ಕಾಂಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Polygonum_amphibium_(4973671699).jpg|thumb]]
 
'''ಕಾಂಡ'''ವು ಸಾಮಾನ್ಯವಾಗಿ ಮೇಲ್ಮುಖವಾಗಿ ಭೂಮಿಯ ಮೇಲೆ ಬೆಳೆಯುವ ಸಸ್ಯಭಾಗ ಅಥವಾ ಅಕ್ಷ (ಸ್ಟೆಮ್; ಅಸೆಂಡಿಂಗ್ ಆಕ್ಸಿಸ್). ಇದು ಬೀಜದ ಒಳಗಿರುವ ಪ್ರಥಮಾಂಕುರದಿಂದ (ಪ್ಲೂಮ್ಯೂಲ್) ಬೆಳೆಯ ತೊಡಗುತ್ತದೆ. ನೀರು ಮತ್ತು ಗುರುತ್ವಗಳಿಗೆ ವಿಮುಖವಾಗಿಯೂ ಬೆಳಕಿಗೆ ಅಭಿಮುಖವಾಗಿಯೂ ಬೆಳೆಯುವ ಗುಣ ಇದಕ್ಕೆ ಉಂಟು. ಕಾಂಡದಲ್ಲಿ ಸಾಮಾನ್ಯವಾಗಿ ಒಂದು ಪ್ರಮುಖ ಕಾಂಡ ಅಥವಾ ಅಕ್ಷ ಎಂಬ ಭಾಗವೂ ಅದರ ಮೇಲೆ ಹಲವಾರು ಪಾರ್ಶ್ವ ಶಾಖೆ ಅಥವಾ ಕೊಂಬೆಗಳೂ ಇವೆ. ಈ ಕೊಂಬೆಗಳ ಮೇಲೆ ಅಲ್ಲಲ್ಲೇ ಅಸಂಖ್ಯ ಎಲೆಗಳು, ಗಾಳಿ ಮತ್ತು ಬೆಳಕನ್ನು ಸಮರ್ಪಕವಾಗಿ ಸ್ವೀಕರಿಸುವಂತೆ ಜೋಡಣೆಯಾಗಿವೆ. ಎಲೆಗಳ ಜೊತೆಗೆ ಹೂ, ಮೊಗ್ಗು, ಕಾಯಿಗಳೂ ಇವೆ. ಎಲೆಗಳು ಪೋಷಕಾಂಗಗಳಾಗಿಯೂ ಹೂಗಳು ಸಂತಾನವೃದ್ಧಿಯ ಅಂಗಗಳಾಗಿಯೂ ಕಾಯಿಗಳು ಪ್ರಸಾರಸಾಧನಗಳಾಗಿಯೂ ಕಾರ್ಯ ನಿರ್ವಹಿಸುತ್ತವೆ ಸಾಮಾನ್ಯವಾಗಿ ಎಳೆಯ ಕಾಂಡ ಮತ್ತು ಕೊಂಬೆಗಳು ಹಸಿರಾಗಿಯೂ ವಯಸ್ಸಾದ ಕಾಂಡ ಮತ್ತು ಕೊಂಬೆಗಳು ಕಂದುಬಣ್ಣವುಳ್ಳವೂ ಆಗಿರುತ್ತವೆ. ಮುಖ್ಯಕಾಂಡ, ಅದರ ಶಾಖೋಪಶಾಖೆಗಳು, ಅವುಗಳ ಮೇಲಿರುವ ಎಲೆ, ಹೂ, ಕಾಯಿ, ಬೀಜಗಳೆಲ್ಲ ಕೂಡಿರುವುದಕ್ಕೆ ಪ್ರಕಾಂಡಕ್ರಮ (ಶೂಟ್ ಸಿಸ್ಟಮ್) ಎನ್ನಲಾಗುತ್ತದೆ.
 
==ವಿವಿಧ ಭಾಗಗಳು==
೮ ನೇ ಸಾಲು:
==ನಮೂನೆಗಳು==
ಕಾಂಡ ಮೃದು ಅಥವಾ ಮಾಂಸಲವಾಗಿಯೋ ದುಂಡು ಅಥವಾ ಚಚ್ಚೌಕಾರವಾಗಿಯೋ ನುಣುಪು ಅಥವಾ ರೋಮಮಯವಾಗಿಯೋ ಇರಬಹುದು. ಭೂಮಿಯೊಳಗಿನ ಪರಿಸ್ಥಿತಿಗಿಂತ ಭೂಮಿಯ ಮೇಲಿನ ಸನ್ನಿವೇಶಗಳು ಹೆಚ್ಚು ವೈಪರೀತ್ಯಗಳಿಗೆ ಒಳಗಾಗುವುದರಿಂದ ಭೂಮಿಯ ಮೇಲೆ ಬೆಳೆಯುವ ಕಾಂಡ ಆಕಾರ, ರಚನೆ, ಗಾತ್ರ ಇತ್ಯಾದಿಗಳ ವಿಷಯದಲ್ಲಿ ಅನೇಕ ಭಿನ್ನತೆ, ಬದಲಾವಣೆಗಳನ್ನು ಹೊಂದುವುದು ಸಹಜ.  
ಸ್ವಭಾವ ಅಥವಾ ಬೆಳೆವಣಿಗೆಗೆ ಅನುಗುಣವಾಗಿ ಕಾಂಡವನ್ನು ಮುಖ್ಯವಾಗಿ ಎರಡು ವಿಧಗಳಾಗಿ ವಿಂಗಡಿಸಬಹುದು: 1
೧.ನೇರವಾಗಿ ಎತ್ತರ ಬೆಳೆಯುವ ಸಬಲ ಕಾಂಡಗಳು; 2
೨.ನೆಲದಮೇಲೆ ಹಬ್ಬಿಯೊ ಅಥವಾ ಆಶ್ರಯಗಳ ಮೇಲೇರಿಕೊಂಡೊ ಬೆಳೆಯುವ ದುರ್ಬಲಕಾಂಡಗಳುದುರ್ಬಲ ಕಾಂಡಗಳು. ಈ ಎರಡು ಬಗೆಯ ಕಾಂಡಗಳಲ್ಲೂ ಮತ್ತೆ ಹಲವಾರು ವಿಧಗಳುಂಟುವಿಧಗಳಿವೆ.
 
1=== ಸಬಲ ಕಾಂಡಗಳು===,
==(ಎ) ಪರ್ಣಾಕ್ಷ (ಕಾಡೆಕ್ಸ್)==
ದಪ್ಪ ಕೊಳವೆಯಂತೆ ಎತ್ತರವಾದ ಮತ್ತು ಟಿಸಿಲೊಡೆಯದೆ ಬೆಳೆಯುವ ಕಾಂಡ ಇದು. ಇದರ ಮೇಲೆಲ್ಲ ಉದುರಿಬಿದ್ದ ಎಲೆಗಳ ಕಲೆ ಇರುತ್ತದೆ. ಉದಾಹರಣೆ-ತೆಂಗು, ಅಡಿಕೆ ಇತ್ಯಾದಿ.
 
"https://kn.wikipedia.org/wiki/ಕಾಂಡ" ಇಂದ ಪಡೆಯಲ್ಪಟ್ಟಿದೆ