ಚೆಡರ್ ಚೀಸ್ ತುಲನಾತ್ಮಕವಾಗಿ ಗಟ್ಟಿ, ಮಾಸಲು ಬಣ್ಣದ (ಅಥವಾ ಅನಾಟೊದಂತಹ ಸಂಬಾರ ಪದಾರ್ಥಗಳನ್ನು ಸೇರಿಸಿದಾಗ ಕಿತ್ತಳೆ ಬಣ್ಣದ), ಕೆಲವೊಮ್ಮೆ ಕಟುವಾದ ರುಚಿಯಿರುವ, ನೈಸರ್ಗಿಕ ಗಿಣ್ಣು. ಬ್ರಿಟಿಶ್ ಹಳ್ಳಿ ಸಮರ್‍ಸೆಟ್‍ನ ಚೆಡರ್‍ನಲ್ಲಿ ಹುಟ್ಟಿಕೊಂಡ ಈ ಶೈಲಿಯ ಗಿಣ್ಣುಗಳನ್ನು ಈ ಪ್ರದೇಶದಾಚೆಗೆ ಮತ್ತು ಜಗತ್ತಿನ ಹಲವು ದೇಶಗಳಲ್ಲಿ ಉತ್ಪಾದಿಸಲಾಗುತ್ತದೆ. ಈ ಗಿಣ್ಣನ್ನು ಹಸುವಿನ ಹಾಲಿನಿಂದ ಉತ್ಪಾದಿಸಲಾಗುತ್ತದೆ. ಚೆಡರ್ ಯು.ಕೆ.ಯಲ್ಲಿ ಅತ್ಯಂತ ಜನಪ್ರಿಯ ಗಿಣ್ಣಾಗಿದೆ ಮತ್ತು ಅಮೇರಿಕದಲ್ಲಿ ಎರಡನೇ ಅತ್ಯಂತ ಜನಪ್ರಿಯ ಗಿಣ್ಣಾಗಿದೆ.