ಬುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
ಬೌದ್ಧ ಧಮ್ಮದ ತ್ರಿಸರಣಗಳು.
೨೧ ನೇ ಸಾಲು:
 
ಬುದ್ಧನು 'ಬೌದ್ಧ ಧರ್ಮದ ಸ್ಥಾಪಕ' ಎನ್ನುವುದು ಜನಜನಿತವಾಗಿರುವ ಸಂಗತಿಯಾದರೂ ಅವನು ಬೋಧಿಸಿದ್ದು ದುಃಖದಿಂದ ಹೊರಬರುವ ಮಾರ್ಗವನ್ನು ಮಾತ್ರ. ಇದನ್ನೆ ಅವನು [[ಪಾಲಿ ಭಾಷೆ |ಪಾಲಿ ಭಾಷೆಯಲ್ಲಿ]] "[[ಧಮ್ಮ]]" ಎಂದು ಕರೆದನು. ತಾನು ಬೊಧಿಸುತ್ತಿರುವುದರಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡವರಲ್ಲಿ ತಾನು ಮೊದಲನೆಯವನೂ ಅಲ್ಲ, ಕೊನೆಯವನೂ ಅಲ್ಲವೆಂದು ಸಾರಿದನು. ಯಾರು ಬೇಕಾದರೂ ಈ ಮಾರ್ಗವನ್ನು ಅನುಸರಿಸಿ ದುಃಖದಿಂದ [[ಮುಕ್ತ |ಮುಕ್ತರಾಗಬಹುದು]] ಮತ್ತು ತನ್ನಂತೆ [[ಎಚ್ಚರದ ಸ್ಥಿತಿ |ಎಚ್ಚರದ ಸ್ಥಿತಿಯನ್ನು]] ಹೊಂದಬಹುದು. ಆದರೆ ಈ [[ಸಿದ್ಧಿ |ಸಿದ್ಧಿಗೆ]] ಸ್ವಂತ ಪ್ರಯತ್ನ, [[ಸಾಧನೆ]] ಮಾತ್ರ ಕಾರಣ ಎಂದು ಹೇಳಿದ. ಸತತ ಎಚ್ಚರದ ಸ್ಥಿತಿಯನ್ನು ಸಾಧಿಸಿದ ಯಾರನ್ನೂ ಬೇಕಾದರೂ ಬುದ್ಧನೆಂದು ಕರೆಯಬಹುದು. ತಾನು ಅಂತಹ ಅರಿವಿನ ಸ್ಥಿತಿಯಲ್ಲಿರುವುದರಿಂದ ತನ್ನನ್ನು ಬುದ್ಧನೆಂದು ಸಂಬೋಧಿಸಲು ಅವನು ತನ್ನ [[ಶಿಷ್ಯ |ಶಿಷ್ಯರಿಗೆ]] ಸೂಚಿಸಿದ. ಬುದ್ಧನ ಮೊದಲ ಶಿಷ್ಯ ಆನಂದ. ಬುದ್ಧ ಎಂದರೆ [[ನಿದ್ದೆ|ನಿದ್ದೆಯಿಂದ]] ಎದ್ದವನು, ಜಾಗೃತನಾದವ, ಜ್ಞಾನಿ, ವಿಕಸಿತ, ಎಲ್ಲವನ್ನು ತಿಳಿದವನು ಎಂದರ್ಥ. ಅವನು ಎಲ್ಲರಿಗೂ ಸಂಜೀವಿನಿಯಂಥ ಮಾಹಿತಿ ನೀಡಿದ ಮಹಾತ್ಮ. "ಆಸೆಯೇ ದುಃಖಕ್ಕೆ ಮೂಲ" ಎಂಬುದು ಅವನ ಪ್ರಸಿದ್ಧ ತತ್ವ.
 
"ಮುಕ್ತಿ ಮಾರ್ಗ" ವಿಶ್ವದ ಪ್ರಸಿದ್ಧವಾಗಿರುವ ಧಮ್ಮ ಮಾರ್ಗವೇಂದರೆ, ಅದು ಬೌದ್ಧ ಧಮ್ಮ ಇದನ್ನು ಕಂಡುಹಿಡಿದ ಭಾರತದ ಸರಹದ್ದಿನಲ್ಲಿ ಜ್ನಾನ ಯೋಗಿ ಗೌತಮ ತನ್ನ ಜ್ನಾನೋದಯವನ್ನು ಪಡೆದ ಇದರಿಂದ ಇತನ್ನು ಬುದ್ಧನೆಂದು ಕರೆಯಲಾಗುತ್ತದೆ. ವಿವಿಧ ಪಂಥಗಳ ಗುರುಗಳ ಹತ್ತಿರ ಸತತವಾಗಿ ೬ವರ್ಷಗಳ ಕಾಲ ಅವರು ಹೇಳಿದಂತೆ ದೇಹ ದಂಡನೆ ಮಾಡಿ ಇದರಿಂದ ಯಾವುದೇ ಪ್ರತಿ ಫಲ ಮತ್ತು ಶಾಂತಿ ಸಿಗದೆ ಅಂತಿಮವಾಗಿ ಪರಮ ಸತ್ಯ ಕಾಣಲು ಮುಂದಿನ ೬ ವರ್ಷಗಳು ಬೋಧಿ ವೃಕ್ಷದ ಕೆಳಗೆ ನಿರಂತರ ಧ್ಯಾನ ತಪಸ್ಸು ಮಾಡುವುದರ ಮೂಲಕ ಪರಿಪೂರ್ಣ ಜ್ನಾನೋದಯ ಪಡೆದುಕೊಂಡನು. ಗೌತಮ ಬುದ್ಧರು ಮುಂದಿನ ೪೫ ವರ್ಷಗಳು ನಿರಂತರವಾಗಿ ಧಮ್ಮೋಪದೇಶಗಳನ್ನು ಜನಸಾಮಾನ್ಯರಿಗೆ ನೀಡುವ ಮೂಲಕ ಮಾನವನ ದುಖ ನಿವಾರಣೆಗೆ ತ್ರಿಸರಣ ಬೋಧನೆ ಮಾಡಿದರು. ಈ ಮೂರು ಬೌದ್ಧ ಧಮ್ಮದ ಮೂಲ ಸಂಕೇತಗಳು.ಇವುಗಳನ್ನು ಪ್ರತಿಯೋಬ್ಬರ ಜೀವನ ಧ್ಯೇಯಗಳಾಗಿ ಒಪ್ಪಿಕೊಂಡು ಸಂತೋಷವಾಗಿರುವುದು.
ಅವುಗಳೆಂದರೆ,
ಬುದ್ಧಂ ಶರಣಂ ಗಚ್ಚಾಮಿ(ನಾನು ಬುದ್ಧನಿಗೆ ಶರಣಾಗುತ್ತೆನೆ.)
ಧಮ್ಮಂ ಶರಣಂ ಗಚ್ಚಾಮಿ(ನಾನು ಧಮ್ಮಕ್ಕೆ ಶರಣಾಗುತ್ತೆನೆ.)
ಸಂಘಂ ಶರಣಂ ಗಚ್ಚಾಮಿ(ನಾನು ಸಂಘಕ್ಕೆ ಶರಣಾಗುತ್ತೆನೆ.)
 
ಗಚ್ಚಾಮಿ ಎಂದರೆ, ಸತ್ಯದಿಂದ ಬೌದ್ಧ ಧಮ್ಮ ಸ್ವೀಕರಿಸುತ್ತೆನೆ ಎಂದು ಅರ್ಥೈಸುತ್ತದೆ.
