ರಾಷ್ಟ್ರೀಕರಣವು ಖಾಸಗಿ ಸ್ವತ್ತುಗಳನ್ನು ರಾಷ್ಟ್ರದ ಸರ್ಕಾರ ಅಥವಾ ರಾಜ್ಯದ ಸ್ವಾಮ್ಯದಡಿ ತರುವ ಮೂಲಕ ಸಾರ್ವಜನಿಕ ಸ್ವತ್ತುಗಳಾಗಿ ಪರಿವರ್ತಿಸುವ ಪ್ರಕ್ರಿಯೆ.[೧] ಸಾಮಾನ್ಯವಾಗಿ ರಾಷ್ಟ್ರೀಕರಣವು ಖಾಸಗಿ ಸ್ವತ್ತುಗಳು ಅಥವಾ ಪುರಸಭೆಗಳಂತಹ ಸರ್ಕಾರದ ಕೆಳಗಿನ ಸ್ತರಗಳ ಒಡೆತನದಲ್ಲಿರುವ ಸ್ವತ್ತುಗಳು ರಾಜ್ಯಕ್ಕೆ ವರ್ಗಾವಣೆ ಆಗುವುದನ್ನು ಸೂಚಿಸುತ್ತದೆ.  ರಾಷ್ಟ್ರೀಕರಣದ ವಿರುದ್ಧಾರ್ಥಕ ಪದವೆಂದರೆ ಖಾಸಗೀಕರಣ. ಹಿಂದೆ ರಾಷ್ಟ್ರೀಕರಿಸಿದ ಸ್ವತ್ತುಗಳನ್ನು ಖಾಸಗೀಕರಿಸಿ ಮತ್ತು ತರುವಾಯ ನಂತರದ ಹಂತದಲ್ಲಿ ಸಾರ್ವಜನಿಕ ಸ್ವಾಮ್ಯಕ್ಕೆ ಹಿಂತಿರುಗಿಸಲ್ಪಟ್ಟಾಗ, ಅವು ಮರುರಾಷ್ಟ್ರೀಕರಣಕ್ಕೆ ಒಳಪಟ್ಟಿವೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ರಾಷ್ಟ್ರೀಕರಣಕ್ಕೆ ಒಳಪಡುವ ಕೈಗಾರಿಕೆಗಳಲ್ಲಿ ಸಾರಿಗೆ, ಸಂವಹನ, ಶಕ್ತಿ, ಬ್ಯಾಂಕಿಂಗ್ ಮತ್ತು ನೈಸರ್ಗಿಕ ಸಂಪನ್ಮೂಲಗಳು ಸೇರಿವೆ.

ಉಲ್ಲೇಖಗಳು ಬದಲಾಯಿಸಿ

  1. "Definition of NATIONALIZATION". www.merriam-webster.com.