ಭೌತಶಾಸ್ತ್ರದಲ್ಲಿ, ವೇಗ ಬದಲಾವಣೆಯ ದರವನ್ನು ವೇಗೋತ್ಕರ್ಷ ಎನ್ನುತಾರೆ. ನ್ಯೂಟನ್ ನ ೨ನೇ ನಿಯಮದಂತೆ, ಒಂದು ವಸ್ತುವಿನ ವೇಗೂತ್ಕರ್ಷವು ಆ ವಸ್ತುವಿನ ಮೇಲೆ ಆದ ಎಲ್ಲಾ ಬಲಗಳ ಪ್ರಯೋಗದ ಫಲಿತಾಂಶ ಆಗಿರುತ್ತದೆ. SI ಮಾನದಂಡದ ಪ್ರಕಾರ ವೇಗೋತ್ಕರ್ಷದ ಏಕಮಾನವು ಮೀಟರ್/(ಸೆಕೆಂಡ್2) ಅಗಿದೆ. ವೇಗೋತ್ಕರ್ಷವು ಸಹ ವೇಗದಂತೆ ಪೊಲಕ ಪರಿಮಾಣವಾಗಿದೆ.

ಸ್ಪರ್ಶರೇಖೆ ಮತ್ತು ನಡುವೆಡೆಯ ವೇಗೋತ್ಕರ್ಷ

ಬದಲಾಯಿಸಿ
 
ವೇಗ ಮತ್ತು ವೇಗೋತ್ಕರ್ಷಗಳ ವಿವರಣೆಯೊಂದಿಗೆ ತೂಗಾಡುತ್ತಿರುವ ಲೋಲಕದ (ತೂಗುಗುಂಡು) ಚಿತ್ರ. ಲೋಲಕವು, ಸ್ಪರ್ಶರೇಖೆ ಮತ್ತು ನಡುವಡೆಯ ವೇಗೋತ್ಕರ್ಷಗಳನ್ನು ಪಡೆದಿದೆ.
 
ವಕ್ರ ರೇಖೆಯಲ್ಲಿ, ಅಥವಾ ತಿರುವಾದ ದಾರಿಯಲ್ಲಿ ಚಲಿಸುವ ವಸ್ತುವಿನ ವೇಗೋತ್ಕರ್ಷದ ಭಾಗಗಳು. ಸಾಗುವ ಜವದ ವ್ಯತ್ಯಾಸದಿಂದ ಸ್ಪರ್ಶರೇಖಾ ಭಾಗ atದ ವೇಗೋತ್ಕರ್ಷ ಉಂಟಾಗುತ್ತದೆ, ಮತ್ತು ಅದು ರೇಖೆಯ ಉದ್ದಕ್ಕೂ ವೇಗದ ಪೂಲಕದ ದಿಕ್ಕನ್ನು (ಅಥವಾ ಅದರ ವಿರುಧ್ದ ದಿಕ್ಕನ್ನು) ಹೊಂದಿರುತ್ತದೆ. ಇನ್ನೊಂದು ಭಾಗ, ವೃತ್ತಾಕಾರದ ಚಲನೆಯಿಂದ ಉಂಟಾಗುವಂತಹ ನಡುವಡೆಯ ಭಾಗವಾಗಿದ್ದು, . ac ಇಂದ ಸೂಚಿಸಲಾಗುತ್ತದೆ. ಇದು ವೇಗ ಪೂಲಕದ ದಿಕ್ಕಿನ ಬದಲಾವಣೆಯಿಂದ ಬರುತ್ತದೆ, ವೃತ್ತಾಕರ ಚಲನೆಯ ಕೇಂದ್ರದ ಕಡೆ (ಹೆಸರೇ ಸೂಚಿಸುವಂತೆ) ಮುಖಮಾಡಿರುತ್ತದೆ.