ಹಳೇಬೀಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು fix template, replaced: Infobox settlement → Infobox ಊರು using AWB
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೪೮ ನೇ ಸಾಲು:
===ನಾಗರಿಕತೆ===
 
ಹಳೇಬೀಡಿನ ಐತಿಹಾಸಿಕ ನಾಗರಿಕತೆಯು ಇಂದಿಗಿಂತಲೂ ಉತ್ತಮವಾಗಿಯೇ ಇದ್ದುದು ಶಾಸನಗಳಿಂದ ತಿಳಿದುಬರುತ್ತದೆ. ಅಂದು ಹೆಚ್ಚಿನವರು ಕೃಷಿಕರಾಗಿದ್ದು ವಸ್ತುವಿನಿಮಯ ಪಧ್ಧತಿಯನ್ನು ಅನುಸರಿಸಿಕೊಂಡು ಬಂದಿರುತ್ತಾರೆ. ಹೊಯ್ಸಳರ ರಾಜಕೀಯ ಮತ್ತು ಆರ್ಥಿಕ ಕೇಂದ್ರಸ್ಥಾನವಾಗಿದ್ದ ಈ ಊರು ಇಂದಿನ ಯಾವ ರಾಜಯಾಗಿಧಾನಿಗೂ ಕಡಿಮೆ ಇರಲಿಲ್ಲವೆಂದು ಅಂದುಕೊಳ್ಳಬಹುದು. ಊರಿನ ರಾಜಬೀದಿಗಳಲ್ಲಿ ನ್ಯಾಯವಾದಿಗಳು, ಆರ್ಥಿಕ ಪರಿಣತರು, ದೊಡ್ಡದೊಡ್ಡghvvjvj ವ್ಯಾಪಾರಸ್ಥರು, ವಿದ್ವಾಂಸರು ಮತ್ತು ಧಾರ್ಮಿಕ ಮುಖಂಡರು ವಾಸಿಸುತ್ತಿದ್ದರೆಂದು ಶಾಸನಗಳು ಹೇಳುತ್ತವೆ. ಕಲಾವಿದರು, ಸೇವಕರು ಮತ್ತು ಇತರೆ ಎಲ್ಲಾ ವರ್ಗದ ಜನರಿಗೂ ಉತ್ತಮ ಸೌಲಭ್ಯಗಳುಳ್ಳ ಕೇರಿಗಳೂ ಮರ್ಯಾದೆಗಳೂ ದೊರೆಯುತ್ತಿದ್ದವು. ವಿಶೇಷವಾಗಿ ಕಲಾವಿದರಿಗೆಂದೇ ಪ್ರತ್ಯೇಕವಾದ ವಿಹಾರಧಾಮಗಳೂ ಮತ್ತು ವಿದ್ಯಾಲಯಗಳೂ ಇದ್ದುವೆಂದು ಇಲ್ಲಿನ ಪ್ರಾಚೀನ ಕುರುಹುಗಳಿಂದ ತಿಳಿದುಬರುತ್ತದೆ. ಕುಂಬಾರರು, ಹಾಕುಮತದವರು ಮತ್ತು ವೈದಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಎಲ್ಲರೂ ತಮ್ಮ ವೃತ್ತಿಯ ಜೊತೆಗೆ ಬಹುವಾಗಿ ಕೃಷಿಯನ್ನೇ ನಂಬಿಕೊಂಡಿದ್ದರು. ಆದರೆ, ಇಂದು ಆ ವೈಭವದ ದಿನಗಳ ಕುರುಹುಗಳು ಅತ್ಯಲ್ಪ ಎನ್ನುವಷ್ಟು ಉಳಿದಿದೆ. ಪದೇಪದೆ ಪರಕೀಯರ ಆಕ್ರಮಣಕ್ಕೆ ತುತ್ತಾಗಿದ್ದೂ ಅಲ್ಲದೆ ಬಹು ವರುಷಗಳ ಕಾಲ ಕಾಲಗರ್ಭದಲ್ಲಿ ಕಳೆದುಹೋಗಿದ್ದೂ ಸಹ ಹಳೇಬೀಡಿನ ನಾಗರಿಕತೆಯ ಕುರುಹುಗಳು ಕಡಿಮೆಯಾಗಲು ಕಾರಣ ಎನ್ನಬಹುದು.
ಇಂದು ಹಳೇಬೀಡಿನ ಜನಸಂಖ್ಯೆ ಸುಮಾರು ಹತ್ತುಸಾವಿರದಷ್ಟಿದ್ದು ಎಲ್ಲಾ ಅತ್ಯಾಧುನಿಕ ಸೌಲಭ್ಯಗಳು ದೊರುಕುತ್ತಿವೆ. ವಾಸಿಸುತ್ತಿರುವ ಜನರಲ್ಲಿ ಅರ್ಧದಷ್ಟು ಮಂದಿ ಕೃಷಿಕರಿದ್ದು ಉಳಿದಂತೆ ಸರ್ಕಾರಿ ನೌಕರರು, ವ್ಯಾಪಾರಸ್ಥರು ಮುಂತಾಗಿ ಹಂಚಿಹೋಗಿದ್ದಾರೆ. ಇಂದಿಗೂ ಕೃಷಿ ಉತ್ಪನ್ನಗಳೇ ಇಲ್ಲಿನ ವ್ಯಾಪಾರದ ಮುಖ್ಯವಸ್ತು.
 
"https://kn.wikipedia.org/wiki/ಹಳೇಬೀಡು" ಇಂದ ಪಡೆಯಲ್ಪಟ್ಟಿದೆ