ಹುಣಸೂರು ಕೃಷ್ಣಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಉಲ್ಲೇಖ ಸೇರ್ಪಡಿಸಿದ್ದು
No edit summary
೨೧ ನೇ ಸಾಲು:
==ಸಾಹಿತ್ಯ==
ಗೌತಮ ಬುದ್ಧ ಧರ್ಮರತ್ನಾಕರ, ರಾಜಾಗೋಪಿಚಂದ್ ಮುಂತಾದ ನಾಟಕಗಳನ್ನು ಬರೆದರು. ಅವರ ಸಂಭಾಷಣೆ ಶೈಲಿ ಜನಮೆಚ್ಚುಗೆ ಪಡೆಯಿತು. ಪ್ರೇಕ್ಷಕರನ್ನು ನೇರವಾಗಿ ಮುಟ್ಟುವಂತಹ ಆಡು ಭಾಷೆಯ ಮಾತುಗಳು ಜನಪ್ರಿಯವಾಗುತ್ತಿದ್ದಂತೆಯೇ ಹುಣಸೂರು ಕೃಷ್ಣಮೂರ್ತಿಯವರು ಬರವಣಿಗೆಯತ್ತಲೇ ತಮ್ಮ ಗಮನ ಕೇಂದ್ರೀಕರಿಸಿದರು. ನಿರ್ಮಾಪಕ-ನಿರ್ದೇಶಕರುಗಳಾದ ಡಿ.ಶಂಕರ್‍ಸಿಂಗ್ ಮತ್ತು ಬಿ.ವಿಠಲಾಚಾರ್ಯ ಇವರ ಬರವಣಿಗೆಯಲ್ಲಿನ ಸತ್ವವನ್ನು ಅರಿತರು. ಹುಣಸೂರು ಕೃಷ್ಣಮೂರ್ತಿ ಅವರ ಎಲ್ಲ ಚಿತ್ರಗಳಿಗೂ ಸಂಭಾಷಣೆ ಹಾಗೂ ಹಾಡುಗಳನ್ನು ಬರೆಯತೊಡಗಿದರು. ಸರಳ-ಸುಂದರ-ಆಡುಭಾಷೆಯ ಮಾತು-ಹಾಡುಗಳು ಪ್ರೇಕ್ಷಕರಿಗೆ ಮೋಡಿಮಾಡಿತು. ಭಕ್ತಿಪ್ರಧಾನ, ಜಾನಪದ, ಐತಿಹಾಸಿಕ, ಸಾಮಾಜಿಕ ಯಾವುದೇ ಆಗಿರಲಿ, ಆ ಪ್ರಕಾರಕ್ಕೆ ಒಪ್ಪುವಂಥ-ಜನಸಾಮಾನ್ಯರ ಮನಸ್ಸಿಗೆ ಮುಟ್ಟುವಂಥ ಸಾಹಿತ್ಯ ಇವರ ಲೇಖನಿಯಿಂದ ಮೂಡಿಬಂದಿತು. ಜಗನ್ಮೋಹಿನಿ, ರತ್ನಮಂಜರಿ, ಕನ್ಯಾದಾನ, ವೀರಸಂಕಲ್ಪ, ಬೂತಯ್ಯನ ಮಗ ಅಯ್ಯು, ಭಕ್ತಸಿರಿಯಾಳ, ಭಕ್ತಜ್ಞಾನದೇವ ಮತ್ತು ಭಕ್ತ ಕುಂಬಾರ, ಬಬ್ರುವಾಹನ, ಸತ್ಯಹರಿಶ್ಚಂದ್ರ ಎರಡು ವರ್ಷ ಸತತವಾಗಿ ಪ್ರದರ್ಶಿತವಾದ 'ಬಂಗಾರದ ಮನುಷ್ಯ' ಹೀಗೆ ಅನೇಕ ಚಿತ್ರಗಳಿಗೆ ಹಾಡು-ಮಾತು ಬರೆದರು. ಕೆ.ಎಂ,ಹುಣಸೂರು , ಗೌತಮ ಹೀಗೆ ವಿಭಿನ್ನ ಹೆಸರುಗಳಲ್ಲಿಯೂ ಇವರು ಗೀತರಚನೆ ಮಾಡಿರುವ ಇವರು ಬೊಂಬೆಯಾಟವಯ್ಯ.......ಮಾನವ ಮೂಳೆ ಮಾಂಸದ ತಡಿಕೆ....... ಶಿವ ಶಿವ ಎಂದರೆ ಭಯವಿಲ್ಲ...ಮುಂತಾದ ಭಕ್ತಿ ಪ್ರದಾನ, ಗಿಲ್ ಗಿಲ್ ಗಿಲಕ್ಕ.....ಸಿಟ್ಯಾಕೋ ಸಿಡುಕ್ಯಾಕೋ ನನ್ನ ಜಾಣ.......ಮಾದರಿಯ ಜಾನಪದ ಛಾಯೆಯ ಗೀತೆ, ಬಾಳ ಬಂಗಾರ ನೀನು...... ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವರ್ಯಾರೋ.....ಮುಂತಾದ ಭಾವಗೀತಾತ್ಮಕ ರಚನೆಗಳನ್ನು ರಚಿದ್ದಾರೆ.
