸೀಮಿತವಾಗಿರುತ್ತಾರೆ. ಅಂತಹ ಪೂರೈಕೆದಾರರು ನೀಡುವ ಸೇವೆಗಳನ್ನು ವ್ಯವಹಾರ ಕ್ಷೇತ್ರ ಸೇವೆಗಳು, ಕೋಡಿಂಗ್ ಮತ್ತು ಮಾಹಿತಿ ನಮ‌ೂದು, ಮಾಹಿತಿ ವಿಶ್ಲೇಷಣೆ, ವಿಶ್ಲೇಷಣಾತ್ಮಕ ಸೇವೆಗಳು ಮತ್ತು ವ್ಯಾಪಾರ ಮುದ್ರೆಯಿರುವ ಉತ್ಪನ್ನಗಳೆಂದು ವರ್ಗೀಕರಿಸಬಹುದು. ವ್ಯವಹಾರ ಕ್ಷೇತ್ರ ಸೇವೆಗಳು ಮೇಲ್ ‌ಮೂಲಕ, ವೈಯಕ್ತಿಕವಾಗಿ ಅಥವಾ ದೂರವಾಣಿ ಸಂದರ್ಶನದ ಮ‌ೂಲಕ ಮಾಹಿತಿಯನ್ನು ಸಂಗ್ರಹಿಸುತ್ತವೆ. ಸಂದರ್ಶನದಲ್ಲಿ ಪರಿಣಿತವಾಗಿರುವ ಸಂಘಟನೆಗಳನ್ನು 'ವ್ಯವಹಾರ ಕ್ಷೇತ್ರ ಸೇವಾ ಸಂಸ್ಥೆ'ಗಳೆಂದು ಕರೆಯುತ್ತಾರೆ. ಈ ಸಂಸ್ಥೆಗಳು ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಸಣ್ಣ ಒಡೆತನದ ಸಂಸ್ಥೆಗಳಿಂದ ಹಿಡಿದು, WATS ಶ್ರೇಣಿಯ ಸಂದರ್ಶನ ಸೌಕರ್ಯಗಳನ್ನು ಹೊಂದಿರುವ ಬಹುರಾಷ್ಟ್ರೀಯ ದೊಡ್ಡ ಸಂಸ್ಥೆಗಳನ್ನೂ ಒಳಗೊಂಡಿವೆ. ವ್ಯಾಪಾರ ಕೇಂದ್ರದಲ್ಲಿ ಗಿರಾಕಿಗಳ ಸಂದರ್ಶನ ಮಾಡುವುದಕ್ಕಾಗಿ ಕೆಲವು ಸಂಸ್ಥೆಗಳು ರಾಷ್ಟ್ರಾದ್ಯಂತ ಬೃಹತ್‌ ಪ್ರಮಾಣದ ಸಂದರ್ಶನ ಸೌಕರ್ಯಗಳನ್ನು ಹೊಂದಿವೆ.
 • ಕೋಡಿಂಗ್ ಮತ್ತು ದತ್ತಾಂಶ ನಮ‌ೂದು ಸೇವೆಗಳು - ಇವು ಪ್ರಶ್ನೆಗಳನ್ನು ಪರಿಷ್ಕರಿಸುವುದು, ಕೋಡಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಮತ್ತು ದತ್ತಾಂಶಗಳನ್ನು ಕಂಪ್ಯೂಟರ್‌ಗೆ ಒದಗಿಸಲು ಡಿಸ್ಕ್ ಅಥವಾ ಮ್ಯಾಗ್ನೆಟಿಕ್ ಟೇಪ್‌ಗಳಲ್ಲಿ ತುಂಬಿಡುವುದು ಮೊದಲಾದ ಕ್ರಿಯೆಗಳನ್ನು ಒಳಗೊಂಡಿವೆ. NRC ದತ್ತಾಂಶ ವ್ಯವಸ್ಥೆಗಳು ಇಂತಹ ಸೇವೆಗಳನ್ನು ಒದಗಿಸುತ್ತವೆ.
 • ವಿಶ್ಲೇಷಣಾತ್ಮಕ ಸೇವೆಗಳು ಪ್ರಶ್ನೆಗಳನ್ನು ರೂಪಿಸುವುದು ಮತ್ತು ಪರೀಕ್ಷಾ ಪೂರ್ವದ, ಮಾಹಿತಿ ಸಂಗ್ರಹಿಸುವ ಉತ್ತಮ ವಿಧಾನಗಳನ್ನು ಕಂಡುಹಿಡಿಯುವುದು, ಮಾದರಿ ಯೋಜನೆಗಳನ್ನು ರಚಿಸುವುದು ಹಾಗೂ ಸಂಶೋಧನಾ ವಿನ್ಯಾಸದ ಇತರ ಅಂಶಗಳನ್ನು ಒಳಗೊಂಡಿವೆ. ವಿಶಿಷ್ಟ ಪ್ರಾಯೋಗಿಕ ವಿನ್ಯಾಸಗಳನ್ನೊಳಗೊಂಡ ಆಧುನಿಕ ಮತ್ತು ಸಂಕೀರ್ಣ ಕಾರ್ಯವಿಧಾನಗಳ ಬಗೆಗಿನ ಅರಿವು ಹಾಗೂ ಜಂಟಿ ವಿಶ್ಲೇಷಣೆ ಮತ್ತು ಬಹುಆಯಾಮಗಳನ್ನುಳ್ಳ ಮಾಪನಗಳ ವಿಶ್ಲೇಷಣಾತ್ಮಕ ತಂತ್ರಜ್ಞಾನಗಳು ಕೆಲವು ಜಟಿಲ ಮಾರಾಟಗಾರಿಕೆ ಸಂಶೋಧನೆ ಯೋಜನೆಗಳಿಗೆ ಅತೀ ಅಗತ್ಯ. ಈ ರೀತಿಯ ವಿಶಿಷ್ಟ ಮಾಹಿತಿಗಳನ್ನು ವಿಶ್ಲೇಷಣಾತ್ಮಕ ಸೇವೆಗಳಲ್ಲಿ ಪರಿಣತಿ ಹೊಂದಿದ ಸಂಸ್ಥೆಗಳಿಂದ ಮತ್ತು ಸಲಹಾರ್ಥಿಗಳಿಂದ ಪಡೆಯಬಹುದು.
 • ದತ್ತಾಂಶ ವಿಶ್ಲೇಷಣೆ ಸೇವೆ ಗಳನ್ನು 'ಟ್ಯಾಬ್ ಹೌಸಸ್'(ದರಪಟ್ಟಿ ಸಂಘ) ಎಂದೂ ಕರೆಯುವ ಸಂಸ್ಥೆಗಳು ಒದಗಿಸುತ್ತವೆ, ಈ ಸಂಸ್ಥೆಗಳು ತಾವು ಕೈಗೊಂಡ ಬೃಹತ್‌ ಸಮೀಕ್ಷೆಗಳಿಂದ ಪಡೆದ ಪರಿಮಾಣಾತ್ಮಕ ದತ್ತಾಂಶವನ್ನು ಕಂಪ್ಯೂಟರ್ ವಿಶ್ಲೇಷಣೆ ಮಾಡುವುದರಲ್ಲಿ ಪರಿಣತವಾಗಿರುತ್ತವೆ. ಆರಂಭದಲ್ಲಿ ಹೆಚ್ಚಿನ ಮಾಹಿತಿ ವಿಶ್ಲೇಷಣೆ ಸಂಸ್ಥೆಗಳು ಪಟ್ಟಿ ಮಾಡುವಿಕೆಯನ್ನು (ಆವರ್ತನ ಎಣಿಕೆಗಳು) ಮತ್ತು ಮಿಶ್ರ ಪಟ್ಟಿ ಮಾಡುವಿಕೆಯನ್ನು (ಎರಡು ಅಥವಾ ಅದಕ್ಕಿಂತ ಹೆಚ್ಚಿನ ಅಂಶಗಳನ್ನು ಏಕಕಾಲದಲ್ಲಿ ವಿವರಿಸುವ ಆವರ್ತನ ಎಣಿಕೆಗಳು) ಮಾತ್ರ ಒದಗಿಸುತ್ತಿದ್ದವು. ಸಾಫ್ಟ್‌ವೇರ್ ಬೆಳವಣಿಗೆಯಿಂದ ಈಗ ಅನೇಕ ಸಂಸ್ಥೆಗಳು ಅವುಗಳು ತಮ್ಮ ದತ್ತಾಂಶವನ್ನು ತಾವೇ ವಿಶ್ಲೇಷಿಸಲು ಸಮರ್ಥವಾಗಿವೆ, ಆದರೆ ಮಾಹಿತಿ ವಿಶ್ಲೇಷಣೆ ಸಂಸ್ಥೆಗಳು ಇನ್ನೂ ಬೇಡಿಕೆಯಲ್ಲಿವೆ.
 • ವ್ಯಾಪಾರ ಮುದ್ರೆಯಿರುವ ಮಾರಾಟಗಾರಿಕೆ ಸಂಶೋಧನಾ ಉತ್ಪನ್ನಗಳು ಮತ್ತು ಸೇವೆಗಳು ನಿರ್ದಿಷ್ಟ ಪ್ರಕಾರದ ವ್ಯಾಪಾರೋದ್ಯಮ ಸಂಶೋಧನಾ ಸಮಸ್ಯೆಗಳನ್ನು ತಿಳಿಸಲು ಅಭಿವೃದ್ಧಿಪಡಿಸಿದ ವಿಶಿಷ್ಟ ದತ್ತಾಂಶ ಸಂಗ್ರಹ ಮತ್ತು ವಿಶ್ಲೇಷಣಾ ಕಾರ್ಯವಿಧಾನವಾಗಿದೆ. ಈ ಕಾರ್ಯ ವಿಧಾನಗಳಿಗೆ ಹಕ್ಕು ಸ್ವಾಮ್ಯವನ್ನು, ಬ್ರ್ಯಾಂಡ್ ಹೆಸರನ್ನು ನೀಡಲಾಗಿದೆ ಹಾಗೂ ಇತರ ಯಾವುದೇ ವ್ಯಾಪಾರದ ಸರಕಿನಂತೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿರುತ್ತಾರೆ.

ವ್ಯಾಪಾರೋದ್ಯಮ ಸಂಶೋಧನೆಯ ಪ್ರಕಾರಗಳು ಬದಲಾಯಿಸಿ

ಈ ಕೆಳಗಿನವನ್ನೂ ಒಳಗೊಂಡಂತೆ, ವ್ಯಾಪಾರೋದ್ಯಮ ಸಂಶೋಧನೆಯ ತಂತ್ರಜ್ಞಾನಗಳಲ್ಲಿ ಹಲವಾರು ಪ್ರಕಾರಗಳಿವೆ:

 • ಜಾಹೀರಾತು ಗುರುತಿಸುವಿಕೆ – ಆವರ್ತಕ ಅಥವಾ ನಿರಂತರ ಮಾರುಕಟ್ಟೆಯ ಸಂಶೋಧನೆಯಾಗಿದೆ, ಇದು ಬ್ರ್ಯಾಂಡ್‌ ಅರಿವು, ಬ್ರ್ಯಾಂಡ್‌ ಆದ್ಯತೆ ಮತ್ತು ಉತ್ಪನ್ನದ ಬಳಕೆಯಂತಹ ಮಾಪನಗಳನ್ನು ಬಳಸಿಕೊಂಡು ಬ್ರ್ಯಾಂಡ್‌ನ ನಿರ್ವಹಣೆಯ ಬಗ್ಗೆ ಮೇಲ್ವಿಚಾರಣೆ ನಡೆಸುತ್ತದೆ. (ಯಂಗ್, 2005)
 • ಜಾಹೀರಾತು ಸಂಶೋಧನೆ – ಇದನ್ನು ಜಾಹಿರಾತುಗಳ ಮಾದರಿ ಪರಿಶೀಲನೆ ಅಥವಾ ಯಾವುದೇ ಮಾಧ್ಯಮಕ್ಕೆ ಅದರ ಪರಿಣಾಮವನ್ನು ಗುರುತಿಸಲು ಬಳಸಲಾಗುತ್ತದೆ. ಜನರ ಗಮನವನ್ನು ಸೆಳೆಯಲು, ಸಂದೇಶ ತಿಳಿಸಲು, ಬ್ರ್ಯಾಂಡ್ ಹೆಸರನ್ನು ಬೆಳೆಸಲು ಮತ್ತು ಉತ್ಪನ್ನ ಅಥವಾ ಸೇವೆಯನ್ನು ಕೊಂಡುಕೊಳ್ಳುವಂತೆ ಗ್ರಾಹಕರನ್ನು ಪ್ರಚೋದಿಸಲು ಜಾಹಿರಾತಿಗಿರುವ ಸಾಮರ್ಥ್ಯದ ಆಧಾರದಲ್ಲಿ ಈ ಸಂಶೋಧನೆಯನ್ನು ಮಾಡಲಾಗುತ್ತದೆ. (ಯಂಗ್, 2005)
 • ಬ್ರ್ಯಾಂಡೆಡ್‌ ಸರಕಿನ ಸಂಶೋಧನೆ - ಬ್ರ್ಯಾಂಡ್ ಹೊಂದಿರುವ ಸರಕಿನ ಜೊತೆ ಗ್ರಾಹಕರು ಹೇಗೆ ಅನುಕೂಲವಾಗಿ ಸ್ಪಂದಿಸುತ್ತಾರೆ?
 • ಬ್ರ್ಯಾಂಡ್ ಸಂಬಂಧ ಸಂಶೋಧನೆ - ಗ್ರಾಹಕರು ಬ್ರ್ಯಾಂಡ್‌ನೊಂದಿಗೆ ಸಂಬಂಧ ಕಲ್ಪಿಸಿಕೊಳ್ಳಲು ಏನು ಮಾಡುತ್ತಾರೆ?
 • ಬ್ರ್ಯಾಂಡ್ ಗುಣಲಕ್ಷಣ ಸಂಶೋಧನೆ - ಬ್ರ್ಯಾಂಡ್‌ನ ಭರವಸೆಗಳನ್ನು ವಿವರಿಸುವ ಪ್ರಮುಖ ಲಕ್ಷಣಗಳು ಯಾವುವು?
 • ಬ್ರ್ಯಾಂಡ್ ಹೆಸರಿನ ಪರಿಶೀಲನೆ - ಉತ್ಪನ್ನಗಳಿಗೆ ಇಡಲಾದ ಹೆಸರಿನ ಬಗ್ಗೆ ಗ್ರಾಹಕರಲ್ಲಿ ಉಂಟಾಗುವ ಭಾವನೆಗಳೇನು?
 • ವಾಣಿಜ್ಯ ಸ್ವರೂಪೀ ಜಾಡಿನ ಸಂಶೋಧನೆ - ಜಾಹೀರಾತು, ಪ್ಯಾಕೇಜ್ ವಿನ್ಯಾಸ, ವೆಬ್‌ಸೈಟ್‌ ಇತ್ಯಾದಿಗಳಿಗೆ ವೀಕ್ಷಕರ ಗೋಚರ ವರ್ತನಾ ವಿಶ್ಲೇಷಣೆಯ ಪರಿಶೀಲನೆ.
 • ಪರಿಕಲ್ಪನೆಯ ಪರಿಶೀಲನೆ - ಉದ್ಧೇಶಿತ ಗ್ರಾಹಕರಿಂದ ಪರಿಕಲ್ಪನೆಯ ಸ್ವೀಕಾರದ ಪರಿಶೀಲನೆಗಾಗಿ ಇದನ್ನು ಬಳಸಲಾಗುತ್ತದೆ.
 • ಸಾತ್ವಿಕ ಬೇಟೆ(=ಕೂಲ್‌ಹಂಟಿಂಗ್) - ಫ್ಯಾಷನ್, ಸಂಗೀತ, ಚಲನಚಿತ್ರ, ದೂರದರ್ಶನ, ಯುವಜನರ ಸಂಸ್ಕೃತಿ ಮತ್ತು ಜೀವನಶೈಲಿ ಮೊದಲಾದವುಗಳಲ್ಲಿನ ಹೊಸದಾದ ಅಥವಾ ಈಗಾಗಲೇ ಬೇರುಬಿಟ್ಟಿರುವ ಸಾಂಸ್ಕೃತಿಕ ಶೈಲಿಯ ಬದಲಾವಣೆಗಳನ್ನು ಅವಲೋಕಿಸಲು ಮತ್ತು ಭವಿಷ್ಯ ನುಡಿಯಲು ಇದನ್ನು ನಡೆಸಲಾಗುತ್ತದೆ.
 • ಕೊಳ್ಳುಗರ ನಿರ್ಧಾರ ಪ್ರಕ್ರಿಯೆಗಳ ಸಂಶೋಧನೆ - ಕೊಂಡುಕೊಳ್ಳಲು ಜನರನ್ನು ಯಾವುದು ಪ್ರೇರೇಪಿಸುತ್ತದೆ ಹಾಗೂ ಅವರು ಯಾವ ನಿರ್ಧಾರ-ಮಾಡುವ ಪ್ರಕ್ರಿಯೆಯನ್ನು ಬಳಸುತ್ತಾರೆ ಎಂಬುದನ್ನು ಇಲ್ಲಿ ಪರಿಶೀಲನೆಗೆ ಒಳಗಾಗುತ್ತದೆ.
 • ಪೂರ್ವ ಭಾವಿ ಪರಿಶೀಲನೆ – ಇದು ಜಾಹಿರಾತಿನ ಬಗ್ಗೆ ಕೇಳುಗ ವರ್ಗಕ್ಕಿರುವ ಲಕ್ಷ್ಯದ ಮಟ್ಟ, ಬ್ರ್ಯಾಂಡ್ ಸಂಯೋಜನೆ, ಪ್ರೇರಣೆ, ಮನರಂಜನೆ ಮತ್ತು ಸಂವಹನವನ್ನು ಪರಿಶೀಲಿಸುವುದರ ಮ‌ೂಲಕ ಹಾಗೂ ಜಾಹೀರಾತಿನ ಗಮನ ಮತ್ತು ಭಾವನೆಗಳನ್ನು ಭೇದಿಸುವುದರ ಮ‌ೂಲಕ ಮಾರುಕಟ್ಟೆಯಲ್ಲಿ ಜಾಹೀರಾತಿನ ನಿರ್ವಹಣೆಯ ಬಗ್ಗೆ ಅದು ಪ್ರಕಟಗೊಳ್ಳುವ ಮೊದಲೇ ಭವಿಷ್ಯ ನುಡಿಯುತ್ತದೆ. (ಯಂಗ್, ಪುಟ 213)
 • ಗ್ರಾಹಕರನ್ನು ತೃಪ್ತಿಪಡಿಸುವ ಬಗೆಗಿನ ಸಂಶೋಧನೆ - ಇದು ವ್ಯಾಪಾರದಿಂದ ತೃಪ್ತಿಪಟ್ಟ ಗ್ರಾಹಕರ ಬಗ್ಗೆ ತಿಳಿಸುವ ಪರಿಮಾಣಾತ್ಮಕ ಅಥವಾ ಗುಣಾತ್ಮಕ ಅಧ್ಯಯನ.
 • ಬೇಡಿಕೆ ಅಂದಾಜು - ಉತ್ಪನ್ನಕ್ಕಿರುವ ಬೇಡಿಕೆಯ ಸರಿಸುಮಾರು ಮಟ್ಟವನ್ನು ಅಂದಾಜುಮಾಡುತ್ತದೆ.
 • ಹಂಚಿಕೆ ಮಾರ್ಗಗಳ ಪರಿಶೋಧನೆ - ಉತ್ಪನ್ನ, ಬ್ರ್ಯಾಂಡ್ ಅಥವಾ ಕಂಪೆನಿಯೊಂದರ ಬಗೆಗಿನ ಹಂಚಿಕೆದಾರರ ಮತ್ತು ಚಿಲ್ಲರೆ ವ್ಯಾಪಾರಿಗಳ ವರ್ತನೆಯ ಮೌಲ್ಯಮಾಪನ ಮಾಡುತ್ತವೆ.
 • ಇಂಟರ್ನೆಟ್ ತಂತ್ರದಿಂದ ಮಾಹಿತಿ ಸಂಗ್ರಹ - ಚಾಟ್‌, ಫೋರಮ್‌, ವೆಬ್ ಪುಟ, ಬ್ಲಾಗ್‌ ಮೊದಲಾದವುಗಳ ಮ‌ೂಲಕ ಇಂಟರ್ನೆಟ್‌ನಲ್ಲಿ ಗ್ರಾಹಕರ ಅಭಿಪ್ರಾಯಗಳನ್ನು ಹುಡುಕುವುದು. ಇವುಗಳಲ್ಲಿ ಜನರು ಉತ್ಪನ್ನಗಳ ಬಗೆಗಿನ ಅವರ ಅನುಭವಗಳನ್ನು ಸ್ವತಂತ್ರವಾಗಿ ವ್ಯಕ್ತಪಡಿಸುತ್ತಾರೆ, ಈಗ ಇದು "ಅಭಿಪ್ರಾಯ ರೂಪಿಸುವಲ್ಲಿ " ಪ್ರಬಲವಾಗುತ್ತಿವೆ.
 • ವ್ಯಾಪಾರೋದ್ಯಮದ ಪರಿಣಾಮ ಮತ್ತು ವಿಶ್ಲೇಷಣೆ - ಪ್ರತಿಯೊಂದು ಮಾರಾಟಗಾರಿಕೆ ಚಟುವಟಿಕೆಗಳ ಪರಿಣಾಮವನ್ನು ಕಂಡುಹಿಡಿಯಲು ಮಾದರಿಗಳನ್ನು ರೂಪಿಸುವುದು ಮತ್ತು ಫಲಿತಾಂಶಗಳನ್ನು ಅಳೆಯುವುದು.
 • 'ನಿಗೂಢ ಗ್ರಾಹಕ ಅಥವಾ ಗುಪ್ತ ವ್ಯಾಪಾರ' - ವ್ಯಾಪಾರೋದ್ಯಮ ಸಂಶೋಧನೆ ಸಂಸ್ಥೆಯ ಉದ್ಯೋಗಿ ಅಥವಾ ಪ್ರತಿನಿಧಿಯು ಮಾರಾಟಗಾರನನ್ನು ಭೇಟಿಯಾಗುವ ಅವನು ಅಥವಾ ಅವಳು ಉತ್ಪನ್ನಕ್ಕಾಗಿ ವ್ಯಾಪಾರ ಮಾಡುವುದನ್ನು ಗುರುತಿಸುತ್ತಾನೆ. ಈ ಸಂದರ್ಭದಲ್ಲಿ ಸಂಸ್ಥೆಯ ವ್ಯಕ್ತಿ ಅನಾಮಿಕನಾ/ಳಾಗಿ ಉಳಿದು ಬಿಡುತ್ತಾನೆ. ನಂತರ ಮಾರಾಟಗಾರ ತನ್ನ ಸಂಪೂರ್ಣ ಅನುಭವವನ್ನು ದಾಖಲಿಸುತ್ತಾನೆ. ಈ ವಿಧಾನವನ್ನು ಗುಣಮಟ್ಟ ನಿಯಂತ್ರಣಕ್ಕಾಗಿ ಅಥವಾ ಸ್ಪರ್ಧಾತ್ಮಕ ಉತ್ಪನ್ನಗಳ ಬಗ್ಗೆ ಸಂಶೋಧನೆ ಮಾಡುವುದಕ್ಕಾಗಿ ಬಳಸಲಾಗುತ್ತದೆ.
 • ನಿಲುವಿನ ಸಂಶೋಧನೆ - ಸ್ಪರ್ಧಿಗಳಿಗೆ ಸಂಬಂಧಿತ ಬ್ರ್ಯಾಂಡ್‌ಗಳನ್ನು ಉದ್ಧೇಶಿತ ಮಾರುಕಟ್ಟೆಯು ಹೇಗೆ ನೋಡುತ್ತದೆ? - ಬ್ರ್ಯಾಂಡ್‌ನ ಉದ್ಧೇಶವೇನು?
 • ಬೆಲೆಯ ಸ್ಥಿತಿಸ್ಥಾಪಕ ಗುಣದ ಪರಿಶೀಲನೆ - ಬೆಲೆ ಬದಲಾವಣೆಗಳಿಗೆ ಗ್ರಾಹಕರು ಎಷ್ಟು ಸೂಕ್ಷ್ಮ ಗ್ರಾಹಿಯಾಗಿರುತ್ತಾರೆ ಎಂಬುದನ್ನು ಪತ್ತೆ ಮಾಡುತ್ತದೆ.
 • ಮಾರಾಟದ ಬಗ್ಗೆ ಮೊದಲೇ ಅಂದಾಜು ಮಾಡುವಿಕೆ - ಇದು ಬೇಡಿಕೆಯ ಆಧಾರದಲ್ಲಿ ಮಾರಾಟದ ನಿರೀಕ್ಷಿತ ಮಟ್ಟವನ್ನು ಅಂದಾಜು ಮಾಡುತ್ತದೆ. ಜಾಹೀರಾತಿನ ಮತ್ತು ಮಾರಾಟ ಪ್ರಚಾರದ ಖರ್ಚುವೆಚ್ಚ ಇತ್ಯಾದಿ ಇತರ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇದನ್ನು ಮಾಡಲಾಗುತ್ತದೆ.
 • ವಿಭಾಗೀಯ ಸಂಶೋಧನೆ - ಜನಸಂದಣಿ, ಮನಃಶಾಸ್ತ್ರ ಮತ್ತು ಪ್ರಬಲ ಕೊಳ್ಳುಗರ ವರ್ತನೆಯ ಗುಣಲಕ್ಷಣಗಳನ್ನು ಇದು ನಿರ್ಧರಿಸುತ್ತದೆ.
 • ಆನ್‌ಲೈನ್ ತಂಡ - ವ್ಯಾಪಾರೋದ್ಯಮ ಸಂಶೋಧನೆಯ ಬಗ್ಗೆ ಆನ್‌ಲೈನ್‌ನಲ್ಲಿ ಪ್ರತಿಕ್ರಿಯಿಸಲು ಒಪ್ಪಿಕೊಂಡ ವ್ಯಕ್ತಿಗಳ ಗುಂಪು
 • ಉಗ್ರಾಣ ಪರಿಶೀಲನೆ - ಮಾರುಕಟ್ಟೆ ಪಾಲನ್ನು ಕಂಡುಹಿಡಿಯಲು ಅಥವಾ ಬಿಡಿಮಾರಾಟ ಸಮರ್ಪಕವಾಗಿ ಸೇವೆ ಸಲ್ಲಿಸುತ್ತಿದೆಯೇ ಎಂಬುದನ್ನು ದೃಢೀಕರಿಸಲು ಆಯ್ದ ಅಂಗಡಿಗಳ ಸಂಗ್ರಹಿಸಲ್ಪಟ್ಟ ಮಾದರಿಯನ್ನು ಅಂಕಿಸಂಖ್ಯೆಗೆ ಒಳಪಡಿಸಿ ಇದು ಉತ್ಪನ್ನದ ಮಾರಾಟ ಅಥವಾ ಉತ್ಪನ್ನದ ರೂಪರೇಖೆಯನ್ನು ಅಳತೆ ಮಾಡುತ್ತದೆ.
 • ಪರೀಕ್ಷಾರ್ಥ ಮಾರಾಟ - ಉತ್ಪನ್ನವನ್ನು ವ್ಯಾಪಕ ಮಾರುಕಟ್ಟೆಗೆ ಪರಿಚಯಿಸಿದಾಗ ಅದರ ಸ್ವೀಕಾರ ಹೇಗಿರುತ್ತದೆ ಎಂಬುದನ್ನು ಕಂಡುಹಿಡಿಯಲು ಬಳಸುವ ಸಣ್ಣ-ಪ್ರಮಾಣದಲ್ಲಿ ಉತ್ಪನ್ನದ ಬಿಡುಗಡೆ
 • ಸೂಕ್ಷ್ಮ ವ್ಯಾಪಾರೋದ್ಯಮ ಸಂಶೋಧನೆ - ಇದು ಪ್ರತಿಯೊಬ್ಬರ ಸಾಮಾಜಿಕ ನೆಟ್‌ವರ್ಕ್‌ಗೆ ಸಾಗಿಸುವ ನಿರ್ದಿಷ್ಟ ಸಂವಹನಗಳ ಅಂದಾಜು ಮಾಡುವಿಕೆಯನ್ನು ನಿರೂಪಿಸುವ ವ್ಯಾಪಾರೋದ್ಯಮ ಸಂಶೋಧನೆಯಾಗಿದೆ. ಸೋಷಿಯಲ್ ನೆಟ್‌ವರ್ಕಿಂಗ್ ಪೊಟೆನ್ಶಿಯಲ್ ‌ನ (SNP) ಅಂದಾಜನ್ನು ಮಾರಾಟದ ಪರಿಣಾಮದೊಂದಿಗೆ ಸಂದೇಶ ಮತ್ತು ಮಾಧ್ಯಮದ ನಿರ್ದಿಷ್ಟ ಸಂಯೋಜನೆಯಲ್ಲಿ ROI ಅನ್ನು ಅಂದಾಜು ಮಾಡಲು, ಸೇರಿಸಲಾಗುತ್ತದೆ.

ಈ ಎಲ್ಲಾ ರೀತಿಯ ವ್ಯಾಪಾರೋದ್ಯಮ ಸಂಶೋಧನೆಯನ್ನು ಸಮಸ್ಯೆ-ಪತ್ತೆ ಸಂಶೋಧನೆ ಅಥವಾ ಸಮಸ್ಯೆ-ಪರಿಹಾರ ಸಂಶೋಧನೆ ಎಂಬುದಾಗಿ ವರ್ಗೀಕರಿಸಬಹುದು.

ಮಾಹಿತಿಗೆ ಎರಡು ಪ್ರಮುಖ ಮ‌ೂಲಗಳಿವೆ - ಪ್ರಾಥಮಿಕ ಮತ್ತು ದ್ವಿತೀಯಕ ಪ್ರಾಥಮಿಕ ಸಂಶೋಧನೆ ಯನ್ನು ಪ್ರಾರಂಭದಿಂದ ನಡೆಸಲಾಗುತ್ತದೆ. ಇದು ಮ‌ೂಲಭೂತವಾದುದು, ಈಗಾಗಲೇ ಕೈಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ದತ್ತಾಂಶ ಸಂಗ್ರಹಿಸಲಾಗುತ್ತದೆ. ದ್ವಿತೀಯಕ ಸಂಶೋಧನೆ ಯನ್ನು ಬೇರೆ ಬೇರೆ ಕಾರಣಗಳಿಗಾಗಿ ಸಂಗ್ರಹ ಮಾಡುವುದರಿಂದ ಅದು ಈಗಾಗಲೇ ಅಸ್ತಿತ್ವದಲ್ಲಿದೆ. ಸಾಮಾನ್ಯವಾಗಿ ಬೇರಾರಿಂದಲೋ ಮುಂಚಿತವಾಗಿ ಪ್ರಕಟಿಸಿದ ಮಾಹಿತಿಯ ಮೇಲೆ ಇದನ್ನು ನಡೆಸಲಾಗುತ್ತದೆ. ದ್ವಿತೀಯಕ ಸಂಶೋಧನೆಗೆ ತಗಲುವ ವೆಚ್ಚ ಪ್ರಾಥಮಿಕ ಸಂಶೋಧನೆಗೆ ಆಗುವುದಕ್ಕಿಂತ ಕಡಿಮೆ, ಆದರೆ ಸಂಶೋಧಕರ ಅಗತ್ಯಗಳನ್ನು ವಿರಳವಾಗಿ ಪೂರೈಸುತ್ತದೆ.

ಅದೇ ರೀತಿಯ ವ್ಯತ್ಯಾಸ ಪರಿಶೋಧಾತ್ಮಕ ಸಂಶೋಧನೆ ಮತ್ತು ನಿರ್ಣಾಯಕ ಸಂಶೋಧನೆ ಯಲ್ಲಿಯ‌ೂ ಇದೆ. ಪರಿಶೋಧಾತ್ಮಕ ಸಂಶೋಧನೆಯು ಸಮಸ್ಯೆ ಅಥವಾ ಪರಿಸ್ಥಿತಿಯ ಒಳನೋಟ ಮತ್ತು ಸಮಗ್ರತೆಯನ್ನು ನೀಡುತ್ತದೆ. ಇದು ತೀವ್ರ ಕಾರಣಕ್ಕೆ ಮಾತ್ರ ನಿರ್ಣಾಯಕ ತೀರ್ಮಾನವನ್ನು ನೀಡಬೇಕು. ನಿರ್ಣಾಯಕ ಸಂಶೋಧನೆ ಯು ನಿರ್ಣಯಗಳನ್ನು ನೀಡುತ್ತದೆ: ಅಧ್ಯಯನದ ಫಲಿತಾಂಶಗಳು ಎಲ್ಲರಿಗೂ ಸಾಮಾನ್ಯವಾಗಿರುತ್ತದೆ.

ಪರಿಶೋಧಾತ್ಮಕ ಸಂಶೋಧನೆಯನ್ನು ಸಂಶೋಧನೆಯ ಆರಂಭಿಕ ಹಂತದ ಪರಿಹಾರದ ಬಗ್ಗೆ ಮ‌ೂಲ ಕಲ್ಪನೆಯನ್ನು ಪಡೆಯಲು, ಸಮಸ್ಯೆಯ ಪರಿಶೋಧನೆಗಾಗಿ ಮಾಡಲಾಗುತ್ತದೆ. ಇದು ನಿರ್ಣಾಯಕ ಸಂಶೋಧನೆಗೆ ಮಾಹಿತಿ ನೀಡುವ ಸಾಧನವಾಗಿ ಕಾರ್ಯ ನಿರ್ವಹಿಸಬಹುದು. ಪರಿಶೋಧಾತ್ಮಕ ಸಂಶೋಧನೆಯ ಮಾಹಿತಿಯನ್ನು ಗುಂಪು ಸಂದರ್ಶನ, ಸಾಹಿತ್ಯ ಅಥವಾ ಪುಸ್ತಕಗಳ ಪರಾಮರ್ಶನ, ತಜ್ಞರೊಂದಿಗೆ ಚರ್ಚಿಸುವಿಕೆ ಮೊದಲಾದವುಗಳ ಮ‌ೂಲಕ ಸಂಗ್ರಹಿಸಲಾಗುತ್ತದೆ. ಸ್ವಾಭಾವಿಕವಾಗಿ ಇದು ರೂಪ-ರಚನೆಯಿಲ್ಲದ್ದು ಮತ್ತು ಗುಣಾತ್ಮಕವಾದದ್ದು. ಮಾಹಿತಿಯ ದ್ವಿತೀಯಕ ‌ಮ‌ೂಲವು ನಿರೀಕ್ಷಿತ ಉದ್ದೇಶವನ್ನು ಪೂರೈಸಲು ವಿಫಲವಾದರೆ, ಅನುಕೂಲಕರ ಸಣ್ಣ ಪ್ರಮಾಣದ ಮಾದರಿಯನ್ನು ಸಂಗ್ರಹಿಸುತ್ತದೆ. ಸಮಸ್ಯೆಯ ಬಗ್ಗೆ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲು ನಿರ್ಣಾಯಕ ಸಂಶೋಧನೆಯನ್ನು ನಡೆಸಲಾಗುತ್ತದೆ. ಇದು ಮ‌ೂಲಭೂತವಾಗಿ ರಚನೆಯುಳ್ಳ ಮತ್ತು ಗುಣಾತ್ಮಕ ಸಂಶೋಧನೆಯಾಗಿದೆ. ಈ ಸಂಶೋಧನೆಯ ಫಲಿತಾಂಶವು ಆಡಳಿತ ನಿರ್ವಹಣಾ ಮಾಹಿತಿ ವ್ಯವಸ್ಥೆಗೆ (MIS) ಮ‌ೂಲ ಮಾಹಿತಿಯನ್ನು ನೀಡುತ್ತದೆ.

ನಿರ್ಣಾಯಕ ಅಥವಾ ವಿವರಣಾತ್ಮಕ ಸಂಶೋಧನೆಯ ಗುರುತಿಸುವಿಕೆಯನ್ನು ಅರ್ಥೈಸಲು ಮಾರಾಟ ನಿರ್ವಾಹಕರಿಗೆ ಕಷ್ಟವಾದರೆ, ಅದನ್ನು ಸರಳಗೊಳಿಸುವುದಕ್ಕಾಗಿ ಪರಿಶೋಧಾತ್ಮಕ ಸಂಶೋಧನೆಯನ್ನು ನಡೆಸಲಾಗುತ್ತದೆ.

