ಆರ್. ಗುಂಡೂ ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Reference added
No edit summary
೧ ನೇ ಸಾಲು:
[[ಕರ್ನಾಟಕ]]ದ ಮಾಜಿ ಮುಖ್ಯ ಮಂತ್ರಿ<ref>[http://kannada.oneindia.com/news/2008/05/30/chief-ministers-of-karnataka.html ಕರ್ನಾಟಕದ ಮುಖ್ಯಮಂತ್ರಿಗಳು]</ref> ಶ್ರೀ ಗುಂಡೂರಾವ್ ಇವರು [[ಕೊಡಗು]] ಜಿಲ್ಲೆಯ [[ಸೋಮವಾರಪೇಟೆ]] ತಾಲೂಕಿನಲ್ಲಿಯ ಕುಶಾಲನಗರದಲ್ಲಿ [[೧೯೩೭]]ರ [[ಎಪ್ರಿಲ್]] ೮ರಂದು ಜನಿಸಿದರು. ತಾಯಿ ಚೆನ್ನಮ್ಮ ; ತಂದೆ ಕೆ.ರಾಮರಾವ್, ಶಾಲಾ ಶಿಕ್ಷಕರು. ಗುಂಡೂರಾಯರ ಶಿಕ್ಷಣ ಇಂಟರ್ ವರೆಗೆ ಮಾತ್ರ ಆಯಿತು. ಆರಂಭದಲ್ಲಿ ಖಾಸಗಿ ಬಸ್ಸಿನ ಏಜೆಂಟರಾಗಿದ್ದರು.
 
==ರಾಜಕೀಯ ==
===ಪ್ರವೇಶ===
ತಮ್ಮ ಅಪಾರ ಜನಪ್ರಿಯತೆಯಿಂದ ತಮ್ಮ ೨೪ನೆಯ ವಯಸ್ಸಿನಲ್ಲೆ ಕುಶಾಲನಗರ [[ಪುರಸಭೆ]]ಯ ಚುನಾವಣೆಯಲ್ಲಿ , [[ಕಾಂಗ್ರೆಸ್]] ವಿರುದ್ಧ ಯುವಕರ ಪಡೆಯನ್ನು ನಿಲ್ಲಿಸಿ, ಗೆಲ್ಲಿಸಿ, ಪುರಸಭೆಯನ್ನು ಕೈವಶ ಮಾಡಿಕೊಂಡಿದ್ದರು. ೯ ವರ್ಷಗಳವರೆಗೆ ಪುರಸಭೆಯ ಅಧ್ಯಕ್ಷರಾಗಿದ್ದರು.
 
