ಹೆಚ್.ಆರ್.ನಾಗೇಶರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Sangappadyamani (ಚರ್ಚೆ) ರ 891872 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
Sangappadyamani (ಚರ್ಚೆ) ರ 891868 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್: ರದ್ದುಗೊಳಿಸಿ
೫೫ ನೇ ಸಾಲು:
`ಎನ್‌ಎ' ಕಾವ್ಯನಾಮದಲ್ಲಿ [[ವಿನೋದ]] ಹಾಸ್ಯ ಮಾಸಪತ್ರಿಕೆಗೆ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ನಗೆಲೇಖನ/ಅಣಕವಾಡುಗಳ ರಚನೆ. [[ಆನಂದ ಜ್ಯೋತಿ]] ಮಾಸಪತ್ರಿಕೆಯಲ್ಲಿ ರಾಜಕೀಯ ಮುಖಂಡರುಗಳ ಕಾಲ್ಪನಿಕ ಭೇಟಿಗಳು, [[ಚಿತ್ರಗುಪ್ತ]] ಸಾಪ್ತಾಹಿಕ, [[ರಾಮರಾಜ್ಯ]] ಪಾಕ್ಷಿಕ, [[ವಿಶ್ವಬಂಧು]] ಸಾಪ್ತಾಹಿಕ, [[ವಿಜಯಮಾಲಾ]] ಮಾಸಿಕ ಹಾಗೂ [[ಕತೆಗಾರ]] ಮಾಸಿಕಗಳಲ್ಲಿ ಇದೇ ಕಾವ್ಯನಾಮದ ಮೂಲಕ ಲಘು ಹಾಗೂ ವೈಜಾರಿಕ ಬರಹಗಳು ಮತ್ತು ವಾರ್ತಾವಲೋಕನಗಳನ್ನು ಮಾಡಿದ್ದಾರೆ.
 
==ಪತ್ರಿಕೋದ್ಯಮ==
 
[[ಚಿತ್ರ:PostAck.jpg|thumb|ಹೆಚ್.ಆರ್.ನಾಗೇಶರಾವ್
===ಕೈಬರಹ ಪತ್ರಿಕೆಗಳು===
* '''`The First Attempt' - ೧೯೪೦''': ಕನ್ನಡ ಕವಿಪುಂಗವರನೇಕರ ಕಾವ್ಯ ರಚನಾರಂಭ ಇಂಗ್ಲಿಷಿನಲ್ಲೇ ಆಯಿತಂತೆ. ಆ ಪರಂಪರೆಯನ್ನು ಪಾಲಿಸಲೆಂಬಂತೆ ನಾಗೇಶರಾಯರು ತಮ್ಮ ಹನ್ನೆರಡು-ಹದಿಮೂರರ ಹರಯದಲ್ಲೇ ಪ್ರಥಮವಾಗಿ ಇಂಗ್ಲಿಷ್ ಸ್ವ-ಕವನ ಸಂಚಿಕೆ `The First Attempt' ಅನ್ನು ಕೈಬರಹದಲ್ಲಿ ಪ್ರಕಟಿಸಿದರು. ಮುದ್ದಾದ ಬರಹ, ತಿದ್ದಿ ತೀಡಿದ ತಲೆಬರಹ, ಪುಟ ವಿನ್ಯಾಸ, ಮುಖಪುಟಾಲಂಕರಣ, ಒಳ ಹೂರಣ ಎಲ್ಲವೂ ಅವರದೇ.
*`Some lines like those of poems which sprang from my brains' ಎಂಬ ವಿನೀತ ವರ್ಗೀಕರಣ ಬೇರೆ! ಕವನದ ವಸ್ತು-ವಿಷಯಗಳಲ್ಲೂ ಸಾಕಷ್ಟು ವೈವಿಧ್ಯ. ಪುಸ್ತಕವೊಂದರ ಎಲ್ಲ ಅಂಗ-ಅಂಶಗಳ ಸ್ಪಷ್ಟ ಪರಿಕಲ್ಪನೆ - ಪರಿಚಯ, ಹೈಸ್ಕೂಲ್ ಎರಡನೇ ತರಗತಿಯ ಹಳ್ಳಿ ಹೈದನಿಗೆ ಹೇಗಾಯಿತೆಂಬುದೇ ವಿಸ್ಮಯದ ವಿಷಯ! ಈ ಸಂಚಿಕೆ ನೋಡಲು ಸಿಕ್ಕಿದೆ. ಇಂಗ್ಲಿಷ್ ಬಿಟ್ಟರೂ ಕನ್ನಡದಲ್ಲಿ ‘ಅಣಕವಾಡು’ಗಳನ್ನು ರಚಿಸುವ ಸ್ಫೂರ್ಥಿ ಮುಂದೆ ಬಂತು.
*ಬಾಲ್ಯದ ಗೆಳೆಯ ಟಿ.ಕೆ. ರಾಮಲಿಂಗ ಸೆಟ್ಟಿ (ಮಂಡ್ಯ ನ್ಯಾಷನಲ್ ನ್ಯೂಸ್‍ಪೇಪರ್ ಮಿಲ್ಸ್‍ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರು) ಅವರು ನೆನಪಿಸಿಕೊಳ್ಳುವಂತೆ ನಾಗೇಶರಾಯರು ‘ಎಂಡ್ಕುಡುಕ ರತ್ನ’ನನ್ನು ಅನುಕರಿಸಿ ‘ಕಾಫೀ ಕುಡ್ಕ ನಾಗೇಶ’ನ ಪದಗಳನ್ನು ರಚಿಸಿ, ಗೆಳೆಯರ ಮುಂದೆ ವಾಚಿಸುತ್ತಿದ್ದರಂತೆ. ಒಂದು ವಿಷಯವಂತೂ ಸಾಬೀತಾದಂತಾಯಿತು, ಕಾಫೀ ಅವರಿಗೆ ಅಂದಿನಿಂದಲೂ ಚಟ ಹಚ್ಚಿಸಿತ್ತು. ಅವರ ಕಾವ್ಯ ಪ್ರತಿಭೆ ಮುಂದೆ ‘ವಿನೋದ’ ಮಾಸ ಪತ್ರಿಕೆಗೆ ಅಣಕವಾಡುಗಳನ್ನು ರಚಿಸುವದಕ್ಕಷ್ಟೇ ಸೀಮಿತವಾಯಿತು.