ವೈಯಕ್ತಿಕ ಗಣಕಯಂತ್ರ
ವೈಯಕ್ತಿಕ ಗಣಕಯಂತ್ರ (ಪಿಸಿ) ಒಂದು ಬಹು-ಉದ್ದೇಶದ ಗಣಕಯಂತ್ರವಾಗಿದ್ದು, ಅದರ ಗಾತ್ರ, ಸಾಮರ್ಥ್ಯಗಳು, ಮತ್ತು ಬೆಲೆಗಳು ವೈಯಕ್ತಿಕ ಬಳಕೆಗೆ ಸುಲಭ ಸಾಧ್ಯವಾಗಿಸುತ್ತವೆ. ವೈಯಕ್ತಿಕ ಗಣಕಯಂತ್ರಗಳು ಕಂಪ್ಯೂಟರ್ ತಜ್ಞ ಅಥವಾ ತಂತ್ರಜ್ಞರ ಬದಲಿಗೆ, ನೇರವಾಗಿ ಬಳಕೆದಾರರು ಬಳಸುವುದಕ್ಕೆ ಉದ್ದೇಶಿಸಲಾಗಿದೆ. ದೊಡ್ಡ ದುಬಾರಿ ಮಿನಿಕಂಪ್ಯೂಟರ್ ಮತ್ತು ಮೇನ್‌ಫ್ರೇಮ್ ಗಳಂತೆ, ಅದೇ ಸಮಯದಲ್ಲಿ ಅನೇಕ ಜನರು ಟೈಮ್ ಶೇರಿಂಗ್ ಮೂಲಕ ಮಾಡೂವ ಕೆಲಸವನ್ನು ವೈಯಕ್ತಿಕ ಗಣಕಯಂತ್ರಗಳಲ್ಲಿ ಮಾಡಲಾಗುವುದಿಲ್ಲ.
1960 ರ ದಶಕದಲ್ಲಿ ಸಂಸ್ಥೆಗಳು ಅಥವಾ ಸಾಂಸ್ಥಿಕ ಕಂಪ್ಯೂಟರ್ ಮಾಲೀಕರು ಈ ಯಂತ್ರಗಳಿಂದ ಯಾವುದೇ ಉಪಯುಕ್ತ ಕೆಲಸವನ್ನು ಮಾಡಬೇಕಾದರೆ ತಮ್ಮದೇ ಆದ ಪ್ರೋಗ್ರಾಂಗಳನ್ನು ಬರೆಯಬೇಕಾಗಿತ್ತು. ವೈಯಕ್ತಿಕ ಗಣಕಯಂತ್ರದ ಬಳಕೆದಾರರು ತಮ್ಮದೇ ಆದ ಅಪ್ಲಿಕೇಶನ್ ಗಳನ್ನು ಅಭಿವೃದ್ಧಿಪಡಿಸಬಹುದಾದರೂ, ಸಾಮಾನ್ಯವಾಗಿ ಈ ಸಿಸ್ಟಮ್ ಗಳು ವಾಣಿಜ್ಯ ಸಾಫ್ಟ್‌ವೇರ್, ಉಚಿತವಾದ ಸಾಫ್ಟ್‌ವೇರ್ ("ಫ್ರೀವೇರ್") ಅಥವಾ ಉಚಿತವಾದ ಮತ್ತು ಓಪನ್-ಸೋರ್ಸ್ ಸಾಫ್ಟ್‌ವೇರನ್ನು ಬಳಸುತ್ತವೆ, ಇದನ್ನು ಬಳಕೆಗೆ ಸಿದ್ಧ ರೂಪದಲ್ಲಿ ಒದಗಿಸಲಾಗುತ್ತದೆ.
1990 ರ ದಶಕದ ಆರಂಭದಿಂದ, ಹೆಚ್ಚಿನ ವೈಯಕ್ತಿಕ ಗಣಕಯಂತ್ರ ಮಾರುಕಟ್ಟೆಯಲ್ಲಿ ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಮ್ಗಳು ಮತ್ತು ಇಂಟೆಲ್ ಹಾರ್ಡ್ವೇರ್ಗಳು ಪ್ರಾಬಲ್ಯ ಹೊಂದಿವೆ, ಮೊದಲು ಎಂಎಸ್-ಡಾಸ್ (MS-DOS) ಮತ್ತು ನಂತರ ಮೈಕ್ರೋಸಾಫ್ಟ್ ವಿಂಡೋಸ್ನೊಂದಿಗೆ. ಮೈಕ್ರೋಸಾಫ್ಟ್ನ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಗಳಿಗೆ ಪರ್ಯಾಯಗಳು ಉದ್ಯಮದ ಸ್ವಲ್ಪಮಟ್ಟಿನ ಪಾಲನ್ನು ಹೊಂದಿವೆ. ಇವುಗಳೆಂದರೆ ಆಪಲ್ನ ಮ್ಯಾಕ್ ಒಎಸ್ (macOS) ಮತ್ತು ಉಚಿತ ಮತ್ತು ಓಪನ್-ಸೋರ್ಸ್ ಯುನಿಕ್ಸ್-ನಂತಹ ಆಪರೇಟಿಂಗ್ ಸಿಸ್ಟಮ್ಗಳಾದ ಲಿನಕ್ಸ್.
ವಿಧಗಳು
ಬದಲಾಯಿಸಿ- ವರ್ಕ್‍ಸ್ಟೇಶನ್: ಹೆಚ್ಚು ಸಾಮರ್ಥ್ಯದ, ವಿಶೇಷ ಯಂತ್ರಾಂಶಗಳನ್ನು ಹೊಂದಿದ್ದ ಶಕ್ತಿಶಾಲಿ ಕಂಪ್ಯೂಟರುಗಳನ್ನು 'ವರ್ಕ್‍ಸ್ಟೇಶನ್'ಗಳೆಂದು ಗುರುತಿಸಲಾಗುತ್ತಿತ್ತು.
- ಡೆಸ್ಕ್‌ಟಾಪ್ ಕಂಪ್ಯೂಟರ್
- ಲ್ಯಾಪ್‌ಟಾಪ್
- ಟಾಬ್ಲೆಟ್
- ಸ್ಮಾರ್ಟ್‌ಫೋನ್
- ಅಲ್ಟ್ರಾ ಮೊಬೈಲ್ ಪಿಸಿ
- ಪಾಕೆಟ್ ಪಿಸಿ
ಉಲ್ಲೇಖಗಳು
ಬದಲಾಯಿಸಿhttp://karnatakaeducation.org.in/KOER/index.php?title=ICT&mobileaction=toggle_view_mobile