ಸದಸ್ಯ:Radhatanaya/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯ ನೇ ಸಾಲು:
'''ಡಾ. ಪೂರ್ಣಿಮಾ ಸುಧಾಕರ ಶೆಟ್ಟಿಯವರು''',ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹಪ್ರಾಧ್ಯಾಪಕಿಯಾಗಿ ಕೆಲಸಮಾಡುತ್ತಿದ್ದಾರೆ. ಬಹುಮುಖವ್ಯಕ್ತಿತ್ವದ ಪೂರ್ಣಿಮಾ ಅವರು, ನಗರದ ಕನ್ನಡ ಭಾಷೆಯ ಪ್ರಮುಖ ಬರಹಗಾರರಲ್ಲೊಬ್ಬರು. ಅತ್ಯುತ್ತಮ ಕಾರ್ಯಕರ್ತೆ, ಕಾರ್ಯಕ್ರಮ ನಿರೂಪಕಿ, ಸಂಘಟಕಿಯಾಗಿ ಗುರುತಿಸಿಕೊಂಡಿದ್ದಾರೆ.'ಚಿಣ್ಣರ ಬಿಂಬ' ಸಂಸ್ಥೆಯ ಆಶ್ರಯದಲ್ಲಿ ಮಕ್ಕಳಿಗೆ ಕನ್ನಡ ಕಲಿಕೆಯ ತರಗತಿಗಳನ್ನು ನಡೆಸುತ್ತಾ ಬಂದಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯ ಮತ್ತು ನಗರದ ಕನ್ನಡ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕೆಲಸಮಾಡುತ್ತಿದ್ದಾರೆ.
==ಜನನ ಮತ್ತು ವಿದ್ಯಾಭ್ಯಾಸ==
'''ಪೂರ್ಣಿಮಾ ಅವರು''',ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಕೌಡೂರಿನವರು.<ref> [https://indikosh.com/vill/651198/kadur ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಕೌಡೂರಿನವರು] </ref> ತಂದೆ ಗೋಪಾಲ ಶೆಟ್ಟಿ, ತಾಯಿ,ಸಂಪಾಶು. ಪೂರ್ಣಿಮಾ ಅವರ ಪ್ರಾಥಮಿಕ ವಿದ್ಯಾಭ್ಯಾಸ 'ಮೈಕ್ ಶಾಲೆ'ಯಲ್ಲಿ ಜರುಗಿತು. ಪ್ರೌಢಶಾಲೆಯ ವಿದ್ಯಾಭ್ಯಾಸ ಸರ್ಕಾರೀ ಪದವಿಪೂರ್ವ ಕಾಲೇಜ್ ಬೈಲೂರಿನಲ್ಲಾಯಿತು. ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಬಿ.ಎ.ಪದವಿ ಗಳಿಸಿದರು. ಈ ಸಂದರ್ಭದಲ್ಲಿ ಬೈಲೂರು ಹೈಸ್ಕೂಲ್ ನಲ್ಲಿ ಶಿಕ್ಷಕಿಯಾಗಿ ಕೆಲಸಮಾಡಿದರು. ಬಹುಮುಖ ವ್ಯಕ್ತಿತ್ವ. ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಆಟೋಟಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದರು. ಅಂತರ ಕಾಲೇಜ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದರು. ಸತತವಾಗಿ ಮೂರುವರ್ಷ ಬಹುಮಾನ ಗಳಿಸಿದ್ದರು. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ತಮ್ಮ ಕಾಲೇಜಿಗೆ ಗರಿಮೂಡಿಸಿದ್ದರು.
==ಬರವಣಿಗೆಯಲ್ಲಿ ಪರಮಾಸಕ್ತೆ==
===ಬರವಣಿಗೆ ಅವರ ಪರಮಾಸಕ್ತಿಗಳಲ್ಲೊಂದು===
ಶಾಲಾ ಕಾಲೇಜಿನ ದಿನಗಲ್ಲೇ ಕವನಗಳು ಮತ್ತು ಲೇಖನಗಳನ್ನು ರಚಿಸಿ ಪತ್ರಿಕೆಗಳಲ್ಲಿ ಪ್ರಕಟಿಸುವ ಹವ್ಯಾಸವಿತ್ತು. ಉದಯವಾಣಿ, ಕರ್ನಾಟಕಮಲ್ಲ, ಸ್ನೇಹ ಸಂಬಂಧ, ಬಂಟರವಾಣಿ ಅಕ್ಷಯ, ಕರವೇ, ನೇಸರು, ಗಾಂಧಿಬಜಾರ್,ಸ್ಥಿತಿಗತಿ,ಮದಿಪು, ತುಳುವ, ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು.
 
==ವಿವಾಹ==
ಗುಡ್ಡೆಯಂಗಡಿ ಪೆಲತ್ತೂರಿನ ಸುಧಾಕರ್ ಶೆಟ್ಟಿ ಯೆಂಬ ಬಿಸಿನೆಸ್ಮನ್ ಜೊತೆಗೆ ವಿವಾಹವಾದರು. ತದನಂತರ ಪತಿಯೊಂದಿಗೆ ಮುಂಬಯಿ ನಗರಕ್ಕೆ ಪಾದಾರ್ಪಣೆ ಮಾಡಿದರು. ಈ ದಂಪತಿಗಳಿಗೆ ಸ್ವೀಕೃತಿ ಎಂಬ ಮಗಳಿದ್ದಾಳೆ. ಆಕೆ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾಳೆ.