ಜಲವಾಸಿ ಸಸ್ಯಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೭ ನೇ ಸಾಲು:
 
==ವಾಯುಕುಳಿ ಮತ್ತು ಬೇರಿನ ರಚನೆ==
ಜಲಸಸ್ಯಗಳು ನಿರಂತರವಾಗಿ ನೀರಿನ ಸಂಪರ್ಕದಲ್ಲಿರುವುದರಿಂದ ನೀರನ್ನು ಹೀರುವ ಅಂಗಗಳಾದ ಬೇರುಗಳು ಚೆನ್ನಾಗಿ ರೂಪುಗೊಂಡಿಲ್ಲ. ಬೇರು ಸಾಮಾನ್ಯವಾಗಿ ಚಿಕ್ಕವಾಗಿದ್ದು ಅಲ್ಪಪ್ರಮಾಣದಲ್ಲಿ ಕವಲೊಡೆದಿರುತ್ತವೆ. ಕೆಲವು ವೇಳೆ ಇರುವುದೇ ಇಲ್ಲ. ಸೆರಟೊಫಿಲಂ ಎಂಬ ಸಸ್ಯದಲ್ಲಿ ಬೇರು ರೋಮಗಳು ಸಂಪೂರ್ಣವಾಗಿ ನಶಿಸಿಹೋಗಿವೆ. ಜಸ್ಸಿಯದಲ್ಲಿ ಸಾಮಾನ್ಯವಾಗಿ ಬೆಳೆಯುವ ಬೇರುಗಳಲ್ಲದೆ ಗಿಣ್ಣುಗಳಿಂದ ಸ್ಪಂಜಿನಂಥ ಬೇರುಗಳು ಮೇಲ್ಮಖವಾಗಿ ಬೆಳೆಯುವುದನ್ನು ಕಾಣಬಹುದು. ಜಲಸಸ್ಯಗಳಲ್ಲಿ ದೇಹದ ಒಂದಿಲ್ಲೊಂದು ಭಾಗದಲ್ಲಿ ಕಾಣಬರುವ ವಾಯುಕುಳಿಗಳ ರೂಪುಗೊಳ್ಳುವಿಕೆ ಅನುವಂಶಿಕ ನಿಯಂತ್ರಣಕ್ಕೊಳಗಾಗಿದೆ ಎಂದು ಭಾವಿಸಲಾಗಿದೆ. ವಾಯುಕುಳಿಗಳು ನಿರ್ದಿಷ್ಟ ಸಂಖ್ಯೆಯಲ್ಲಿರುವುದರಿಂದ ಈ ಗುಣವನ್ನು ಒಂದೇ ಜಾತಿಯ ಸಸ್ಯಗಳ ಪ್ರಭೇದಗಳನ್ನು ಗುರುತಿಸಲು ಬಳಸಿಕೊಳ್ಳಲಾಗಿದೆ.ಸೈಪರಸ್, ಟೈಫ ಮೊದಲಾದ ಸಸ್ಯಗಳಲ್ಲಿ ನಿರ್ದಿಷ್ಟ ಋತುಗಳಲ್ಲಿ ಪ್ರಕಂದಗಳು ವಿಶಾಲವಾಗಿ ಹರಡಿಕೊಂಡು ಬೆಳೆಯುತ್ತವೆ. ವ್ಯಾಲಿಸ್ನೇರಿಯ, ಐಸೋಯಿಟೇಸ್ ಮತ್ತು ಅಪೊನೊಜೆಟಾನ್‍ಗಳಲ್ಲಿ ಬೇರಿನ ಬುಡ ದಪ್ಪವಾಗಿದೆ. ಐಕಾರ್ನಿಯ, ಪಿಸ್ಟಿಯ ಮೊದಲಾದ ತೇಲುವ ಜಲಸಸ್ಯಗಳಲ್ಲಿ ತಂತು ಬೇರುಗಳು ವಿಪುಲವಾಗಿ ಬೆಳೆದಿವೆ. ಗಿಡಗಳು ಭೂಮಿಯಲ್ಲಿ ಗಟ್ಟಿಯಾಗಿ ನಿಲ್ಲಲು ಇವು ಉಪಯೋಗವಾಗದಿದ್ದರೂ ಮೇಲ್ಭಾಗದಲ್ಲಿ ಗುಂಪಾಗಿ ಬೆಳೆದಿರುವ ಎಲೆಗಳಿಗೆ ಸ್ಥಿತಿ ಸ್ಥಾಪಕತೆಯನ್ನು ಕೊಡುತ್ತವೆ. ಈ ಬೇರುಗಳ ಎಪಿಡರ್ಮಿಸಿನಲ್ಲಿ ಕೆಲವೊಮ್ಮೆ ಕ್ಲೋರೋಫಿಲ್ ಇರುವುದರಿಂದ ಅಲ್ಪ ಮೊತ್ತದಲ್ಲಿ ಆಹಾರವೂ ತಯಾರಾಗುತ್ತದೆ. ಸೆರಟಾಪ್ಪರಿಸ್ ಗಿಡದಲ್ಲಿ ಬೇರುಗಳು ಬಹುವಾಗಿ ಕವಲೊಡೆದಿವೆ. ಮತ್ತೆ ಕೆಲವು ಜಲಸಸ್ಯಗಳಲ್ಲಿ ಬೇರುರೋಮಗಳು ಸಮೃದ್ಧವಾಗಿ ಬೆಳೆದಿರುವುದುಂಟು.<ref>https://www.encyclopedia.com/plants-and-animals/botany/botany-general/aquatic-plants</ref>
 
==ಎಲೆಗಳ ರಚನೆ==
ಹೆಚ್ಚು ಆಳವಿಲ್ಲದ ನೀರಿನಲ್ಲಿ ಬೆಳೆಯುವ ಜಲಸಸ್ಯಗಳ ಎಲೆಗಳಲ್ಲಿ ದ್ವಿರೂಪತೆ ಕಂಡುಬರುತ್ತದೆ. ಅಂದರೆ ನೀರಿನಲ್ಲಿ ಮುಳುಗಿರುವ ಎಲೆಗಳು ನೀರಿನ ಮೇಲೆ ಬೆಳೆಯುವ ಎಲೆಗಳಿಂಗಿಂತ ಭಿನ್ನವಾಗಿರುತ್ತವೆ. ಲಿಮ್ನೊಫಿಲ ಹೆಟರೋಫಿಲ್ಲ, ಸ್ಯಾಜಿಟೇರಿಯ ಮೊದಲಾದ ಸಸ್ಯಗಳಲ್ಲಿ ಈ ರೀತಿಯ ಎಲೆಗಳನ್ನು ಕಾಣಬಹುದು. ನೀರಿನಲ್ಲಿ ಮುಳುಗಿರುವ ಎಲೆಗಳು ಅತಿ ಸೂಕ್ಷ್ಮವಾಗಿ ವಿಚ್ಛೇದಿಸಲ್ಪಟ್ಟಿದ್ದು ನೀರಿನ ಮೇಲ್ಭಾಗದ ಎಲೆಗಳು ಅಖಂಡವಾಗಿರುತ್ತವೆ. ಈ ಲಕ್ಷಣಕ್ಕೆ ಅಸಮಪತ್ರ ರೂಪತೆ (ಹೆಟರೊಫಿಲಿ) ಎಂದು ಹೆಸರು. ಇದು ಸುತ್ತಲ ಪರಿಸರ, ವಾತಾವರಣದ ಉಷ್ಣತೆ ಮತ್ತು ಆದ್ರ್ರತೆಗಳನ್ನು ಅವಲಂಬಿಸಿರುತ್ತದೆ.
"https://kn.wikipedia.org/wiki/ಜಲವಾಸಿ_ಸಸ್ಯಗಳು" ಇಂದ ಪಡೆಯಲ್ಪಟ್ಟಿದೆ