ಪಪ್ಪಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೫ ನೇ ಸಾಲು:
ಸಾಧ್ಯವಾದಲ್ಲಿ ಮರಗಳಿಗೆ ನೆರಳು ಕೊಡುವ ವ್ಯವಸ್ಥೆ ಮಾಡಬೇಕು. ಬೋರ್ಡೋ ದ್ರಾವಣವನ್ನು ಸಿಂಪಡಿಸುವುದರಿಂದ ಇದನ್ನು ತಡೆಯಬಹುದು.
 
3. ನಂಜುರೋಗ (ವೈರಸ್ ಮೊಸೇಕ್) : ಈ ರೋಗ ಮೊದಲಬಾರಿ ಫಲ ಬಿಟ್ಟ ತರುವಾಯ ಬರುತ್ತದೆ. ಏಫಿಸ್ ಕೀಟಗಳು ಈ ರೋಗವನ್ನು ಹರಡುವುವು. ರೋಗದಿಂದ ನರಳುವ ಮರಗಳ ಬೆಳವಣಿಗೆ ನಿಂತುಹೋಗುತ್ತದೆ. ಎಲೆಗಳು ಮದುರಿಕೊಂಡು, ಒರಟಾಗಿ ಬಟ್ಟಲಿನ ಆಕಾರವನ್ನು ತಳೆಯುವುವು. ರೋಗಪೀಡಿತ ಎಲೆಗಳ ಮೇಲೆ ಹಳದಿ ಬಣ್ಣದ ಮಚ್ಚೆಗಳು ಮೂಡಿ ಕಾಲಕ್ರಮೇಣ ಅಗಲವಾಗಿ ಹಸುರುಬಣ್ಣಕ್ಕೆ ತಿರುಗುತ್ತವೆ. ಮರ ಈ ಸ್ಥಿತಿಯಲ್ಲಿ 2-3 ತಿಂಗಳು ಇದ್ದು ಅನಂತರ ಸಾಯುತ್ತದೆ. ನಂಜು ರೋಗದಿಂದ ನರಳಿ ಸತ್ತ ಪಪ್ಪಾಯಿ ಮರದ ಅವಶೇಷಗಳು ತೋಟದಲ್ಲಿ ಉಳಿದ ಕ್ರಮೇಣ ಆರೋಗ್ಯವಾಗಿರುವ ಮರಗಳಿಗೆ ಸೋಕಿದರೆ ಅಂಥ ಮರಕ್ಕೂ ನಂಜುರೋಗ ಬರುತ್ತದೆ.<ref>http://www.ctahr.hawaii.edu/oc/freepubs/pdf/B-136.pdf</ref>
 
ನಂಜು ರೋಗವನ್ನು ಹರಡಲು ಮೂಲಕಾರಣವಾದ ಏಫಿಸ್ ಹುಳುಗಳನ್ನು ಕ್ರಿಮಿ ನಾಶಕಗಳಿಂದ ನಾಶ ಮಾಡುವುದು, ನಂಜುರೋಗದ ಖಚಿತ ಸೂಚನೆ ಕಂಡು ಬಂದ ತಕ್ಷಣ ಮರವನ್ನು ಕಡಿದು ಹಾಕಿ ಸುಡುವುದು, ನಂಜುರೋಗ ಅತಿಯಾದರೆ ಎಲ್ಲ ಮರಗಳನ್ನೂ ಕತ್ತರಿಸಿಹಾಕಿ ಹತ್ತಿ, ಬದನೆ, ಸೌತೆ, ಕುಂಬಳ ಇತ್ಯಾದಿ ಬೆಳೆಯಲು ಪ್ರಾರಂಭಿಸಿ, 1-2 ವರ್ಷ ಇದರ ಬೇಸಾಯವನ್ನು ನಿಲ್ಲಿಸುವುದು ನಂಜು ರೋಗದ ಹತೋಟಿಯ ಕ್ರಮಗಳು.
"https://kn.wikipedia.org/wiki/ಪಪ್ಪಾಯಿ" ಇಂದ ಪಡೆಯಲ್ಪಟ್ಟಿದೆ