ವಿ.ಚಂದ್ರಶೇಖರ ನಂಗಲಿ
ವಿ.ಚಂದ್ರಶೇಖರ ನಂಗಲಿ ಕನ್ನಡದ ಪ್ರಮುಖ ವಿಜ್ಞಾನ ಪ್ರಭಂದಕಾರರಲ್ಲಿ ಒಬ್ಬರು. ಕೋಲಾರ ಜಿಲ್ಲೆಯ ಮುಳಬಾಗಿಲ ತಾಲೂಕಿನ ನಂಗಲಿಯಲ್ಲಿ ೧೯೫೬ರ ಸೆಪ್ಟಂಬರ್ ೨೪ ರಂದು ನಂಗಲಿಯವರು ಜನಿಸಿದರು. ನಂಗಲಿಯವರು ಕೋಲಾರದ ಕನ್ನಡ ಸ್ನಾತಕೊತ್ತರ ಕೇಂದ್ರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾಲೇಜ್ ಶಿಕ್ಷಣ ನಿದೇ೯ಶನಾಲಯದಲ್ಲಿ ಸಹ ನಿದೆ೯ಶಕರಾಗಿಯು ಕಾಯ೯ ನಿವ೯ಹಿಸಿದರೆ. ಕನ್ನಡ ಸಾಹಿತ್ಯ ವಿಮಶೆ೯ಯಲ್ಲಿ 'ಹಸಿರು ಕಾಳಜಿ' ಹಾಗೂ 'ಜೀವ ಕೇಂದ್ರಿತ' ದೃಷ್ಟಿಕೋನಗಳಿಂದ ಪ್ರಸಿದ್ಧರಾದವರು ಚಂದ್ರಶೇಖರ ನಂಗಲಿ.
ಕೃತಿಗಳು:- ಕನ್ನಡದಲ್ಲಿ ಚಾರಣ ಸಾಹಿತ್ಯ - ಒಂದು ಸಂಸ್ಕೃತಿಕ ಅಧ್ಯಯನ, ಕಾಡು ಮತ್ತು ತೋಪು, ಹಸಿರು ಪಿರಮಿಡ್, ಮಾಕ್೯ವಾದಿ ವಿಮಶೆ೯, ನಾ ನಿಲ್ಲುವವಳಲ್ಲ, ನಾ ನಿಮ್ಮೊಳಗು, ತಿಟ್ಹತಿ ತಿರುಗಿ, ನಡೆದುದೆ ದಾರಿ.
ಪ್ರಶಸ್ತಿ:-ರಸ ಋಷಿ ಕುವೆಂಪು ಅವರ ಸಮಗ್ರ ಸಾಹಿತ್ಯ ಕುರಿತು ನಂಗಲಿಯವರು 'ಆಲಿಸಯ್ಯ ಮಲೆಯ ಕವಿ' ವಿಮಶಾ೯ ಕೃತಿಗೆ ಕನಾ೯ಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಲಭಿಸಿದೆ.