ಕೇರಳದ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯ ನೇ ಸಾಲು:
 
==ನಾಯರರು ದೇವಸ್ಥಾನಗಳ ಒಡೆಯರಾದದ್ದು==
೯೮೮ರಲ್ಲಿ ಮೊದಲನೆಯ ರಾಜರಾಜ ಚೋಳನ ಕೇರಳ ದಂಡಯಾತ್ರೆ ಪ್ರಾರಂಭವಾಯಿತು. ೧೧೨೦ರಲ್ಲಿ ಚೋಳರು ಹಿಮ್ಮೆಟ್ಟಿದ್ದಾಗಲೇ ಅವರ ಆಕ್ರಮಣ ಕೊನೆಗೊಂಡಿದ್ದು. ಚೋಳರ ಆಕ್ರಮಣಕಾಲದಲ್ಲಿ ಚೇರರ ಆಳ್ವಿಕೆ ಕೊನೆಗೊಂಡು ಕೇರಳ ಸಣ್ಣಸಣ್ಣ ರಾಜ್ಯಗಳಾಗಿ ಒಡೆಯಿತು. ಪ್ರತಿರಾಜ್ಯದಲ್ಲೂ ಒಬ್ಬ ತಂಪುರನ್ ಅಥವಾ ನಾಯಕನ ಆಳ್ವಿಕೆ ಸ್ಥಾಪಿತವಾಯಿತು. ನಾಯರರು ಮತ್ತು ಇತರರ ಆಕ್ರಮಣವಾಯಿತು. ನಾಯರರು ನಾಗಪೂಜೆ ಮಾಡುತ್ತಿದ್ದ ಸಿಥಿಯನರೆಂದೂ ಅವರು ಭಾರತಕ್ಕೆ ವಾಯುವ್ಯ ಗಡಿಯಿಂದ ಬಂದು ಅನೇಕ ಭಾಗಗಳಲ್ಲಿ ನೆಲಸಿದರೆಂದೂ ಪ್ರತೀತಿ ಇದೆ. ನಾಗಪೂಜೆ ಮಾಡುವವರು ನಗರರೆನಿಸಿಕೊಂಡರೆಂದೂ ಈ ಹೆಸರು ಅನಂತರ ನಾಯರ್ ಎಂದು ಬದಲಾಯಿತೆಂದೂ ಒಂದು ಅಭಿಪ್ರಾಯವುಂಟು. ನಾಯರರು ದ್ರಾವಿಡರೆಂದು ಕಾಲ್ಡ್‍ವೆಲ್ ಮತ್ತು ಗುಂಡರ್ಟ್ ಹೇಳುತ್ತಾರೆ. ನಾಯರರು ಆರ್ಯರ ಮತ್ತು ದ್ರಾವಿಡರ ಸಂಸ್ಕøತಿಯ ಅಂಶಗಳನ್ನು ಪಡೆದುಕೊಂಡಿದ್ದಾರೆ. ಕೇರಳದಲ್ಲಿ ನಂಬೂದಿರಿಗಳು ಪೂಜಾರಿಗಳಾಗಿದ್ದರು; ನಾಯರರು ದೇವಸ್ಥಾನಗಳ ಒಡೆಯರಾಗಿ ಹತೋಟಿ ಗಳಿಸಿದ್ದರು.<ref>https://books.google.co.in/books?id=RdzaPW-kEvQC&redir_esc=y&hl=en</ref>
 
==ಚೋಳರ ಕಾಲ==
ಕೇರಳ ಕ್ರಿಸ್ತಶಕದ ಪ್ರಾರಂಭದಲ್ಲಿ ಚೇಳರ ಅಧೀನದಲ್ಲಿ ಒಂದು ಚಿಕ್ಕ [[ರಾಜ್ಯ]]ವಾಗಿತ್ತು. ಕೊಡುಗಲ್ಲೂರು ಅದರ ರಾಜಧಾನಿ. ಕ್ರಮೇಣ ಚೇಳ ದೊರೆಗಳು ಕೊಂಗಲನಾಡು, ಪುನ್ನಾಡು, ಕೊಲತುನಾಡು ಮತ್ತು ಕುಟ್ಟನಾಡನ್ನು ಆಕ್ರಮಿಸಿಕೊಂಡರು. ಚೇಳರ ಅವನತಿಗೆ ಆ ರಾಜರ ಸೋಮಾರಿತನ ಮತ್ತು ಅಸಮರ್ಥತೆ ಕಾರಣ. ರೋಮನ್ ಚಕ್ರಾಧಿಪತ್ಯದ ಆಮದು ಮಾಡಿಕೊಂಡ ಭೋಗ ಸಾಮಗ್ರಿಗಳೂ ಇವರ ಅವನತಿಗೆ ಕಾರಣವಾದುವು. ನಾಯರರು ಕೇರಳಕ್ಕೆ ಬಂದು ಈ ದೊರೆಗಳ ಅಧಿಕಾರವನ್ನೂ ನಾಶ ಮಾಡಿದರು. ೬ನೆಯ ಶತಮಾನದಲ್ಲಿ ಪಲ್ಲವರು ಮತ್ತು ಪಾಂಡ್ಯರು ತಮ್ಮ ರಾಜ್ಯವನ್ನು