ಚಿಲ್ಲಿ ಚಿಕನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Reverted edits by Udayavani (talk) to last revision by User unavailable826
೧ ನೇ ಸಾಲು:
[[ಚಿತ್ರ:Chicken Chili HR2.jpg|thumb]]
'''ಚಿಲ್ಲಿ ಚಿಕನ್''' ಕೋಳಿಮಾಂಸದ ಒಂದು ಜನಪ್ರಿಯ [[ಭಾರತೀಯ ಚೈನೀಸ್ ಪಾಕಪದ್ಧತಿ|ಇಂಡೊ-ಚೈನೀಸ್ ಖಾದ್ಯ]]. ಭಾರತದಲ್ಲಿ, ಇದು ವಿವಿಧ ಒಣ ಕೋಳಿಮಾಂಸ ತಯಾರಿಕೆಗಳನ್ನು ಒಳಗೊಳ್ಳಬಹುದು. ಈ ಖಾದ್ಯದಲ್ಲಿ ಮುಖ್ಯವಾಗಿ ಮೂಳೆರಹಿತ ಕೋಳಿಮಾಂಸವನ್ನು ಬಳಸಲಾಗುತ್ತದಾದರೂ, ಕೆಲವರು ಮೂಳೆಯಿರುವ ಕೋಳಿಮಾಂಸವನ್ನೂ ಬಳಸುವಂತೆ ಸಲಹೆ ನೀಡುತ್ತಾರೆ.<ref>http://kannada.boldsky.com/recipes/non-vegetarian/chicken-chili-recipe-003762.html</ref>
 
ಬಾಯಲ್ಲಿ ನೀರೂರಿಸುವ ಗ್ರೀನ್‌ ಚಿಲ್ಲಿ ಚಿಕನ್‌ ಗ್ರೇವಿ
 
'''ಚಿಕನ್ ಬಳಸಿಕೊಂಡು ಸ್ವಾಧಿಷ್ಟಕರ ಪದಾರ್ಥಗಳನ್ನು ತಯಾರಿಸಬಹುದು. ನಾರ್ಥ್ ಇಂಡಿಯನ್ ರೆಸಿಪಿಯಲ್ಲಿ ಗ್ರೇವಿಗಳಿಗೆ ತನ್ನದೇ ಆದ ಸ್ಥಾನವಿದೆ. ಹಾಗೆಯೇ ಚಿಕನ್ ಬಳಸಿಕೊಂಡು ವಿವಿಧ ರೀತಿಯ ಗ್ರೇವಿಗಳನ್ನು ತಯಾರಿಸಬಹುದಾಗಿದ್ದು ಇಂದು ನಾವು ಗ್ರೀನ್ ಚಿಲ್ಲಿ ಚಿಕನ್ ಗ್ರೇವಿ ತಯಾರಿಸುವ ವಿಧಾನವನ್ನು ನೋಡೋಣ.'''
 
ಬೇಕಾಗುವ ಸಾಮಗ್ರಿ
 
ಚಿಕನ್‌ 1/2ಕೆ.ಜಿ., ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ 3 ಚಮಚ, ಹಸಿ ಮೆಣಸು 8ರಿಂದ10, ಕೊತ್ತಂಬರಿ ಸೊಪ್ಪು 1 ಕಟ್ಟು, ಈರುಳ್ಳಿ 2, ಮೊಸರು 1 ಕಪ್‌,ಪುದೀನ 1ಕಟ್ಟು, ಗರಂ ಮಸಾಲ 2 ಚಮಚ, ಲಿಂಬೆ ಹಣ್ಣು 1, ಎಣ್ಣೆ 4 ಚಮಚ, ಕಾನ್‌ಫ್ಲೋರ್‌ 3 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
 
'''ತಯಾರಿಸುವ ವಿಧಾನ'''
 
ಮೊದಲು ಚಿಕನ್‌ ನೀರಿನಲ್ಲಿ ತೊಳೆದು ನಿಮಗೆ ಬೇಕಾದ ಸೈಜ್‌ಗೆ ಕಟ್‌ ಮಾಡಿಕೊಳ್ಳಿ. ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಪುದೀನ ಸೊಪ್ಪು ಮತ್ತು ಸ್ವಲ್ಪ ನೀರು ಬೆರೆಸಿ ನುಣ್ಣಗೆ ರುಬ್ಬಿರಿ. ಒಂದು ಪಾತ್ರೆಗೆ ಕಟ್‌ ಮಾಡಿಟ್ಟ ಚಿಕನ್‌ಗೆ ರುಬ್ಬಿಟ್ಟ ಮಸಾಲೆಯನ್ನು ಹಾಕಿ, ನಂತರ ಗರಂ ಮಸಾಲೆ, ಕಾನ್‌ಫ್ಲೋರ್‌ ಹಾಕಿ ಮಿಕ್ಸ್‌ ಮಾಡಿ ತದನಂತರ ಲಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಸುಮಾರು 15 ರಿಂದ 20 ನಿಮಿಷಗಳ ಕಾಲ ನೆನೆಸಿ ಇಡಿ.ಒಂದು ದಪ್ಪ ತಳದ ಪಾತ್ರೆ ಒಲೆಯ ಮೇಲೆ ಇಟ್ಟು ಎಣ್ಣೆ ಹಾಕಿ.
 
ಎಣ್ಣೆ ಕಾದ ನಂತರ ಹಸಿಮೆಣಸು, ಈರುಳ್ಳಿ ಹಾಕಿ ಕಂದು ಬಣ್ಣ ಬರುವ ತನಕ ಈರುಳ್ಳಿಯನ್ನು ಫ್ರೈ ಮಾಡಿ. ನಂತರ ಮಸಾಲೆ ಹಚ್ಚಿರುವ ಚಿಕನ್‌ ಚೂರುಗಳನ್ನು ಬೆರೆಸಿ ಕೆಂಪಗೆ ಹುರಿದುಕೊಳ್ಳಿ. ಸ್ವಲ್ಪ ನೀರು ಸೇರಿಸಿ ಬೇಯಿಸಿ ಕೊನೆಗೆ ಮೊಸರು ಬೆರೆಸಿ ಕಲೆಸಿ, ಉಪ್ಪು ಸೇರಿಸಿ ಕುದಿಸಿರಿ. ಚಿಕನ್‌ ಬೆಂದ ನಂತರ ಕೊತ್ತಂಬರಿ ಸೊಪ್ಪು ಹಾಕಿ. ಈಗ ಬಿಸಿ-ಬಿಸಿಯಾದ ಗ್ರೀನ್‌ ಚಿಲ್ಲಿ ಚಿಕನ್‌ ಗ್ರೇವಿ ಸವಿಯಲು ಸಿದ್ದ. ಚಪಾತಿ, ರೊಟಿ ಹಾಗೂ ಅನ್ನದ ಜೊತೆಗೂ ಈ ಗ್ರೇವಿ ಬಹಳ ರುಚಿಕರವಾಗುವುದು.[https://www.udayavani.com/articles/web-focus/green-chilli-chicken-gravy-recipe]
 
==ಉಲ್ಲೇಖಗಳು==
"https://kn.wikipedia.org/wiki/ಚಿಲ್ಲಿ_ಚಿಕನ್" ಇಂದ ಪಡೆಯಲ್ಪಟ್ಟಿದೆ