ದುರ್ಗೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Durgagoddess.JPG|thumb]]
'''ದುರ್ಗೆ''' ಅಂದರೆ "ದುರ್ಗಮ", [[ದೇವಿ]]ಯ ಅತ್ಯಂತ ಪ್ರಸಿದ್ಧ ಅವತಾರ ಮತ್ತು [[ಹಿಂದೂ]] ದೇವತಾಸಂಗ್ರಹದಲ್ಲಿ [[ಶಕ್ತಿ (ಹಿಂದೂ ಧರ್ಮ)|ಶಕ್ತಿ]] ದೇವತೆಯ ಮುಖ್ಯ ರೂಪಗಳ ಪೈಕಿ ಒಬ್ಬಳು. ದುರ್ಗೆಯ ಪ್ರಾಚೀನ ರೂಪವು [[ಹಿಮಾಲಯ]] ಹಾಗು [[ವಿಂಧ್ಯ]]ದ ನಿವಾಸಿಗಳಿಂದ ಆರಾಧಿಸಲ್ಪಟ್ಟ ಒಬ್ಬ ಪರ್ವತ ದೇವಿ, ಅಲೆಮಾರಿ [[ಅಭೀರ]] ಕುರುಬನಿಂದ ಆರಾಧಿಸಲ್ಪಟ್ಟ ಒಬ್ಬ ದೇವಿ, ಒಬ್ಬ ಸ್ತ್ರೀಯಾಗಿ ಕಲ್ಪಿಸಲ್ಪಟ್ಟ [[ಸಸ್ಯ ದೇವತೆ|ಸಸ್ಯ ಆತ್ಮ]], ಮತ್ತು ಒಬ್ಬ ಯುದ್ಧ ದೇವತೆಯ [[ಸಮನ್ವಯ]]ದ ಪರಿಣಾಮ. ಅವಳ ಭಕ್ತರು ನಾಗರಿಕತೆಯಲ್ಲಿ ಮುಂದುವರೆದಂತೆ, ಪ್ರಾಚೀನ ಯುದ್ಧ ದೇವತೆಯು ಎಲ್ಲವನ್ನು ಧ್ವಂಸಮಾಡುವ [[ಕಾಳಿ]]ಯ ವ್ಯಕ್ತಿರೂಪವಾಗಿ, ಸಸ್ಯ ಆತ್ಮವು [[ಆದಿ ಶಕ್ತಿ]] ಮತ್ತು [[ಸಂಸಾರ]]ದಿಂದ ಮುಕ್ತಿಕೊಡುವ ಸಂರಕ್ಷಕಿಯಾಗಿ ರೂಪಾಂತರಗೊಂಡಳು ಮತ್ತು ಅವಳು ಕ್ರಮೇಣ [[ಐತಿಹಾಸಿಕ ವೈದಿಕ ಧರ್ಮ|ಬ್ರಾಹ್ಮಣಿಕ]] ಪುರಾಣ ಹಾಗು ತತ್ವಶಾಸ್ತ್ರದ ಪಂಕ್ತಿಯಲ್ಲಿ ತರಲಾಯಿತು.ಉತ್ತರ ಭಾರತದಲ್ಲಿ ದುರ್ಗೆ‍ಯನ್ನು ಹೆಚ್ಚಾಗಿ ಪ್ರಾರ್ಥಿಸುವರು.ನವರಾತ್ರಿ ದಿನಗಳಲ್ಲಿ ಈ ದೇವತೆಗೆ ವಿವಿಧ ರೀತಿಯ ಅಲಂಕಾರ ಮಾಡಿ ಪೂಜಿಸುವರು.ಈ ದೇವಿಯು ಧೈರ್ಯ ಹಾಗು ಶೌರ್ಯದ ಸಂಕೇತ."'''ದುರ್ಗೆ ದೇವತೆ'''" ಅಥವಾ "'''ಆದಿ ಪರಶಕ್ತಿ'''" ಹಿಂದೂ ದೇವಾನು-ದೇವತೆಯರಲ್ಲಿ ಒಬ್ಬರು. ಅವಳು ಯುದ್ಧದ ಅದಿದೇವತೆ, ಪಾರ್ವತಿಯ ಯೋಧ ರೂಪ. ಪುರಾಣದಲ್ಲಿ ದುರ್ಗೆಯನ್ನು ಶಾಂತಿ, ಸಮೃದ್ಧಿ ಮತ್ತು ಧರ್ಮವನ್ನು ಬೆದರಿಸುವ ದುಷ್ಟ ಮತ್ತು ರಾಕ್ಷಸ ಶಕ್ತಿಗಳನ್ನು ಸಂಹರಿಸಲು, ಲೋಕಕಲ್ಯಾಣಕ್ಕಾಗಿ ಅವತಾರವೆತ್ತಳು. ದುರ್ಗಾ ಕೂಡ ರಕ್ಷಣಾತ್ಮಕ ಮಾತೃ ದೇವತೆಯ ಉಗ್ರ ರೂಪವಾಗಿದ್ದು, ತುಳಿತಕ್ಕೊಳಗಾದವರ ವಿಮೋಚನೆಗಾಗಿ ದುಷ್ಟರ ವಿರುದ್ಧ ತನ್ನ ದೈವಿಕ ಕೋಪವನ್ನು ಬಿಚ್ಚಿಡುತ್ತಾಳೆ ಮತ್ತು ಸೃಷ್ಟಿಯನ್ನು ಸಶಕ್ತಗೊಳಿಸಲು ವಿನಾಶವನ್ನು ಉಂಟುಮಾಡುತ್ತಾಳೆ. ದುರ್ಗೆಯು ಸಿಂಹ ಅಥವಾ ಹುಲಿಯ ಮೇಲೆ ಸವಾರಿ ಮಾಡುವ ದೇವತೆಯಾಗಿ ಚಿತ್ರಿಸಲಾಗಿದ್ದು, ಅನೇಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾಳೆ.
 
ಮಾ ದುರ್ಗೆಯ ೧೦ ಅವತಾರಗಳಿವೆ:
 
* ಶೈಲಾಪುತ್ರಿ
* ಬ್ರಹ್ಮಚಾರಿಣಿ
* ಚಂದ್ರಘಂಟ
* ಕುಶ್ಮಂಡಾ
* ಸ್ಕಂದಮಾತಾ
* ಕತ್ಯಾಯಿನಿ
* ಕಾಲರಾತ್ರಿ
* ಮಹಾಗೌರಿ
* ಸಿದ್ದಿದಾತ್ರಿ
* ದುರ್ಗಾ
 
ಅವಳು ಹಿಂದೂ ಧರ್ಮದ ಶಕ್ತಿ ಸಂಪ್ರದಾಯದಲ್ಲಿ ಕೇಂದ್ರ ದೇವತೆಯಾಗಿದ್ದಾಳೆ; ಅಲ್ಲಿ ಅವಳು ಬ್ರಾಹ್ಮಣ ಎಂಬ ಅಂತಿಮ ವಾಸ್ತವತೆಯ ಪರಿಕಲ್ಪನೆಯೊಂದಿಗೆ ಸಮನಾಗಿರುತ್ತಾಳೆ. ದೇವಿ ಮಹಾತ್ಮ್ಯ, ಶಕ್ತಿ ಸಿದ್ಧಾಂತದ ಪ್ರಮುಖ ಪಠ್ಯಗಳಲ್ಲಿ ಒಂದು.
 
 
==ಉಲ್ಲೇಖನ==
"https://kn.wikipedia.org/wiki/ದುರ್ಗೆ" ಇಂದ ಪಡೆಯಲ್ಪಟ್ಟಿದೆ