ಚೀನೀತತ್ತ್ವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಚೀನೀತತ್ತ್ವ''' ಭಾರತದ ತತ್ತ್ವದಂತೆಯೇ ತುಂಬ ಪ್ರಾಚೀನವಾದ್ದು. ಬೌದ್ಧ ತತ್ತ್ವ ಚೀನಕ್ಕೆ ಹರಡಿ ಅಲ್ಲಿನ ತತ್ತ್ವಗಳಲ್ಲಿ ಒಂದು ಮುಖ್ಯ ತತ್ತ್ವವಾಗಿ, ಭಾರತದಲ್ಲಿ ಕ್ಷೀಣಗೊಂಡ ಮೇಲೂ ಅಲ್ಲಿ ಅದು ಸ್ಥಿರವಾಗಿ ನೆಲೆಸಿತು. ಕ್ರಿ.ಶ. ಆರನೆಯ ಶತಮಾನದಲ್ಲಿ ಬೌದ್ಧನಾದ ಪರಮಾರ್ಥ ಭಾರತೀಯ ನ್ಯಾಯ ಗ್ರಂಥಗಳನ್ನು ಚೀನೀಭಾಷೆಗೆ ಪರಿವರ್ತಿಸಿದ. ಕ್ರಿ.ಶ. ಏಳನೆಯ ಶತಮಾನದಲ್ಲಿ [[ಹ್ಯುಯೆನ್ ತ್ಸಾಂಗ್]] ತರ್ಕಗ್ರಂಥಗಳನ್ನು ಚೀನೀಭಾಷೆಗೆ ಭಾಷಾಂತರಿಸಿ [[ಚೀನ]]ಕ್ಕೆ ತೆಗೆದುಕೊಂಡು ಹೋದ. ಹ್ಯುಯೆನ್‍ತ್ಸಾಂಗನ ಶಿಷ್ಯ ಕ್ವ್ಯೆ-ಚಿ ಶಂಕರಸ್ವಾಮಿ 'ನ್ಯಾಯಪ್ರವೇಶದ ಮೇಲೆ ಆರು ಸಂಪುಟಗಳ ಮಹಾವ್ಯಾಖ್ಯಾನವನ್ನು ಬರೆದ. ಇದು ಚೀನೀಯರಲ್ಲಿ ತರ್ಕವಿಚಾರವಾಗಿ ತುಂಬ ಆಸಕ್ತಿ ಹುಟ್ಟಿಸಿತು. ಚೀನೀ ತತ್ತ್ವವೆಂದರೆ ನಾವು ತಿಳಿದಿರುವುದು ಕೂಂಗ್ ಫೂಟ್ಸೆ ಮತ್ತು ಲಾವೋಟ್ಸು ತತ್ತ್ವವೆಂದೇ. ಅವೆರೆಡು ಅದರ ಪ್ರಧಾನ ತತ್ತ್ವಗಳಾದರೂ ಅವು ಬಹು ರೂಪಾಂತರ ಪಡೆದಿವೆ. ನವೀನ ಕೂಂಗ್ ಫೂಟ್ಸೆ ತತ್ತ್ವವೆಂದು ಕ್ರಿ.ಶ. ಹನ್ನೆರಡನೆಯ ಶತಮಾನದ ಚು ಷೀ ಪ್ರತಿಪಾದಿಸಿದ ತತ್ತ್ವವನ್ನು ಕೂಂಗ್ ಫೂಟ್ಸೆ ಪುನರ್ಜನ್ಮ ತಾಳಿ ನೋಡಿದ್ದರೆ ಬಹುಶಃ ಅದು ತನ್ನದೆಂದು ಗುರುತು ಹಿಡಿಯಲಾಗುತ್ತಿರಲಿಲ್ಲ. ಹಾಗೆಯೇ ನೂತನ ಲಾವೋ ಟ್ಸು ತತ್ತ್ವವೂ ಹಿಂದಿನ ಲಾವೋ ಟ್ಸು ತತ್ತ್ವದಿಂದ ಬಹುದೂರ ಸಾಗಿದೆ.
==ಪೂಂಗ್ ಯು-ಲಾನ್ ಗ್ರಂಥ==
ಚೀನೀತತ್ತ್ವದ ಮನೋಭಾವವನ್ನು ಕುರಿತು ಅವನು ಹೀಗೆ ಹೇಳುತ್ತಾನೆ. ತಾತ್ತ್ವಿಕರನ್ನು ಎರಡು ಬಗೆಯಾಗಿ ವಿಂಗಡಿಸುವುದುಂಟು. ಇಹದಲ್ಲಿ, ಸಾಮಾಜಿಕ ಸಂಸಾರಿಕ ಜೀವನದಲ್ಲಿ ಆಸಕ್ತರಾದವರು ಒಂದು ಗುಂಪಿನವರು. ಸಾಂಸಾರಿಕ ಜೀವನದಿಂದ ಹೊರಚ್ಚಾಗಿ ನಿಂತು, ಲೋಕಾತೀತ ವಸ್ತುಗಳಲ್ಲಿ ಆಸಕ್ತರಾಗಿರುವವರು ಇನ್ನೊಂದು ಗುಂಪಿನವರು ಸನ್ಯಾಸಿಗಳು. ಸಾಮಾನ್ಯವಾಗಿ ಇವರಿಬ್ಬರ ತತ್ತ್ವ ಪರಸ್ಪರ ವಿರುದ್ಧವೆಂದು ಹೇಳುವುದುಂಟು. ಇವೆರಡನ್ನೂ ವಿರೋಧವಿಲ್ಲದೆ ಸಮನ್ವಯಗೊಳಿಸಲು ಚೀನೀ ತತ್ತ್ವ ಪ್ರಯತ್ನಿಸುತ್ತದೆ. ಇಹದಲ್ಲಿ ಪರವನ್ನೂ ಪರದಲ್ಲಿ ಇಹವನ್ನೂ ಕಾಣಬಯಸುತ್ತದೆ. ಹೀಗೆ ಬಯಸುವವರನ್ನು ಚೀನೀಯರು ಮಹಾಪ್ರಜ್ಞರೆಂದು, ಅಂದರೆ ತಾತ್ತ್ವಿಕರೆಂದು ಕರೆಯುತ್ತಾರೆ. ಅವರು ಒಳಗೆ ಪ್ರಾಜ್ಞ ಚಕ್ರವರ್ತಿಗಳು, ಹೊರಗೆ ಲೌಕಿಕ ಸಾರ್ವಭೌಮನಂತೆ ಲೋಕಹಿತದಲ್ಲಿ ಆಸಕ್ತರು. ಇಂಥ ಚಾರಿತ್ರ್ಯವನ್ನು ಬೆಳೆಸುವುದೇ ಚೀನೀತಾತ್ತ್ವಿಕರ ಮುಖ್ಯಧ್ಯೇಯ.
"https://kn.wikipedia.org/wiki/ಚೀನೀತತ್ತ್ವ" ಇಂದ ಪಡೆಯಲ್ಪಟ್ಟಿದೆ