ಈ ಮೂರು ಶರಣ್ಯಗಳನ್ನು ಉಪಾಸಕರು ಮೂರು ಬಾರಿ ಉಚ್ಚರಿಸುವ ಮೂಲಕ ತಾವು ಬೌದ್ಧ ಧಮ್ಮಾಚಾರಿಗಳೆಂದು ಘೋಷಿಸುತ್ತಾರೆ.
 
ಬುದ್ಧ:
ಬುದ್ಧನು ದೇವರಲ್ಲ, ದೇವದೂತನೂ ಅಲ್ಲ, ಮತ್ತು ಇತನು ದೈವಸಂಭೂತನೂ ಅಲ್ಲ ಆದರೆ ತನ್ನ ಸ್ವಸಾಮಾರ್ಥ್ಯದಿಂದ , ಅತ್ಯುನ್ನತ ಜ್ಞಾನ ಪಡೆದು ಜಗತ್ತಿನ ಪರಮ ಸತ್ಯವನ್ನು ಬೋಧಿಸಿದ ಮಹಾಗುರು.ಮದ್ಯಮ ಮಾರ್ಗದ ಮೂಲಕ ಮೈತ್ರಿ, ಕರುಣೆ,ದಯೇ , ಸಮತೆ, ಪ್ರೀತಿ, ಅನುಕಂಪ, ಮತ್ತು ಜ್ಙಾನದೂಂದಿಗೆ ಅಷ್ಠಾಂಗ ಮಾರ್ಗಗಳನ್ನು ತೋರಿಸಿಕೊಟ್ಟರು.
ಈ ಸತ್ಯ ವನ್ನು ನಾವು ಪರಿಪಾಲಿಸಿದರೆ ಸಮ್ಮ ಜೀವನದಲ್ಲಿ ಬುದ್ಧತ್ವವನ್ನು ಪಡೆಯಬಹುದು.
ಧಮ್ಮ: ಬುದ್ಧರು ಧಮ್ಮವನ್ನು ಜೀವನ ಮಾರ್ಗವೆಂದು ಹೇಳಿದ್ದಾರೆ.ಪರಿಶುದ್ದವಾದ ಜೀವನ ನಡೆಸುವುದು ಪ್ರತಿಯೋಬ್ಬರ ಕರ್ತವ್ಯವಾಗಿದೆ.ಇದರಿಂದ ದುಖ್ಖ ನಿವಾರಣೆ ಸಾದ್ಯ. ಧಮ್ಮ ವೆಂದರೆ ಇತರೆ ಧರ್ಮಗಳಲ್ಲಿರುವಂತೆ ಅದು ತತ್ವಶಾಸ್ತ್ರವಲ್ಲ. ಇದು ಎಲ್ಲರಿಗೂ ಮುಕ್ತವಾದ ರೀತಿಯಲ್ಲಿ ಸತ್ಯದ ಬೆಳಕು ಚಲ್ಲುತ್ತದೆ ಇದರಿಂದ ಜೀವನ ಸಾಕ್ಷಾತ್ಕಾರವನ್ನು ಪಡೆಯ ಬಹುದು. ಮನುಷ್ಯರು ಮನಸ್ಸಿನ ಶುದ್ಧಿ ಮತ್ತು ಅಂತರ್ ದೃಷ್ಟಿಯಿಂದ ಅಂತಿಮವಾಗಿ ನಿಬ್ಬಾಣ ಹೊಂದಬಹುದು. ಬುದ್ಧರ ಉಪದೇಶಗಳು ಜ್ಞಾನ ಮಾರ್ಗವನ್ನು ಬೋಧಿಸಿದೆ. ಧಮ್ಮ ಮಾರ್ಗವನ್ನು ಉಪಾಸಕರು ಮತ್ತು ಬೌದ್ಧ ಭಿಕ್ಕು
ಇಬ್ಬರು ಅನುಸರಿಸಲು ತಿಳಿಸಲಾಗಿದೆ.ಸಂರ್ಪೂರ್ಣ ಮುಕ್ತಿ ಮಾರ್ಗ ಸಿದ್ಧಿಗೆ ಭಿಕ್ಕುಗಳ ಮತ್ತು ಸಂಘಗಳು ಜೀವನ ನಡವಳಿಕೆಗೆ ಸಂಬಂಧಿಸಿದಂತೆ ತ್ರಿಪಿಠಕಗಳನ್ನು ಭೋಧಿಸಿದ್ದಾರೆ.