ವ್ಯಾಪಾರೋದ್ಯಮ ಸಂಶೋಧನೆ ಪ್ರಕಾರಗಳು ಬದಲಾಯಿಸಿ

ವ್ಯಾಪಾರೋದ್ಯಮ ಸಂಶೋಧನೆಯು ಈ ಕೆಳಗಿನ ಸಂಶೋಧನೆ ವಿನ್ಯಾಸಗಳನ್ನು ಬಳಸಿಕೊಳ್ಳುತ್ತದೆ:[೫]

ಇವು ಪ್ರಶ್ನಾವಳಿಯ ಅವಲಂಬಿತವಾದದ್ದು :
ವೀಕ್ಷಣೆಗಳ ಆಧಾರದ ಮೇಲೆ ಅವಲಂಬಿತವಾದವು :
 • ಜನಾಂಗೀಯ ವಿವರಣೆಯ ಅಧ್ಯಯನಗಳು - ಇದು ಸ್ವಭಾವತಃ ಗುಣಾತ್ಮಕವಾಗಿದೆ, ಇದರಲ್ಲಿ ಸಂಶೋಧಕರು ಅವರ ಸ್ವಾಭಾವಿಕ ವ್ಯವಸ್ಥೆಯಲ್ಲಿ ಸಾಮಾಜಿಕ ಸಂಗತಿಗಳನ್ನು ವೀಕ್ಷಿಸುತ್ತಾರೆ, ಅವಲೋಕನಗಳು ವಿವಿಧ ವರ್ಗಗಳ ಜನಾಭಿಪ್ರಾಯ ಆಗಿರಬಹುದು (ಒಂದು ಬಾರಿ ಮಾಡಿದ ವೀಕ್ಷಣೆಗಳು) ಅಥವಾ ಅಪೇಕ್ಷಿತ ಕ್ಷೇತ್ರಗಳನ್ನು ಆಯ್ದು ನಡೆಸಿದ ಸಮೀಕ್ಷೆಯಾಗಬಹುದು (ಅನೇಕ ಸಲ ಮಾಡಿದ ಅವಲೋಕನಗಳು). ಉದಾಹರಣೆಗಳು - ಉತ್ಪನ್ನ-ಬಳಕೆ ವಿಶ್ಲೇಷಣೆ ಮತ್ತು ಕಂಪ್ಯೂಟರ್ ಕುಕಿ ರಚನೆಗಳು. ಜನಾಂಗೀಯ ವಿವರಣೆ ಮತ್ತು ಅವಲೋಕನದ ಕೌಶಲಗಳು ಇವನ್ನೂ ಗಮನಿಸಿ.
 • ಪರೀಕ್ಷಾರ್ಥ ಕೌಶಲಗಳು - ಪರಿಮಾಣಾತ್ಮಕವಾಗಿದೆ, ಹುಸಿ ಅಂಶಗಳನ್ನು ನಿಯಂತ್ರಿಸಲು ಸಂಶೋಧಕರು ಮೇಲ್ನೋಟಕ್ಕೆ-ಕೃತಕವಾದ ಸನ್ನಿವೇಶವನ್ನು ರಚಿಸುತ್ತಾರೆ, ನಂತರ ಕನಿಷ್ಠ ಒಂದು ಅಸ್ಥಿರ ಅಂಶವನ್ನು ಕುಶಲತೆಯಿಂದ ಬಳಸುತ್ತಾರೆ. ಉದಾಹರಣೆಗಾಗಿ - ಕೊಂಡುಕೊಳ್ಳುವ ಪ್ರಯೋಗಾಲಯಗಳು ಮತ್ತು ಪರೀಕ್ಷಾರ್ಥ ಮಾರುಕಟ್ಟೆಗಳು

ಸಂಶೋಧಕರು ಒಂದಕ್ಕಿಂತ ಹೆಚ್ಚು ಸಂಶೋಧನಾ ವಿನ್ಯಾಸವನ್ನು ಬಳಸುತ್ತಾರೆ. ಅವರು ಹಿನ್ನೆಲೆ ಮಾಹಿತಿಯನ್ನು ಪಡೆಯುವುದಕ್ಕಾಗಿ ದ್ವಿತೀಯಕ ಸಂಶೋಧನೆಯೊಂದಿಗೆ ಆರಂಭಿಸಬಹುದು, ನಂತರ ಸಮಸ್ಯೆ ಪರಿಶೋಧಿಸಲು ಕೇಂದ್ರೀಕೃತ ಗುಂಪನ್ನು (ಗುಣಾತ್ಮಕ ಸಂಶೋಧನೆ ವಿನ್ಯಾಸ) ರಚಿಸಬಹುದು. ಅಂತಿಮವಾಗಿ, ರಾಷ್ಟ್ರಾದ್ಯಂತದ ಸಮೀಕ್ಷೆಯನ್ನು (ಪರಿಮಾಣಾತ್ಮಕ ಸಂಶೋಧನೆ ವಿನ್ಯಾಸ) ಮಾಡಿ ಗ್ರಾಹಕರಿಗೆ ವಿಶೇಷ ಸಲಹೆಗಳನ್ನು ಅವರು ನೀಡಬಹುದು.

ಬ್ಯುಸಿನೆಸ್ ಟು ಬ್ಯುಸಿನೆಸ್ ವ್ಯಾಪಾರೋದ್ಯಮ ಸಂಶೋಧನೆ ಬದಲಾಯಿಸಿ

ಬ್ಯುಸಿನೆಸ್ ಟು ಬ್ಯುಸಿನೆಸ್ (B2B) ಸಂಶೋಧನೆಯು ಗ್ರಾಹಕ ಸಂಶೋಧನೆಗಿಂತಲೂ ಸಹಜವಾಗಿ ಹೆಚ್ಚು ಜಟಿಲವಾಗಿದೆ. ಕೇವಲ ಒಂದು ವಿಧಾನದಿಂದ ಮಾತ್ರ ಉತ್ತರಗಳನ್ನು ಕಂಡುಹಿಡಿಯಬಹುದಾದ್ದರಿಂದ, ಬಹುಮುಖವುಳ್ಳ ಮಾರ್ಗಗಳು ಯಾವ ಪ್ರಕಾರದ ಗುರಿಯತ್ತ ದಾರಿತೋರಿಸುತ್ತವೆ ಎಂಬುದನ್ನು ಸಂಶೋಧಕರು ತಿಳಿಯಬೇಕು. ಬಿಡುವಿಲ್ಲದವರೂ ಹಾಗೂ ಭಾಗವಹಿಸಲು ಇಚ್ಛೆ ಇಲ್ಲದವರೂ ಹೆಚ್ಚಾಗಿ ಇರುವುದರಿಂದ, ಸೂಕ್ತ ಉತ್ತರ ಕೊಡುವವರನ್ನು ಪತ್ತೆಹಚ್ಚುವುದು B2B ಸಂಶೋಧನೆಯಲ್ಲಿ ಬಹು ಕಠಿಣ. ಅವರನ್ನು ಇವರ ಹಾದಿಗೆ ಬರುವಂತೆ ನೋಡಿಕೊಳ್ಳುವುದು B2B ಸಂಶೋಧಕರಿಗೆ ಮತ್ತೊಂದು ಕೌಶಲದ ಅಗತ್ಯವಿದೆ. ಹೆಚ್ಚಿನ ವ್ಯವಹಾರ ಸಂಶೋಧನೆಯು ಭವಿಷ್ಯೋದ್ದೇಶದ ನಿರ್ಣಯಗಳನ್ನು ನೀಡುತ್ತವೆ. ಸಂಶೋಧನೆ ಗುರುತಿಸುವಿಕೆಯಲ್ಲಿ ಪ್ರಬಲವಾಗಿ ಬೇರೂರಿದ ಮತ್ತು ಗ್ರಾಹಕರಿಗೆ ಸ್ವೀಕಾರಾರ್ಹವಾದದ್ದನ್ನು ಅಭಿವೃದ್ಧಿಗೊಳಿಸುವ ಚಾತುರ್ಯಗಳಲ್ಲಿ ವ್ಯವಹಾರ ಸಂಶೋಧಕರು ಕೌಶಲ್ಯವನ್ನು ಹೊಂದಿರಬೇಕು ಎಂಬುದು ಇದರರ್ಥ.

B2B ವ್ಯಾಪಾರೋದ್ಯಮ ಸಂಶೋಧನೆಯನ್ನು ವಿಶಿಷ್ಟವಾಗಿಸುವ ಮತ್ತು ಗ್ರಾಹಕ ಮಾರುಕಟ್ಟೆಗೆ ವಿಭಿನ್ನವಾಗಿಸುವ ನಾಲ್ಕು ಅಂಶಗಳಿವೆ:[೬]

 • ನಿರ್ಧಾರ ಮಾಡುವ ಅಂಶವು ಗ್ರಾಹಕ ಮಾರುಕಟ್ಟೆಗಿಂತ B2B ಮಾರುಕಟ್ಟೆಯಲ್ಲಿ ಹೆಚ್ಚು ಜಟಿಲವಾಗಿದೆ
 • B2B ಉತ್ಪನ್ನಗಳು ಮತ್ತು ಅವುಗಳ ಬಳಸುವಿಕೆಗಳು ಗ್ರಾಹಕ ಉತ್ಪನ್ನಗಳಿಗಿಂತ ಅಧಿಕ ಸಂಕೀರ್ಣವಾಗಿರುತ್ತವೆ
 • B2B ಮಾರಾಟಗಾರರು ಗ್ರಾಹಕ ಮಾರುಕಟ್ಟೆಗಳಲ್ಲಿ ಇರುವುದಕ್ಕಿಂತ, ಉತ್ಪನ್ನಗಳ ಬಳಕೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅತೀ ಕಡಿಮೆ ಗ್ರಾಹಕರನ್ನು ಗುರಿಯಾಗಿ ಹೊಂದಿರುತ್ತಾರೆ.
 • ವೈಯಕ್ತಿಕ ಸಂಬಂಧಗಳು B2B ಮಾರುಕಟ್ಟೆಗಳಲ್ಲಿ ನಿರ್ಣಾಯಕ ಮಹತ್ವವನ್ನು ಹೊಂದಿವೆ.

ಸಣ್ಣ ವ್ಯವಹಾರ ಮತ್ತು ಲಾಭವಿಲ್ಲದ ಸಂಸ್ಥೆಗಳ ವ್ಯಾಪಾರೋದ್ಯಮ ಸಂಶೋಧನೆ ಬದಲಾಯಿಸಿ

ವ್ಯಾಪಾರೋದ್ಯಮ ಸಂಶೋಧನೆಯು ಭಾರೀ ಸಂಖ್ಯೆಯ ಉದ್ಯೋಗಿಗಳಿರುವ, ಹೆಚ್ಚಿನ ಖರ್ಚು ವೆಚ್ಚವನ್ನು ಹೊಂದಿರುವ ಭಾರಿ ಸಂಘಟನೆಗಳಲ್ಲಿ ಮಾತ್ರ ಕಂಡುಬರುತ್ತದೆ ಎಂದೇನಿಲ್ಲ. ವ್ಯಾಪಾರೋದ್ಯಮ ಮಾಹಿತಿಯನ್ನು ಅವರ ಸ್ಥಾನ ಮತ್ತು ಸ್ಪರ್ಧಾ ಕಣದ ಸನ್ನಿವೇಶವನ್ನು ಅವಲೋಕಿಸುವ ಮ‌ೂಲಕ ಪಡೆಯಬಹುದು. ಪ್ರಬಲ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರಿಂದ ಮಾಹಿತಿಯನ್ನು ಸಂಗ್ರಹಿಸಲು ಸಣ್ಣ ಪ್ರಮಾಣದ ಸಮೀಕ್ಷೆಗಳು ಮತ್ತು ಕೇಂದ್ರೀಕೃತ ಗುಂಪುಗಳು ಕಡಿಮೆ ಖರ್ಚಿನ ಮಾರ್ಗಗಳಾಗಿವೆ. ಹೆಚ್ಚಿನ ದ್ವಿತೀಯಕ ಮಾಹಿತಿಯು (ಅಂಕಿಅಂಶಗಳು, ಜನಸಂಖ್ಯಾಶಾಸ್ತ್ರ ಇತ್ಯಾದಿ) ಸಾರ್ವಜನಿಕರಿಗೆ ಗ್ರಂಥಾಲಯಗಳಲ್ಲಿ ಅಥವಾ ಇಂಟರ್ನೆಟ್‌ನಲ್ಲಿ ಲಭ್ಯವಿರುತ್ತದೆ ಹಾಗೂ ಅದನ್ನು ಸಣ್ಣ ವ್ಯವಹಾರವನ್ನುಳ್ಳ ಮಾಲೀಕರಿಗೂ ಮಾಹಿತಿ ಪಡೆಯುವುದು ಸಾಧ್ಯವಿದೆ.