ವಿಸ್ತರಿಸಿದರು. ೬೪೫ರಿಂದ ೬೭೦ರವರೆಗೆ ಆಳಿದ ಪಾಂಡ್ಯರಾಜ ಜಯಂತವರ್ಮ ಕೇರಳದ ಮೇಲೆ ದಂಡೆತ್ತಿ ಬಂದಾಗ ಕೇರಳದ ರಾಜರು ಪಾಂಡ್ಯರ ಶತ್ರುಗಳಾದ ಪಲ್ಲವರೊಡನೆ ಸೇರಿದರು. ಪಲ್ಲವರು ಜಯಶೀಲರಾದರು. ಆದರೆ ಚೇರಮನ್ ಪೆರುಮಾಳ್ ರಾಜನಾದ ಮೇಲೆ, ಪಾಂಡ್ಯರ ಮುನ್ನಡೆಯನ್ನು ತಡೆಗಟ್ಟಿದ. 844ರಲ್ಲಿ ಸ್ಥಾಣುರವಿ ಕೇರಳದ ರಾಜನಾದ. ಕೇರಳ ರಾಜನ ಸಹಾಯದಿಂದ ಚೋಳರು ಪ್ರವರ್ಧಮಾನರಾದರು. ಸ್ಥಾಣುರವಿ ಚೋಳರಾಜ ೧ನೆಯ ಆದಿತ್ಯನ ಸಹಾಯಕ್ಕೆ ಹೋಗಿ ಪಲ್ಲವರನ್ನು ಸೋಲಿಸಿದ. ಆದರೆ ಚೋಳರು ಪಾಂಡ್ಯ ರಾಜ್ಯವನ್ನು ಆಕ್ರಮಿಸಿ ಕೇರಳದ ಕಡೆ ಗಮನಹರಿಸಿದರು. ೧ನೆಯ ರಾಜರಾಜನ (೯೮೫-೧೦೧೪) ಕಾಲದಲ್ಲಿ ಚೋಳರು ಕೇರಳದ ಮೇಲೆ ಯುದ್ಧ ಪ್ರಾರಂಭಿಸಿದರು. ಇದು ೧ನೆಯ ಚೋಲ-ಚೇರ ಯುದ್ಧ, ಇದರಲ್ಲಿ ರಾಜರಾಜ ಸುಚೀಂದ್ರಂ ಕೊಟ್ಟರ್, ನಾಗರ್‍ಕೋಯಿಲ್ ಮತ್ತು ಕುಮಾರಿ ಪ್ರದೇಶಗಳನ್ನು ಆಕ್ರಮಿಸಿ ಅವನ್ನು ರಾಜರಾಜ ತೆನ್ನಾಡು ಎಂಬ ಪ್ರಾಂತ್ಯವನ್ನಾಗಿ ಮಾಡಿದ. ಅನಂತರ ಕೊಡಂಗಲ್ಲೂರಿನಲ್ಲಿ ಚೇರ ರಾಜ ಭಾಸ್ಕರ ರವಿವರ್ಮ ಚೋಳರಾಜ ಚೋಳರಾಜನಿಗೆ ಶರಣಾಗತನಾದ. ರಾಜರಾಜನ ಮರಣಾನಂತರ ಭಾಸ್ಕರ ರವಿವರ್ಮ ಚೋಳರಾಜ ೧ನೆಯ ರಾಜೇಂದ್ರನ ಸಾರ್ವಭೌಮತ್ವವನ್ನು ಅಂಗೀಕರಿಸಲಿಲ್ಲ. ಇದರಿಂದ ೧೦೧೮ರಲ್ಲಿ ರಾಜೇಂದ್ರ ದಂಡಯಾತ್ರೆ ಕೈಗೊಂಡು ಕೊಡಂಗಲ್ಲೂರನ್ನು ಆಕ್ರಮಿಸಿಕೊಂಡ. ಭಾಸ್ಕರವರ್ಮ ಯುದ್ಧದಲ್ಲಿ ಮರಣ ಹೊಂದಿದ. ಇದು ೨ನೆಯ ಚೋಳ-ಚೇರ [[ಯುದ್ಧ]] ೩ನೆಯ ಯುದ್ಧ ೧೦೩೪ರಲ್ಲಿ ಪ್ರಾರಂಭವಾಯಿತು. ೧ನೆಯ ರಾಜಾಧಿರಾಜ ಚೋಳನಿಗೆ ಕೇರಳರು ಶರಣಾಗಲಿಲ್ಲ. ೪ನೆಯ ಚೋಳ-ಚೇರ ಯುದ್ಧ ೧೦೭೦ರಲ್ಲಿ ಚೋಳದೊರೆ ೧ನೆಯ ಕುಲೋತ್ತುಂಗನ ಕಾಲದಲ್ಲಿ ನಡೆಯಿತು. ಆದರೆ ೧೧೦೨ರ ವರೆಗೆ ಕೇರಳದ ದೊರೆ ರಾಮನ್ ತಿರುವಡಿ ರಾಜಧಾನಿ ಕೊಡಂಗಲ್ಲೂರನ್ನು ವಶಪಡಿಸಿಕೊಂಡು ಕ್ರಮೇಣ ಚೋಳರನ್ನು ಹಿಮ್ಮೆಟ್ಟಿಸಿದ. ಚೋಳರು ಹಿಂದಿರುಗಿದ ಮೇಲೆ ತಂಪುರನ್ನರ ಕಾಲ ಪ್ರಾರಂಭವಾಯಿತು.
"https://kn.wikipedia.org/wiki/ಕೇರಳದ_ಇತಿಹಾಸ" ಇಂದ ಪಡೆಯಲ್ಪಟ್ಟಿದೆ