ವೈ.ಕೆ.ಸಂಧ್ಯಾಶರ್ಮ
ವೈ.ಕೆ.ಸಂಧ್ಯಾಶರ್ಮ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿದ್ದಾರೆ. ಪತ್ರಕರ್ತೆಯಾಗಿ ವೃತ್ತಿಜೀವನ ಆರಂಭಿಸಿದ ಶ್ರೀಮತಿ ಸಂಧ್ಯಾ, ಹವ್ಯಾಸಿ ರಂಗಭೂಮಿಯಲ್ಲಿ ಸಂಧ್ಯಾ ಕಲಾವಿದರು ತಂಡದ ಮೂಲಕ ಕ್ರಿಯಾಶೀಲರಾಗಿದ್ದಾರೆ. ಕಾದಂಬರಿ, ಸಣ್ಣಕಥೆ ಮತ್ತು ವಿಮರ್ಶೆ ಈ ಮೂರೂ ಪ್ರಕಾರಗಳಲ್ಲಿ ೫೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ, ಲೇಖಕಿಯಾಗಿಯೂ ಪ್ರಸಿದ್ಧರಾಗಿದ್ದಾರೆ.
ಕೃತಿಗಳು
ಬದಲಾಯಿಸಿಕಾದಂಬರಿ
ಬದಲಾಯಿಸಿ- ಪರಿವೇಷ
- ಪರಿಭ್ರಮಣ
- ಕವಣೆಗಿಟ್ಟ ಕಲ್ಲು
- ಕಾನನದ ನಡುವೆ
- ನೃತ್ಯ ಸರಸ್ವತಿ
- ಗುಪ್ತಗಾಮಿನಿ
- ಶ್ವೇತ ಮಹಲ್
- ಬೊಗಸೆ ಬೆಲದಿಂಗಳು
- ನೆಲೆಗಾಣದ ಹಕ್ಕಿ
- ಪ್ರೇಮಚಂದನ
- ಬೆಳ್ಳಿಕಿರಣ
- ಮೋಡದ ನೆರಳು
- ಮನಸೇ ಒ ಮನಸೇ
- ಮಧು ಸಿಂಚನ
- ಕನಸಿಗೊಂದು ಕನ್ನಡಿ
ಕಥಾ ಸಂಕಲನ
ಬದಲಾಯಿಸಿ- ಕಿರುಗುಟ್ಟುವ ದನಿಗಳು
- ತಾಳ ತಪ್ಪಿದ ಮೇಳ
- ಬೆಳಕಿಂಡಿ
ವಿಚಾರ ಸಾಹಿತ್ಯ
ಬದಲಾಯಿಸಿ- ಮಹಿಳೆ ಮತ್ತು ಉದ್ಯೋಗ
ಜೀವನ ಚರಿತ್ರೆ
ಬದಲಾಯಿಸಿ- ಅಹಲ್ಯಾಬಾಯಿ ಹೋಳ್ಕರ
ಸಂಪಾದನೆ
ಬದಲಾಯಿಸಿ- ನಮ್ಮ ಲೇಖಕಿಯರು
ಪ್ರಶಸ್ತಿ
ಬದಲಾಯಿಸಿ- ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ,
- ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ,
- ಅತ್ತಿಮಬ್ಬೆ ಪ್ರಶಸ್ತಿ,
- ಗೊರೂರು ಪ್ರಶಸ್ತಿ,
- ಕರ್ನಾಟಕ ದಸರಾ ಪ್ರಶಸ್ತಿ,
- ಕನ್ನಡ ಲೇಖಕಿಯರ ಸಂಘದ ಪ್ರಶಸ್ತಿ,
- ಪಂಜೆ ಮಂಗೇಶರಾಯರ ಪ್ರಶಸ್ತಿ,
- ಕೆನರಾ ಬ್ಯಾಂಕ್ ‘ ಮಹಿಳಾ ಸಾಧಕಿ’ ಪ್ರಶಸ್ತಿ
- ಅಬ್ದುಲ್ ಕಲಾಮ್ ಪ್ರಶಸ್ತಿ,
- ‘ನಿದಂ’ ಸಂಸ್ಥೆಯಿಂದ ‘ವುಮನ್ ಅಚಿವರ್’
ವೈಶಿಷ್ತ್ಯ
ಬದಲಾಯಿಸಿಸಂಧ್ಯಾ ತಮ್ಮ[೧]ಜಾಲತಾಣದ ಮೂಲಕ ನೃತ್ಯ, ನಾಟಕಗಳ ವಿಮರ್ಶೆ ಮತ್ತು ಸಣ್ಣ ಕಥೆಗಳನ್ನು ಪ್ರಕಟಿಸುತ್ತಾ, ಇಂಟರ್ ನೆಟ್ ನಲ್ಲಿ ಸಹ ಛಾಪನ್ನು ಮೂಡಿಸಿದ್ದಾರೆ