ಕಳಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಕಳಸ [[ಚಿಕ್ಕಮಗಳೂರು]] ಜಿಲ್ಲೆಯ ಒಂದು ತಾಲ್ಲೂಕು. ಭದ್ರಾವತಿಯ ಬಲದಂಡೆಯ ಬಳಿ ಉ.ಅ ೧೩ಲಿ ೧೪` ಮತ್ತು ಪೂ.ರೇ. ೭೫ಲಿ ೨೬`ನಲ್ಲಿ ಸಹ್ಯಾದ್ರಿಯ ಉತ್ತುಂಗ ಶ್ರೇಣಿಗಳ ನಡುವಣ ಕಣಿವೆಯಲ್ಲಿದೆ. ಮೂಡಿಗೆರೆಗೂ ಇಲ್ಲಿಗೂ ೨೪ ಮೈ. ದೂರ. [http://www.karnatakaholidays.com/karkala.php ಕಾರ್ಕಳದ] ಭೈರರಸರ ಆಳ್ವಿಕೆಯಲ್ಲಿ ಮುಖ್ಯ ಸ್ಥಳಗಳಲ್ಲೊಂದಾಗಿದ್ದ ಕಳಸದಲ್ಲಿ ಆ ಕಾಲಕ್ಕೆ ಸೇರಿದ ದೊಡ್ಡ ಕಳಸೇಶ್ವರ ದೇವಾಲಯವಿದೆ. ಉತ್ತರ ದೇಶದಿಂದ ಬಂದ ಶ್ರುತಬಿಂದುವೆಂಬ ರಾಜನಿಂದ ಈ ದೇವಾಲಯ ನಿರ್ಮಿತವಾಯಿತೆಂಬ ಐತಿಹ್ಯವಿರುವುದರಿಂದ ಮೊದಲಿಗೆ ಇದು ಜೈನಮಂದಿರವಾಗಿದ್ದಿರ ಬಹುದೆಂದು ಊಹಿಸಲಾಗಿದೆ. ಮೊದಲಿಗೆ ಹುಂಚದವರ, ಅನಂತರ ಭೈರರಸರ, ಅನಂತರ ಐಗೂರು ನಾಯಕರ ಆಳ್ವಿಕೆಗೆ ಇದು ಒಳಪಟ್ಟಿತು. ನದೀದಂಡೆಯಲ್ಲಿರುವ ದೊಡ್ಡ ಕಲ್ಲುಬಂಡೆಯೊಂದರ ಮೇಲಿರುವ ಸಂಸ್ಕøತಸಂಸ್ಕೃತ ಶಾಸನವೊಂದು ಅದನ್ನು ಶ್ರೀಮಧ್ವಾಚಾರ್ಯರು ಒಂದು ಕೈಯಲ್ಲಿ ಎತ್ತಿ ಅಲ್ಲಿ ತಂದಿಟ್ಟುದಾಗಿ ತಿಳಿಸುತ್ತದೆ.
 