ಈ ಕೆಳಗಿನ ಕೆಲವು ಹಂತಗಳು SME (ಸ್ಮಾಲ್ ಮೀಡಿಯಮ್ ಎಂಟರ್‌ಪ್ರೈಸ್)ಯಿಂದ ಮಾರುಕಟ್ಟೆಯನ್ನು ವಿಶ್ಲೇಷಿಸುತ್ತವೆ:[೭]

 1. ದ್ವಿತೀಯಕ ಅಥವಾ ಪ್ರಾಥಮಿಕ ಮಾಹಿತಿಯನ್ನು (ಅವಶ್ಯಕತೆ ಇದ್ದರೆ) ಒದಗಿಸಿ;
 2. ಸ್ಥೂಲ ಮತ್ತು ಸೂಕ್ಷ್ಮ ಆರ್ಥಿಕ ಮಾಹಿತಿಯನ್ನು ವಿಶ್ಲೇಷಿಸಿ (ಉದಾ. ಪೂರೈಕೆ ಮತ್ತು ಬೇಡಿಕೆ, GDP, ಬೆಲೆ ಬದಲಾವಣೆ, ಆರ್ಥಿಕ ಬೆಳವಣಿಗೆ, ಕ್ಷೇತ್ರ/ಉದ್ಯಮಗಳಿಂದ ಮಾರಾಟ, ಬಡ್ಡಿ ದರ, ಹೂಡಿಕೆ/ಸ್ವಾಮ್ಯಹರಣದ ಸಂಖ್ಯೆ, I/O, CPI, ಸಾಮಾಜಿಕ ವಿಶ್ಲೇಷಣೆ ಇತ್ಯಾದಿ);
 3. ಸ್ಥಳ, ಬೆಲೆ, ಉತ್ಪನ್ನ, ಜಾಹೀರಾತು, ಜನ, ಪ್ರಕ್ರಿಯೆ, ಭೌತಿಕ ಸಾಕ್ಷ್ಯಾಧಾರ ಮತ್ತು ಜಾಗತಿಕ ಮಾರುಕಟ್ಟೆ ಪರಿಸ್ಥಿತಿಯನ್ನು ವಿಶ್ಲೇಷಿಸಲು ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿ ಮೊದಲಾದವುಗಳನ್ನು ಹೊಂದಿರುವ ವ್ಯಾಪಾರೋದ್ಯಮದ ಮಿಶ್ರ ಅಂಶಗಳನ್ನು ಕಾರ್ಯಗತಗೊಳಿಸಿ;
 4. ಮಾರುಕಟ್ಟೆ ಶೈಲಿ, ಬೆಳವಣಿಗೆ, ಮಾರುಕಟ್ಟೆ ಗಾತ್ರ, ಮಾರುಕಟ್ಟೆ ಹಂಚಿಕೆ, ಮಾರುಕಟ್ಟೆ ಪೈಪೋಟಿ ಮೊದಲಾದವುಗಳನ್ನು ವಿಶ್ಲೇಷಿಸಿ (ಉದಾ. SWOT ವಿಶ್ಲೇಷಣೆ, B/C ವಿಶ್ಲೇಷಣೆ, ಪ್ರಮುಖ ಚಾನೆಲ್‌ಗಳ ರೇಖಾಚಿತ್ರ ಗುರುತುಗಳು, ಗ್ರಾಹಕರ ನಿಷ್ಠೆಯ ಮತ್ತು ಸಂತುಷ್ಟಿಯ ಚಾಲಕರು, ಬ್ರ್ಯಾಂಡ್ ಅರಿವು, ತೃಪ್ತಿಪಡಿಸುವ ಮಟ್ಟ, ಪ್ರಸ್ತುತ ಸ್ಪರ್ಧಿ-ಚಾನೆಲ್ ಸಂಬಂಧದ ವಿಶ್ಲೇಷಣೆ ಇತ್ಯಾದಿ);
 5. ಮಾರುಕಟ್ಟೆ ವಿಭಾಗ, ಮಾರುಕಟ್ಟೆ ಗುರಿ, ಮಾರುಕಟ್ಟೆ ಮುಂದಾಲೋಚನೆ ಮತ್ತು ಮಾರುಕಟ್ಟೆ ಸ್ಥಿತಿಯನ್ನು ಕಂಡುಹಿಡಿಯಿರಿ;
 6. ಮಾರುಕಟ್ಟೆ ಕೌಶಲವನ್ನು ವ್ಯವಸ್ಥಿತವಾಗಿ ನಿರೂಪಿಸುವುದು ಮತ್ತು ಪಾಲುದಾರಿಕೆ/ಸಹಯೋಗದ ಸಂಭವವನ್ನು ಪರೀಕ್ಷಿಸುವುದು (ಉದಾ. ಪ್ರಬಲ ಪಾಲುದಾರರ ಬಗ್ಗೆ ಸಂಕ್ಷಿಪ್ತ ಚಿತ್ರಣ ನೀಡುವುದು ಮತ್ತು SWOT ವಿಶ್ಲೇಷಣೆ ಮಾಡುವುದು, ವ್ಯವಹಾರ ಪಾಲುದಾರಿಕೆಯ ಅರ್ಹತೆ ನಿರ್ಧರಿಸುವುದು.)
 7. ಆ ವಿಶ್ಲೇಷಣೆಯನ್ನು SMEಯ ವ್ಯವಹಾರ ಯೋಜನೆ/ ವ್ಯವಹಾರ ಮಾದರಿ ವಿಶ್ಲೇಷಣೆಯೊಂದಿಗೆ ಜತೆಗೂಡಿಸಿ (ಉದಾಹರಣೆಗಾಗಿ - ವ್ಯವಹಾರ ವಿವರಣೆ, ವ್ಯವಹಾರ ಕಾರ್ಯ, ವ್ಯವಹಾರ ಕೌಶಲ, ಆದಾಯ ಮಾದರಿ, ವ್ಯವಹಾರ ವಿಸ್ತರಣೆ, ಹೂಡಿಕೆಯ ಮೇಲಿನ ಪ್ರತಿಫಲ, ಆರ್ಥಿಕ ವಿಶ್ಲೇಷಣೆ (ಕಂಪೆನಿ ಇತಿಹಾಸ, ಆರ್ಥಿಕ ಊಹೆ, ಖರ್ಚು/ಲಾಭದ ವಿಶ್ಲೇಷಣೆ, ಯೋಜಿತ ಲಾಭ ಮತ್ತು ನಷ್ಟ, ಹಣದ ಹರಿವು, ಆಯವ್ಯಯ ಪಟ್ಟಿ ಮತ್ತು ವ್ಯವಹಾರ ಅನುಪಾತ ಇತ್ಯಾದಿ).
ಪ್ರಮುಖ ಟಿಪ್ಪಣಿ: ಸಂಪೂರ್ಣ ವಿಶ್ಲೇಷಣೆಯು 6W+1H (ವಾಟ್, ವೆನ್, ವೇರ್, ವಿಚ್, ಹು, ವೈ ಮತ್ತು ಹೌ) ಪ್ರಶ್ನೆಯನ್ನು ಆಧರಿಸಿರಬೇಕು.

ಅಂತಾರಾಷ್ಟ್ರೀಯ ವ್ಯಾಪಾರೋದ್ಯಮ ಸಂಶೋಧನೆ ಬದಲಾಯಿಸಿ

ಅಂತಾರಾಷ್ಟ್ರೀಯ ವ್ಯಾಪಾರೋದ್ಯಮ ಸಂಶೋಧನೆಯು ದೇಶೀಯ ಸಂಶೋಧನೆಯ ಮಾರ್ಗವನ್ನೇ ಅನುಸರಿಸುತ್ತದೆ, ಆದರೆ ಅದರಲ್ಲಿ ಕೆಲವು ಸಮಸ್ಯೆಗಳು ತಲೆಎತ್ತಬಹುದು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಿನ್ನ ಸಂಪ್ರದಾಯ ಮತ್ತು ಸಂಸ್ಕೃತಿಗಳಿಗೆ ಸೇರಿದ ಗ್ರಾಹಕರು ಒಂದೇ ಕಂಪೆನಿಯಿಂದ ವಿಭಿನ್ನ ನಿರೀಕ್ಷೆಗಳನ್ನು ಹೊಂದಿರಬಹುದು. ಇದರಲ್ಲಿ, ದ್ವಿತೀಯಕ ಮಾಹಿತಿಯನ್ನು ಬೇರೆ ಬೇರೆ ರಾಷ್ಟ್ರಗಳಿಂದ ಸಂಗ್ರಹಿಸಬೇಕು, ನಂತರ ಸೇರಿಸಬೇಕು ಅಥವಾ ಹೋಲಿಸಬೇಕು. ಇದು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದರ ಜೊತೆ ಗೊಂದಲವನ್ನೂ ಉಂಟು ಮಾಡುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರೋದ್ಯಮ ಸಂಶೋಧನೆಯು ದ್ವಿತೀಯಕ ಮಾಹಿತಿಗಿಂತ ಹೆಚ್ಚಾಗಿ ಪ್ರಾಥಮಿಕ ಮಾಹಿತಿಯನ್ನು ಆಧರಿಸಿರುತ್ತದೆ. ಪ್ರಾಥಮಿಕ ಮಾಹಿತಿ ಸಂಗ್ರಹಿಸುವಿಕೆಯು ಭಾಷೆ, ಸಾಕ್ಷರತೆ ಮತ್ತು ಎಟುಕಲಾಗದ ತಂತ್ರಜ್ಞಾನಗಳಿಂದಾಗಿ ಅಡಚಣೆಗೊಳಗಾಗುತ್ತದೆ.

ಸಾಮಾನ್ಯ ಬಳಕೆಯ ವ್ಯಾಪಾರೋದ್ಯಮ ಸಂಶೋಧನೆಯ ಪದಗಳು ಬದಲಾಯಿಸಿ

ವ್ಯಾಪಾರೋದ್ಯಮ ಸಂಶೋಧನಾ ಕೌಶಲಗಳು ರಾಜಕೀಯ ಮತದಾನ ಮತ್ತು ಸಾಮಾಜಿಕ ವಿಜ್ಞಾನ ಸಂಶೋಧನೆಯಲ್ಲಿ ಬಳಸಿದ ಚಾತುರ್ಯಗಳನ್ನು ಹೋಲುತ್ತವೆ. ಪರ್ಯಾಯ-ವಿಶ್ಲೇಷಣೆ ಯು (ಸ್ಕ್ಮಿಡ್ತ್-ಹಂಟರ್ ಕೌಶಲ ಎಂದೂ ಕರೆಯುತ್ತಾರೆ) ಹಲವಾರು ಅಧ್ಯಯನಗಳಿಂದ ಅಥವಾ ಅಧ್ಯಯನಗಳ ಅನೇಕ ಪ್ರಕಾರಗಳಿಂದ ಮಾಹಿತಿಯನ್ನು ಸಂಖ್ಯಾಶಾಸ್ತ್ರೀಯವಾಗಿ ಸಂಗ್ರಹಿಸುವ ವಿಧಾನ. ಪರಿಕಲ್ಪನೆ ಎಂದರೆ ಮನಸ್ಸಿನ ಅಸ್ಪಷ್ಟ ಚಿತ್ರಣಗಳನ್ನು ಅರ್ಥವತ್ತಾಗಿ ನಿರೂಪಿಸುವ ಓಂದು ಪರಿವನಾ ಪ್ರಕ್ರಿಯೆ. ಕಾರ್ಯಗತಗೊಳಿಸುವಿಕೆ - ಪರಿಕಲ್ಪನೆಗಳನ್ನು ಸಂಶೋಧಕರು ಅಳತೆ ಮಾಡಬಹುದಾದ ನಿರ್ದಿಷ್ಟ ವೀಕ್ಷಣಾ ಕಾರ್ಯವಾಗಿ ಬದಲಾಯಿಸುವ ಕ್ರಿಯೆ. ಖಚಿತತೆ ಯಾವುದೇ ನೀಡಿದ ಅಳತೆಯ ನಿಖರತೆಯನ್ನು ನಿರೂಪಿಸುತ್ತದೆ. ವಿಶ್ವಸನೀಯತೆ ಎಂದರೆ ಕಾರ್ಯಗತಗೊಳಿಸಿದ ವ್ಯವಸ್ಥೆಯನ್ನು ಪುನಃ ಅಳತೆ ಮಾಡಿದರೆ ಅದೇ ಫಲಿತಾಂಶವನ್ನು ನೀಡುತ್ತದೆ ಎಂಬ ಭರವಸೆ. ಕ್ರಮಬದ್ಧತೆ - ಒಂದು ಪರಿಮಾಣವು ಮಾಹಿತಿಯನ್ನು ಒದಗಿಸುವ ವ್ಯಾಪ್ತಿ, ಈ ಮಾಹಿತಿಯು ಕಾರ್ಯಗತಗೊಳಿಸಿದ ವ್ಯವಸ್ಥೆಯ ಅರ್ಥವನ್ನು ಅಧ್ಯಯನದಲ್ಲಿ ನಿರೂಪಿಸಿದ ಹಾಗೆ ಹೇಳುತ್ತದೆ. “ನಾವು ಅಳತೆ ಮಾಡಲು ಬಯಸಿರುವುದನ್ನೇ ಅಳೆಯುತ್ತಿದ್ದೇವೆಯೇ?” ಎಂದು ಇದು ಕೇಳುತ್ತದೆ.

 • ಅನ್ವಯಿಕ ಸಂಶೋಧನೆ ಯನ್ನು ಸಂಶೋಧನೆಗೆ ಪಾವತಿಸುವ ಗ್ರಾಹಕರಿಗೆ ಮೌಲ್ಯದ ನಿರ್ದಿಷ್ಟ ಆಧಾರ ಕಲ್ಪನೆಗಳನ್ನು ಸಾಬೀತುಪಡಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗಾಗಿ, ಸಿಗರೇಟು ಕಂಪೆನಿಯೊಂದು ಸಿಗರೇಟುಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ತೋರಿಸಲು ಯತ್ನಿಸುವಂಥ ಸಂಶೋಧನೆ ಮಾಡಿತ್ತದೆ. ಅನ್ವಯಿಕ ಸಂಶೋಧನೆ ಮಾಡುವುದರ ಬಗ್ಗೆ ಹೆಚ್ಚಿನ ಸಂಶೋಧಕರು ನೀತಿ ಸಂಹಿತೆಯ ಆಂತಕ ಹೊಂದಿದ್ದಾರೆ.
 • ಸಗ್ಗಿಂಗ್ ("SUG" ಅಂದರೆ ಮಾರುಕಟ್ಟೆ ಸಂಶೋಧನೆಯ ಸೋಗಿನಡಿಯಲ್ಲಿ ಮಾರಾಟ ಮಾಡುವುದು ) ಒಂದು ಮಾರಾಟ ತಂತ್ರ, ಇದರಲ್ಲಿ ಮಾರಾಟಗಾರರು ವ್ಯಾಪಾರೋದ್ಯಮ ಸಂಶೋಧನೆಯನ್ನು ಮಾಡುವಂತೆ ನಟಿಸುತ್ತಾರೆ, ಆದರೆ ಕೊಂಡುಕೊಳ್ಳುವವರ ಆಸಕ್ತಿಯನ್ನು ಪಡೆಯುವ ನಿಜವಾದ ಉದ್ದೇಶವನ್ನು ಹೊಂದಿರುತ್ತಾರೆ ಹಾಗೂ ಕೊಳ್ಳುವವರ ನಿರ್ಧಾರ-ಮಾಡುವ ಮಾಹಿತಿಯನ್ನು ಮುಂದಿನ ಮಾರಾಟ ಕರೆಗಳಿಗೆ ಬಳಸಲಾಗುತ್ತದೆ.
 • ಫ್ರಗಿಂಗ್ ಅಂದರೆ ಸಂಶೋಧನೆ ಎಂಬ ಸೋಗಿನಡಿ ಸಂಸ್ಥೆಯು ಬಂಡವಾಳ ಕೇಳಿಕೊಳ್ಳುವ ಅಭ್ಯಾಸ.

ಸಂಶೋಧನಾ ಪೂರೈಕೆದಾರನ ಆಯ್ಕೆ ಬದಲಾಯಿಸಿ

ಸಂಪೂರ್ಣ ಮಾರಾಟಗಾರಿಕೆ ಸಂಶೋಧನೆ ಯೋಜನೆಯನ್ನು ಆಂತರಿಕವಾಗಿ ಮಾಡಲಾಗದ ವ್ಯವಹಾರ ಸಂಸ್ಥೆಯು ಯೋಜನೆಯ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಹಂತಗಳಿಗೆ ಒಂದು ಹೊರಗಿನ ಪೂರೈಕೆದಾರನನ್ನು ಆರಿಸಬೇಕು. ಸಂಸ್ಥೆಯು ವ್ಯಾಪಾರ ಪ್ರಕಟನೆಗಳು, ವೃತ್ತಿಪರ ಮಾರ್ಗದರ್ಶಕಗಳು ಮತ್ತು ಹೇಳಿಕೆಗಳಂತಹ ಮ‌ೂಲಗಳಿಂದ ಭವಿಷ್ಯದ ಪೂರೈಕೆದಾರರ ಪಟ್ಟಿಯನ್ನು ತಯಾರಿಸಬೇಕು. ಹೊರಗಿನ ಪೂರೈಕೆದಾರರನ್ನು ಆರಿಸಲು ನಿರ್ಣಾಯಕ ಅಂಶವನ್ನು ನಿರ್ಧರಿಸುವಾಗ, ವ್ಯವಹಾರ ಸಂಸ್ಥೆಯು ಹೊರಗಿನ ಮಾರಾಟಗಾರಿಕೆ ಸಂಶೋಧನಾ ಸಹಾಯವನ್ನು ಯಾಕೆ ಅರಸುತ್ತಿದೆ ಎಂಬುದನ್ನು ಕೇಳಿಕೊಳ್ಳಬೇಕು. ಉದಾಹರಣೆಗಾಗಿ, ಒಂದು ಯೋಜನೆಯನ್ನು ಪರೀಕ್ಷಿಸಬೇಕಾದ ಸಣ್ಣ ವ್ಯವಹಾರ ಸಂಸ್ಥೆಯು ಒಂದು ಹೊರಗಿನ ಮ‌ೂಲವನ್ನು ಬಳಸಿಕೊಳ್ಳುವುದನ್ನು ಆರ್ಥಿಕವಾಗಿ ಪರಿಣಾಮಕಾರಿ ಎಂದು ಕಂಡುಕೊಳ್ಳಬಹುದು. ಅಥವಾ ಯೋಜನೆಯ ಕೆಲವು ಹಂತಗಳನ್ನು ಕೈಗೊಳ್ಳುವ ಅಥವಾ ಸಂಘರ್ಷಣೆಯನ್ನುಳ್ಳ ರಾಜಕೀಯ ಆಸಕ್ತಿಯ ಸಮಸ್ಯೆಗಳನ್ನು ಪರಿಹರಿಸುವ ತಾಂತ್ರಿಕ ಪರಿಣತರನ್ನು ಹೊಂದಿರದ ಒಂದು ವ್ಯವಹಾರ ಸಂಸ್ಥೆಯು ಯೋಜನೆಗಾಗಿ ಹೊರ ಗುತ್ತಿಗೆ ನೀಡಬಹುದು.[೮]

ಹೊರಗಿನ ಪೂರೈಕೆದಾರರನ್ನು ಆರಿಸುವ ನಿರ್ಣಾಯಕ ಅಂಶಗಳನ್ನು ಅಭಿವೃದ್ಧಿಪಡಿಸುವಾಗ, ವ್ಯವಹಾರ ಸಂಸ್ಥೆಯು ಕೆಲವು ಮ‌ೂಲಾಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಪೂರೈಕೆದಾರ ಗೌರವಾನ್ವಿತರೇ? ಅವರು ಯೋಜನೆಗಳನ್ನು ಸಿದ್ಧಪಡಿಸಿದಂತೆ ಸಕಾಲದಲ್ಲಿ ಪೂರ್ಣಗೊಳಿಸುತ್ತಾರೆಯೇ? ಅವರು ವೃತ್ತಿ ಸಂಹಿತೆಯ ಮಾನದಂಡಗಳಿಗೆ ಬದ್ಧರಾಗಿರಲು ಹೆಸರಾದವರೇ? ಅವರು ಸುಲಭವಾಗಿ ಹೊಂದಿಕೊಳ್ಳುವವರಾ? ಅವರ ಸಂಶೋಧನಾ ಯೋಜನೆಗಳು ಉತ್ತಮ ಗುಣಮಟ್ಟದ್ದಾಗಿವೆಯೇ?

ಪೂರೈಕೆದಾರರು ಯಾವ ರೀತಿಯ ಮತ್ತು ಎಷ್ಟು ಅನುಭವವನ್ನು ಹೊಂದಿದ್ದಾರೆ? ಸಂಸ್ಥೆ ಸಮಾನ ಯೋಜನೆಗಳ ಕಾರ್ಯಾನುಭವವನ್ನು ಹೊಂದಿದೆಯೇ? ಪೂರೈಕೆದಾರರ ಸಿಬ್ಬಂದಿ ವರ್ಗ ತಾಂತ್ರಿಕ ಮತ್ತು ತಾಂತ್ರಿಕೇತರ ಎರಡು ರೀತಿಯ ಪರಿಣತಿಯನ್ನೂ ಹೊಂದಿದೆಯೇ? ಕೆಲಸಕ್ಕೆ ನಿಯೋಜಿತರಾದ ಕಾರ್ಯಕರ್ತರು ತಾಂತ್ರಿಕ ಕೌಶಲ್ಯತೆಯೊಂದಿಗೆ ಗ್ರಾಹಕರ ಬೇಡಿಕೆಗಳಿಗೂ ಪ್ರತಿಸ್ಪಂದಿಸುತ್ತಾರೆಯೇ ಹಾಗೂ ಗ್ರಾಹಕರ ಸಂಶೋಧನಾ ಆಲೋಚನಾ ಸರಣಿಯನ್ನು ಹಂಚಿಕೊಳ್ಳುತ್ತಾರೆಯೇ? ಅವರು ಗ್ರಾಹಕರೊಂದಿಗೆ ಉತ್ತಮ ರೀತಿಯಲ್ಲಿ ಸಂವಹನ ಮಾಡಬಲ್ಲರೇ? [೮]

ಅಗ್ಗದ ದರದ್ದೇ ಅತೀ ಉತ್ತಮ ಎಂಬುದು ಸದಾ ಕಾಲದ ಸಿದ್ಧಾಂತವಲ್ಲ. ಗುಣಮಟ್ಟ ಮತ್ತು ಬೆಲೆಯ ಆಧಾರದ ಮೇಲೆ ಸ್ಪರ್ಧಾತ್ಮಕ ದರಗಳನ್ನು ಪಡೆಯಬೇಕು ಮತ್ತು ಹೋಲಿಸಬೇಕು. ಯೋಜನೆಯನ್ನು ಆರಂಭಿಸುವ ಮೊದಲೇ ಲಿಖಿತ ಬಿಡ್ ಪಡೆಯುವುದು ಅಥವಾ ಒಪ್ಪಂದವನ್ನು ಮಾಡಿಕೊಳ್ಳುವುದು ಒಳ್ಳೆಯ ಅಭ್ಯಾಸ. ಮಾರಾಟಗಾರಿಕೆ ಸಂಶೋಧನೆ ಪೂರೈಕೆದಾರರ ಬಗೆಗಿನ ನಿರ್ಧಾರಗಳು ಇತರ ಆಡಳಿತ ನಿರ್ವಹಣಾ ನಿರ್ಣಯಗಳ ಹಾಗೆ ಸರಿಯಾದ ಮಾಹಿತಿಯನ್ನು ಆಧರಿಸಿರಬೇಕು.[೮]

