ಕೇರಳದ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
==ಪ್ರಾಗಿತಿಹಾಸ==
[[ಕೇರಳ]]ದ ಪ್ರಾಗಿತಿಹಾಸ ನಿಖರವಾಗಿ ಆರಂಭವಾಗುವುದು ಕಬ್ಬಿಣದ ಯುಗದಲ್ಲಿ. ಆ [[ಕಾಲ]]ದ ಬೃಹತ್-ಶಿಲಾಸಮಾಧಿ ಸಂಸ್ಕೃತಿಗೆ ಸೇರಿದ ಅನೇಕ ರೀತಿಯ ಸಮಾಧಿಗಳು [[ಉತ್ತರ]]ದಲ್ಲಿ ಕೋಟ್ಟಯಂ ಜಿಲ್ಲೆಯಿಂದ ಹಿಡಿದು ದಕ್ಷಿಣದ ಕೊಲ್ಲಂ ಜಿಲ್ಲೆಯವರೆಗಿನ ಪ್ರದೇಶದಲ್ಲಿ ಬೆಳಕಿಗೆ ಬಂದಿವೆ. ಈ ಸಮಾಧಿಗಳನ್ನು ಒರಟು ಬಂಡೆಗಳ ಕುಳ್ಳುಮಂಟಪ (ಡಾಲ್ಮೆನ್), ೨ ಪ್ರವೇಶದ್ವಾರವಿರುವ ಶಿಲಾತೊಟ್ಟಿ (ಪೋರ್ಟ್‍ಹೋಲ್ಡ್ ಸಿಸ್ಟ್), ೩ಜಲ್ಲಿರಾಶಿ (ಕೇರ್ನ್), ೪ಶವಜಾಡಿ (ಆರ್ನ್),೫ ನೆಡುಗಲ್ಲು (ಮೆನ್‍ಹಿರ್), ೬ ಟೋಪಿಕಲ್ಲು, ೭ಹೆಡೆಗಲ್ಲು (ಹುಡ್‍ಸ್ಟೋನ್), ೮ ಭೂಗತಗುಹೆ ಎಂದು ಎಂಟು ರೀತಿಗಳಲ್ಲಿ ವಿಂಗಡಿಸಬಹುದು. (ನೋಡಿ: ಬೃಹತ್ ಶಿಲಾಸಮಾಧಿ ಸಂಸ್ಕøತಿ). ಒಂದೊಂದು ಶಿಲಾವರ್ತುಲದ ಮಧ್ಯೆಯೂ ಅನೇಕ ಕುಳ್ಳು ಮಂಟಪಗಳು ತ್ರಿಚೂರು ಜಿಲ್ಲೆಯ ವರಂದರಪಲ್ಲಿ, ಕುನ್ನಾತುಪದಂ, ಕರುಣಥರ್‍ಗಳಲ್ಲೂ ಒಂಟಿ ಮಂಟಪಗಳು ಅದಿರಪಿಲ್ಲಿ ಜಲಪಾತ, ಪರಂಬಿಕುಲಮ್ ಮುಂತಾದೆಡೆಗಳಲ್ಲೂ ಇವೆ. ತ್ರಿಚೂರು ಜಿಲ್ಲೆಯಲ್ಲಿ ಶಿಲಾತೊಟ್ಟಿ ಸಮಾಧಿಗಳು ಪೋರ್ಕಲಂ, ತಿರುವಿಲ್ವಮಲ, ಕರಲಂ ಮತ್ತು ಪುಳಕ್ಕಲಗಳಲ್ಲಿಯೂ ಕೋಟ್ಟಯಂ ಜಿಲ್ಲೆಯ ವಲ್ಲಿಯನೂರು ಬಳಿಯೂ ದೊರಕಿವೆ. ಜಲ್ಲಿರಾಶಿ ಸಮಾಧಿಗಳು ಕೋಟ್ಟಯಂ ಜಿಲ್ಲೆಯ ಕಲ್ಲರ್, ವೇದಗಿರಿಬೆಟ್ಟ, ಕೊಲ್ಲಂ ಜಿಲ್ಲೆಯ ಪೂಥನ್‍ಕರ, ಕೊಡುಮಾನ್ ಮುಂತಾದೆಡೆಗಳಲ್ಲಿ ಸಿಕ್ಕಿವೆ. ಶವಜಾಡಿ ಸಮಾಧಿಗಳು ಎರ್ನಾಕುಲಂ ಜಿಲ್ಲೆಯ ಚೆಂಗಮನಾಡ್, ತ್ರಿಚೂರು ಜಿಲ್ಲೆಯ ಕಂಜಿರಕುಡ, ಕರುನ್‍ಥರ, ಕೊಲ್ಲಂ ಜಿಲ್ಲೆಯ ಅಂಗಡಿಕಲ್ ಮುಂತಾದ ಅನೇಕ ಸ್ಥಳಗಳಲ್ಲೂ ನೆಡುಗಲ್ಲು ಸಮಾಧಿಗಳು ಪಾಲಕ್ಕಾಡು ಜಿಲ್ಲೆಯ ಅತ್ತಪಡಿ, ಥಚ್ಚನ್ ಥುಕರ, ತ್ರಿಚೂರು ಜಿಲ್ಲೆಯ ಅನಪ್ಪರ, ಕುತ್ತೂರು, ಚುರತ್ತುರ, ಕೋಮಲ ಪರಥಲ, ಕೋಟ್ಟಯಂ ಜಿಲ್ಲೆಯ ಕೆಲ್ಲರ್ ಮುಂತಾದ ಸ್ಥಳಗಳಲ್ಲಿಯೂ ಕಂಡು ಬಂದಿವೆ. ಕೊನೆಯ [[ಮೂರು]] ರೀತಿಯ ಸಮಾಧಿಗಳು ಕೇರಳ ಪ್ರದೇಶಕ್ಕೆ ವಿಶಿಷ್ಟವಾದವು. ಟೋಪಿಕಲ್ಲುಗಳು ತ್ರಿಚೂರು ಜಿಲ್ಲೆಯ ಅರಿಯನ್ನೂರು, ಚೇರಮನ್‍ಗಾಡ್, ಪಾಲಕ್ಯಾಡು ಜಿಲ್ಲೆಯ ಉಂಗಲ್ಲೂರ್ ಮೊದಲಾದ ಸ್ಥಳಗಳಲ್ಲಿವೆ. ಹೆಡೆಕಲ್ಲು ಸಮಾಧಿಗಳು ತ್ರಿಚೂರು, ಕೋಟ್ಟಯಂ, ಪಾಲಕ್ಕಾಡು ಜಿಲ್ಲೆಗಳಲ್ಲಿ ಅರಿಯನ್ನೂರು, ಆಲನಲ್ಲೂರು ಮುಂತಾದ ಅನೇಕ ಸ್ಥಳಗಳಿವೆ. ಭೂಗತ ಸಮಾಧಿಗುಹೆಗಳು ಹೆಚ್ಚಾಗಿ ಕೋಳಿಕ್ಕೋಡ್, ಮಲಪ್ಪರಂ, ಕೋಟ್ಟಯಂ, ತ್ರಿಚೂರು ಜಿಲ್ಲೆಗಳಲ್ಲಿ ದೊರಕಿವೆ. ಇವೆಲ್ಲ ಲ್ಯಾಟರೈಟ್ ಕಲ್ಲುಗಳಲ್ಲಿ ಕೊರೆಯಲಾದವು. ಭೂಗತ ಗುಹಾಸಮಾಧಿಗಳಲ್ಲಿ ಮುಖ್ಯವಾಗಿ ತ್ರಿಚೂರು ಜಿಲ್ಲೆಯ ಪೋರ್ಕಲಮ್, ಕೋಟ್ಟಯಂ ಜಿಲ್ಲೆಯ ಕಣ್ಣವಂ, ಕಣ್ಣನ್ನೂರು ಜಿಲ್ಲೆಯ ವಲ್ಲಿಯನೂರು, ಕೋಳಿಕ್ಕೋಡ್ ಜಿಲ್ಲೆಯ ಪಾಲಂಗಾಡ್, ಕುಮಾರನ್ ಪುತ್ತೂರುಗಳನ್ನು ಹೆಸರಿಸಬಹುದು.<ref>{{cite news|url=http://www.hindu.com/yw/2003/11/01/stories/2003110101270300.htm |title=The land that arose from the sea |publisher=The Hindu |date= 1 November 2003|accessdate=2009-07-30}}</ref>
 
ಪೋರ್ಕಲಂನಲ್ಲಿ ನಡೆದಿರುವ ಉತ್ಖನನದಲ್ಲಿ ಮತ್ತು ಪ್ರಾಕೃತಿಕ ಕಾರಣಗಳಿಂದ ಅರೆಬರೆ ನಶಿಸಿರುವ ಅನೇಕ ಸಮಾಧಿಗಳಲ್ಲಿ ವಿವಿಧ ರೀತಿಯ ಕಬ್ಬಿಣದ ಆಯುಧಗಳು, ಕಾರ್ನೀಲಿಯನ್ ಮತ್ತಿತರ ವಸ್ತುಗಳ ಮಣಿಗಳು, ಕಪ್ಪು-ಕೆಂಪು ಮಡಕೆಗಳು ದೊರಕಿವೆ. ಇವೆಲ್ಲ ದಕ್ಷಿಣ ಭಾರತದ ಬೃಹತ್ ಶಿಲಾ ಸಂಸ್ಕೃತಿಯ ಕಾಲದಲ್ಲಿ ಪ್ರಚಲಿತವಾಗಿದ್ದವೇ. [[ಕೇರಳ]]ದ ಈ ಸಮಾಧಿಗಳನ್ನು ಕ್ರಿ.ಪೂ. ಒಂದನೆಯ ಸಹಸ್ರಮಾನಕ್ಕೆ ಸೇರಿಸಬಹುದು.
 
"https://kn.wikipedia.org/wiki/ಕೇರಳದ_ಇತಿಹಾಸ" ಇಂದ ಪಡೆಯಲ್ಪಟ್ಟಿದೆ