ವ್ಯವಹಾರ ನಿರ್ಣಯ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಅರ್ಥ: ವ್ಯವಹಾರದ ಮುಖ್ಯ ಕಾರ್ಯಗಳಾದ ಯೋಜನೆ, ಸಂಘಟನೆ, ನಿರ್ದೇಶನ, ನೇಮಕ, ಹತೋಟಿ, ಮುಂತಾದ ಕ್ಷೇತ್ರಗಳಲ್ಲಿ ವ್ಯವಹಾರ ನಿರ್ಣಯಗಳನ್ನು ಕೈಗೂಳ್ಳಲಾಗುತ್ತದೆ. ವ್ಯವಹಾರದ ಕಾರ್ಯ ನಿರ್ವಾಹಕ ಚಟುವಟಿಕೆಗಳಲ್ಲಿ ನಿರ್ಣಯ ಕೈಗೊಳ್ಳವಿಕೆಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ನಿರ್ಣಯ ಕೈಗೊಳ್ಳವಿಕೆ ಎಂದರೆ ಒಂದು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದೆಂದರ್ಥ. ಜಾರ್ಜ್ ಆರ್.ಟೆರ್ರಿಯವರು ನಿರ್ಣಯ ಕೈಗೊಳ್ಳವಿಕೆಯನ್ನು ಈ ರೀತಿ ವ್ಯಾಖ್ಯಾನಿಸಿದ್ದಾರೆ "ಎರಡು ಅಥವಾ ಹೆಚ್ಚು ಸಾಧ್ಯವಾದ ಪರ್ಯಾಯಗಳಲ್ಲಿ ಆಯ್ಕೆ ಆಧಾರಿತ ಮೂಲ ಲಕ್ಷಣವೇ ನಿರ್ಧಾರ ಕೈಗೊಳ್ಳವಿಕೆಯಾಗಿದೆ." ವ್ಯವಹಾರ ನಿರ್ಣಯಗಳ ಲಕ್ಷಣಗಳು: 1.ಗುರಿ ಆಧಾರಿತ: ವ್ಯವಹಾರ ನಿರ್ಣಯಗಳು ಗುರಿ ಆಧಾರಿತವಾಗಿರುತ್ತದೆ.
2.ವಿವಿಧ ಪರ್ಯಾಯಗಳನ್ನೊಳಗೊಂಡಿರುತ್ತದೆ: ನಿರ್ದಿಷ್ಟ ಗುರಿ ಸಾಧನೆಗೆ ಈ ವಿವಿಧ ಪರ್ಯಾಯಗಳಲ್ಲಿ ಒಂದನ್ನು ಆಯ್ಕೆ ಮಾಡಲಾಗುತ್ತದೆ. 3.ಇದು ತೀರ್ಮಾನಿತ ಮತ್ತು ಭಾವನಾತ್ಮಕವಾಗಿದೆ: ಇದು ವೈಯಕ್ತಿಕ ಒಲವು ಮತ್ತು ನಿರ್ಣಯ ಕೈಗೊಳ್ಳುವ ಮೌಲ್ಯಗಳಿಂದ ನಿರ್ಧರಿಸಲ್ಪಡುವುದರಿಂದ ಇದು ತೀರ್ಮಾನಿತವಾಗಿದೆ ಹಾಗೂ ಭಾವನಾತ್ಮಕವಾಗಿದೆ ಎಂದು ಹೇಳಬಹುದು.