ವೂದೂ ಮಾಡುವಾಗ ಸಂಕಲ್ಪ (ನಿಯ್ಯತ್)ದೊಂದಿಗೆ "ಬಿಸ್ಮಿಲ್ಲಾಹ್" ಎಂದು ಹೇಳುತ್ತಾ ಎರಡು ಮುಂಗೈಗಳನ್ನು ಮೂರು ಸಲ ತೊಳೆಯಬೇಕು. ಬಳಿಕ ಮೂರು ಸಲ ಬಾಯಿ ಮುಕ್ಕಳಿಸಬೇಕು. ಜೊತೆಗೆ ಮುಗಿನೊಳಗೆ ನಿರನ್ನೆಳೆದು ಶುಚಿಗೊಳಿಸಬೇಕು. ನಂತರ ಮೂರು ಸಲ ಮುಖ ತೊಳೆಯಬೇಕು. ಆ ಬಳಿಕ ಮೂರು ಸಲ ಬಲಗೈಯನ್ನು ಮತ್ತು ಏಡಗೈಯನ್ನು ಮೊಣಕೈಯ ತನಕ ತೊಳೆಯಬೇಕು. ಆನಂತರ ಎರಡು ಕೈಯಿಂದಲೂ ಸಲ್ಪ ನೀರನ್ನು ತೆಗೆದು ತಲೆಯ ಮುಂಭಾಗದ ತನಕ ಒಂದು ಬಾರಿ ಸವರಬೇಕು. ಜೊತೆಗೆ ಕಿವಿಯನ್ನೂ ಸವರಬೇಕು. ಕೊನೆಗೆ ಎರಡು ಪಾದಗಳನ್ನು ಮಣಿಗಂಟಿನ ವರೆಗೆ ಮೂರು ಸಲ ತೊಳೆಯಬೇಕು. ವುದೂ ಮಾಡುವಾಗ ಮೊದಲು ಹಲ್ಲುಜ್ಜುವುದು ಸುನ್ನತ್ ಆಗಿದೆ.


"ಓ, ಸತ್ಯ ವಿಶ್ವಾಸಿಗಳೇ!ನೀವು ನಮಾಜಿಗೆಂದು ಹೊರಟಾಗ ನಿಮ್ಮಮುಖಗಳನ್ನು ಮತ್ತು ಮೊಣಕೈ ಗಂಟುಗಳವರೆಗೆ ಕೈಗಳನ್ನು ತೊಳೆದು ಕೊಳ್ಳಿರಿ. ಜನಾಬತ್ ಅಥವಾ ವೀರ್ಯಸ್ಖಲನಾ ನಂತರದ ಮಾಲಿನ್ಯದ ಸ್ಥಿತಿಯಲ್ಲಿದ್ದರೆ ಸ್ನಾನ ಮಾಡಿ ಶುದ್ಧ ರಾಗಿ ಕೊಳ್ಳಿರಿ. ನೀವು ಅನಾರೋಗ್ಯದಿಂದಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅಥವಾ ನಿಮ್ಮಲ್ಲಾರಾದರೂ ಮಲ ಮೂತ್ರ ವಿಸರ್ಜನೆ ಮಾಡಿ ಬಂದರೆ ಅಥವಾ ನೀವು ಸ್ತ್ರೀಯರನ್ನು ಸ್ಪರ್ಶಿಸಿದ್ದರೆ ಮತ್ತು ಆಬಳಿಕ ನೀರು ಸಿಗದೇ ಹೋದರೆ ಶುದ್ಧ ಮಣ್ಣನ್ನು ಉಪಯೋಗಿಸಿ ಕೊಳ್ಳಿರಿ. ಅದರ ಮೇಲೆ ಹಸ್ತಗಳನ್ನು ಬಡಿದು ನಿಮ್ಮ ಮುಖ ಮತ್ತು ಕೈಗಳ ಮೇಲೆ ಸವರಿಕೊಳ್ಳಿರಿ. ಅಲ್ಲಾಹ್ ನಿಮ್ಮ ಜೀವನ ವನ್ನು ಸಂಕುಚಿತಗೊಳಿಸಲಿಚ್ಚಿಸುವುದಿಲ್ಲ. ಬದಲಾಗಿನೀವು ಕ್ರತಜ್ಞರಾಗಲೆಂದು. ಅವನು ನಿಮ್ಮನ್ನು ಪರಿಶುದ್ಧಗೊಳಿಸಲಿಕ್ಕೂ ನಿಮ್ಮಮೇಲೆ ತನ್ನ ಕೊಡುಗೆಗಳನ್ನು ಪರಿಪೂರ್ಣಗೊಳಿಸಲಿಕ್ಕೂಇಚ್ಚಿಸುತ್ತಾನೆ." [ಕುರಾನ್, 5: 6]

"https://kn.wikipedia.org/w/index.php?title=ವೂದೂ&oldid=1165842" ಇಂದ ಪಡೆಯಲ್ಪಟ್ಟಿದೆ