ಮಕರರಾಶಿ ರಾಶಿಚಕ್ರದ (ಜ಼ೋಡಿಯಾಕ್) ಹನ್ನೆರಡು ರಾಶಿಗಳ ಪೈಕಿ ಹತ್ತನೆಯದು (ಕ್ಯಾಪ್ರಿಕಾರ್ನಸ್). ಧನೂ (ಸಜಿಟ್ಟೇರಿಯಸ್) ಮತ್ತು ಕುಂಭರಾಶಿಗಳ (ಅಕ್ವೇರಿಯಸ್) ನಡುವೆ ಇದೆ. ಸನ್ನಿಹಿತ ಸ್ಥಾನ; ವಿಷುವದಂಶ 20 ಗಂಟೆ. ಮತ್ತು 22 ಗಂಟೆಗಳ ನಡುವೆ ; ಘಂಟಾವೃತ್ತಾಂಶ 10 ಡಿಗ್ರಿ ಯ ಮತ್ತು 25 ಡಿಗ್ರಿಗಳ ನಡುವೆ. ಮೂರನೆಯ ಕಾಂತಿಮಾನದ ಎರಡು ತಾರೆಗಳೂ (β ಮತ್ತು δ)ನಾಲ್ಕನೆಯ ಮತ್ತು ಮುಂದಿನ ಕಾಂತಿಮಾನದ ತಾರೆಗಳೂ (α2,γ,ξ) ಇವೆ. α1 ಮತ್ತು α2 ಯಮಳತಾರೆಗಳು, ಖಖಿ ಚರಕಾಂತಿಯ ತಾರೆ. ಈ ರಾಶಿಯ ಇತರ ಸದಸ್ಯವರ್ಗದವು ಕೌತುಕಮಯ ಕಾಯಗಳಿವು : NGC 6907 ಸುರುಳಿ ಬಾಹುವುಳ್ಳ ಬ್ರಹ್ಮಾಂಡ ; NGC 7909 ಗೋಳೀಯ ಗುಚ್ಛ.

ಭೂಮಿಯನ್ನು ಪರಿಭ್ರಮಿಸುವಂತೆ ಕಾಣುವ ಸೂರ್ಯ ಮಕರಸಂಕ್ರಾಂತಿ ಬಿಂದು ತಲುಪಿದಾಗ ಉತ್ತರಾಯಣ ಪ್ರಾರಂಭ (ಡಿಸೆಂಬರ್ 21).

ಪುರಾಣೇತಿಹಾಸ ಬದಲಾಯಿಸಿ

ಕ್ರಿಸ್ತಪೂರ್ವದ ಅನೇಕ ಸಹಸ್ರಾರು ವರ್ಷ ಪ್ರಾಚೀನದ ಬ್ಯಾಬಿಲೋನಿಯನ್ನರು ಮತ್ತು ಕಾಲ್ಡೀಯನ್ನರು ಹಾಗೂ ಅನಂತರದ ಗ್ರೀಕರು, ರೋಮನ್ನರು, ಪರ್ಷಿಯನ್ನರು, ಈಜಿಪ್ಷಿಯನ್ನರು ಮತ್ತು ಅರಬ್ಬರು ಈ ರಾಶಿಯನ್ನು ಕಡಲ ಮೇಕೆ (ಸೀ ಗೋಟ್) ಎಂದು ಸಂಭೋಧಿಸುತ್ತಿದ್ದರು. ಪ್ಯಾನ್ ಗ್ರೀಕರ ಗ್ರಾಮದೇವತೆ ಎಂಬುದಾಗಿಯೂ ಇದನ್ನು ಕರೆಯುತ್ತಿದ್ದುದುಂಟು ಆದರೆ ಇದಕ್ಕೆ ಸಮರ್ಥನೆ ನೀಡುವ ಸುವ್ಯಾಖ್ಯಿತ ಪೌರಾಣಿಕ ಅಂಶಗಳು ಲಭ್ಯವಿಲ್ಲ. ಮನುಷ್ಯನ ಆತ್ಮ ಸ್ವರ್ಗ ಐದುವಾಗ ದೈವದ ಈ ಮಹಾದ್ವಾರದ ಮೂಲಕ ಸಾಗುತ್ತದೆ ಎಂದು ಹೇಳಿ ಆ ದ್ವಾರವೆ ಈ ರಾಶಿ ಎಂಬುದಾಗಿ ಪರಿಗಣಿಸಿದ್ದರು. ಪ್ರಾಚೀನ ನಕ್ಷತ್ರಪಟಗಳಲ್ಲಿ ಈ ರಾಶಿಯನ್ನು ಟರಗಿನ ತಲೆಯೂ ಮೀನಿನ ಬಾಲವೂ ಇರುವ ಪ್ರಾಣಿಯ ಹಾಗೆ ಬಿಡಿಸಲಾಗಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: