ಮರುಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೦ ನೇ ಸಾಲು:
'''ಆರ್ಗನ್ ಪೈಪ್ ಕಳ್ಳಿಗಿಡ'''- ಈ ಗಿಡದ ಎಲ್ಲಾ ತಳಿಗಳನ್ನು ಮೆಕ್ಸಿಕೊ ಹಾಗೂ ಯು.ಎಸ್.ಎ ನ ಮರುಭೂಮಿಯಲ್ಲಿ ನೋಡಬಹುದು. ಈ ಕಾಂಡವು ನೇರ ಹಾಗೂ ತೆಳುವಾದ ಕೊಂಬೆಗಳನ್ನು ಹೊಂದಿದೆ. ಇದು ಪೂರ್ಣವಾಗಿ ಬೆಳೆಯಲು ಸುಮಾರು ೧೫೦ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಮರದಿಂದ ಬೆಳೆಯುವ ಹಣ್ಣುಗಳು ಕಲ್ಲಂಗಡಿಗಿಂತಲೂ ಸಿಹಿಯಾಗಿರುವುದು. ಈ ಹಣ್ಣುಗಳನ್ನು ಅಮೇರಿಕಾದವರು ತಿನ್ನಲು ಹಾಗೂ ಇದನ್ನು ‍‍‌‌‍‍‍‍‍‍‌ಔಷಧಿಯನ್ನಾಗಿ ಬಳಸುವರು.
 
'''ಡೆಸರ್ಟ್ ಸೇಜ್'''<ref>https://www.laspilitas.com/nature-of-california/plants/610--salvia-dorrii</ref>- ಇದರ ಎತ್ತರ ೨-೩ ಮೀಟರ್. ಇದರ ಹೂಗಳು ನೀಲಿ ಬಣ್ಣವನ್ನು ಹೊಂದಿದೆ. ಇದರ ಮುಖ್ಯ ಲಕ್ಷಣವೇನೆಂದರೆ ಇದು ಪೂರ್ತಿಯಾಗಿ ಬೆಳೆದ ನಂತರ ಇದಕ್ಕೆ ನೀರಿನ ಅವಶ್ಯಕತೆ ಇರುವುದಿಲ್ಲ. ಇದಕ್ಕೆ ಔಷಧಿಯ ಗುಣಗಳೂ ಕೂಡ ಇವೆ. ಇದರ ಕಾಂಡ ಹಾಗೂ ಎಲೆಗಳನ್ನು ಕಾಡಿನ ಜನರು ನೆಗಡಿಗಾಗಿ ಔಷಧಿಯನ್ನಾಗಿ ಬಳಸಿಕೊಂಡರು. ಇದನ್ನು ತಲೆನೋವು, ಹೊಟ್ಟೆನೋವು, ಜ್ವರ, ಹಾಗೂ ಇನ್ನಿತರ ಕಣ್ಣು ನೋವಿನ ಸಮಸ್ಯೆಗಳಿಗೆ ಬಳಸಲಾಗುತ್ತದೆ.
 
'''ಡೆಸರ್ಟ್ ಮ್ಯಾರಿಗೋಲ್ಡ್'''<ref>https://desertplantsadaptation.wordpress.com/xerophytes/</ref>- ಇವು ''ಆಸ್ಟರ್'' ಕುಟುಂಬಕ್ಕೆ ಸೇರಿಸಲಾಗಿದೆ. ಇದು ಸಾಮಾನ್ಯವಾಗಿ ದಕ್ಷಿಣ ಭಾಗದ ಯು.ಎಸ್.ಎ ಹಾಗೂ ಮೆಕ್ಸಿಕೊ ದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇವು ವಾರ್ಷಿಕ ಹಾಗೂ ಕಡಿಮೆ ಅವಧಿಯ ಬಹುವಾರ್ಷಿಕ ಸಸ್ಯಗಳಾಗಿದ್ದು ಇವು ಸುಮಾರು ೧೦ ರಿಂದ ೩೦ ಅಂಗುಲ ಎತ್ತರ ಬೆಳೆಯುತ್ತದೆ. ಇದರ ಹೂಗಳು ಹಳದಿ ಬಣ್ಣ ಇರುವುದರಿಂದ ಇವುಗಳನ್ನು ಮ್ಯಾರಿಗೋಲ್ಡ್ ಎನ್ನಲಾಗುತ್ತದೆ. ಈ ಹೂಗಳು ಬಹಳ ವಿಷಕಾರಿಕ. ಈ ಸಸ್ಯಗಳ ಸೇವನೆಯಿಂದಾಗಿ ಬಹಳ ಕುರಿಗಳು ಸಾವನಪ್ಪಿವೆ.
 
'''ಡೆಸರ್ಟ್ ಲಿಲ್ಲಿ'''- ಇದರ ಇನ್ನೊಂದು ಹೆಸರು ಹೆಸ್ಪರೋಕ್ಯಾಲಿಸ್. ಇದನ್ನು ಉತ್ತರ ಅಮೇರಿಕಾ, ಮೆಕ್ಸಿಕೊ, ಕ್ಯಾಲಿಫೋರ್ನಿಯಾ ಹಾಗೂ ಆರಿಜೋನದ ಮರುಭೂಮೆಯಲ್ಲಿ ಕಾಣಬಹುದು. ಇದರ ಎಲೆಗಳು ಸುಮಾರು ಒಂದು ಅಂಗುಲದಷ್ಟು ಅಗಲವಿದ್ದು ಇನ್ನೂ ೮-೨೦ ಅಂಗುಲದಷ್ಟು ಅಗಲ ಬೆಳೆಯಬಹುದು. ಇದಕ್ಕೆ ಒಂದು ಆಳದ ಗಡ್ಡೆ ಇದ್ದು ಆ ಗಡ್ಡೆಯನ್ನು ಆಹಾರವನ್ನಾಗಿ ಅಮೇರಿಕಾದವರು ಬಳಸುತ್ತಾರೆ.
"https://kn.wikipedia.org/wiki/ಮರುಭೂಮಿ" ಇಂದ ಪಡೆಯಲ್ಪಟ್ಟಿದೆ