===ಆರೋಹಣ===
[[೧೯೬೫]]ರಲ್ಲಿ [[ಕೊಡಗು]] ಜಿಲ್ಲೆ [[ಕಾಂಗ್ರೆಸ್]] ಸದಸ್ಯರಾದರು. ಮುಂದುವರಿದು [[ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ]]ಯ ಸದಸ್ಯರಾದರು ; ಆಬಳಿಕ [[ಅಖಿಲ ಭಾರತ ಕಾಂಗ್ರೆಸ್ ಸಮಿತಿ]]ಯ ಸದಸ್ಯರಾದರು.
[[೧೯೭೨]]ರಲ್ಲಿ ಸೋಮವಾರ ಪೇಟೆ ಕ್ಷೇತ್ರದಿಂದ [[ವಿಧಾನಸಭೆ]]ಗೆ ಆಯ್ಕೆಯಾದರು. [[೧೯೭೩]]ರಲ್ಲಿ [[ದೇವರಾಜ ಅರಸು]] ಸಂಪುಟದಲ್ಲಿ ವಾರ್ತೆ, ಕ್ರೀಡೆ ಮತ್ತು ಯುವಜನ ಸೇವಾ ಖಾತೆಯ ರಾಜ್ಯ ಸಚಿವರಾದರು. [[೧೯೭೬]]ರಲ್ಲಿ ವಸತಿ ಮತ್ತು ಯುವಜನ ಸೇವಾಖಾತೆಗೆ ಪೂರ್ಣಪ್ರಮಾಣದ ಮಂತ್ರಿಯಾದರು.
Line ೯ ⟶ ೧೦:
ನಡೆದ ವಿಧಾನಸಭಾ ಚುನಾವಣೆಯಲ್ಲಿ ಅರಸು ಸರಕಾರದ ಪುನ:ಸ್ಥಾಪನೆಯಾಯಿತು. ಗುಂಡೂರಾವ್ ಈಗ ಸಾರಿಗೆ ಮತ್ತು ಪ್ರವಾಸೋದ್ಯಮ ಖಾತೆಯ ಸಚಿವರಾದರು. [[೧೯೭೯]]ರಲ್ಲಿ ಕೇಂದ್ರದಲ್ಲಿ ಜನತಾ ಸರಕಾರದ ಪತನವಾಯಿತು. ಕಾಂಗ್ರೆಸ್ ಮತ್ತೆ ಇಬ್ಭಾಗವಾಗಿ ಗುಂಡೂರಾವ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. [[೧೯೮೦]]ರ [[ಲೋಕಸಭಾ]] ಮಧ್ಯಾವಧಿ ಚುನಾವಣೆಗಳಲ್ಲಿ ,೨೮ ಲೋಕಸಭಾ ಕ್ಷೇತ್ರಗಳಲ್ಲಿ ೨೭ ಕ್ಷೇತ್ರಗಳನ್ನು ಇಂದಿರಾ ಕಾಂಗ್ರೆಸ್ ಗೆದ್ದುಕೊಂಡಿತು. ಅರಸು ಕಾಂಗ್ರೆಸ್ ನಿರ್ನಾಮವಾಗಿ, ಅರಸು ಸರಕಾರ ರಾಜೀನಾಮೆ ನೀಡಿತು.
ಇಂದಿರಾ ಕಾಂಗ್ರೆಸ್ಸಿಗೆ ಜನತಾ ಪಕ್ಷ ಹಾಗು ಅರಸು ಪಕ್ಷದವರಿಂದ ಪಕ್ಷಾಂತರ. [[ಜನೆವರಿ]] ೧೨ರಂದು ಗುಂಡೂರಾವ್ ಅತಿ ಎಳೆಯ ವಯಸ್ಸಿನ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. [[೧೯೮೨]]ರಲ್ಲಿ ದೇವರಾಜ ಅರಸು ನಿಧನ. ೧೯೮೩ರಲ್ಲಿ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ನಡೆಯುವ ವರೆಗೂ ಗುಂಡೂರಾಯರ ವಿಜೃಂಭಣೆ.
 
===ಮುಖ್ಯ ಮಂತ್ರಿ===
ಗುಂಡೂರಾಯರ ರಾಜಕೀಯ ವರ್ಣರಂಜಿತವಾದದ್ದು. ತಾವು ನೀಡಿದ ಆದೇಶಗಳು ತಕ್ಷಣವೆ ಜಾರಿಗೆ ಬರಬೇಕು ಎನ್ನುವದು ಇವರ ಮನೋಧರ್ಮ. ಹೀಗಾಗಿ [[ಬೆಂಗಳೂರು|ಬೆಂಗಳೂರಿನ]] ಸುಭಾಷನಗರದಲ್ಲಿ ವಿಶಾಲವಾದ ಬಸ್ ಸ್ಟೇಶನ್ ನಿರ್ಮಾಣವಾಯಿತು. [[ಗದಗು|ಗದಗಿನ]] ಹತ್ತಿರವಿರುವ ಹುಲಕೋಟಿ ಇಂಜನಿಯರಿಂಗ್ ಕಾಲೇಜಿಗೆ ಟೆಕ್ಸಟೈಲ್ ಮತ್ತು ಕೆಮಿಕಲ್ ಇಂಜನಿಯರಿಂಗ ವಿಭಾಗ ತೆರೆಯಲು ಅನುಮತಿ ದೊರೆಯಿತು. [[ಧಾರವಾಡ]]ದ ಕೆ.ಪಿ.ಎಸ್.ಸಿ. ಸಂಸ್ಥೆಗೆ ಲಾ ಕಾಲೇಜು ಕಟ್ಟಲು ಸರಕಾರಿ ಸ್ಥಳ ದೊರೆಯಿತು.
 
=== ಅವರೋಹಣ===
ತಮ್ಮ ಸರಕಾರವನ್ನು “ ಇಂದಿರಾಪೋಷಿತ ನಾಟಕ ಕಂಪನಿ” ಎಂದು ಕರೆದುಕೊಳ್ಳುತ್ತಿದ್ದ ಗುಂಡೂರಾಯರ
ಈ ಮನೋಧರ್ಮವೇ ಅವರ ರಾಜಕೀಯ ಅವನತಿಗೂ ಕಾರಣವಾಯಿತು. ಸಚಿವರುಗಳಾದ ಇಬ್ರಾಹಿಮ್ ಹಾಗು ರೇಣುಕಾ ರಾಜೇಂದ್ರನ್ ಇವರ ಮೇಲೆ ಭ್ರಷ್ಟಾಚಾರದ ಆರೋಪ, ರೋಲರ್ ಫ್ಲೋರ್ ಮಿಲ್ ಲೈಸೆನ್ಸ್ ಹಗರಣ,
ಬೆಂಗಳೂರಿನಲ್ಲಿ [[ಸಾರ್ವಜನಿಕ ರಂಗ]]ದ ಕೈಗಾರಿಕೆಗಳ ೭೭ ದಿನಗಳ ದೀರ್ಘ ಮುಷ್ಕರ, [[ಗೋಕಾಕ ಚಳವಳಿ]], ಎಲ್ಲಕ್ಕೂ ಮುಖ್ಯವಾಗಿ [[ನರಗುಂದ]] ಹಾಗು [[ನವಲಗುಂದ]]ಗಳಲ್ಲಿ ನಡೆದ ರೈತ ಚಳವಳಿ ಇವು ಗುಂಡೂರಾಯರ ಅವನತಿಯ ಮೆಟ್ಟಿಲುಗಳಾದವೆನ್ನಬಹುದು.
[[೧೯೮೩]]ರಲ್ಲಿ ನಡೆದ [[ವಿಧಾನ ಸಭಾ]] ಸಾರ್ವತ್ರಿಕ ಚುನಾವಣೆಯಲ್ಲಿ ಗುಂಡೂರಾವ್ ಪರಾಭವಗೊಂಡರು. [[ರಾಮಕೃಷ್ಣ ಹೆಗಡೆ]] ಆಗ ಜನತಾ ಪಕ್ಷದಿಂದ ಸರಕಾರದ ಮುಖ್ಯ ಮಂತ್ರಿಗಳಾದರು. [[೧೯೮೪]] [[ಅಕ್ಟೋಬರ್]] ೩೧ರಂದು [[ಇಂದಿರಾ ಗಾಂಧಿ]]ಯವರ ಹತ್ಯೆಯಾಯಿತು. [[೧೯೮೫]] ಮಾರ್ಚದಲ್ಲಿ [[ಲೋಕಸಭೆ]]ಗೆ ನಡೆದ ಮಧ್ಯಾವಧಿ ಚುನಾವಣೆಯಲ್ಲಿ ಗುಂಡೂರಾಯರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ! [[೧೯೮೬]] ರಲ್ಲಿ [[ಪ್ರಣಬ ಮುಖರ್ಜಿ]] ಸ್ಥಾಪಿಸಿದ ಅಖಿಲ ಭಾರತೀಯ ಇಂದಿರಾ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಸೇರಿದರು. [[೧೯೮೯]]ರಲ್ಲಿ ಪುನ: [[ರಾಜೀವ ಗಾಂಧಿ]]ಯವರಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. [[ಬೆಂಗಳೂರು]] ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು ; ಆದರೆ ಕಾಂಗ್ರೆಸ್ ಇಡಿ ದೇಶದಲ್ಲಿ ಪರಾಭವಗೊಂಡಿತ್ತು. [[೧೯೯೧]]ರ [[ಮೇ ]]-[[ಜೂನ್]]‍ದಲ್ಲಿ ಲೋಕಸಭೆಗೆ ಮಧ್ಯಾವಧಿ ಚುನಾವಣೆ ಘೋಷಣೆ ಆಯಿತು. ಮೇ ೨೧ರಂದು [[ತಮಿಳುನಾಡು|ತಮಿಳುನಾಡಿನ]] ಪೆರಂಬದೂರಿನಲ್ಲಿ [[ರಾಜೀವ ಗಾಂಧಿ]]ಯವರ ಭೀಕರ ಹತ್ಯೆಯಾಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿತು ; ಆದರೆ ಗುಂಡೂರಾವ್ ಪರಾಭವಗೊಂಡರು.
 
==ಕೊನೆ==
ತಮ್ಮ ಕೊನೆಯ ೩,೪ ತಿಂಗಳುಗಳಲ್ಲಿ ಗುಂಡೂರಾವ್ ರಕ್ತ ಕ್ಯಾನ್ಸರದಿಂದ ಬಳಲಿದರು. [[ಲಂಡನ್|ಲಂಡನ್ನಿನ]] ರಾಯಲ್ ಫ್ರೀ ಹಾಸ್ಪಿಟಲ್ ‍ನಲ್ಲಿ ಚಿಕಿತ್ಸೆ ನಡೆಯಿತು. ಆದರೆ ಪ್ರಯೋಜನವಾಗಲಿಲ್ಲ. ಪರ್ವತಪ್ರಾಯದ ದೇಹ ಹಾಗು ಮನಸ್ಸು ಹೊಂದಿದ ಗುಂಡೂರಾವ್ [[೧೯೯೩]] [[ಆಗಸ್ಟ್]] ೨೨ರಂದು ತಮ್ಮ ಕೊನೆಯುಸಿರನ್ನೆಳೆದರು.
 
“ಇದು ಜೀವಿತದ ಅಂತ, ಇದು ಜೀವಿತದ ಅಂತ,ಇದು ಜೀವಿತದ ಅಂತ ;
ಗುಡುಗು ಹಾಕುತ್ತಲ್ಲ, ಠುಸ್ಸೆನುತ್ತ”
ಕವಿ [[ಟಿ.ಎಸ್.ಈಲಿಯಟ್]]‍ನ ಈ ನುಡಿಗಳಂತೆ , ಪರ್ವತಪ್ರಾಯದ ದೇಹ ಹಾಗು ಮನಸ್ಸು ಹೊಂದಿದ ಗುಂಡೂರಾವ್ [[೧೯೯೩]] [[ಆಗಸ್ಟ್]] ೨೨ರಂದು ತಮ್ಮ ಕೊನೆಯುಸಿರನ್ನೆಳೆದರು.
==ಕುಟುಂಬ==
ಗುಂಡೂರಾಯರ ಪತ್ನಿ ಶ್ರೀಮತಿ ವರಲಕ್ಷ್ಮಿ.ಇವರು [[೧೯೯೬]]ರಲ್ಲಿ ಗುಂಡೂರಾಯರ ಲೋಕಸಭಾ ಕ್ಷೇತ್ರವಾದ [[ಬೆಂಗಳೂರು]] ದಕ್ಷಿಣದಿಂದ ಸ್ಪರ್ಧಿಸಿ ಸೋತರು. ಗುಂಡೂರಾಯರ ಮೂವರು ಪುತ್ರರಲ್ಲಿ ಒಬ್ಬರಾದ ದಿನೇಶ್ ಗುಂಡೂರಾವ್ [[೧೯೯೯]]ರ ಸಾರ್ವಜನಿಕ ಚುನಾವಣೆಯಲ್ಲಿ ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಿ [[ವಿಧಾನ ಸಭೆ]]ಗೆ ಆಯ್ಕೆಯಾದರು. ಇವರು ಕರ್ನಾಟಕ ಪ್ರದೇಶ ಯುವಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದಾರೆ.
 
==ಉಲ್ಲೇಖಗಳು==
{{reflist}}
"https://kn.wikipedia.org/wiki/ಆರ್._ಗುಂಡೂ_ರಾವ್" ಇಂದ ಪಡೆಯಲ್ಪಟ್ಟಿದೆ