ವ್ಯಾಪಾರೋದ್ಯಮ ಸಂಶೋಧನೆಯಲ್ಲಿನ ಉದ್ಯೋಗಾವಕಾಶಗಳು ಬದಲಾಯಿಸಿ

ವ್ಯಾಪಾರೋದ್ಯಮ ಸಂಶೋಧನೆಯಲ್ಲಿ ಕೆಲವು ಸ್ಥಾನಗಳು ಲಭ್ಯ ಇರುತ್ತವೆ - ವ್ಯಾಪಾರೋದ್ಯಮ ಸಂಶೋಧನೆಯ ಉಪಾಧ್ಯಕ್ಷ, ಸಂಶೋಧನೆ ನಿರ್ದೇಶಕ, ಸಂಶೋಧನೆಯ ಸಹಾಯಕ ನಿರ್ದೇಶಕ, ಯೋಜನೆ ನಿರ್ವಾಹಕ, ಕ್ಷೇತ್ರ ಕಾರ್ಯದ ನಿರ್ದೇಶಕ, ಸಂಖ್ಯಾಶಾಸ್ತ್ರಜ್ಞ/ಮಾಹಿತಿ ಸಂಗ್ರಹ ತಜ್ಞ, ಹಿರಿಯ ವಿಶ್ಲೇಷಕ, ಕಿರಿಯ ವಿಶ್ಲೇಷಕ ಮತ್ತು ಕಾರ್ಯಕಾರಿ ಮೇಲ್ವಿಚಾರಕ ಸ್ಥಾನಗಳು.[೯]

ಪ್ರಥಮ ಪದವಿ (ಉದಾ. BBA) ಪಡೆದ ಜನರಿಗೆ ವ್ಯಾಪಾರೋದ್ಯಮ ಸಂಶೋಧನೆಯಲ್ಲಿ ಹೆಚ್ಚಾಗಿ ದಾಖಲಾತಿ ಮಾಡಿಕೊಳ್ಳುವುದು ಕಾರ್ಯಕಾರಿ ಮೇಲ್ವಿಚಾರಕ ಸ್ಥಾನಕ್ಕೆ. ಇವರು ಕ್ಷೇತ್ರ ಕಾರ್ಯ, ಮಾಹಿತಿ ಸಂಗ್ರಹ ಮತ್ತು ಕೋಡಿಂಗ್ ಮೊದಲಾದ ಕಾರ್ಯಗಳ ಮೇಲ್ವಿಚಾರಣೆ ಮಾಡುವುದಕ್ಕೆ ಜವಾಬ್ದಾರರಾಗಿರುತ್ತಾರೆ ಹಾಗೂ ಪ್ರೋಗ್ರಾಮಿಂಗ್ ಮತ್ತು ಮಾಹಿತಿ ವಿಶ್ಲೇಷಣೆಯಲ್ಲಿಯ‌ೂ ತೊಡುಗುತ್ತಾರೆ. BBA ಪದವೀಧರರಿಗೆ ಹೆಚ್ಚಾಗಿ ನೋಂದಣಿ ಮಾಡುವ ಮತ್ತೊಂದು ಸ್ಥಾನವೆಂದರೆ ಸಹಾಯಕ ಯೋಜನಾ ಪ್ರಬಂಧಕ ಸ್ಥಾನ. ಸಹಾಯಕ ಯೋಜನೆ ಪ್ರಬಂಧಕನು ಪ್ರಶ್ನೆಗಳ ವಿನ್ಯಾಸವನ್ನು ಅರಿಯುತ್ತಾನೆ ಮತ್ತು ಸಹಾಯ ಮಾಡುತ್ತಾನೆ, ಕ್ಷೇತ್ರ ಸೂಚನೆಗಳನ್ನು ಪರೀಕ್ಷಿಸುತ್ತಾನೆ ಹಾಗೂ ಅಧ್ಯಯನಗಳು ತೆಗೆದುಕೊಳ್ಳುವ ಸಮಯ ಮತ್ತು ಮೌಲ್ಯಗಳ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಾನೆ. ವ್ಯಾಪಾರೋದ್ಯಮ ಸಂಶೋಧನೆಯಲ್ಲಿ, ಸ್ನಾತಕೋತ್ತರ ಪದವೀಧರರಿಗೂ ಅವಕಾಶಗಳು ಹೆಚ್ಚಾಗಿ ಲಭಿಸುತ್ತಿವೆ. MBA ಅಥವಾ ತತ್ಸಮಾನ ಪದವಿ ಹೊಂದಿದವರನ್ನು ಯೋಜನಾ ಪ್ರಬಂಧಕ ಎಂದು ನೇಮಕ ಮಾಡಿಕೊಳ್ಳುವ ನಿರೀಕ್ಷೆ ಇದೆ.[೯]

ಕೆಲವು ವ್ಯವಹಾರ ಶಾಲೆಗಳು ಮಾಸ್ಟರ್ ಆಫ್ ಮಾರ್ಕೆಟಿಂಗ್‌ ರೀಸರ್ಚ್‌ (MMR) ಪದವಿಗೂ ಅವಕಾಶ ನೀಡುತ್ತವೆ. ವಿಸ್ತೃತ ಸಂಶೋಧನಾ ಕ್ರಮಕ್ಕೆ ವೈಶಿಷ್ಟವಾಗಿ MMR ಪದವಿಯು ವಿದ್ಯಾರ್ಥಿಗಳನ್ನು ತಯಾರು ಮಾಡುತ್ತದೆ ಹಾಗೂ ಶಾಲಾಕೊಠಡಿ ಮತ್ತು ಕಾರ್ಯ ಕ್ಷೇತ್ರ - ಎರಡರಲ್ಲೂ ಕಲಿಕೆಗೆ ಇಂಬು ನೀಡುತ್ತದೆ.

ವ್ಯವಹಾರ ಸಂಸ್ಥೆಯಲ್ಲಿ ಸಂಶೋಧನೆ ವಿಶ್ಲೇಷಕ (BBA ಪದವೀಧರರಿಗೆ) ಅಥವಾ ಸಂಶೋಧನೆ ವಿಶ್ಲೇಷಕ (MBA ಅಥವಾ MMR ಪದವೀಧರರಿಗೆ) ಸ್ಥಾನಗಳಿಗೆ ವಿಶೇಷವಾಗಿ ನೇಮಕ ಮಾಡಿಕೊಳ್ಳಬಹುದು. ಕಿರಿಯ ವಿಶ್ಲೇಷಕರು ಮತ್ತು ಸಂಶೋಧನಾ ವಿಶ್ಲೇಷಕರು ನಿರ್ದಿಷ್ಟ ಉದ್ಯಮದ ಬಗ್ಗೆ ತಿಳಿಯುತ್ತಾರೆ ಹಾಗೂ ಹಿರಿಯ ಸಹೋದ್ಯೋಗಿಗಳಿಂದ, ಸಾಮಾನ್ಯವಾಗಿ ವ್ಯಾಪಾರೋದ್ಯಮದ ಸಂಶೋಧನಾ ಪ್ರಬಂಧಕರಿಂದ, ತರಬೇತಿ ಪಡೆಯುತ್ತಾರೆ. ಕಿರಿಯ ವಿಶ್ಲೇಷಕ ಸ್ಥಾನವು ಸಂಶೋಧನೆ ವಿಶ್ಲೇಷಕರ ಜವಾಬ್ದಾರಿಗಳಿಗಾಗಿ ವ್ಯಕ್ತಿಗಳನ್ನು ತಯಾರು ಮಾಡುವ ತರಬೇತು ಕ್ರಿಯೆಯನ್ನು ಮಾಡುತ್ತದೆ. ಅಲ್ಲದೆ ಇದು ಉತ್ಪನ್ನ ಪ್ರದರ್ಶನಕ್ಕಾಗಿ ಗುರಿಗಳನ್ನು ಅಭಿವೃದ್ಧಿಪಡಿಸಲು ಮಾರಾಟ ವಿಭಾಗ ಮತ್ತು ಮಾರಾಟ ತಂಡದೊಂದಿಗೆ ಸಮನ್ವಯ ಸಾಧಿಸಿಕೊಂಡು ಕೆಲಸ ಮಾಡುತ್ತದೆ. ಎಲ್ಲಾ ಮಾಹಿತಿಗಳ ನಿಖರತೆಯನ್ನು ಪರಿಶೀಲಿಸುವುದು, ಹೊಸ ಸಂಶೋಧನೆಯನ್ನು ಪ್ರಮಾಣೀಕರಿಸಿದ ಮಾದರಿಗಳೊಂದಿಗೆ ಹೋಲಿಸುವುದು ಹಾಗೂ ಮಾರುಕಟ್ಟೆ ಮುಂದಾಲೋಚನೆಗಾಗಿ ಪ್ರಾಥಮಿಕ ಮತ್ತು ದ್ವಿತೀಯಕ ಮಾಹಿತಿಯನ್ನು ವಿಶ್ಲೇಷಿಸುವುದು ಮೊದಲಾದ ಕಾರ್ಯಗಳಿಗೆ ಸಂಶೋಧನಾ ವಿಶ್ಲೇಷಕರು ಜವಾಬ್ದಾರರಾಗಿರುತ್ತಾರೆ.

ಈ ಹುದ್ದೆಗಳ ಹೆಸರೇ ಸೂಚಿಸುವಂತೆ, ವಿವಿಧ ರೀತಿಯ ಹಿನ್ನೆಲೆ ಮತ್ತು ಕೌಶಲಗಳನ್ನು ಹೊಂದಿರುವ ಜನರು ವ್ಯಾಪಾರೋದ್ಯಮ ಸಂಶೋಧನೆಗೆ ಅಗತ್ಯವಾಗಿದ್ದಾರೆ. ಅಂಕಿಅಂಶ ತಜ್ಞರಂತಹ ತಾಂತ್ರಿಕ ಪರಿಣತರು ಸಂಖ್ಯಾಶಾಸ್ತ್ರ ಮತ್ತು ದತ್ತಾಂಶ ವಿಶ್ಲೇಷಣೆಯಲ್ಲಿ ಪಳಗಿದಂಥ ಉತ್ತಮ ಹಿನ್ನೆಲೆಯನ್ನು ಹೊಂದಿರಬೇಕು. ಇತರರು ಕೆಲಸ ನಿರ್ವಹಿಸುವಂತೆ ಮೇಲ್ವಿಚಾರಣೆ ನಡೆಸುವಂಥ ಸಂಶೋಧನಾ ನಿರ್ದೇಶಕರು ಹಾಗೂ ಈ ಬಗೆಯ ಸ್ಥಾನಗಳು, ಹೆಚ್ಚಿನ ವಿಶೇಷ ಕೌಶಲಗಳ ಅವಶ್ಯಕತೆಯನ್ನು ಕೇಳುತ್ತದೆ. ವ್ಯಾಪಾರೋದ್ಯಮ ಸಂಶೋಧನಾ ಕ್ಷೇತ್ರದಲ್ಲಿ ಉದ್ಯೋಗಕ್ಕಾಗಿ, ವಿದ್ಯಾರ್ಥಿಗಳು ಸಾಮಾನ್ಯವಾಗಿ:

ವ್ಯಾಪಾರೋದ್ಯಮ ಸಂಶೋಧನೆಯಲ್ಲಿನ ಉದ್ಯೋಗಾವಕಾಶದ ಸೋಪಾನಗಳು:

 1. ವ್ಯಾಪಾರೋದ್ಯಮ ಸಂಶೋಧನೆಯ ಉಪಾಧ್ಯಕ್ಷ : ಇದು ವ್ಯಾಪಾರೋದ್ಯಮ ಸಂಶೋಧನೆಯಲ್ಲಿ ಹಿರಿಯ ಸ್ಥಾನ. VPಯು ಕಂಪೆನಿಯ ಸಂಪೂರ್ಣ ವ್ಯಾಪಾರೋದ್ಯಮ ಸಂಶೋಧನಾ ಕಾರ್ಯಕ್ಕೆ ಜವಾಬ್ದಾರನಾಗಿರುತ್ತಾನೆ ಮತ್ತು ಉನ್ನತ ಆಡಳಿತ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಾನೆ. ಮಾರಾಟಗಾರಿಕೆ, ಸಂಶೋಧನೆ ವಿಭಾಗದ ಧ್ಯೇಯೋದ್ದೇಶ ಮತ್ತು ಗುರಿಗಳನ್ನು ನಿರ್ಣಯಿಸುತ್ತಾನೆ.
 2. ಸಂಶೋಧನಾ ನಿರ್ದೇಶಕ : ಇದೂ ಸಹ ಹಿರಿಯ ಸ್ಥಾನ. ನಿರ್ದೇಶಕರು ಎಲ್ಲಾ ವ್ಯಾಪಾರೋದ್ಯಮ ಸಂಶೋಧನಾ ಯೋಜನೆಗಳನ್ನು ಅಭಿವೃದ್ಧಿಗೊಳಿಸುವುದು ಮತ್ತು ಅವನ್ನು ಅನುಷ್ಠಾನಕ್ಕೆ ತರುವುದಕ್ಕೆ ಜವಾಬ್ದಾರರಾಗಿರುತ್ತಾರೆ.
 3. ಸಂಶೋಧನೆಯ ಸಹಾಯಕ ನಿರ್ದೇಶಕರು : ಇವರು ನಿರ್ದೇಶಕರಿಗೆ ಆಡಳಿತಾತ್ಮಕ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಾರೆ ಹಾಗೂ ಇತರ ಮಾರಾಟಗಾರಿಕೆ ಸಂಶೋಧನೆ ಸಹೋದ್ಯೋಗಿಗಳ ಮೇಲ್ವಿಚಾರಣೆ ವಹಿಸುತ್ತಾರೆ.
 4. (ಹಿರಿಯ) ಯೋಜನಾ ಪ್ರಬಂಧಕ : ಸಂಶೋಧನಾ ಯೋಜನೆಗಳ ವಿನ್ಯಾಸ, ಕಾರ್ಯಗತ ಮಾಡುವುದು ಮತ್ತು ನಿರ್ವಹಣೆಗೆ ಸಂಪೂರ್ಣವಾಗಿ ಜವಾಬ್ದಾರರಾಗಿರುತ್ತಾರೆ.
 5. ಅಂಕಿಸಂಖ್ಯಾ ವಿಜ್ಞಾನಿ/ದತ್ತಾಂಶ ಸಂಸ್ಕರಣಾ ತಜ್ಞ : ಅಂಕಿಸಂಖ್ಯಾ ಕೌಶಲಗಳ ಸಿದ್ಧಾಂತ ಮತ್ತು ಅನ್ವಯ - ಎರಡರಲ್ಲೂ ಪರಿಣತರಾಗಿರುತ್ತಾರೆ. ಪ್ರಾಯೋಗಿಕ ವಿನ್ಯಾಸ, ದತ್ತಾಂಶ ಸಂಸ್ಕರಣೆ ಮತ್ತು ವಿಶ್ಲೇಷಣೆ ಮಾಡುವ ಜವಾಬ್ದಾರಿಗಳನ್ನು ಹೊಂದಿರುತ್ತಾರೆ.
 6. ಹಿರಿಯ ವಿಶ್ಲೇಷಕ : ಯೋಜನೆಗಳನ್ನು ಅಭಿವೃದ್ಧಿ ಪಡಿಸುವುದರಲ್ಲಿ ಭಾಗವಹಿಸುತ್ತಾರೆ ಹಾಗೂ ರೂಪಿತ ಯೋಜನೆಗಳ ಕಾರ್ಯಗತಗೊಳಿಸುವಿಕೆಯನ್ನು ನಿರ್ದೇಶಿಸುತ್ತಾರೆ. ಇವರು ಸಂಶೋಧನೆ ವಿನ್ಯಾಸ ಮತ್ತು ದತ್ತಾಂಶ ಸಂಗ್ರಹವನ್ನು ಅಭಿವೃದ್ಧಿ ಪಡಿಸುವುದರಲ್ಲಿ ವಿಶ್ಲೇಷಕ, ಕಿರಿಯ ವಿಶ್ಲೇಷಕ ಮತ್ತು ಇತರ ಕಾರ್ಯಕರ್ತರ ನಿಕಟ ಸಂಪರ್ಕದಲ್ಲಿರುತ್ತಾರೆ. ಅಂತಿಮ ವರದಿಯನ್ನು ತಯಾರು ಮಾಡುತ್ತದೆ. ನಿಗದಿತ ಕಾಲ ಮತ್ತು ಉತ್ಪಾದನಾ ವೆಚ್ಚ ಸರಿದೂಗಿಸುವ ಪ್ರಾಥಮಿಕ ಹೊಣೆ ಹಿರಿಯ ವಿಶ್ಲೇಷಕನ ಮೇಲಿರುತ್ತದೆ.
 7. ವಿಶ್ಲೇಷಕ : ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿನ ವಿವರಗಳನ್ನು ನಿರ್ವಹಿಸುತ್ತಾನೆ. ಪ್ರಶ್ನೆಗಳನ್ನು ರೂಪಿಸುತ್ತಾನೆ ಮತ್ತು ಅದನ್ನು ಪೂರ್ವಭಾವೀ ಪರೀಕ್ಷೆಗೆ ಒಡ್ಡುತ್ತಾನೆ, ಪರಿಶೀಲಿಸುತ್ತದೆ ಹಾಗೂ ದತ್ತಾಂಶದ ಪ್ರಾಥಮಿಕ ವಿಶ್ಲೇಷಣೆಯನ್ನು ಮಾಡುತ್ತಾನೆ.
 8. ಕಿರಿಯ ವಿಶ್ಲೇಷಕ : ದ್ವಿತೀಯಕ ದತ್ತಾಂಶ ವಿಶ್ಲೇಷಣೆ, ಪ್ರಶ್ನೆಗಳ ಸಂಪಾದನೆ ಮತ್ತು ಕೋಡಿಂಗ್ ಹಾಗೂ ಸರಳ ಅಂಕಿಸಂಖ್ಯಾ ವಿಶ್ಲೇಷಣೆಯಂತಹ ನಿಯತ ಕಾರ್ಯಗಳನ್ನು ನಿಭಾಯಿಸುತ್ತಾನೆ.
 9. ಕ್ಷೇತ್ರ ಕಾರ್ಯ ನಿರ್ದೇಶಕ : ಸಂದರ್ಶಕರ ಮತ್ತು ಇತರ ಕ್ಷೇತ್ರ ಕಾರ್ಯಕರ್ತರ ಆಯ್ಕೆ, ತರಬೇತಿ ನೀಡುವಿಕೆ, ಮೇಲ್ವಿಚಾರಣೆ ವಹಿಸುವಿಕೆ ಮತ್ತು ಯೋಗ್ಯತೆ ನಿರ್ಣಯಿಸುವುದಕ್ಕೆ ಇವರು ಜವಾಬ್ದಾರರಾಗಿರುತ್ತಾರೆ.[೧೦]

ಇದನ್ನೂ ಗಮನಿಸಿ ಬದಲಾಯಿಸಿ

ಟಿಪ್ಪಣಿಗಳು ಬದಲಾಯಿಸಿ

 1. McDonald, Malcolm (2007), Marketing Plans (6th ed.), Oxford, England: Butterworth-Heinemann, ISBN 978-0750683869
 2. "ಆರ್ಕೈವ್ ನಕಲು". Archived from the original on 2009-04-24. Retrieved 2010-01-28.
 3. Malhotra, Naresha K. (2002), Basic Marketing Research: A Decision-Making Approach, Upper Saddle River, NJ: Prentice Hall, ISBN 0133768562 9780133768565 0130090484 9780130090485 {{citation}}: Check |isbn= value: length (help)
 4. ೪.೦ ೪.೧ Twedt, Dick Warren (1983), 1983 Survey of Marketing Research, Chicago: American Marketing Association {{citation}}: line feed character in |publisher= at position 19 (help)
 5. ಮಾರ್ಕೆಟಿಂಗ್ ರಿಸರ್ಚ್: ಆನ್ ಅಪ್ಲೈಡ್ ಓರಿಯೆಂಟೇಶನ್ 2006 (5ನೇ ಸಂಪುಟ) - ನರೆಶ್ ಮಲ್ಹೋತ್ರ. ISBN 978-0751328868
 6. ಬ್ಯುಸಿನೆಸ್-ಟು-ಬ್ಯುಸಿನೆಸ್ ಮಾರ್ಕೆಟಿಂಗ್- ಪಾಲ್ ಹಾಗ್‌, ನಿಕ್ ಹಾಗ್‌ ಮತ್ತು ಮ್ಯಾಟ್ ಹ್ಯಾರಿಸನ್ (ದಿನಾಂಕವಿಲ್ಲ). 2006ರ ಅಕ್ಟೋಬರ್ 9ರಂದು ಸಂಪರ್ಕಿಸಲಾಯಿತು
 7. ವಿಬೋವೊ ಮಾರ್ಟಿನೊ, ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ಫಾರ್ ಸ್ಮಾಲ್ ಮೀಡಿಯಮ್ ಎಂಟರ್ಪ್ರೈಸಸ್, ಜಕಾರ್ತ, ಇಂಡೋನೇಷಿಯಾ, 2008, ಅಪ್ರಕಟಿತ ವಿಷಯ
 8. ೮.೦ ೮.೧ ೮.೨ Glazer, Rashi (October 1991), "Marketing in an Information-Intensive Environment: Strategic Implications of Knowledge as an Asset", Upper Saddle River, NJ: Journal of Marketing, p. 1–19
 9. ೯.೦ ೯.೧ ೯.೨ Boudreaux, Michael (March 1984), ""Prepare for Your Future in Marketing, Your Interviews, and Something 'Extra' "", Student Edition Marketing News (2): 3–4
 10. Kinnear, Thomas C.; Root, Ann R. (1988), 1988 Survey of Marketing Research, Chicago: American Marketing Association {{citation}}: line feed character in |publisher= at position 19 (help)

ಆಕರಗಳು ಬದಲಾಯಿಸಿ

 • ಬ್ರಾಡ್ಲಿ, ನಿಗೆಲ್ ಮಾರ್ಕೆಟಿಂಗ್ ರಿಸರ್ಚ್. ಟೂಲ್ಸ್ ಆಂಡ್ ಟೆಕ್ನಿಕ್ಸ್. ಆಕ್ಸ್‌ಫರ್ಡ್ ಯ‌ೂನಿವರ್ಸಿಟಿ ಪ್ರೆಸ್, ಆಕ್ಸ್‌ಫರ್ಡ್, 2007 ISBN 0-19-928196-3 ISBN 978-0-19-928196-1
 • ಮಾರ್ಡರ್, ಎರಿಕ್ ದ ಲಾಸ್ ಆಫ್ ಚಾಯ್ಸ್ - ಪ್ರೆಡಿಕ್ಟಿಂಗ್ ಕಸ್ಟಮರ್ ಬಿಹೇವಿಯರ್ (ದ ಫ್ರೀ ಪ್ರೆಸ್ ಡಿವಿಜನ್ ಆಫ್ ಸೈಮನ್ ಆಂಡ್ ಸ್ಕಸ್ಟರ್, 1997. ISBN 0-684-83545-2
 • ಯಂಗ್, ಚಾರ್ಲ್ಸ E, ದ ಅಡ್ವರ್ಟೈಸಿಂಗ್ ಹ್ಯಾಂಡ್‌ಬುಕ್ , ಐಡಿಯಾಸ್ ಇನ್ ಫ್ಲೈಟ್, ಸೀಟ್ಲ್, WA, ಎಪ್ರಿಲ್ 2005. ISBN 0-9765574-0-1
 • ಕೋಟ್ಲರ್, ಫಿಲಿಪ್ ಮತ್ತು ಆರ್ಮ್‌ಸ್ಟ್ರಾಂಗ್, ಗ್ಯಾರಿ ಪ್ರಿನ್ಸಿಪಲ್ಸ್ ಆಫ್ ಮಾರ್ಕೆಟಿಂಗ್ ಪಿಯಾರ್ಸನ್, ಪ್ರೆಂಟಿಸ್ ಹಾಲ್, ನ್ಯೂಜೆರ್ಸಿ, 2007 ISBN 978-0-13-239002-6, ISBN 0-13-239002-7