ಕುಲದಲ್ಲಿ ಕೀಳ್ಯಾವುದೋ........ ನಗು ನಗುತಾ ನಲೀ ನಲೀ .... ಮುಂತಾದ ಸಾರ್ವತ್ರಿಕ ಮೌಲ್ಯ ಸಾರುವ ಗೀತೆಗಳನ್ನೂ ರಚಿಸಿದ್ದಾರೆ. ಸರಳ ಆಡು ಮಾತಿನ ಸಂಭಾಷಣೆಗಳನ್ನು ಬೆಳ್ಳಿ ತೆರೆಗೆ ತಂದ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ.ಎಲ್ಲ ಕ್ಷೇತ್ರಗಳಲ್ಲೂ ಕನ್ನಡಕ್ಕೆ ಅವರು ಅಡಿಪಾಯ ಹಾಕಿ ಕೊಟ್ಟರು. <ref>{{cite news |title=ಹುಣಸೂರು ಕೃಷ್ಣಮೂರ್ತಿ |url=https://www.amazon.in/Hunsur-Krishnamurthy-Movies-Kannada-TV-Shows/s?k=Hunsur+Krishnamurthy&srs=15307617031&rh=n%3A1375484031%2Cp_n_feature_browse-bin%3A1467560031 |accessdate=11 January 2020 |work=www.amazon.in}}</ref>
==ಪ್ರಶಸ್ತಿಗಳು==
೧೯೬೫ರಲ್ಲಿ ಹುಣಸೂರರು ನಿರ್ದೇಶಿಸಿದ [[ಸತ್ಯ ಹರಿಶ್ಚಂದ್ರ]] ಮತ್ತು "ಮದುವೆ ಮಾಡಿನೋಡು" ಚಲನಚಿತ್ರಗಳಿಗೆ ರಾಷ್ಟ್ರಪ್ರಶಸ್ತಿಗೆ ದೊರೆತಿದೆ.<ref>{{cite news |title=WikiVisually.com |url=https://wikivisually.com/wiki/Hunsur_Krishnamurthy |accessdate=11 January 2020 |work=wikivisually.com}}</ref>
ರಾಜ್ಯಸರ್ಕಾರವು ಚಲನಚಿತ್ರ ನಿರ್ದೇಶಕರ ಸೇವೆಯನ್ನು ಗುರುತಿಸಿ, ಪುರಸ್ಕರಿಸಲು ``ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಯನ್ನು ಅಮಲುಗೊಳಿಸಿದಾಗ ಆ ಪ್ರಶಸ್ತಿಯನ್ನು ಮೊದಲು ಪಡೆದವರು ಹುಣಸೂರು ಕೃಷ್ಣಮೂರ್ತಿ.
==ಮರಣ==