ವೀರ ಚಾರ್ಲ್ಸ್ವರ್ತ್ ಬಾರ್ಕ್ಲೆ[] (೧೮೯೩ - ೧೯೮೯) ಅವರು ಒಬ್ಬ ಪ್ರಮುಖವಾದ ಬರಹಗಾರರು. ಸ್ಕೌಟಿಂಗ್ ಕಲಿಸುವುದರಲ್ಲಿ ಇವರು ತುಂಬಾ ಉತ್ಸಾಹವನ್ನು ತೋರಿಸಿದರು.

ಆರಂಭಿಕ ಜೀವನ

ಬದಲಾಯಿಸಿ

ವೀರ ಬಾರ್ಕ್ಲೆ ಅವರು ನವೆಂಬರ್ ೧೦, ೧೮೯೩ ರಲ್ಲಿ ಹುಟ್ಟಿದರು. ಇವರು ರೆವರೆಂಡ್ ಚಾರ್ಲ್ಸ್ ಬಾರ್ಕ್ಲೆ ಮತ್ತು ಫ಼್ಲೊರೆನ್ಸ್ ಲುಈಸ ಚಾರ್ಲ್ಸ್ವರ್ತ್ ಅವರ ಎಂಟು ಮಕ್ಕಳಲ್ಲಿ ಒಬ್ಬರು. ಬಾರ್ಕ್ಲೆ ಅವರ ತಾಯಿ, ಫ಼್ಲೊರೆನ್ಸ್, ಕೂಡ ಒಬ್ಬ ಪ್ರಮುಖವಾದ ಬರಹಗಾರರು ಆಗಿದ್ದರು.ಬಾರ್ಕ್ಲೆ ಅವರ ಕುಟುಂಬ ಲಂಡನ್‌ಗೆ ಉತ್ತರದಲ್ಲಿರುವ Hertfordshire ಅಲ್ಲಿನ Hertford Heath ಎನ್ನುವ ಹಳ್ಳಿಯಲ್ಲಿ ಇರುತ್ತಿದ್ದರು. ಈ ಹಳ್ಳಿಯಲ್ಲಿ ೧೮೮೧ ರಿಂದ ೧೯೨೦ ವರೆಗು ಬಾರ್ಕ್ಲೆ ಅವರ ತಂದೆ "ವಿಕರ್" ಆಗಿದ್ದರು.

ಬಾರ್ಕ್ಲೆ ಅವರ ಪರಿವಾರ ಆಗಾಗ್ಗೆ ಸ್ವಿಸ್ ಆಲ್ಪ್ಸಿನಲ್ಲಿರುವ St. Moritz ಗೆ ಹೋಗುತ್ತಿದ್ದರು. ಬಾರ್ಕ್ಲೆ ಅವರಿಗೆ ಹಿಮಜಾರುಬಂಡಿಯ ಮೇಲೆ ಸವಾರಿ ಮಾಡುವುದು ತುಂಬಾ ಇಷ್ಟವಾಗಿತ್ತು. ಅಲ್ಲಿರುವ Cresta Run ಅನ್ನು ಪ್ರಯೋಗ ಮಾಡಿದ್ದ ಕೆಲವು ಸ್ತ್ರೀಯರಲ್ಲಿ ಬಾರ್ಕ್ಲೆ ಅವರು ಒಬ್ಬರು.

