ಕಾಂಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೧ ನೇ ಸಾಲು:
[[ಚಿತ್ರ:Polygonum_amphibium_(4973671699).jpg|thumb]]
 
'''ಕಾಂಡ'''ವು ಸಾಮಾನ್ಯವಾಗಿ ಮೇಲ್ಮುಖವಾಗಿ [[ಭೂಮಿ]]ಯ ಮೇಲೆ ಬೆಳೆಯುವ [[ಸಸ್ಯ|ಸಸ್ಯಭಾಗ]] ಅಥವಾ ಅಕ್ಷ (ಸ್ಟೆಮ್; ಅಸೆಂಡಿಂಗ್ ಆಕ್ಸಿಸ್). ಇದು ಬೀಜದ ಒಳಗಿರುವ ಪ್ರಥಮಾಂಕುರದಿಂದ (ಪ್ಲೂಮ್ಯೂಲ್) ಬೆಳೆಯ ತೊಡಗುತ್ತದೆ. [[ನೀರು]] ಮತ್ತು ಗುರುತ್ವಗಳಿಗೆ ವಿಮುಖವಾಗಿಯೂ ಬೆಳಕಿಗೆ ಅಭಿಮುಖವಾಗಿಯೂ ಬೆಳೆಯುವ ಗುಣ ಇದಕ್ಕೆ ಉಂಟು. ಕಾಂಡದಲ್ಲಿ ಸಾಮಾನ್ಯವಾಗಿ ಒಂದು ಪ್ರಮುಖ ಕಾಂಡ ಅಥವಾ ಅಕ್ಷ ಎಂಬ ಭಾಗವೂ ಅದರ ಮೇಲೆ ಹಲವಾರು ಪಾರ್ಶ್ವ ಶಾಖೆ ಅಥವಾ ಕೊಂಬೆಗಳೂ ಇವೆ. ಈ ಕೊಂಬೆಗಳ ಮೇಲೆ ಅಲ್ಲಲ್ಲೇ ಅಸಂಖ್ಯ ಎಲೆಗಳು, [[ಗಾಳಿ/ವಾಯು|ಗಾಳಿ]] ಮತ್ತು ಬೆಳಕನ್ನು ಸಮರ್ಪಕವಾಗಿ ಸ್ವೀಕರಿಸುವಂತೆ ಜೋಡಣೆಯಾಗಿವೆ. ಎಲೆಗಳ ಜೊತೆಗೆ ಹೂ[[ಹೂವು]], ಮೊಗ್ಗು, ಕಾಯಿಗಳೂ ಇವೆ. [[ಎಲೆ|ಎಲೆಗಳು]] ಪೋಷಕಾಂಗಗಳಾಗಿಯೂ ಹೂಗಳು ಸಂತಾನವೃದ್ಧಿಯ ಅಂಗಗಳಾಗಿಯೂ ಕಾಯಿಗಳು ಪ್ರಸಾರಸಾಧನಗಳಾಗಿಯೂ ಕಾರ್ಯ ನಿರ್ವಹಿಸುತ್ತವೆ ಸಾಮಾನ್ಯವಾಗಿ ಎಳೆಯ ಕಾಂಡ ಮತ್ತು ಕೊಂಬೆಗಳು ಹಸಿರಾಗಿಯೂ ವಯಸ್ಸಾದ ಕಾಂಡ ಮತ್ತು ಕೊಂಬೆಗಳು ಕಂದುಬಣ್ಣವುಳ್ಳವೂ ಆಗಿರುತ್ತವೆ. ಮುಖ್ಯಕಾಂಡ, ಅದರ ಶಾಖೋಪಶಾಖೆಗಳು, ಅವುಗಳ ಮೇಲಿರುವ ಎಲೆ, ಹೂ, ಕಾಯಿ, ಬೀಜಗಳೆಲ್ಲ ಕೂಡಿರುವುದಕ್ಕೆ ಪ್ರಕಾಂಡಕ್ರಮ (ಶೂಟ್ ಸಿಸ್ಟಮ್) ಎನ್ನಲಾಗುತ್ತದೆ.
 
==ವಿವಿಧ ಭಾಗಗಳು==
ಯಾವುದೇ ಒಂದು [[ಗಿಡ|ಗಿಡದ]] (ಉದಾ: ದಾಸವಾಳ, ಸೂರ್ಯಕಾಂತಿ, ಆಲ ಇತ್ಯಾದಿ) ಎಳೆಯಕಾಂಡ ಅಥವಾ ಕೊಂಬೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದರ ಮೇಲೆ ಅಲ್ಲಲ್ಲೇ ಎಲೆ, ಮೊಗ್ಗುಗಳಿರುವುದು ಕಂಡುಬರುತ್ತದೆ. ಎಲೆಗಳು ಕಾಂಡದಮೇಲೆ ಹುಟ್ಟುವ ಒಂದೊಂದು ನಿರ್ದಿಷ್ಟ ಜಾಗಕ್ಕೆ ಗಿಣ್ಣು (ನೋಡ್) ಎಂದು ಹೆಸರು. ಎರಡು ಗಿಣ್ಣುಗಳ ನಡುವಿನ ಭಾಗಕ್ಕೆ ಅಂತರಗಿಣ್ಣು (ಇಂಟರ್ ನೋಡ್) ಎಂದು ಹೇಳುವುದುಂಟು. ಸಾಮಾನ್ಯವಾಗಿ ಒಂದೊಂದು ಗಿಣ್ಣಿನಿಂದ ಒಂದು, ಎರಡು ಅಥವಾ ಹಲವಾರು ಎಲೆಗಳು ಹುಟ್ಟಬಹುದು. ಕಾಂಡ ಮತ್ತು ಎಲೆಯ ನಡುವೆ ಉಂಟಾಗುವ ಕೋನಕ್ಕೆ ಪತ್ರಕಕ್ಷ ಅಥವಾ ಎಲೆಯ ಕಂಕುಳು (ಆಕ್ಸಿಲ್) ಎನ್ನಲಾಗುತ್ತದೆ. ಸಾಧಾರಣವಾಗಿ ಪ್ರತಿ ಎಲೆಯ ಕಂಕುಳಲ್ಲಿ ಒಂದು ಮೊಗ್ಗು ಮತ್ತು ಕಾಂಡದ ಅಥವಾ ರೆಂಬೆಯ ತುದಿಯಲ್ಲಿ ಒಂದು ಮೊಗ್ಗು ಇರುತ್ತವೆ. ಎಲೆಯ ಕಂಕುಳಲ್ಲಿನ ಮೊಗ್ಗಿಗೆ ಕಕ್ಷ ಅಥವಾ ಕಂಕುಳು ಮೊಗ್ಗು (ಆಕ್ಸಿಲರಿ ಬಡ್) ಎಂದೂ ಕಾಂಡದ ತುದಿಯಲ್ಲಿನ ಮೊಗ್ಗಿಗೆ ತುದಿಮೊಗ್ಗು (ಟರ್ಮಿನಲ್ ಅಥವಾ ಏಪಿಕಲ್ ಬಡ್) ಎಂದೂ ಹೆಸರು. ಈ ಮೊಗ್ಗುಗಳ ಅಗ್ರಭಾಗದ ಸುತ್ತ ಯಾವ ಬಗೆಯ ರಕ್ಷಣಾಕವಚವೂ ಇಲ್ಲ. ಆದರೆ ಅದರಿಂದಲೇ ಹುಟ್ಟುವ ಸಣ್ಣ ಎಲೆಗಳೇ ಅದನ್ನು ಸುತ್ತುವರಿದು ಮೊಗ್ಗಿಗೆ ರಕ್ಷಣೆಯನ್ನು ನೀಡುತ್ತವೆ.  ಸಾಮಾನ್ಯವಾಗಿ ಕಾಂಡದ ಹೊರಮೈ ಹಲವು ಬಗೆಯ ರೋಮಗಳಿಂದ ಆವೃತವಾಗಿದೆ. ಇವೆಲ್ಲವೂ ಬಹುಕೋಶಮಯ ರೋಮಗಳು. ಕಾಂಡದಿಂದ ಬೆಳೆಯುವ ರೆಂಬೆಗಳು ಕಾಂಡದ ಹೊರಮೈಯಿಂದಲೇ ಉದ್ಭವಿಸುತ್ತವೆ (ಎಕ್ಸೊಜೀನಸ್).
 
==ನಮೂನೆಗಳು==
"https://kn.wikipedia.org/wiki/ಕಾಂಡ" ಇಂದ ಪಡೆಯಲ್ಪಟ್ಟಿದೆ