ಅಲೆಕ್ಸಾಂಡರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೪೭ ನೇ ಸಾಲು:
[[File:MacedonEmpire.jpg|thumb|ಅಲೆಕ್ಸಾಂಡರನ ಸಾಮ್ರಾಜ್ಯ ಮತ್ತು ದಂಡಯಾತ್ರೆಯ ಹಾದಿ.]]
ಅಲೆಕ್ಸಾಂಡರನ ವಿಶಾಲ ಸಾಮ್ರಾಜ್ಯ ಗ್ರೀಸಿನಿಂದ ಪಂಜಾಬಿನವರೆಗೂ ವಿಸ್ತರಿಸಿತ್ತು. ಈತನ ಕೀರ್ತಿ ಎಲ್ಲೆಲ್ಲಿಯೂ ಹರಡಿತ್ತು. ಕೇವಲ 12 ವರ್ಷಗಳಲ್ಲಿ ಈತ ಇಡೀ ಒಂದು ಜೀವಮಾನದ ಸಾಧನೆಯನ್ನು ಸಾಧಿಸಿದ್ದ. ಈತನ ರಾಜನೀತಿ ಕುಶಲತೆಯ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ಈತ ಮಾಡಿದ ಕಾರ್ಯಸಾಧನೆ ಅದ್ಭುತವಾದುದೆಂದು ಹೇಳಬೇಕು. ಮುಖ್ಯವಾಗಿ ಪಾಶ್ಚಾತ್ಯ ಪೌರ್ವಾತ್ಯ ನಾಗರಿಕತೆಗಳನ್ನು ಒಂದುಗೂಡಿಸಬೇಕೆಂಬುದು ಇವನ ಅಭಿಲಾಷೆಯಾಗಿತ್ತು. ಇವನ ವಿಷಯವಾಗಿ ನಡೆದದ್ದನ್ನು ಹೇಳಿದರೂ, ಕಥೆಯಂತೆಯೇ ತೋರುತ್ತದೆ. ಇವನ ಜೀವನ ಅಷ್ಟು ಆಶ್ಚರ್ಯಕರವಾದದ್ದು. [[ಪರ್ಷಿಯ]] ಸಾಮ್ರಾಜ್ಯವನ್ನು ಉರುಳಿಸಿ ಈತ ಪ್ರಪಂಚವನ್ನು ಅಚ್ಚರಿಗೊಳಿಸಿದ. ಸೈನಿಕರ ಪ್ರೀತಿ ವಿಶ್ವಾಸಗಳನ್ನು ಸಂಪಾದಿಸಿದ. ಹ್ಯಾನಿಬಾಲ್, ಸೀಸರ್, ನೆಪೋಲಿಯನ್‍ರ ಹಾಗೆ ಯುದ್ಧದಲ್ಲಿ ಕೀರ್ತಿ ಪಡೆದ. ಆದರೆ ಇವನ ಶಾಶ್ವತವಾದ ಕೀರ್ತಿ ಪೂರ್ವ ಪಶ್ಚಿಮ ಭೇದಗಳನ್ನು ತೊಡೆದುಹಾಕಿ, ಎಲ್ಲ ಜನಾಂಗಗಳೂ ಕಲೆತು ಸೌಹಾರ್ದದಿಂದ ಬಾಳುವಂತೆ ಮಾಡುವ ಉತ್ತಮ ಹಿರಿಯಾಸೆಯಲ್ಲಿ ಅಡಗಿತ್ತು. ಅಂತರ್‍ವಿವಾಹ ಪದ್ಧತಿ, ಏಷ್ಯದವರನ್ನು ತನ್ನ ಸೈನ್ಯದಲ್ಲಿ ಸೇರಿಸುವುದು, ಅಲೆಕ್ಸಾಂಡ್ರಿಯ ಹೆಸರಿನ ನವೀನ ನಗರಗಳನ್ನು ಸ್ಥಾಪಿಸುವುದು-ಇವುಗಳ ಮೂಲಕ ಗ್ರೀಕರ ನಾಗರಿಕತೆಯನ್ನು ಭದ್ರವಾಗಿ ಸ್ಥಾಪಿಸಿ ಹರಡುವುದೇ ಇವನ ಸಂಕಲ್ಪವಾಗಿತ್ತು. ಇವನ ಅಕಾಲಮರಣ ಶಾಶ್ವತವಾದ ಕಾರ್ಯಸಾಧನೆಗೆ ಅಡಚಣೆಯನ್ನುಂಟುಮಾಡಿತಾದರೂ ಇವನನ್ನು ಮಹಾಶಯನೆಂದು ಹೇಳಲು ಯಾವ ಸಂಶಯವೂ ಇಲ್ಲ. ಪ್ರಪಂಚದ ಚರಿತ್ರೆಯಲ್ಲಿ, ಪೂರ್ವ ಪಶ್ಚಿಮ ದಿಕ್ಕುಗಳ ಸಂಪರ್ಕದ ಇತಿಹಾಸದಲ್ಲಿ ಈತ ಅಚ್ಚಳಿಯದ ಕೀರ್ತಿ ಗಳಿಸಿದ್ದಾನೆ. ಅಲೆಕ್ಸಾಂಡರನ ಆಶೆ ಬಹುಮಟ್ಟಿಗೆ ನೆರವೇರಿತೆಂದೇ ಹೇಳಬೇಕು. ಕ್ರಮೇಣ ಪೂರ್ವ ಪಶ್ಚಿಮ ರಾಷ್ಟ್ರಗಳ ಮಧ್ಯದ ಸಂಪರ್ಕ ಬೆಳೆದು ನಿಕಟವಾಯಿತು. ವ್ಯಾಪಾರ ಅಭಿವೃದ್ಧಿಯಾದುದಲ್ಲದೆ ಕಾಲಕ್ರಮೇಣ ಗ್ರೀಕ್ ಮತ್ತು ಮಗಧರಾಜ್ಯಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಏರ್ಪಟ್ಟವು. ಎರಡೂ ಸಂಸ್ಕೃತಿಗಳು ಪರಸ್ಪರ ಬೆರೆತು ಬೆಳೆದವು. ಬಹುಕಾಲದವರೆಗೆ ಭಾರತದ ನಾಣ್ಯ ಪದ್ಧತಿಯ ಮೇಲೆ ಗ್ರೀಕ್ ಪ್ರಭಾವ ಕಾಣಬರುತ್ತಿತ್ತೆಂದು ವಿದ್ವಾಂಸರ ಮತ. ಹಿಂದೂದರ್ಶನ, ತತ್ತ್ವಶಾಸ್ತ್ರಗಳೂ ಗ್ರೀಕ್ ಜನರ ಹೃದಯವನ್ನು ಗೆದ್ದುವು. ಅಲೆಕ್ಸಾಂಡರನ ಜೊತೆ ಬಂದಿದ್ದ ಗ್ರೀಕ್ ವಿದ್ವಾಂಸರು ಭಾರತದ ಬಗ್ಗೆ ಬರೆದಿದ್ದಾರೆ. ಒಟ್ಟಿನಲ್ಲಿ ಅಲೆಕ್ಸಾಂಡರನ ದಂಡಯಾತ್ರೆ ಕೇವಲ ರಾಜ್ಯಾಕ್ರಮಣದಲ್ಲೇ ಪರ್ಯವಸಾನವಾಗಲಿಲ್ಲ, ವೈಮನಸ್ಸು ದ್ವೇಷಗಳಲ್ಲಿ ಮುಗಿಯಲಿಲ್ಲ. ಪೂರ್ವಪಶ್ಚಿಮಗಳ ನಂಟು ಅದರಿಂದ ಹೆಚ್ಚಾಯಿತು.
 
==ಬಾಹ್ಯ ಸಂಪರ್ಕಗಳು==
* {{Citation | url = http://www.wdl.org/en/item/11738/ | title = The Empire and Expeditions of Alexander the Great | first = Félix | last = Delamarche | author-link = Félix Delamarche | year = 1833}}.
"https://kn.wikipedia.org/wiki/ಅಲೆಕ್ಸಾಂಡರ್" ಇಂದ ಪಡೆಯಲ್ಪಟ್ಟಿದೆ