ವಿ.ಅನುಸೂಯಾ ಬಾಯಿ
ವಿ. ಅನುಸೂಯಾ ಬಾಯಿ (ಜನನ ೨೩ ಆಗಸ್ಟ್ ೧೯೫೩) ಒಬ್ಬ ಭಾರತೀಯ ಮಾಜಿ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್. ಅವರು ೧೯೭೫ ರಲ್ಲಿ ಅರ್ಜುನ ಪ್ರಶಸ್ತಿ ಮತ್ತು ೧೯೭೬ ರಲ್ಲಿ ಪಾಕಿಸ್ತಾನದಲ್ಲಿ ನಡೆದ ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಮೀಟ್‌ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದರು.[೧] [೨] ಅವರು ಭಾರತದ ಚೆನ್ನೈನಲ್ಲಿ ಜನಿಸಿದರು. ಅವರು ೧೯೭೩ ರ ಸಮ್ಮರ್ ಯೂನಿವರ್ಸಿಯೇಡ್ ಮಾಸ್ಕೋದಲ್ಲಿ ಭಾರತವನ್ನು ಪ್ರತಿನಿಧಿಸಿದರು, ಸ್ಪ್ರಿಂಟಿಂಗ್ ಈವೆಂಟ್‌ಗಳು ಮತ್ತು ಡಿಸ್ಕಸ್ ಥ್ರೋನಲ್ಲಿ ಸ್ಪರ್ಧಿಸಿದರು. [೩] ಅವರು ಆಗಸ್ಟ್, ೨೦೧೩ ರಲ್ಲಿ ಚೆನ್ನೈನ ದಕ್ಷಿಣ ರೈಲ್ವೆಯ ಡೆಪ್ಯುಟಿ ಚೀಫ್ ಪರ್ಸನಲ್ ಆಫೀಸರ್ (ವೆಲ್ಫೇರ್) ಆಗಿ ನಿವೃತ್ತರಾದರು.[೪]
ವಿ. ಅನುಸೂಯಾ ಬಾಯಿ | |
---|---|
Born | |
Nationality | ಭಾರತೀಯರು |
Occupation | ಅಥ್ಲೀಟ್ |
Known for | ಅರ್ಜುನ ಪ್ರಶಸ್ತಿ |
೨೦೧೩ ರಲ್ಲಿ ಪಶ್ಚಿಮ ಜರ್ಮನಿಯ ಡಸೆಲ್ಡಾರ್ಫ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಏಷ್ಯಾವನ್ನು ಪ್ರತಿನಿಧಿಸಿದ್ದಾರೆ ಎಂದು ದಿ ಹಿಂದೂ [೪] ವರದಿ ಮಾಡಿದೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳನ್ನು ೧೯೮೩ ರವರೆಗೆ ಉದ್ಘಾಟಿಸಲಾಗಿರಲಿಲ್ಲ. ಬಾಯಿಯವರು ಸ್ಪರ್ಧಿಸಿದ್ದು ೧೯೭೭ ರ ಐಎಎಎಫ್ ವಿಶ್ವಕಪ್‌ನಲ್ಲಿ. ಅವರು ಫಲಿತಾಂಶಗಳಲ್ಲಿ ಕಾಣಿಸಿಕೊಂಡಿರಲಿಲ್ಲ. [೫]
ಕ್ರೀಡೆಗಾಗಿ ಭಾರತದ ಅತ್ಯುನ್ನತ ರಾಷ್ಟ್ರೀಯ ಗೌರವವಾದ ಅರ್ಜುನ ಪ್ರಶಸ್ತಿಯನ್ನು ಪಡೆದ ತಮಿಳುನಾಡಿನ ಮೊದಲ ಮಹಿಳೆ ಇವರಾಗಿದ್ದಾರೆ. [೬]
ಉಲ್ಲೇಖಗಳು
ಬದಲಾಯಿಸಿ- ↑ "Arjuna Award" (PDF).
- ↑ V.ANUSUYA BAI. SDAT. Retrieved 2020-05-17.
- ↑ "Anusiya Bai data" (PDF).
- ↑ ೪.೦ ೪.೧ Varma, M. Dinesh (30 August 2013). "Arjuna awardee hangs up her boots after a stint at Railways". Retrieved 2 July 2020.
- ↑ 1977 IAAF World Cup – Results. Athletics DB (archived). Retrieved 2020-05-17.
- ↑ Railway sportswoman contributes Rs 1 lakh to Railways. Business Standard (2013-09-03). Retrieved 2020-05-17.