ಸ್ಕೌಟಿಂಗ್

ಬದಲಾಯಿಸಿ

ಬಾರ್ಕ್ಲೆ ಸ್ಕೌಟ್ ಮೂವ್ಮೆಂಟ್ ಅನ್ನು ೧೯೧೨ ಅಲ್ಲಿ ಸೇರಿಕೊಂಡರು. ಅವರ ಹಳ್ಳಿಯ Boy Scout Troopಇನ ನಾಯಕವಾದರು. ೧೯೧೩ ರಲ್ಲಿ, ಸ್ಕೌಟ್ ಮೂವ್ಮೆಂಟಿನ ಸ್ಥಾಪಕ, ರಾಬರ್ಟ್ ಬೇಡೆನ್-ಪೊವೆಲ್, ೧೧ ವರ್ಷಗಳೊಳಗಿದ್ದ ಚಿಕ್ಕ ಹುಡುಗರಿಗೆ "ಜೂನಿಯರ್ ಸ್ಕೌಟ್ಸ್" ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದರು. ಜನವರಿ ೧೯೧೪ರ ಒಳಗೆ, ಇದನ್ನು "Wolf Cubs" ಎಂದು ಕರೆಯಲು ಪ್ರಾರಂಭಿಸಿದರು. Boy Scout Troop ಅಲ್ಲಿ ಸೇರಲು ಆಸೆ ಪಡುತ್ತಿದ್ದ ಚಿಕ್ಕ ಹುಡುಗರು, ಬಾರ್ಕ್ಲೆ ಅವರನ್ನು ಪೀಡಿಸ ತೊಡಗಿದ್ದರು. ಅವರ ಕುತೂಹಲವನ್ನು ನೋಡಿ, ಬಾರ್ಕ್ಲೆ ಅವರು ಆ ಹಳ್ಳಿಯ ಮೊದಲನೆಯ Hertford Heath Wolf Cub Pack ಅನ್ನು ಸ್ಥಾಪಿಸಿದರು. ಅವರ ತಂಗಿ, ಆಂಜೆಲಾಳನ್ನು ಅದರ ನಾಯಕವನ್ನು ಮಾಡಿದರು. ಈ ತರ, ಬೇರೆ ಸ್ತ್ರೀಯರು ಕೂಡ ನಾಯಕರು ಆಗಲು ಅಸೆ ಪಡೆಯುವರೆಂದು, "ಹೌ ಅ ಲೇಡಿ ಕ್ಯಾನ್ ಟ್ರೇನ್ ದಿ ಕಬ್ಸ್" ಎನ್ನುವ ಲೇಖನೆಯನ್ನು ಬರೆದರು. ಈ ಲೇಖನೆ Headquarters Gazette ಎನ್ನುವ ಸ್ಕೌಟ್ ಪತ್ರಿಕೆಯಲ್ಲಿ, ಜನವರಿ ೧೯೧೫ರಲ್ಲಿ ಪ್ರಕಟಿಸಲಾಗಿತು.

ಜೂನ್ ೧೯೧೬ ರಲ್ಲಿ, ಬಾರ್ಕ್ಲೆ ಅವರು Wolf Cub ನಾಯಕರ ಒಂದು ಸಭೆಗೆ ಬಂದರು. ಸ್ಕೌಟ್ ಮೂವ್ಮೆಂಟಿನ ಸ್ಥಾಪಕ, ಬೇಡೆನ್-ಪೊವೆಲ್, ಅವರ ಲೇಖನೆಯನ್ನು ಓದಿ, ಅವರಿಗೆ ಇಂಪೀರಿಯಲ್ ಹೆಡ್ಕ್ವಾರ್ಟರ್ಸ್ ಅಲ್ಲಿ Wolf Cub Secretary ಸ್ಥಾನವನ್ನು ವಾಗ್ದಾನಮಾಡಿದರು. ಇದಕ್ಕೆ ಮುಂಚೆ, ವೀರ ಬಾರ್ಕ್ಲೆ ಅವರು ಬ್ರಿಟಿಷ್ ರೆಡ್ ಕ್ರಾಸ್ ಜೊತೆಯಲ್ಲಿ, Hampshire ಅಲ್ಲಿ Netley ಅಲ್ಲಿರುವ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಒಂದು ಸಲ ಹಿಮಜಾರುಬಂಡಿಯನ್ನು ಓಡಿಸುತ್ತಿದ್ದಾಗ, ಅವರ ಮೊಣಕಾಲಿಗೆ ಗಾಯ ಆಗಿತ್ತು. ಗಾಯದ ಕಾರಣದಿಂದ, ಬಾರ್ಕ್ಲೆ ಅವರಿಗೆ ಆಸ್ಪತ್ರೆಯಲ್ಲಿ ಕೆಲಸ ಮುಂದುವರಿಸಲು ಅವರಿಗೆ ತುಂಬಾ ಕಷ್ಟ ಆಗಿ, ಬೇಡೆನ್-ಪೊವೆಲ್ ಕೊಟ್ಟ ಕೆಲಸವನ್ನು ತೆಗೆದುಕೊಂಡರು.

Secretary ಸ್ಥಾನವನ್ನು ಒಪ್ಪಿಕೊಂಡ ನಂತರ, ಬಾರ್ಕ್ಲೆ ಅವರ ಮೊದಲ ಕೆಲಸ ಬೇಡೆನ್-ಪೊವೆಲ್‌ಗೆ ದಿ ವುಲ್ಫ಼್ ಕ್ಲಬ್‌ಸ್ ಹ್ಯಂಡಬುಕ್ ಪುಸ್ತಕವನ್ನು ಸಂಪಾದಿಸಲು ಸಹಾಯ ಮಾಡುವುದು ಆಗಿತ್ತು. ಈ ಪುಸ್ತಕ ದಿಸೆಂಬರ್ ೧೯೧೬ ರಲ್ಲಿ ಪ್ರಕಟಣವಾಯಿತು. ೧೯೨೦ ರಲ್ಲಿ, ಬಾರ್ಕ್ಲೆ ಅವರ ನಾಯಕತ್ವದ ಕೆಳಗೆ ೫೦೦ ಮಕ್ಕಳು, ಲಂಡನ್‌ಅಲ್ಲಿ, ಒಂದು "Grand Howl" ಅನ್ನು ಪ್ರದರ್ಶಿಸಿದರು.

ಸ್ಕೌಟಿಂಗ್ ಅಲ್ಲಿ ವೀರ ಬಾರ್ಕ್ಲೆ ಅವರ ಸಾಧನೆಗಳು ಅವರಿಗೆ "ಸಿಲ್‌ವರ್ ವುಲ್ಫ಼್" ಪ್ರಶಸ್ತಿ ಅನ್ನು ಪಡೆಯಲು ಸಾಧ್ಯಮಾಡಿದವು.

ಬಾರ್ಕ್ಲೆ ಅವರು ರೋಮನ್ ಕ್ಯಾತೊಲಿಕ್ ಗೆ ಪರಿವರ್ತಿಸಿದವರಾಗಿದ್ದರು. ಇವರು Birmingham ಅಲ್ಲಿರುವ Edgbaston ಅಲ್ಲಿ ವಾಸಿಸುತ್ತಿದ್ದರು. ಇಲ್ಲಿ ಅವರು ತಮ್ಮ ಸ್ಕೌಟಿಂಗ್ ಕಲಿಸುವ ಕೆಲಸವನ್ನು ಪುನರಾರಂಭಿಸಿದರು. ಹಾಲ್ ಗ್ರೀನ್ ಅಲ್ಲಿ ಸ್ಥಾಪಿಸಿಕೊಂಡ Catholic Scout Guild[]ಗೆ ಇವರು ಪ್ರಮುಖವಾದ ವ್ಯಕ್ತಿಯಾಗಿದ್ದರು. Catholic Scout Guild ಅವರು ಹಿಂದುಳಿದ ವರ್ಗಗಳ ಮಕ್ಕಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯನ್ನು ನೀಡುತ್ತಿದ್ದರು.

೧೯೨೦ಯ ಮೇಲಿನ ವರ್ಷ್ಗಳಲ್ಲಿ ಬಾರ್ಕ್ಲೆ ಅವರು ಆಗಾಗ್ಗೆ ಫ಼್ರಾನ್ಸಿಗೆ ಹೋಗುತ್ತಿದ್ದರು. ಅಲ್ಲಿ ಅವರು Scouts de France ಅಲ್ಲಿ Les Louveteaux(Wolf Cubs) ಅನ್ನು ರೂಪಿಸಲು ಪ್ರೋತ್ಸಾಹವನ್ನು ನೀಡಿದರು. ಬಾರ್ಕ್ಲೆ ಅವರು ೧೯೨೩ರಲ್ಲಿ Scouts de France ಅವರಿಂದ Cross of St. Louis ಪ್ರಶಸ್ತಿಯನ್ನು ಹೊಂದಿದರು.

೧೯೩೧ರಲ್ಲಿ ಸ್ಕೌಟಿಂಗ್ ಕಲಿಸುವುದು ನಿಲಿಸಿ, ಮೊದಲು ಫ಼್ರಾನ್ಸ್, ಅದಾದ ಮೇಲೆ ಸ್ವಿಟ್ಜರ್ಲ್ಯಾಂಡ್ ಗೆ ಹೋಗಿ ವಾಸಿಸುತ್ತಿದ್ದರು.

ವೀರ ಬಾರ್ಕ್ಲೆ ಅವರು ಉತ್ಪಾದಕವಾದ ಬರಹಗಾರರು ಆಗಿದ್ದರು. ಮುಖ್ಯವಾಗಿ ಮಕ್ಕಳ ಪುಸ್ತಕಗಳನ್ನು ಬರಿಯುತ್ತಿದ್ದರೂ, ಬಾರ್ಕ್ಲೆ ಅವರು ಸ್ಕೌಟಿಂಗ್ ಮತ್ತು ಕ್ರಿಶ್ಚಿಯನ್ ಧರ್ಮದ ಬಗ್ಗೆ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಕಥೆಗಳಲ್ಲಿ ಅವರ "Jane" ಕ್ರಮದ ಕಥೆಗಳು ಬಹಳ ಪ್ರಸಿದ್ಧವಾದುವು.

ವೀರ ಬಾರ್ಕ್ಲೆ ಅವರು ಕೆಲವು ಕಥೆಗಳನ್ನು "ಮಾರ್ಗರೆಟ್ ಬೀಚ್" ಮತ್ತು "ವೀರ ಚಾರ್ಲ್ಸ್ವರ್ತ್" ಅಂಕಿತ ನಾಮಗಳಲ್ಲಿ ಬರೆದಿದ್ದಾರೆ. ಒಂದು ನೋಟಗಾರ ಕಥೆಯು "ಹ್ಯೂ ಚಿಚೆಸ್ಟರ್" ಹೆಸರಿನಲ್ಲಿ ಪ್ರಕಟಿಸಲಾಗಿದೆ.

ಬಾರ್ಕ್ಲೆ ಅವರು ಮತ್ತೆ ಇಂಗ್ಲಂಡಿಗೆ ಎರಡನೆಯ ವರ್ಲ್ಡ್ ವಾರಿನ ಮೊದಲಲ್ಲಿ ತಿರುಗಿ ಬಂದರು. ಫ಼ೆಲ್ಫ಼ಮ್ಮಿನ ದಕ್ಷಿಣ ತೀರದಲ್ಲಿ ವಾಸಿಸುತ್ತಿದ್ದರು. ಅವರ ಕಾಣಿಕೆ ಕೆಟ್ಟವಾಗ ತೊಡಗಿತು. ಅವರ ಸೊಸೆ, ಬೆಟ್ಟಿ, ಅವರನ್ನು ನೋಡಿಕೊಳ್ಳುತ್ತಿದ್ದಳು.

 
ಡಾನೀ ಎಗೆನ್; ಫ಼ರ್ದರ್ ಅಡ್ವೆಂಚರ್ಸ್ ಆಫ಼್ "ಡಾನೀ ದಿ ಡಿಟೆಕ್ಟಿವ್"

ವೀರ ಬಾರ್ಕ್ಲೆ ಅವರು ಸೆಪ್ಟೆಂಬರ್ ೧೯೮೯ರಲ್ಲಿ, Shermingham ಅಲ್ಲಿರುವ St. Nicholas ನರ್ಸಿಂಗ್ ಹೋಮಿನಲ್ಲಿ ತೀರಿ ಹೋದರು. ಅವರನ್ನು Shermingham ಸ್ಮಶಾನದಲ್ಲಿ ಹೂಳಿದ್ದಾರೆ.

ಬರವಣಿಗೆಗಳು

ಬದಲಾಯಿಸಿ
  • ಸ್ಕೌಟ್ ಡಿಸಿಪ್ಲಿನ್ (೧೯೩೪)
  • ಡಾನೀ ಎಗೆನ್ (೧೯೨೦)
  • ದಿ ಮಿಸ್ಟೀರಿಯಸ್ ಟ್ರ್ಯಾಂಪ್ (೧೯೨೧)
  • ಸ್ಟೋರೀಸ್ ಆಫ಼್ ದಿ ಸೇಂಟ್ಸ್ ಬೈ ಕ್ಯಾಂಡಲ್-ಲೈಟ್ (೧೯೨೩)
  • ಪೀಟರ್ ದಿ ಕಬ್ (೧೯೨೮, ಮಾರ್ಗರೆಟ್ ಬೀಚ್ ಹೆಸರಿನಲ್ಲಿ)
  • ದೆ ಮಿಸ್ಟರಿ ಮ್ಯಾನ್ ಇನ್ ದಿ ಟವರ್ (೧೯೩೮, ಹ್ಯೂ ಚಿಚೆಸ್ಟರ್ ಹೆಸರಿನಲ್ಲಿ)
  • ಜೇನ್ ಅಂಡ್ ದಿ ಪೇಲ್ ಫ಼ೇಸ್ (೧೯೪೫)
  • ದಿ ಬುಕ್ ಆಫ಼್ ಕಬ್ ಗೇಮ್ಸ್ (೧೯೨೬)
  • ಕ್ಯಾಮ್ಪ್ ಫ಼ೈಯರ್ ಸಿಂಗಿಂಗ್ ಫ಼ೋರ್ ಸ್ಕೌಟ್ಸ್ ಅಂಡ್ ಗೈಡ್ಸ್ (೧೯೩೪)
  • ದಿ ಸ್ಕೌಟ್ ವೇ (೧೯೨೯)

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. https://en.wikipedia.org/wiki/Vera_Barclay
  2. https://en.wikipedia.org/wiki/International_Catholic_Conference_of_Scouting