==ಕಳಸೇಶ್ವರ ದೇವಾಲಯ==
 
ಇಲ್ಲಿಯ ಕಳಸನಾಥ ಅಥವ ಕಳಸೇಶ್ವರ ದೇವಾಲಯ ಈಗಿನ ಸ್ಥಿತಿಯಲ್ಲಿ ನಾಯಕರ ಕಾಲಕ್ಕೆ ನಿರ್ದೇಶಿತವಾಗಿದೆ. <ref>https://kalasheshwaraswamytemple.kar.nic.in/</ref>ಆದರೆ ಅಕ್ಕಪಕ್ಕಗಳಲ್ಲಿ ದೊರಕುವ ವಾಸ್ತುಶಿಲ್ಪದ ಅವಶೇಷಗಳೂ ಇನ್ನು ಕೆಲವು ಶಿಲ್ಪಗಳೂ ನಿರ್ದಿಷ್ಟವಾಗಿ ಹೊಯ್ಸಳ ಶೈಲಿಗೆ ಸೇರತಕ್ಕವುಗಳಾದುದರಿಂದ ಇಲ್ಲಿ ಮೊದಲಿಗೆ [https://www.britannica.com/topic/Hoysala-dynasty ಹೊಯ್ಸಳ] ದೇವಾಲಯವಿದ್ದು ಪಾಳುಬಿದ್ದ ಅನಂತರ ನಾಯಕರ ಕಾಲದಲ್ಲಿ ಈಗಿನ ಕಟ್ಟಡಗಳು ನಿರ್ಮಿತವಾಗಿರಬಹುದು. ಈ ದೇವಾಲಯದ ಗರ್ಭಗುಡಿಯಲ್ಲಿರುವ ೯ ಅಂಗುಲ ಎತ್ತರದ ಲಿಂಗ ಉತ್ತರಕ್ಕೆ ಬಾಗಿದೆ. ಗರ್ಭಗುಡಿಯ ಮೇಲಿನ ಶಿಖರಕ್ಕೆ ಲೋಹದ ಕಲಶವಿದೆ. ೧೬ ಕಲ್ಲಿನ ಕಂಬಗಳಿರುವ ನವರಂಗಕ್ಕೆ ಉತ್ತರ ಮತ್ತು [[ದಕ್ಷಿಣ]] ದಿಕ್ಕುಗಳಲ್ಲಿ ದ್ವಾರಗಳಿವೆ. ಮುಖಮಂಟಪದ ಒಳಪಕ್ಕದಲ್ಲಿ ನಾಲ್ಕು ಕಂಬಗಳೂ ಮುಂಭಾಗದಲ್ಲಿ ದ್ರಾವಿಡ ಶೈಲಿಯ, ಅಡಿಯಲ್ಲಿ ಸಿಂಹಗಳಿರುವ ಎರಡು ಕಂಬಗಳೂ ಇವೆ.ಪಕ್ಕದಲ್ಲಿರುವ ದೇವೀಮಂದಿರವೂ ನಾಯಕರ ಕಾಲಕ್ಕೆ ಸೇರಿದುದು. ಈ ಮಂದಿರದ ಮಹಾದ್ವಾರದ ಇಕ್ಕೆಲಗಳಲ್ಲಿ ಸಿಂಹವಾಹಿನಿಯರಾದ ಸ್ತ್ರೀದ್ವಾರಪಾಲಕರಿದ್ದಾರೆ ಗಜಪತಿಯ, ತುಘಲಖನ ಮತ್ತು ವಿಜಯನಗರದ ಕೆಲವು ನಾಣ್ಯಗಳು ಇಲ್ಲಿ ದೊರಕಿವೆ.
 
==ದೇವಸ್ಥಾನಗಳು==
೩೧ ನೇ ಸಾಲು:
 
==ಇತರ ದೇವಸ್ಥಾನಗಳು==
*[[ಹೊರನಾಡು]] - ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ - ಈ ದೇವಸ್ಥಾನ ಕಳಸದಿಂದ ೮ ಕಿ.ಮೀ ದೂರದಲ್ಲಿದೆ.<ref>http://srikshetrahoranadu.com/</ref>
*[http://www.onefivenine.com/india/villages/Chikmagalur/Mudigere/Haluvalli ಹಳ್ಳುವಳ್ಳಿ] - ಶ್ರೀ ಸುಬ್ರಹ್ಮಣ್ಯ ದೇವಸ್ಥಾನ - ಇದು ಕಳಸದಿಂದ ೫ ಕಿ.ಮೀ ದೂರದಲ್ಲಿದೆ.
*ಬಾಳೆಹೊಳೆ - ಶ್ರೀ ಚೆನ್ನಕೇಶವ ದೇವಸ್ಥಾನ - ಇದು ಕಳಸದಿಂದ ೧೨ ಕಿ.ಮೀ ದೂರದಲ್ಲಿದೆ.<ref>https://www.tripoto.com/places-to-visit/in-karnataka/chennakeshwara-temple</ref>
 
==ಪ್ರೇಕ್ಷಣೀಯ ಸ್ಥಳಗಳು==
ಕಳಸದಿಂದ ೨೮ ಕಿ.ಮೀ ದೂರದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನವಿದೆ<ref>http://www.karnatakaholidays.com/kudremukh-national-park.php</ref>. ಶೃಂಗೇರಿಯು ಕಳಸದಿಂದ ೫೧ ಕಿ.ಮೀ ದೂರದಲ್ಲಿದೆ.
==ಉಲ್ಲೇಖ==
{{reflist}}
<reference/><ref></ref>
"https://kn.wikipedia.org/wiki/ಕಳಸ" ಇಂದ ಪಡೆಯಲ್ಪಟ್ಟಿದೆ