 
ಅವುಗಳೆಂದರೆ:
೧.ವಿನಯ ಪಿಟಕ: ಭಿಕ್ಕು ಮತ್ತು ಭಿಕ್ಕು ಸಂಘಗಳ ನಡವಳಿಕೆಗಳಿದೆ ಸಂಬಂಧಿಸಿದ ನಿಯಮಗಳನ್ನು ಕ್ರೋಢೀಕರಿಸಲಾಗಿದ ಗ್ರಂಥವಾಗಿದೆ.
೨.ಸುತ್ತ ಪಿಟಕ: ನಾಲ್ಕು ಆರ್ಯ ಸತ್ಯಗಳಿಗೆ ಸಂಬಂಧಿಸಿದಂತೆ ಅನೇಕ ಸಂಭಾಷಣೆಗಳು, ಗೀತೆಗಳು, ಕಥೆ ಉಪಕಥೆಗಳು ಮುಂತಾದವುಗಳನ್ನು ಸಂಗ್ರಹಿಸಿದ ಗ್ರಂಥವಾಗಿದೆ.
೩. ಅಭಿಧಮ್ಮ ಪಿಟಕ : ಸುತ್ತ ಪಿಟಕದಲ್ಲಿನ ಬೋಧನೆಗಳನ್ನು ಮೂಲ ತತ್ವಗಳನ್ನು ವಿಶಾದೀಕರಿಸಿದ ಗ್ರಂಥವಾಗಿದೆ.
ಸಂಘ: ಬೌದ್ಧ ಸಂಘಗಳು ಬುದ್ಧನ ಕಾಲದಿಂದಲು ಸ್ಥಾಪಿಸಲ್ಪಟ್ಟಿದ್ದರು ಅವುಗಳಿಗೆ ನಿಜವಾದ ಮಾರ್ಗ ಸೂಚಿಯನ್ನು ಭಗವಾನ್ ಬುದ್ಧರು ತಮ್ಮ ಭೋಧನೆಯ ಮಾರ್ಗದಿಂದ ತಿಳಿಸಿದರು. ಇಂತಹ ಭಿಕ್ಕು ಸಂಘಗಳು ಇಂದಿಗೂ ವಿಶ್ವದ್ಯಾಂತ ಸಂಘಟಿತವಾಗಿ ಬರ್ಮಾ, ಥೈಲ್ಯಾಂಡ್,ಶ್ರೀಲಂಕಾ, ಕ್ಯಾಂಬೋಡಿಯಾ, ಲಾವೋಸ್, ಚಿತ್ತಗಾಂಗ್, ಜಪಾನ್,ಚೀನಾ,ಟಿಬೆಟ್, ಇಂದಿಗೂ ತನ್ನ ಮೂಲಸ್ವರೂಪದಲ್ಲಿ ಸಂಘಟನೆ ಇವೆ. ಬೌದ್ಧ ಭಿಕ್ಕು ಮತ್ತು ಭಿಕ್ಕಿಣಿ ಸಂಘಗಳು ಅಮೆರಿಕಾ , ರಷ್ಯ, ಕ್ಯಾನಡ, ಪ್ರಾನ್ಸ್ ,ಜರ್ಮನ್ ರಾಷ್ಟ್ರಗಳಲ್ಲಿ ಧಮ್ಮದ ಉನ್ನತಿಗಾಗಿ ಸೇವೆ ಮಾಡುತ್ತಿವೆ.
"https://kn.wikipedia.org/wiki/ಬುದ್ಧ" ಇಂದ ಪಡೆಯಲ್ಪಟ್ಟಿದೆ